ಇದೇ ಮೊದಲು ರಾಜ್ಯದಲ್ಲಿ ಒಂದೇ ದಿನ 50ಕ್ಕೂ ಹೆಚ್ಚು ಕೊರೋನಾ ಸೋಂಕಿತರು ಸಾವು..!

By Kannadaprabha NewsFirst Published Jul 9, 2020, 7:32 AM IST
Highlights

ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಬುಧವಾರ ಒಂದೇ ದಿನ 2 ಸಾವಿರಕ್ಕೂ ಹೆಚ್ಚು ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಅಲ್ಲದೆ, ಇದುವರೆಗಿನ ಅತಿ ಹೆಚ್ಚು 54 ಸಾವು ಸಹ ಸಂಭವಿಸಿದ್ದು, ಕರುನಾಡು ಕರೋನಾ ಕರಾಳ ಮುಷ್ಟಿಗೆ ಸಿಲುಕಿದಂತಾಗಿದೆ.

ಬೆಂಗಳೂರು(ಜು.09): ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಬುಧವಾರ ಒಂದೇ ದಿನ 2 ಸಾವಿರಕ್ಕೂ ಹೆಚ್ಚು ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಅಲ್ಲದೆ, ಇದುವರೆಗಿನ ಅತಿ ಹೆಚ್ಚು 54 ಸಾವು ಸಹ ಸಂಭವಿಸಿದ್ದು, ಕರುನಾಡು ಕರೋನಾ ಕರಾಳ ಮುಷ್ಟಿಗೆ ಸಿಲುಕಿದಂತಾಗಿದೆ.

ಇದರೊಂದಿಗೆ ಸೋಂಕು ಮತ್ತು ಸಾವು ಎರಡರಲ್ಲೂ ಮಹಾಮಾರಿ ಕೊರೋನಾ ವೈರಸ್‌ ರಾಜ್ಯದಲ್ಲಿ ಹೊಸ ದಾಖಲೆ ಸೃಷ್ಟಿಸಿದೆ. ಕಳೆದ ಜುಲೈ 5ರಂದು ರಾಜ್ಯದಲ್ಲಿ ಒಂದೇ ದಿನ 1925 ಕೊರೋನಾ ಸೋಂಕು ದೃಢಪಟ್ಟಿತ್ತು. ಜುಲೈ 4ರಂದು 42 ಮಂದಿ ಸೋಂಕಿತರು ಮೃತಪಟ್ಟಿದ್ದು, ಈವರೆಗಿನ ಏಕದಿನದ ದಾಖಲೆಯಾಗಿತ್ತು.

ಎಚ್‌ಡಿಕೆ ಆಪ್ತ ಸಹಾಯಕ ಆಯ್ತು, ಇದೀಗ ಮತ್ತೋರ್ವ ಶಾಸಕನ ಗನ್‍ಮ್ಯಾನ್‍ಗೂ ಕೊರೋನಾ

ಬುಧವಾರದ 54 ಸಾವಿನ ಪ್ರಕರಣಗಳಲ್ಲಿ ಬೆಂಗಳೂರು ನಗರ ಒಂದರಲ್ಲೇ 24 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ಇದು ನಗರದಲ್ಲಿ ಈವರೆಗೆ ಒಂದೇ ದಿನದಲ್ಲಿ ದಾಖಲಾದ ಅತಿ ಹೆಚ್ಚು ಸಾವಿನ ಸಂಖ್ಯೆಯಾಗಿದೆ.

ಉಳಿದಂತೆ ಧಾರವಾಡ 6, ಬಳ್ಳಾರಿ 4, ಚಿಕ್ಕಬಳ್ಳಾಪುರ, ರಾಯಚೂರು ತಲಾ 3, ತುಮಕೂರು, ಮೈಸೂರು, ಧಾರವಾಡ, ವಿಜಯಪುರ ತಲಾ 2, ಹಾಸನ, ಕಲಬುರಗಿ, ಬೀದರ್‌, ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ, ಚಿಕ್ಕಮಗಳೂರಲ್ಲಿ ತಲಾ ಒಬ್ಬರು ಸೋಂಕಿನಿಂದ ಬಲಿಯಾಗಿದ್ದಾರೆ. ಇದರಲ್ಲಿ 41 ಐಎಲ…ಐ ಮತ್ತು ಸಾರಿ ಹಿನ್ನೆಲೆಯಿಂದ ಕೂಡಿವೆ. ಉಳಿದ 13 ಪ್ರಕರಣಗಳಲ್ಲಿ ಸೋಂಕಿಗೆ ಕಾರಣವೇ ಪತ್ತೆಯಾಗಿಲ್ಲ ಎಂದು ಆರೋಗ್ಯ ಇಲಾಖೆ ವರದಿ ಮಾಡಿದೆ.

ತತ್ತರಿಸಿದ್ದ ಯುರೋಪ್‌ ಚೇತರಿಕೆ: ನಮಗೂ ಗುಡ್‌ನ್ಯೂಸ್‌!

ಇದೀಗ ಈ ದಾಖಲೆ ಪುಡಿಗಟ್ಟಿಬುಧವಾರ ರಾಜ್ಯದಲ್ಲಿ 2,062 ಮಂದಿಗೆ ಸೋಂಕು ದೃಢಪಟ್ಟಿದೆ. ಜತೆಗೆ ಕೋವಿಡ್‌ 54 ಬಲಿಪಡೆದಿದೆ. ಇದರೊಂದಿಗೆ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 28,877ಕ್ಕೆ, ಸಾವಿನ ಸಂಖ್ಯೆ 470ಕ್ಕೆ (4 ಅನ್ಯ ಕಾರಣದ ಸಾವು ಹೊರತುಪಡಿಸಿ) ಏರಿಕೆಯಾಗಿದೆ.

ಬೆಂಗಳೂರಲ್ಲಿ 1148!:

ಬುಧವಾರದ ಪ್ರಕರಣಗಳ ಪೈಕಿ ಬೆಂಗಳೂರು ನಗರ ಒಂದರಲ್ಲೇ 1148 ಮಂದಿಗೆ ಸೋಂಕು ದೃಢಪಟ್ಟಿದೆ. ಉಳಿದಂತೆ ದಕ್ಷಿಣ ಕನ್ನಡ 183, ದಾವಣಗೆರೆ 89, ಕಲಬುರಗಿ 66, ಬೆಳಗಾವಿ, ಮೈಸೂರು ತಲಾ 59, ಬೆಂಗಳೂರು ಗ್ರಾಮಾಂತರ 37, ರಾಮನಗರ 34, ಚಿಕ್ಕಬಳ್ಳಾಪುರ 32, ಉಡುಪಿ, ಹಾವೇರಿ ತಲಾ 31, ಬೀದರ್‌ 29, ಬೆಳಗಾವಿ 27, ಹಾಸನ 26, ಬಾಗಲಕೋಟೆ, ತುಮಕೂರು ತಲಾ 24, ಚಿಕ್ಕಮಗಳೂರು 23, ಉಡುಪಿ 20, ಉತ್ತರ ಕನ್ನಡ 19, ದಾವಣಗೆರೆ 18, ರಾಯಚೂರು, ಶಿವಮೊಗ್ಗ ತಲಾ 17, ಕೋಲಾರ 16, ಯಾದಗಿರಿ, ಕೊಪ್ಪಳ ತಲಾ 11, ಗದಗ 5, ವಿಜಯಪುರ 4, ಚಿತ್ರದುರ್ಗದಲ್ಲಿ 2 ಪ್ರಕರಣಗಳು ದಾಖಲಾಗಿವೆ. ಬುಧವಾರ 19,134 ಜನರನ್ನು ಪರೀಕ್ಷೆಗೆ ಒಳಪಡಿಸಿ, ಈ ಫಲಿತಾಂಶ ನೀಡಲಾಗಿದೆ.

click me!