ಗ್ರೀನ್ ಝೋನ್‌ಗೆ ಎಂಟ್ರಿಯಾಗಿದ್ದ ಜಿಲ್ಲೆಗೆ ಮಾಹಾಮಾರಿ ಕೊರೋನಾ ವಕ್ಕರಿಸಿದ್ದು, ಜನರನ್ನು ಬೆಚ್ಚಿಬೀಳಿಸಿದೆ. ಈ ಮೂಲಕ ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ.
ಬೆಂಗಳೂರು/ ದಾವಣಗೆರೆ, (ಏ.29): ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಮತ್ತೆ 11 ಕೊರೋನಾ ಕೇಸ್ ಪತ್ತೆಯಾಗಿವೆ. ಈ ಮೂಲಕ ಕೊರೋನಾ ಸೊಂಕಿತರ ಸಂಖ್ಯೆ 534ಕ್ಕೆ ಏರಿಕೆಯಾಗಿದೆ.
ಕಲಬುಗಿ 8, ಬೆಳಗಾವಿ 1, ದಾವಣಗೆರೆ 1 ಮತ್ತು ಮೈಸೂರು ಒಬ್ಬರಿಗೆ ಕೊರೋನಾ ಸೋಂಕು ತಗುಲಿದೆ. ಈ ಮೂಲಕ ರಾಜ್ಯದಲ್ಲಿ ಬುಧವಾರ 11 ಜನರಿಗೆ ಕೊರೋನಾ ಸೋಂಕು ಪತ್ತೆಯಾಗಿದೆ.
ಖ್ಯಾತ ನಟ ಇರ್ಫಾನ್ ಖಾನ್ ನಿಧನ; ಭಾರತದಲ್ಲಿ ಆತಂಕ ಹೆಚ್ಚಿಸಿದ ಕೊರೋನಾ; ಏ.29ರ ಟಾಪ್ 10 ಸುದ್ದಿ!
ಗ್ರೀನ್ ಝೋನ್‌ಗೆ ವಕ್ಕರಿಸಿದ ಕೊರೋನಾ
ಹೌದು...ಮೊನ್ನೇ ಅಷ್ಟೇ ಗ್ರೀನ್ ಜೋನ್‌ಗೆ ಸೇರಿಕೊಂಡಿದ್ದ ದಾವಣಗೆರೆಗೆ ಕೊರೋನಾ ವಕ್ಕರಿಸಿಕಕೊಂಡಿದೆ.
35 ವರ್ಷದ ಮಹಿಳಾ ನರ್ಸ್ ಒಬ್ಬರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಈ ಮೂಲಕ ಜಿಲ್ಲೆಯ ಜನರನ್ನು ಬೆಚ್ಚಿ ಬೀಳಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ದಾವಣಗೆರೆಯಲ್ಲಿ ಮೂವತ್ತು ದಿನಗಳ ನಂತರ ಹೊಸ ಕೊರೋನಾ ಪಾಸಿಟಿವ್ ಕೇಸ್ ಪತ್ತೆಯಾಗಿದೆ. ಭಾಷಾ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದ ನರ್ಸ್ ಗೆ ಸೊಂಕು ದೃಢಪಟ್ಟಿದೆ ಮಾಹಿತಿ ನೀಡಿದರು.
ಕಳೆದ ಏ.27ರಂದು ಕೊರೊಣಾ ಲಕ್ಷಣಗಳಿಂದ ನರ್ಸ್ ಒಬ್ಬರು ದಾಖಲಾಗಿದ್ದರು. ಅವರಿಗೆ ಸೋಂಕು ತಗುಲಿರುವುದು ವರದಿಯಲ್ಲಿ ದೃಢಪಟ್ಟಿದೆ ಎಂದು ತಿಳಿಸಿದ್ದಾರೆ.
23ನೇ ತಾರೀಖು ಈ ನರ್ಸ್ ಗರ್ಭಿಣಿ ಗೆ ಹೆರಿಗೆ ಮಾಡಿಸಿದ್ದಾರೆ. ಇದುವರೆಗೆ 25 ಜನ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಮತ್ತು ಅವರ ಮಗ ಹಾಗು ಗಂಡನನ್ನು ಕ್ವಾರಂಟೈನ್ ಮಾಡಲಾಗಿದೆ. ಇನ್ನು ಅವರ ಟ್ರಾವೆಲ್ ಹಿಸ್ಟರಿಯನ್ನು ಪತ್ತೆ ಪಚ್ಚಲಾಗುತ್ತಿದೆ ಎಂಬುದಾಗಿ ಎಂದು ಹೇಳಿದರು.