ಹೆಚ್ಚು ಗುಣಮುಖ: ಕರ್ನಾಟಕಕ್ಕೆ 10ನೇ ಸ್ಥಾನ!

Published : Jul 23, 2020, 07:33 AM ISTUpdated : Jul 23, 2020, 10:16 AM IST
ಹೆಚ್ಚು ಗುಣಮುಖ: ಕರ್ನಾಟಕಕ್ಕೆ 10ನೇ ಸ್ಥಾನ!

ಸಾರಾಂಶ

ಹೆಚ್ಚು ಗುಣಮುಖ ಆದವರಲ್ಲಿ ರಾಜ್ಯ ಲಾಸ್ಟ್‌| 20 ದಿನದಲ್ಲಿ ಕೊರೋನಾ ಸೋಂಕು ಪ್ರಮಾಣ ಶೇ.446ರಷ್ಟುಹೆಚ್ಚಳ| ದಿಲ್ಲಿಯಲ್ಲಿ ಶೇ.85, ರಾಜ್ಯದಲ್ಲಿ ಶೇ.36 ಮಂದಿ ಗುಣಮುಖ| ಟಾಪ್‌-10 ರಾಜ್ಯಗಳ ಪಟ್ಟಿಯಲ್ಲಿ ರಾಜ್ಯ ಹಿಂದೆ

ಲಿಂಗರಾಜು ಕೋರಾ

ಬೆಂಗಳೂರು(ಜು.23): ರಾಜ್ಯದಲ್ಲಿ ಜುಲೈ ತಿಂಗಳ 21ರವರೆಗೆ ಕೊರೋನಾ ಸೋಂಕು ಪ್ರಮಾಣ ಶೇ.466 ರಷ್ಟುಹೆಚ್ಚಳವಾದ ಪರಿಣಾಮ ಕೋವಿಡ್‌ ತೀವ್ರವಾಗಿ ಕಾಡುತ್ತಿರುವ ದೇಶದ ಮೊದಲ 10 ರಾಜ್ಯಗಳ ಪೈಕಿ ಗುಣಮುಖರಾದವರ ಪ್ರಮಾಣದಲ್ಲಿ ಕರ್ನಾಟಕ ಕೊನೆಯ ಸ್ಥಾನಕ್ಕೆ ಕುಸಿದಿದೆ.

ರಾಜ್ಯದಲ್ಲಿ ಜೂನ್‌ 30ರಂದು ಕೇವಲ 15,242 ಇದ್ದ ಒಟ್ಟು ಸೋಂಕಿತರ ಸಂಖ್ಯೆ ಜುಲೈ ತಿಂಗಳ ಕಳೆದ 21ರವರೆಗೆ 55,827 ಹೊಸ ಪ್ರಕರಣಗಳ ಪತ್ತೆಯಾಗುವ ಮೂಲಕ ಒಟ್ಟು ಸೋಂಕಿತರ ಪ್ರಮಾಣ ಶೇ.466ರಷ್ಟುಹೆಚ್ಚಳವಾಗಿತ್ತು. ಇದರಿಂದ ರಾಜ್ಯದಲ್ಲಿ ಜೂ.30ರ ವರೆಗೆ 7918 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗುವ ಮೂಲಕ ಶೇ.55ರಷ್ಟಿದ್ದ ಗುಣಮುಖರ ಪ್ರಮಾಣ ಈಗ ಶೇ.36ಕ್ಕೆ ಕುಸಿದಿದೆ.

ಗಣಿ ನಾಡಿನಲ್ಲಿ ವೈದ್ಯರಿಂದಲೇ ಕೊರೋನಾ ಆಸ್ಪತ್ರೆ!

ಆದರೆ, ಇದು ಆತಂಕ ಪಡುವ ವಿಚಾರವೇನೂ ಅಲ್ಲ, ಗುಣಮುಖವಾದ ಸೋಂಕಿತರು ಸರಾಸರಿ 12 ದಿನ ಆಸ್ಪತ್ರೆಯಲ್ಲಿ ಕಳೆದಿರುವುದರಿಂದ ಜುಲೈ ಸೋಂಕಿತರು ಈಗ ಗುಣಮುಖವಾಗಲಾರಂಭಿಸಿದ್ದು ಜುಲೈ ಮಾಸಾಂತ್ಯದ ವೇಳೆಗೆ ರಾಜ್ಯದಲ್ಲೂ ಗುಣಮುಖರ ಪ್ರಮಾಣದಲ್ಲಿ ಭಾರೀ ಏರಿಕೆಯಾಗಲಿದೆ. ಸೋಂಕಿನ ಪ್ರಮಾಣ ಇಳಿಮುಖವಾದರೆ ಅದು ಇನ್ನಷ್ಟುಹೆಚ್ಚಾಗಲಿದೆ ಎನ್ನುತ್ತಾರೆ ತಜ್ಞರು ಹಾಗೂ ಅಧಿಕಾರಿಗಳು.

ಮಹಾರಾಷ್ಟ್ರ, ತಮಿಳುನಾಡು ಮತ್ತು ದೆಹಲಿಯಲ್ಲಿ ಈವರೆಗೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕೊರೋನಾ ಸೋಂಕು ಪತ್ತೆಯಾದ ದೇಶದ ಮೊದಲ ಮೂರು ರಾಜ್ಯಗಳು. ನಾಲ್ಕನೇ ಸ್ಥಾನದಲ್ಲಿ ಕರ್ನಾಟಕ ಇದೆ. ಆದರೆ, ಶೇ.85ರಷ್ಟುಮಂದಿ ಸೋಂಕಿತರ ಗುಣಮುಖರಾಗಿರುವ ದೆಹಲಿ ಮೊದಲ ಸ್ಥಾನದಲ್ಲಿದೆ. ಆದರೆ ಕರ್ನಾಟಕದಲ್ಲಿ ಶೇ.36 ಮಂದಿ ಗುಣಮುಖರಾಗುವ ಮೂಲಕ ಹೆಚ್ಚು ಗುಣಮುಖರ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

ಬೇರೆ ರಾಜ್ಯಗಳಲ್ಲಿ ಸ್ಥಿತಿ:

ಮಹಾರಾಷ್ಟ್ರದಲ್ಲಿ ಜುಲೈ 21ರವರೆಗೆ ಸೋಂಕಿತರಾಗಿರುವ 3,27,031 ಮಂದಿ ಪೈಕಿ 1,82,217 ಮಂದಿ (ಶೇ.56) ಗುಣಮುಖರಾಗಿದ್ದು 1,32,236 ಜನ ಸಕ್ರಿಯ ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಮಿಳುನಾಡಿನಲ್ಲಿ ಒಟ್ಟು 1,80,643 ಸೋಂಕಿತರದಲ್ಲಿ 1,26,670 ಮಂದಿ (ಶೇ.69) ಗುಣಮುಖರಾಗಿದ್ದು, 51,347 ಸಕ್ರಿಯ ಸೋಂಕಿತರಿದ್ದಾರೆ. ದೆಹಲಿಯಲ್ಲಿ ಈವರೆಗೆ ಒಟ್ಟು 1,25,096 ಸೋಂಕಿತರಾಗಿದ್ದು, ಇವರಲ್ಲಿ 1,06,118 ಮಂದಿ (ಶೇ.85) ಗುಣಮುಖರಾಗಿದ್ದಾರೆ. ಕೇವಲ 15,166 ಸಕ್ರಿಯ ಸೋಂಕಿತರಾಗಿದ್ದಾರೆ

ಗುಡ್‌ ನ್ಯೂಸ್: ರಾಜ್ಯದಲ್ಲಿ ಸೋಂಕಿನ ಪ್ರಮಾಣ ಮತ್ತಷ್ಟು ಇಳಿಕೆ!.

ಆಂಧ್ರಪ್ರದೇಶದ ಒಟ್ಟು 58,668 ಸೋಂಕಿತರದಲ್ಲಿ 25,574 ಮಂದಿ (ಶೇ.44) ಗುಣಮುಖರಾಗಿದ್ದು, 28,800 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ಒಟ್ಟು 53,288 ಮಂದಿ ಸೋಂಕಿತರ ಪೈಕಿ 31,855 ಜನ (ಶೇ.60) ಗುಣಮುಖರಾಗಿ, 19,137 ಜನ ಆಸ್ಪತ್ರೆಯಲ್ಲಿದ್ದಾರೆ. ಗುಜರಾತ್‌ನಲ್ಲಿ ಒಟ್ಟು 50,465 ಮಂದಿಗೆ ಸೋಂಕು ತುಗುಲಿದ್ದು ಇದರಲ್ಲಿ 36,504 ಜನ (ಶೇ.72) ಗುಣಮುಖರಾಗಿದ್ದು, 11,761 ಮಂದಿ ಇನ್ನೂ ಗುಣಮುಖವಾಗಬೇಕಿದೆ.

ತೆಲಂಗಾಣದ ಒಟ್ಟು 47,030 ಸೋಂಕಿತರಲ್ಲಿ 36,385 ಜನ (ಶೇ.76) ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ. 10,890 ಮಂದಿ ಆಸ್ಪತ್ರೆಯಲ್ಲಿದ್ದಾರೆ. ಪಶ್ಚಿಮ ಬಂಗಾಳದಲ್ಲಿ 47,030 ಸೋಂಕಿತರಲ್ಲಿ 28,035 ಮಂದಿ (ಶೇ.60) ಗುಣಮುಖರಾಗಿ 17,813 ಜನ ಗುಣಮುಖರಾಗಬೇಕಿದೆ. ರಾಜಸ್ಥಾನದ 31,373 ಮಂದಿ ಸೋಂಕಿತರಲ್ಲಿ 22,744 ಮಂದಿ (ಶೇ.72) ಜನ ಗುಣಮುಖರಾಗಿದ್ದು, 8,052 ಮಂದಿ ಸೋಂಕಿತರು ಆಸ್ಪತ್ರೆಯಲ್ಲಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!