8 ವರ್ಷ ಒಂದೇ ಠಾಣೆಯಲ್ಲಿದ್ದ 100 ಸಿಬ್ಬಂದಿ ಎತ್ತಂಗಡಿ; ಜ್ಯು.ಖರ್ಗೆ ಬೀಸಿದ ಚಾಟಿಗೆ ಕಲಬುರ್ಗಿ ಖಾಕಿ ಹೈಲರ್ಟ್!

By Kannadaprabha News  |  First Published Jul 10, 2023, 11:48 PM IST

ಜಿಲ್ಲಾ ಉಸ್ತುವಾರಿ ಸಚಿವರಾದ ನಂತರ ಮೊದಲ ಬಾರಿಗೆ ಪೊಲೀಸ್‌ ಅಧಿಕಾರಿಗಳೊಂದಿಗೆ ಮುಖಾಮುಖಿಯಾಗಿ ಕ್ಲಾಸ್‌ ತೆಗೆದುಕೊಂಡು ವಾರ್ನಿಂಗ್‌ ನೀಡಿದ್ದ ಸಚಿವ ಪ್ರಿಯಾಂಕ್‌ ಖರ್ಗೆ ಸಭೆಯಿಂದಾಗಿ ಅಲರ್ಟ್ ಆದಂತಿರುವ ಕಲಬುರಗಿ ಖಾಕಿಪಡೆ ಸಭೆಯಲ್ಲಿ ಪ್ರಸ್ತಾಪವಾದ ಬೇರು ಬಿಟ್ಟಿರುವ ಪೊಲೀಸ್‌ ಸಿಬ್ಬಂದಿ ಎತ್ತಂಗಡಿ ವಿಚಾರದಲ್ಲಿ ತಕ್ಷಣ ಕ್ರಮ ಕೈಗೊಂಡಿದೆ.


ಕಲಬುರಗಿ (ಜು.10) : ಜಿಲ್ಲಾ ಉಸ್ತುವಾರಿ ಸಚಿವರಾದ ನಂತರ ಮೊದಲ ಬಾರಿಗೆ ಪೊಲೀಸ್‌ ಅಧಿಕಾರಿಗಳೊಂದಿಗೆ ಮುಖಾಮುಖಿಯಾಗಿ ಕ್ಲಾಸ್‌ ತೆಗೆದುಕೊಂಡು ವಾರ್ನಿಂಗ್‌ ನೀಡಿದ್ದ ಸಚಿವ ಪ್ರಿಯಾಂಕ್‌ ಖರ್ಗೆ ಸಭೆಯಿಂದಾಗಿ ಅಲರ್ಚ್‌ ಆದಂತಿರುವ ಕಲಬುರಗಿ ಖಾಕಿಪಡೆ ಸಭೆಯಲ್ಲಿ ಪ್ರಸ್ತಾಪವಾದ ಬೇರು ಬಿಟ್ಟಿರುವ ಪೊಲೀಸ್‌ ಸಿಬ್ಬಂದಿ ಎತ್ತಂಗಡಿ ವಿಚಾರದಲ್ಲಿ ತಕ್ಷಣ ಕ್ರಮ ಕೈಗೊಂಡಿದೆ.

ಇದರ ಪರಿಣಾಮವಾಗಿ ನಗರದಲ್ಲಿ ವಿವಿಧ ಠಾಣೆಗಳಲ್ಲಿ 8 ವರ್ಷದಿಂದ ಒಂದೇ ಕಡೆ ಕೆಲಸ ಮಾಡುತ್ತಿರುವ 100 ಸಿಬ್ಬಂದಿಗೆ ವರ್ಗಾವಣೆ ಮಾಡಲಾಗಿದೆ. ಈ ಕುರಿತಂತೆ ಸಚಿವರಿಗೆ ಖುದ್ದು ಪೊಲೀಸ್‌ ಅಧಿಕಾರಿಗಳೇ ಅನುಪಾಲನಾ ವರದಿ ಸಲ್ಲಿಸಿದ್ದು ವರದಿಯ ಮುಖ್ಯಾಂಶಗಳು ಹೀಗಿವೆ.

Latest Videos

undefined

ಬಿಜೆಪಿಗೆ ವಿರೋಧ ಪಕ್ಷದ ನಾಯಕರು ಎಲ್ಲಿದ್ದಾರೆ ?: ಪ್ರಿಯಾಂಕ್ ಖರ್ಗೆ ಲೇವಡಿ

ಸಿಸಿ ಕ್ಯಾಮೆರಾ ಜಾಲ:

ನಗರದ ಪ್ರಮುಖ 25 ಸ್ಥಳಗಳಲ್ಲಿ ಒಟ್ಟು 60 ಸಿಸಿಟಿವಿ ಕ್ಯಾಮೆರಾ ಇದ್ದು, 57 ಕ್ಯಾಮೆರಾಗಳು ಕಾರ್ಯನಿರ್ವಹಿಸುತ್ತಿವೆ, ತಾಂತ್ರಿಕ ಕಾರಣಗಳಿಂದ 3 ಕ್ಯಾಮೆರಾ ಸ್ಥಗಿತ ಇದಲ್ಲದೇ, ನಗರದ 20 ಸ್ಥಳಗಳಲ್ಲಿ ಮಹಾನಗರ ಪಾಲಿಕೆ ವತಿಯಿಂದ 53 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಆದರೆ ವಾರ್ಷಿಕ ನಿರ್ವಹಣೆ ಇಲ್ಲದ ಕಾರಣ ಎಲ್ಲಾ 53 ಸಿಸಿಟಿವಿ ಕ್ಯಾಮೆರಾಗಳು ಸ್ಥಗಿತಗೊಂಡಿರುತ್ತವೆ. ಹೀಗಾಗಿ, 13-03-2023 ರಂದು ಮಹಾನಗರ ಪಾಲಿಕೆ ಆಯುಕ್ತರಿಗೆ ಪತ್ರ ಬರೆದು ಸದರಿ ಕ್ಯಾಮೆರಾ ದುರಸ್ಥಿ ಹಾಗೂ ವಾರ್ಷಿಕ ನಿರ್ವಹಣೆಗೆ ತಗುಲುವ ಅನುದಾನವನ್ನು ಬಿಡುಗಡೆಗೊಳಿಸಲು ಅಂದಾಜು ಪಟ್ಟಿಸಲ್ಲಿಸಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಅಕ್ರಮ ಮರಳುಗಾರಿಕೆ ಸುತ್ತಮುತ್ತ:

ಅಕ್ರಮ ಮರುಳು ಸಾಗಾಟ ಮಾಡುವವರ ವಿರುದ್ಧ 20-06-2023ರಿಂದ ಇಲ್ಲಿಯವರೆಗೆ ಒಟ್ಟು 12 ಪ್ರಕರಣಗಳು ಹಾಗೂ ಅಕ್ರಮ ಮರುಳು ಪ್ರಕರಣಗಳಲ್ಲಿ ಭಾಗಿಯಾದ ಆರೋಪಿತರ ವಿರುದ್ಧ 4 ಪಿಎಆರ್‌ ಪ್ರಕರಣಗಳನ್ನು ದಾಖಲಿಸಲಾಗಿದೆ. ಅಲ್ಲದೆ ಈ ಹಿಂದೆ ಒಬ್ಬ ಆರೋಪಿತನನ್ನು ಗಡಿಪಾರು ಮಾಡಲಾಗಿದೆ. 2021ರಲ್ಲಿ 215 ಪ್ರಕರಣಗಳು, 2022ರಲ್ಲಿ 119 ಪ್ರಕರಣಗಳು, 2023ರಲ್ಲಿ 88 ಪ್ರಕರಣಗಳು ಸೇರಿದಂತೆ ಒಟ್ಟು 422 ಪ್ರಕರಣಗಳು ದಾಖಲಾಗಿವೆ.

ಚೆಕ್‌ಪೋಸ್ಟ್‌ ನೋಟಗಳು:

ಶಹಾಬಾದ್‌ ಪೊಲೀಸ್‌ ಠಾಣೆಯ ವ್ಯಾಪ್ತಿಯ ಭಂಕೂರು ಚೆಕ್‌ಪೋಸ್ವ್‌ನಲ್ಲಿ ತಲಾ ಓರ್ವ ಪೊಲೀಸ್‌ ಸಿಬ್ಬಂದಿ ಹಾಗೂ ಕಂದಾಯ ಇಲಾಖೆ ಸಿಬ್ಬಂದಿ, ಅಫಜಲ್ಪುರ ವ್ಯಾಪ್ತಿಯ ಚೌಡಾಪುರ ಚೆಕ್‌ಪೋಸ್ವ್‌ನಲ್ಲಿ ತಲಾ ಓರ್ವ ಪೊಲೀಸ್‌ ಸಿಬ್ಬಂದಿ, ಗಣಿ ಮತ್ತು ಭೂ ವಿಜ್ಞಾನ ಹಾಗೂ ಕಂದಾಯ ಇಲಾಖೆ ಸಿಬ್ಬಂದಿ, ನೆಲೋಗಿ ಠಾಣಾ ವ್ಯಾಪ್ತಿಯ ಜೇರಟಗಿ ಚೆಕ್‌ ಪೋಸ್ವ್‌ನಲ್ಲಿ ಓರ್ವ ಪೊಲೀಸ್‌ ಸಿಬ್ಬಂದಿ ಹಾಗೂ ಓರ್ವ ಕಂದಾಯ ಇಲಾಖೆ ಸಿಬ್ಬಂದಿ, ಮಾಡಬೂಳ ಠಾಣೆ ವ್ಯಾಪ್ತಿಯ ಇವಣಿ ಚೆಕ್‌ ಪೋಸ್ವ್‌ನಲ್ಲಿ ಓರ್ವ ಪೊಲೀಸ್‌ ಸಿಬ್ಬಂದಿ, ಚಿತ್ತಾಪುರ ಠಾಣಾ ವ್ಯಾಪ್ತಿಯ ಮರಗೋಳ ಚೆಕ್‌ ಪೋಸ್ಟ… ನಲ್ಲಿ ಓರ್ವ ಪೊಲೀಸ್‌ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ರಾಯಲ್ಟಿಹಣದ ತಾಳೆಯಾಗದಿರುವುದು, ಓರ್ವ ಲೋಡ್‌ ಮರುಳು ಸಾಗಾಣಿಕೆ ಮಾಡುವ ವಾಹನಗಳ ಆರ್‌ಸಿ ಅಮಾನತು ಮಾಡುವುದು ಆರ್‌ಟಿಓಗೆ ಸಂಬಂಧಿಸಿದ್ದು, ಅಕ್ರಮ ಮರುಳು ಸಂಗ್ರಹವನ್ನು ಡಿಸಿ ಹಾಗೂ ಸಿಇಓ ಪರಿಶೀಲಿಸುವುದು ಪೊಲೀಸ್‌ ಇಲಾಖೆಗೆ ಅನ್ವಯಿಸುವುದಿಲ್ಲ. ಜಿಎಸ್‌ ಪಿ ಪರಿಶೀಲನೆ ಪೊಲೀಸ್‌ ಇಲಾಖೆಗೆ ಅನ್ವಯಿಸುವುದಿಲ್ಲ. ಟಾಸ್ಕ… ಫೋರ್ಸ್‌ ಸಭೆಗೆ ಹಾಜಿರಾಗಲಾಗುವುದು ಎಂದು ವರದಿಯಲ್ಲಿ ಹೇಳಲಾಗಿದೆ.

ಇಸ್ಪೀಟ್‌- ಮಟ್ಕಾ:

ಇಲ್ಲಿಯವರೆಗೆ ಅಕ್ರಮ ಜೂಜಾಟ ಆಡುತ್ತಿರುವವರ ವಿರುದ್ದ ಒಟ್ಟು 12 ಪ್ರಕರಣಗಳು ದಾಖಲಿಸಿ 74 ಜನರ ಮೇಲೆ ಕಾನೂನಿನ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೇ ಈ ಹಿಂದೆ ಒಬ್ಬ ಆರೋಪಿತನನ್ನು ಗಡಿಪಾರು ಮಾಡಲಾಗಿದೆ. ಮಟ್ಕಾ ಆಡುತ್ತಿದ್ದವರ ಮೇಲೆ 11 ಪ್ರಕರಣ ದಾಖಲಿಸಿ 14 ಜನ ಆರೋಪಿತರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಅಲ್ಲದೇ ಮಟ್ಕಾ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿತರ ವಿರುದ್ದ ಮುಂಜಾಗ್ರತಾ ಕ್ರಮವಾಗಿ 5 ಪಿಎಆರ್‌ ಪ್ರಕರಣ ದಾಖಲಿಸಲಾಗಿದೆ. ಅಲ್ಲದೇ ಈ ಹಿಂದೆ 16 ಆರೋಪಿತರನ್ನು ಗಡಿಪಾರು ಮಾಡಲಾಗಿದೆ.

ಮಹಿಳೆಯರು ನಾಪತ್ತೆ ಪ್ರಕರಣಗಳು:

ಮಹಿಳೆಯರ ನಾಪತ್ತೆಯ ಪ್ರಕರಣಗಳು 2020ರಲ್ಲಿ 74, 2021ರಲ್ಲಿ 119, 2022ರಲ್ಲಿ 111 ಪ್ರಕರಣಗಳು, 2023ರಲ್ಲಿ 46 ಪ್ರಕರಣಗಳು ವರದಿಯಾಗಿವೆ, 2023ರಲ್ಲಿ ಇಲ್ಲಿಯವರೆಗೆ 8 ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ. ಹೀಗೆ 350 ಪ್ರಕರಣಗಳಲ್ಲಿ 314 ಪತ್ತೆಯಾಗಿದ್ದು, 36 ತನಿಖೆ ಹಂತದಲ್ಲಿವೆ. ಮಾದಕ ವಸ್ತುಗಳ ಮಾರಾಟ:ದ 2023 ರಲ್ಲಿ ಇಲ್ಲಿವರೆಗೆ 27 ಆರೋಪಿ ಬಂಧಿಸಿ 14 ಕೆಜೆ ಮಾಲು ವಶಕ್ಕೆ ಪಡೆಯಲಾಗಿದೆ.

ಸಾಮಾಜಿಕ ಜಾಲ ತಾಣಗಳ ಮೇಲೆ ನಿಗಾ:

ಕಲಬುರಗಿ ಜಾಲತಾಜಿಲ್ಲೆ ಪೊಲೀಸ್‌ ಕಚೇರಿಯಲ್ಲಿ ಸಮಾಜಿಕ ಜಾಲತಾಣ ಮೇಲುಸ್ತುವಾರಿ ಸೆಲ್‌ ವಿಭಾಗವಿದ್ದು ಅದರ ಮುಖಾಂತರ ಸಾಮಾಜಿಕ ಜಾಲ ತಾಣಗಳ ಮೇಲೆ ನಿಗಾವಹಿಸಲಾಗುತ್ತಿದೆ.

ಜೈನ ಮುನಿಗಳ ಹತ್ಯೆ ಹಿಂದೆ ಉಗ್ರರ ಕೈವಾಡ ಎಂದ ಶಾಸಕ ಸವದಿ ವಿರುದ್ಧ ಪ್ರಿಯಾಂಕ್ ಖರ್ಗೆ ಕಿಡಿ

ಗೂಂಡಾಗಿರಿ ಹಾಗೂ ರೌಡಿಗಳು:

ಜಿಲ್ಲೆಯ ಯಾವುದೇ ಪೊಲೀಸ್‌ ಅಧಿಕಾರಿ ಮತ್ತು ಸಿಬ್ಬಂದಿಯವರು ರೌಡಿ ಷೀರ್ಟ ಗಳೊಂದಿಗೆ ಸೇರಿ ಯಾವುದೇ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದಿಲ್ಲ. ಒಂದು ವೇಳೆ ರೌಡಿ ಷೀಟರ್‌ಗಳೊಂದಿಗೆ ಸಂಪರ್ಕದಲ್ಲಿರುವುದು ಕಂಡುಬಂದರೆ ಅವರ ವಿರುದ್ದ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅನುಪಾಲನಾ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಪ್ರಿಯಾಂಕ್‌ ಖರ್ಗೆ ವಿವರಿಸಿದ್ದಾರೆ.

1) ಎಂಟು ವರ್ಷಗಳ ಕಾಲ ಒಂದೇ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 8 ಜನ ಎಎಸ್‌ ಐ, 58 ಜನ ಸಿಎಚ್‌ ಸಿ, 34 ಜನ ಸಿಪಿಸಿ ಸೇರಿದಂತೆ ಒಟ್ಟು 100 ಜನ ಸಿಬ್ಬಂದಿಗಳ ಎತ್ತಂಗಡಿ

2) ನಗರ ವ್ಯಾಪ್ತಿಯಲ್ಲಿ ಒಟ್ಟು 29 ಕ್ಲಬ್‌ ಗಳಿದ್ದು, ಅವುಗಳಲ್ಲಿ 25 ಕ್ಲಬ್‌ ಗಳು ಸಕ್ರೀಯವಾಗಿದ್ದು, ಇನ್ನುಳಿದ 4 ಕ್ಲಬ್‌ ಗಳು ನಿಷ್ಕಿ್ರೕಯ

3) ಠಾಣೆಯ ಪಿಐ ಹಾಗೂ ಎಸಿಪಿ ಅವರು ಭೇಟಿ ನೀಡಿ ಅನಧಿಕೃತ ಚಟುವಟಿಕೆ ನಡೆಯದಂತೆ ನೋಡಿಕೊಳ್ಳುವಂತೆ ಸೂಚಿಸಲಾಗಿದೆ

4) ಸಿವಿಲ್‌ ವಿಷಯ ಬಂದಾಗ ಪೊಲೀಸರು ಹಸ್ತಕ್ಷೇಪ ಮಾಡದಂತೆ ಕಮಿಷ್ನರ್‌ ಕಟ್ಟುನವಿಟ್ಟು ಸೂಚನೆ

5) ಸಿವಿಲ್‌ ವಿಷಯದ ಅರ್ಜಿಗಳು ಬಂದರೆ ನ್ಯಾಯಾಲಯದಲ್ಲಿ ಬಗೆಹರಿಸಿಕೊಳ್ಳುವಂತೆ ಪಕ್ಷಗಾರರಿಗೆ ಸೂಚಿಸಲು ಸಲಹೆ

6) ನಗರ ವ್ಯಾಪ್ತಿಯ 14 ಪೊಲೀಸ್‌ ಠಾಣೆಗಳ ಪೈಕಿ ಮಹಿಳಾ ಠಾಣೆ ಹೊರತುಪಡಿಸಿ ಮಿಕ್ಕ 13 ಠಾಣೆಗಳಲ್ಲಿ ಒಟ್ಟು 52 ಸಿಸಿಟಿವಿ ಕ್ಯಾಮೆರಾ.

7) ಮಹಿಳಾ ಪೊಲೀಸ್‌ ಠಾಣೆ ಸೂಪರ್‌ ಮಾರ್ಕೆಟ್‌ ಬಳಿ ಇರುವ ಹಳೆಯ ಗ್ರಾಮೀಣ ವೃತ್ತ ಕಚೇರಿಗೆ ಸ್ಥಳಾಂತರಗೊಂಡಿರುವುದರಿಂದ ಸಿಸಿಟಿವಿ ಕ್ಯಾಮೆರಾ ಇಲ್ಲ

click me!