ಕೊರೋನಾ ಮಹಾಮಾರಿಗೆ ಹಿರಿಯ ಜೀವಗಳೇ ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗುತ್ತಿರುವ ಈ ಹೊತ್ತಿನಲ್ಲಿ ಇಲ್ಲೊಬ್ಬ ಶತಾಯುಷಿ ಮಹಿಳೆಯೊಬ್ಬರು ಮನೆಯಲ್ಲೇ ಚಿಕಿತ್ಸೆ ಪಡೆದು ಸೋಂಕಿಗೆ ಸೆಡ್ಡು ಹೊಡೆದು ಗುಣಮುಖರಾಗಿದ್ದಾರೆ. ಈ ಮೂಲಕ ಕೊರೋನಾ ಗೆದ್ದ ರಾಜ್ಯದ ಮೊದಲ ಶತಾಯುಷಿ ಎನಿಸಿಕೊಂಡಿದ್ದಾರೆ.
ಹೂವಿನಹಡಗಲಿ(ಜು.24): ಕೊರೋನಾ ಮಹಾಮಾರಿಗೆ ಹಿರಿಯ ಜೀವಗಳೇ ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗುತ್ತಿರುವ ಈ ಹೊತ್ತಿನಲ್ಲಿ ಇಲ್ಲೊಬ್ಬ ಶತಾಯುಷಿ ಮಹಿಳೆಯೊಬ್ಬರು ಮನೆಯಲ್ಲೇ ಚಿಕಿತ್ಸೆ ಪಡೆದು ಸೋಂಕಿಗೆ ಸೆಡ್ಡು ಹೊಡೆದು ಗುಣಮುಖರಾಗಿದ್ದಾರೆ. ಈ ಮೂಲಕ ಕೊರೋನಾ ಗೆದ್ದ ರಾಜ್ಯದ ಮೊದಲ ಶತಾಯುಷಿ ಎನಿಸಿಕೊಂಡಿದ್ದಾರೆ.
ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ಪಟ್ಟಣದ ಹಾಲಮ್ಮ (100) ಕೊರೋನಾ ಗೆದ್ದು ಬಂದಿರುವ ಶತಾಯುಷಿ. ಸೋಂಕಿನಿಂದ ಚೇತರಿಸಿಕೊಂಡಿರುವ ಈ ಹಿರಿಯಜ್ಜಿ ಸದ್ಯ ಮಾಮೂಲಿಯಂತಾಗಿದ್ದಾರೆ. ‘ನಾನು ಈ ಸೋಂಕಿಗೆ ಭಯಪಟ್ಟಿಲ್ಲ, ಇದು ಮಾರಣಾಂತಿಕ ಕಾಯಿಲೆ ಅಲ್ಲ. ಯಾರೂ ಭಯಪಡಬೇಡಿ’ ಎಂದು ಇತರರಿಗೆ ಧೈರ್ಯವನ್ನೂ ಹೇಳಿದ್ದಾರೆ.
undefined
ಕೊರೋನಾ ಗೆದ್ದ 110 ವರ್ಷದ ವೃದ್ಧೆಯನ್ನು ಬಹಿಷ್ಕರಿದ ಗ್ರಾಮಸ್ಥರು
10 ದಿನ ಚಿಕಿತ್ಸೆ: ಸ್ಟೇಟ್ ಬ್ಯಾಂಕ್ ಇಂಡಿಯಾದಲ್ಲಿ ಉದ್ಯೋಗಿಯಾಗಿರುವ ಇವರ ಪುತ್ರನಿಗೆ ಜು.3 ರಂದು ಸೋಂಕು ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಬಳ್ಳಾರಿ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇವರ ಪ್ರಾಥಮಿಕ ಸಂಪರ್ಕದಲ್ಲಿದ್ದ ತಾಯಿ ಹಾಲಮ್ಮ, ಪತ್ನಿ ಮತ್ತು ಮಗನನ್ನು ಮನೆಯಲ್ಲೇ ಹೋಂ ಕ್ವಾರಂಟೈನ್ ಮಾಡಲಾಗಿತ್ತು. ಹಾಲಮ್ಮ ಸೇರಿ ಮೂವರಿಗೂ ಆಗಾಗ ಜ್ವರ, ತಲೆನೋವು ಮತ್ತು ವಾಂತಿ ಆಗುತ್ತಿತ್ತು. ಇದನ್ನು ಗಮನಿಸಿದ ಹಡಗಲಿ ಕೋವಿಡ್ ಆಸ್ಪತ್ರೆಯ ಸಿಬ್ಬಂದಿ ಜು.10ರಂದು ಇವರ ಗಂಟಲು ದ್ರವ ಪಡೆದು ಪರೀಕ್ಷೆಗೆ ಕಳುಹಿಸಿದ್ದರು. ಜು.16ರಂದು ಎಲ್ಲರಿಗೂ ಕೊರೋನಾ ದೃಢಪಟ್ಟಿತ್ತು.
99 ವರ್ಷದ ಮಹಿಳಾ ಕೊರೋನಾ ರೋಗಿ ಚೇತರಿಕೆ!
ಮನೆಯಲ್ಲೇ ಚಿಕಿತ್ಸೆ: ಹಾಲಮ್ಮ ಮತ್ತು ಕುಟುಂಬದ ಉಳಿದಿಬ್ಬರಿಗೆ ಮನೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿತ್ತು. ಹಡಗಲಿ ಕೋವಿಡ್ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿ ನಿತ್ಯ ಇವರ ಮನೆಗೆ ಭೇಟಿ ನೀಡಿ 10 ದಿನ ಚಿಕಿತ್ಸೆ ನೀಡಿದ್ದಾರೆ. ಎಲ್ಲರೂ ಚಿಕಿತ್ಸೆ ಸ್ಪಂದಿಸುವ ಜತೆಗೆ ಸೋಂಕಿನಿಂದ ಜು.23ರಂದು ಮುಕ್ತವಾಗಿದ್ದಾರೆ. ಇತ್ತ ಅಜ್ಜಿಯ ಮಗ ಕೂಡಾ ಆಸ್ಪತ್ರೆಯಿಂದ ಗುರುವಾರ ಬಿಡುಗಡೆಯಾಗಿದ್ದಾರೆ.
ವಿಜಯಪುರ: ಡೆಡ್ಲಿ ಕೊರೋನಾದಿಂದ ಹೋರಾಡಿ ಗೆದ್ದ 90 ವರ್ಷ ಮೀರಿದ ವೃದ್ಧೆಯರು..!
ಮೊದಲ ಶತಾಯುಷಿ: ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ನಿವಾಸಿಯಾಗಿರುವ 99 ವರ್ಷದ ಅಜ್ಜಿ ಕೂಡ ಕೊರೋನಾ ಸೋಂಕಿನಿಂದ ಇತ್ತೀಚೆಗೆ ಗುಣಮುಖರಾಗಿದ್ದರು. ಇಷ್ಟೇ ಅಲ್ಲದೆ, ಚಿತ್ರದುರ್ಗದಲ್ಲಿ 96 ವರ್ಷದ ಅಜ್ಜಿ, ಬಳ್ಳಾರಿ ಕೋವಿಡ್ ಆಸ್ಪತ್ರೆಯಲ್ಲಿ 93 ವರ್ಷದ ವೃದ್ಧೆಯೊಬ್ಬರು ಕೊರೋನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾಜ್‌ರ್ ಆಗಿದ್ದಾರೆ. ಮುಂಬೈನಲ್ಲಿ 101 ವರ್ಷದ ಹಿರಿಯಜ್ಜ ಅರ್ಜುನ ನರಿಂಗ್ರೇಕರ್ ಅವರು ಕೋವಿಡ್ ಗೆದ್ದು ಬಂದು ಭರವಸೆ ಮೂಡಿಸಿದ್ದರು. ಈ ರೀತಿ ಹಿರಿಯ ಜೀವಿಗಳು ಕೋವಿಡ್ಗೆ ಸೆಡ್ಡು ಹೊಡೆದು ಗುಣಮುಖರಾಗುತ್ತಿರುವುದು ಆತಂಕದ ಈ ಹೊತ್ತಿನಲ್ಲಿ ಹೊಸ ಭರವಸೆ ಮೂಡಿಸಿದೆ.
ಕೊರೋನಾ ಗೆದ್ದ 107ರ ವೃದ್ಧೆ..! ಕೋವಿಡ್-19ನಿಂದ ಚೇತರಿಸಿದ ದೇಶದ ಅತಿ ಹಿರಿಯ ವ್ಯಕ್ತಿ
ಕೊರೋನಾ ಸೋಂಕಿತ ಅಜ್ಜಿ ಶತಾಯುಷಿಯಾಗಿದ್ದರೂ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದರು, ವೈದ್ಯರ ಸಲಹೆಯಂತೆ ಎಲ್ಲ ನಿಯಮಗಳ ಪಾಲನೆ ಮಾಡುತ್ತಿದ್ದರು. ಮನೆ ಚಿಕಿತ್ಸೆ ಪಡೆಯುತ್ತಿದ್ದರೂ ಸೋಂಕಿನ ಕುರಿತು ಅವರಿಗೆ ಯಾವುದೇ ಭಯ ಇರಲಿಲ್ಲ ಎಂದು ಕೋವಿಡ್ ಆಸ್ಪತ್ರೆ ಹೂವಿನಹಡಗಲಿ ಆರ್.ಬಿ.ಎಸ್.ಕೆ. ವೈದ್ಯ ಡಾ.ಗೀತಾ ತಿಳಿಸಿದ್ದಾರೆ.
ಮಾರಣಾಂತಿಕ ಕಾಯಿಲೆ ಅಲ್ಲ
ಕೊರೋನಾ ಬಂದಿದೆ ಎಂದು ನಾನು ಭಯ ಪಟ್ಟಿಲ್ಲ. ಇದೊಂದು ಮಾರಣಾಂತಿಕ ಕಾಯಿಲೆ ಅಲ್ಲ. ನಿತ್ಯ ಅನ್ನ, ಸಾಂಬಾರು, ಗಂಜಿ ಹಾಗೂ ಸೇಬು ಹಣ್ಣು ನಮ್ಮ ಆಹಾರವಾಗಿತ್ತು. ಜತೆಗೆ ವೈದ್ಯರು ನೀಡುವ ಮಾತ್ರೆ ಮತ್ತು ಲಸಿಕೆಗೆ ಸ್ಪಂದಿಸಿದ್ದರಿಂದ ನಾನು ಕೊರೋನಾ ಮುಕ್ತಳಾಗಿದ್ದೇನೆ ಎಂದು ಗುಣಮುಖರಾದ ವೃದ್ಧೆ ಹಾಲಮ್ಮ ತಿಳಿಸಿದ್ದಾರೆ.