ಕೊರೋನಾ ಅಟ್ಟಹಾಸ : ಒಂದೇ ತಿಂಗಳಲ್ಲಿ ವರ್ಷದಷ್ಟು ಕೇಸ್‌!

By Kannadaprabha News  |  First Published May 21, 2021, 7:08 AM IST
  • ಕೊರೋನಾ ಅಟ್ಟಹಾಸ :  ಒಂದೇ ತಿಂಗಳಲ್ಲಿ ವರ್ಷದಷ್ಟು ಕೇಸ್‌!   
  •  ಒಂದು ತಿಂಗಳಲ್ಲೇ ವರದಿಯಾದ 11 ಲಕ್ಷಕ್ಕೂ ಅಧಿಕ ಕೇಸ್ 
  • 9,809 ಮಂದಿ ಕೊರೋನಾಗೆ ಬಲಿ

ವರದಿ :  ಶ್ರೀಕಾಂತ್‌ ಎನ್‌. ಗೌಡಸಂದ್ರ

 ಬೆಂಗಳೂರು (ಮೇ.21):  ಕಳೆದ ಒಂದು ತಿಂಗಳಲ್ಲಿ ರಾಜ್ಯದಲ್ಲಿ ಕೊರೋನಾ ರೌದ್ರ ನರ್ತನ ಪ್ರದರ್ಶಿಸಿದೆ. ರಾಜ್ಯಕ್ಕೆ ಕೊರೋನಾ ಕಾಲಿಟ್ಟ2020ರ ಮಾ.9ರಿಂದ 1 ವರ್ಷ 40 ದಿನಗಳಲ್ಲಿ ವರದಿಯಾಗಿದ್ದ ಒಟ್ಟು ಪ್ರಕರಣಗಳ ಸರಿಸಮಾನ ಸೋಂಕು ಕಳೆದ ಒಂದು ತಿಂಗಳಲ್ಲೇ ವರದಿಯಾಗಿದೆ.

Latest Videos

undefined

ಹೌದು, ಕಳೆದ 30 ದಿನದಲ್ಲಿ ಬರೋಬ್ಬರಿ 11,29,805 ಮಂದಿಗೆ ಸೋಂಕು ಉಂಟಾಗಿದ್ದು 9,809 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. 2020ರ ಮಾ.9ರಿಂದ 2021ರ ಏ.19 ರವರೆಗೆ ರಾಜ್ಯದಲ್ಲಿ 11,76,850 (11.76 ಲಕ್ಷ) ಸೋಂಕು ಪ್ರಕರಣ ವರದಿಯಾಗಿತ್ತು. ಇದೀಗ ಏ.19ರಿಂದ ಮೇ 19ರ ವೇಳೆಗೆ 30 ದಿನಗಳ ಅಂತರದಲ್ಲಿ 11,29,805 (11.29 ಲಕ್ಷ) ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ.

'ಯಡಿಯೂರಪ್ಪ ಸರ್ಕಾರದ ವಿಶೇಷ ಪ್ಯಾಕೇಜ್‌ ಬಡವರಿಗೆ ವರ' ...

ಒಂದು ವರ್ಷ 40 ದಿನಗಳಲ್ಲಿ ವರದಿಯಾಗಿದ್ದ ಒಟ್ಟು ಪ್ರಕರಣಗಳ ಶೇ.96ರಷ್ಟುಪ್ರಕರಣ 30 ಕಳೆದ ದಿನಗಳಲ್ಲೇ ವರದಿಯಾಗಿವೆ. ನಿತ್ಯ ಸರಾಸರಿ 37,660 ಪ್ರಕರಣಗಳಂತೆ ಪತ್ತೆಯಾಗಿದೆ. ಏಕಾಏಕಿ ಪ್ರಕರಣಗಳು ನಿರೀಕ್ಷೆಗೂ ಮೀರಿ ಹೆಚ್ಚಾಗಿದ್ದರಿಂದಲೇ ವೈದ್ಯಕೀಯ ವ್ಯವಸ್ಥೆ ಮೇಲೆ ತೀವ್ರ ಒತ್ತಡ ಹೆಚ್ಚಾಗಿ ನಿರ್ವಹಣೆ ಕಷ್ಟವಾಯಿತು ಎಂದು ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್‌. ಮಂಜುನಾಥ್‌ ಅಭಿಪ್ರಾಯಪಟ್ಟಿದ್ದಾರೆ.

ಪ್ರತಿ ಗಂಟೆಗೆ 14 ಮಂದಿಯಂತೆ 9,809 ಸಾವು:

ಇನ್ನು ಈವರೆಗೆ 23,306 ಮಂದಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ಈ ಪೈಕಿ 2020 ಮಾಚ್‌ರ್‍ ತಿಂಗಳಿಂದ 2021ರ ಏಪ್ರಿಲ್‌ 19ರವರೆಗೆ 13497 ಮಂದಿ ಕೊರೋನಾದಿಂದ ಮೃತಪಟ್ಟಿದ್ದಾರೆ. ಕಳೆದ 30 ದಿನದಲ್ಲಿ ಬರೋಬ್ಬರಿ 9,809 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. ಪ್ರತಿ ಗಂಟೆಗೆ ಸರಾಸರಿ 14 ಮಂದಿಯಂತೆ ಸಾವನ್ನಪ್ಪಿದ್ದು ತೀವ್ರ ಆತಂಕ ಹುಟ್ಟಿಸಿದೆ.

ಲಸಿಕೆ ವಿಚಾರದಲ್ಲಿ ಕಾಂಗ್ರೆಸ್ ಬಣ್ಣ ಬಯಲು ಮಾಡಿದ ಕುಮಾರಸ್ವಾಮಿ

ಪ್ರತಿ 4 ಪರೀಕ್ಷೆಯಲ್ಲಿ ಒಬ್ಬರಿಗೆ ಸೋಂಕು:

ಮೇ 19ರ ವೇಳೆಗೆ ರಾಜ್ಯದಲ್ಲಿ 23,06,655 (23.06 ಲಕ್ಷ) ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಕಳೆದ 30 ದಿನದಲ್ಲಿ 11,29,805 ಪ್ರಕರಣ ವರದಿಯಾಗಿದ್ದು, ಪ್ರತಿ 100 ಪಾಸಿಟಿವ್‌ ಪ್ರಕರಣಗಳಲ್ಲಿ ಶೇ.0.86 ಸಾವಿನ ದರ ವರದಿಯಾಗಿದೆ.

ಇನ್ನು ಈವರೆಗೆ 2.81 ಕೋಟಿ ಮಂದಿಗೆ ಕೊರೋನಾ ಪರೀಕ್ಷೆ ನಡೆಸಲಾಗಿದೆ. ಕಳೆದ 30 ದಿನದಲ್ಲಿ 44.82 ಲಕ್ಷ ಮಂದಿಗೆ ಪರೀಕ್ಷೆ ನಡೆಸಲಾಗಿದೆ. ಈ ಪೈಕಿ ಪ್ರತಿ 4 ಮಂದಿಯಲ್ಲಿ ಒಬ್ಬರಿಗೆ ಸೋಂಕು ದೃಢಪಟ್ಟಿದ್ದು, ಶೇ.25ರಷ್ಟುಪಾಸಿಟಿವಿಟಿ ದರದಂತೆ ಸೋಂಕು ಉಂಟಾಗಿದೆ.

ಒಂದು ತಿಂಗಳಿಗೂ ಹೆಚ್ಚು ಕಾಲ ಶೇ.25ರಷ್ಟುಸರಾಸರಿಯಲ್ಲಿ ಸೋಂಕು ವರದಿಯಾಗಿರುವುದು ಆತಂಕಕಾರಿ. ಪಾಸಿಟಿವಿಟಿ ದರ ಶೇ.5ಕ್ಕಿಂತ ಕಡಿಮೆ ಆಗುವರೆಗೂ ರಾಜ್ಯಕ್ಕೆ ಆಪತ್ತು ತಪ್ಪಿದಂತಲ್ಲ ಎಂದು ಕೊರೋನಾ ತಾಂತ್ರಿಕ ಸಲಹಾ ಸಮಿತಿ ಸದಸ್ಯರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ರಾಜಧಾನಿಯಲ್ಲಿ 30 ದಿನದಲ್ಲಿ ಸೋಂಕು, ಸಾವು ಡಬಲ್‌:  ರಾಜಧಾನಿ ಬೆಂಗಳೂರಿನಲ್ಲಿ ಸಾವು ಹಾಗೂ ಸೋಂಕು ಬಹುತೇಕ ಡಬಲ್‌ ಆಗಿದೆ. ಮೇ 19 ರವರೆಗೆ 10,84,844 ಒಟ್ಟು ಸೋಂಕು ವರದಿಯಾಗಿದೆ. ಈ ಪೈಕಿ ಕೊರೋನಾ ಆರಂಭದಿಂದ ಕಳೆದ ಏಪ್ರಿಲ್‌ 19ರವರೆಗೆ 5,56,253 ಸೋಂಕು ವರದಿಯಾಗಿದ್ದರೆ ಕಳೆದ 30 ದಿನದಲ್ಲಿ 5,28,591 ಮಂದಿಗೆ ಸೋಂಕು ತಗುಲಿದೆ. ಸಾವಿನ ಸಂಖ್ಯೆಯೂ ದ್ವಿಗುಣಗೊಂಡಿದ್ದು 10,238 ಸಾವುಗಳಲ್ಲಿ ಕಳೆದ 30 ದಿನದಲ್ಲೇ 5,018 ಮಂದಿ ಸಾವನ್ನಪ್ಪಿದ್ದಾರೆ.

ಸೋಂಕು

ರಾಜ್ಯದಲ್ಲಿ ಒಟ್ಟು ಸೋಂಕು - 23,06,655

2020ರ ಮಾಚ್‌ರ್‍ನಿಂದ 2021ರ ಏಪ್ರಿಲ್‌ 19ರವರೆಗೆ- 11,76,850

ಕಳೆದ 30 ದಿನದಲ್ಲಿನ ಸೋಂಕು- 11,29,805

 ಸಾವು

ರಾಜ್ಯದಲ್ಲಿ ಒಟ್ಟು ಸಾವು - 23306

2020ರ ಮಾಚ್‌ರ್‍ನಿಂದ 2021ರ ಏಪ್ರಿಲ್‌ 19ರವರೆಗೆ - 13497

ಕಳೆದ 30 ದಿನದ ಸಾವು - 9,809

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!