
ಬೆಂಗಳೂರು (ಮೇ.20): ಕೊರೋನಾ ಟೆಸ್ಟ್ ಕಡಿಮೆ ಮಾಡಬೇಕು ಎಂದು ನಾವು ಆದೇಶ ಹೊರಡಿಸಿಲ್ಲ. ಸಿಂಟಮ್ಸ್ ಇದ್ದವರಿಗೆ ಟೆಸ್ಟ್ ಮಾಡಿಸಿ ಎಂದಿದ್ದೇವೆ ಎಂದು ಸಚಿವ ಆರ್.ಅಶೋಕ್ ಹೇಳಿದರು.
ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಚಿವ ಅಶೋಕ್ ಕೋವಿಡ್ ಟೆಸ್ಟ್ ಕಡಿಮೆ ಮಾಡಲು ಸರ್ಕಾರ ಯಾವುದೆ ಆದೇಶ ಹೊರಡಿಸಿಲ್ಲ ಎಂದರು.
ಮನೆಯಲ್ಲಿ ಯಾರಿಗಾದರೂ ಒಬ್ಬರಿಗೆ ಸೋಂಕು ಬಂದರೆ ಎಲ್ಲರನ್ನೂ ಟೆಸ್ಟ್ ಮಾಡಬೇಕು ಎಂದು ಹೇಳಿದ್ದೇವೆ. ಮೊದಲು ಬಸ್ ರೈಲ್ವೆ ನಿಲ್ದಾಣದಲ್ಲಿ ಟೆಸ್ಟ್ ಮಾಡುತ್ತಾ ಇದ್ದೆವು. ಈಗ ಸಾರ್ವಜನಿಕ ಸ್ಥಳಗಳಲ್ಲಿ ಜನ ಸೇರುತ್ತಿಲ್ಲ, ಹಾಗಾಗಿ ಟೆಸ್ಟ್ ಸಹ ಮಾಡುತ್ತಿಲ್ಲ ಎಂದು ಸಚಿವರು ಹೇಳಿದರು.
ಬೆಂಗಳೂರಲ್ಲಿ ಕೋವಿಡ್ ಕೇಸ್ ಇಳಿಸಲು ಖತರ್ನಾಕ್ ಐಡಿಯಾ? .
ಯಾವ ಅಧಿಕಾರಿಯಾದರೂ ಸರಿ ಕೊರೋನಾ ಟೆಸ್ಟ್ ಮಾಡುವಲ್ಲಿ ಮೈಗಳ್ಳತನ ತೋರಿದರೆ ಅವರನ್ನು ತಕ್ಷಣ ಸಸ್ಪೆಂಡ್ ಮಾಡುತ್ತೇವೆ ಎಂದು ಸಚಿವ ಅಶೋಕ್ ಎಚ್ಚರಿಕೆ ನೀಡಿದರು.
ಆ್ಯಂಬುಲೆನ್ಸ್‌ಗೆ ಯಾರಾದರೂ ಕರೆ ಮಾಡಿದರೆ ಅಲ್ಲಿಗೆ ತೆರಳಲು ಆ್ಯಂಬುಲೆನ್ಸ್ ಡ್ರೈವರ್ ನಿರಾಕರಿಸಿದರೆ ಅಂತವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತದೆ. ಡ್ರೈವರ್ ಗಳ ಲೈಸನ್ಸ್ ಮೂರು ವರ್ಷ ರದ್ದು ಮಾಡಲಾಗುತ್ತದೆ ಎಂದು ಸಚಿವ ಅಶೋಕ್ ಎಚ್ಚರಿಕೆ ನೀಡಿದರು.
ಅಸ್ತಿ ಬಾಕಿ : ಕೋವಿಡ್ನಿಂದ ಮೃತಪಟ್ಟ ಸಾವಿರಾರು ಜನರ ಅಸ್ತಿ ತೆಗದುಕೊಂಡು ಹೋಗಿಲ್ಲ. ಅದನ್ನು ಗೌರವಯುತವಾಗಿ ಹೇಗೆ ವಿಲೇವಾರಿ ಮಾಡಬೇಕು ಎಂದು ನೋಡುತ್ತಾ ಇದ್ದೇವೆ ಎಂದು ಸಚಿವರು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ