ಕಳಪೆ ಕಾರ್ಯ ನಿರ್ವಹಣೆ ಸಮಸ್ಯೆಯಿಂದಾಗಿ ಸರ್ಕಾರ ಹಂಚಿಕೆ ಮಾಡಿದ್ದ ಮೊಬೈಲ್ ಹಿಂಪಡೆಯುವಂತೆ ಒತ್ತಾಯಿಸಿ ಬಾಗಲಕೋಟೆ ಜಿಲ್ಲೆಯಾದ್ಯಂತ ಅಂಗನವಾಡಿ ಕಾರ್ಯಕರ್ತೆಯರು ಸೋಮವಾರ ಪ್ರತಿಭಟನೆ ನಡೆಸಿದರು. ಹೊಸ ಮೊಬೈಲ್ ನೀಡಬೇಕು ಇಲ್ಲದಿದ್ದರೆ ಇ-ಸರ್ವೆ ಕಾರ್ಯ ಮಾಡುವುದಿಲ್ಲವೆಂದು ಪಟ್ಟು ಹಿಡಿದರು.
ಬಾಗಲಕೋಟೆ (ಜು.j10) : ಕಳಪೆ ಕಾರ್ಯ ನಿರ್ವಹಣೆ ಸಮಸ್ಯೆಯಿಂದಾಗಿ ಸರ್ಕಾರ ಹಂಚಿಕೆ ಮಾಡಿದ್ದ ಮೊಬೈಲ್ ಹಿಂಪಡೆಯುವಂತೆ ಒತ್ತಾಯಿಸಿ ಬಾಗಲಕೋಟೆ ಜಿಲ್ಲೆಯಾದ್ಯಂತ ಅಂಗನವಾಡಿ ಕಾರ್ಯಕರ್ತೆಯರು ಸೋಮವಾರ ಪ್ರತಿಭಟನೆ ನಡೆಸಿದರು. ಹೊಸ ಮೊಬೈಲ್ ನೀಡಬೇಕು ಇಲ್ಲದಿದ್ದರೆ ಇ-ಸರ್ವೆ ಕಾರ್ಯ ಮಾಡುವುದಿಲ್ಲವೆಂದು ಪಟ್ಟು ಹಿಡಿದರು.
ನವನಗರದಲ್ಲಿ ಸೋಮವಾರ ಮಿನಿವಿಧಾನಸೌಧ ಮುಂಭಾಗ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ ಅಂಗನವಾಡಿ ಕಾರ್ಯಕರ್ತೆಯರು, ಕಳಪೆ ಮೊಬೈಲ್, ನೆಟ್ವರ್ಕ್ ಸಮಸ್ಯೆಯಿಂದಾಗಿ ಸರಿಯಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಮೊಬೈಲ್ ಕೆಲಸದಿಂದ ಮುಕ್ತಿ ನೀಡಬೇಕೆಂದು ಆಗ್ರಹಿಸಿದರು.
undefined
ಬಾಣಂತಿಗೆ ಕೊಳೆತ ಮೊಟ್ಟೆ ಪೂರೈಕೆ: ಮರಿ ಸಹಿತ ರಕ್ತ ಹೆಪ್ಪುಗಟ್ಟಿ ದುರ್ನಾತ!
ಬೀಳಗಿಯಲ್ಲಿ ಹೊಸ ಬೊಬೈಲ್‌ಗೆ ಪಟ್ಟು:
ಬೀಳಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದ ಅಂಗನವಾಡಿ ಕಾರ್ಯಕರ್ತರು, ಹಳೆಯ ಮತ್ತು ಕಡಿಮೆ ಗುಣಮಟ್ಟ, ಸಾಮರ್ಥ್ಯದ ಮೊಬೈಲ್‌ಗಳನ್ನು ವಾಪಸ್ ಪಡೆದು ಹೊಸ ಮೊಬೈಲ್‌ಗಳನ್ನು ನೀಡಬೇಕು. ಇಲ್ಲದಿದ್ದರೆ ಸರ್ಕಾರ ವಹಿಸುವ ಇ-ಸರ್ವೇ ಕಾರ್ಯಗಳನ್ನು ನಾವು ಮಾಡಲು ಸಾಧ್ಯವಿಲ್ಲ ಎಂದು ಪಟ್ಟು ಹಿಡಿದರು.
ಪ್ರತಿಭಟನೆ ವೇಳೆ ರಾಜ್ಯ ಅಂಗನವಾಡಿ ನೌಕರರ ಸಂಘದ ತಾಲೂಕು ಅಧ್ಯಕ್ಷೆ ಶಾಂತಾ ಬಡಿಗೇರ ಮಾತನಾಡಿ, ನಮಗೆ ಹೊಸ ಮೊಬೈಲ್‌ಗಳನ್ನು ಕೊಡಬೇಕು. ಇಲ್ಲವಾದಲ್ಲಿ ಫಾಮ್‌ರ್‍ಗಳ ಮೂಲಕ ಸರ್ವೇ ಕಾರ್ಯ ಮಾಡಿಸಬೇಕು ಎಂದು ಆಗ್ರಹಿಸಿದರು.
ಇ-ಸರ್ವೇ ಕಾರ್ಯ ಮಾಡಲು ನೀಡಿರುವ ಮೊಬೈಲ್‌ಗಳು ಕಳಪೆ ಗುಣಮಟ್ಟದ್ದಾಗಿವೆ. ಫೋಟೊ ತೆಗೆಯುವಾಗ ಸ್ಟ್ರಕ್ ಆಗುವುದು, ದಾಖಲೆಗಳನ್ನು ಸೇರಿಸುವಾಗ ಸ್ವಿಚ್ ಆಫ್ ಆಗುತ್ತವೆ. ಒಂದು ಮನೆಯ ಸರ್ವೇ ಮುಗಿಸಿ ಇನ್ನೊಂದು ಮನೆಯ ಸರ್ವೇ ಮಾಡುವಷ್ಟರಲ್ಲಿ ಹ್ಯಾಂಗ್ ಆಗುತ್ತಿವೆ. ಇಂಥ ಮೊಬೈಲ್‌ಗಳಲ್ಲಿ ನಾವು ಹೇಗೆ ಮಾಹಿತಿ ಕಳಿಸುವುದು? ಕೆಲಸ ಮಾಡುವುದು? ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ನಮಗೆ ಯಾವುದೇ ರೀತಿ ಒತ್ತಡಗಳನ್ನು ಹಾಕಿದರೂ ಸರಿ ಈ ಬಾರಿ ನಮ್ಮ ನಿರ್ಧಾರ ಬದಲಾಗಲ್ಲ. ಈಗ ಕೊಟ್ಟಿರುವ ಮೊಬೈಲ್‌ಗಳನ್ನು ಬದಲಿಸಿಕೊಟ್ಟು ಸಕಾಲಿಕ ಮತ್ತು ತ್ವರಿತ ಕಾರ್ಯ ನಿರ್ವಹಣೆಗೆ ಅನುಕೂಲ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಎಐಟಿಯುಸಿ ತಾಲೂಕು ಕಾರ್ಯದರ್ಶಿ ರೇಣುಕಾ ಚಬ್ಬಿ, ಗುರುಬಾಯಿ ಕ್ಯಾಡಿ, ಕಸ್ತೂರಿ ನಾಗನಗೌಡರ, ಜೆಮೆಲಾ ಮುಲ್ಲಾ, ಜಯಶ್ರೀ ಮುರನಾಳ, ಮಹಾದೇವಿ ಜಿಜಿ, ಸತ್ಯವ್ವ ಬಗಲಿ, ಸುನಿತಾ ಸೊನ್ನ, ಮಲ್ಲಮ್ಮ ಪರಸಗೊಂಡ, ಸಿದ್ದಮ್ಮ ಮಾದರ, ಸುಭದ್ರಾ ಗೌಡರ, ಎಸ್.ಎ.ಕೌಜಲಗಿ, ಮಲ್ಲಮ್ಮ ಅಕ್ಕಿ, ನಿಂಬೆವ್ವ ಹಿರೇಮಠ, ಅನಸೂಯಾ ಅರಕೇರಿ, ರಜನಿ ಕುಲಕರ್ಣಿ, ಅಂಜುಮಾ ಅನಗವಾಡಿ ಮತ್ತಿತರರು ಇದ್ದರು.
ಬಾದಾಮಿಯಲ್ಲಿ ಸಿಡಿಪಿಒಗೆ ಮನವಿ ಸಲ್ಲಿಕೆ
ಬಾದಾಮಿ: ತಾಲೂಕಿನ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸೋಮವಾರ, ಮಹಿಳಾ ಮತ್ತು ಮಕ್ಕಳ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಿ ಸಿಡಿಪಿಒ ದಸ್ತಗೀರಸಾಬ ಮುಲ್ಲಾ ಅವರಿಗೆ ಮನವಿ ಸಲ್ಲಿಸಿದರು.
ಹೊಸ ಮೊಬೈಲ್ ನೀಡುವುದು, ಪ್ರಸಕ್ತ ಬಜೆಟ್‌ನಲ್ಲಿ ಘೋಷಿಸಿದಂತೆ . 1,000 ಗೌರವಧನ ನೀಡುವುದು, ಕನಿಷ್ಠ ವೇತನ ಜಾರಿ, ಗ್ರಾಚ್ಯೂಟಿ, ಭತ್ಯೆ, ಏಕರೂಪ ಸೇವಾ ನಿಯಮ, ಎನ್‌ಇಪಿ ಹಿಂಪಡೆಯುವಿಕೆ, ಪೋಷಣ ಅಭಿಯಾನಕ್ಕೆ ಆಧಾರ ಅಥವಾ ಲಿಂಕ್ ಕಡ್ಡಾಯ ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ಹಳೇ ಮೊಬೈಲಗಳನ್ನು ವಾಪಸ್ ಪಡೆದು ಹಂತ ಹಂತವಾಗಿ ಟ್ಯಾಬ್‌ಗಳನ್ನು ನೀಡಬೇಕು ಮತ್ತು ಇದರಲ್ಲಿ ನೆಟ್ವರ್ಕ್, ಡಾಟಾ ಪ್ರಾದೇಶಿಕ ಭಾಷೆಗಳ ಪ್ರೊಗ್ರಾಂಗಳ ಅಳವಡಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕಾರ್ಯದರ್ಶಿ ಗೌರಮ್ಮ ಕಡಪಟ್ಟಿ, ಕಸ್ತೂರಿ ಕಾವಳ್ಳಿ, ಎಸ್.ಡಿ.ಕುಲಕರ್ಣಿ, ಎಸ್.ಎಂ.ಹಿಪ್ಪರಗಿ, ಡಿ.ಐ.ಯಂಡಿಗೇರಿ, ಡಿ.ಎಂ.ಪಮ್ಮಾರ, ಸಿ.ಬಿ.ಇನಾಮದಾರ, ಎಸ್.ಎಸ್.ಉಳ್ಳಾಗಡ್ಡಿ ಸೇರಿದಂತೆ ನೂರಾರು ಕಾರ್ಯಕರ್ತೆಯರು, ಸಹಾಯಕಿಯರು ಭಾಗವಹಿಸಿದ್ದರು.
ಗುಣಮಟ್ಟದ ಮೊಬೈಲ್ಗೆ ಒತ್ತಾಯಿಸಿ ಶಿವಮೊಗ್ಗದಲ್ಲೂ ಪ್ರತಿಭಟನೆ
ಶಿವಮೊಗ್ಗ: ಅಂಗನವಾಡಿ ಕಾರ್ಯಕರ್ತೆಯರಿಗೆ ಕಳಪೆ ಮೊಬೈಲ್ ವಿತರಣೆ ಖಂಡಿಸಿ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘದಿಂದ ಸೋಮವಾರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.
ಸರ್ಕಾರ ಕೊಟ್ಟಕಳಪೆ ಮೊಬೈಲ್ ಹಿಂತಿರುಗಿಸಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಮೊಬೈಲ್ ಸರಿಯಾಗಿ ವರ್ಕ್ ಆಗುತ್ತಿಲ್ಲ. ಮೊಬೈಲ್ ಕೊಟ್ಟು 4 ವರ್ಷಗಳಾಗಿದೆ. ಯಾವುದೇ ಎಲೆಕ್ಟ್ರಾನಿಕ್ ವಸ್ತುಗಳಿಗೆ 6 ತಿಂಗಳಿಂದ 2 ವರ್ಷ ಗ್ಯಾರಂಟಿ ಮಾತ್ರ ಇರುತ್ತದೆ. ಪೋಷಣ್ ಅಭಿಯಾನ ಕಾರ್ಯಕ್ರಮಕ್ಕೆ ಗುಣಮಟ್ಟದ ಫೋನ್ಗಳ ಕೊಡಬೇಕಿದೆ. ಆದರೆ, ಸರ್ಕಾರ ನಿರ್ಲಕ್ಷ್ಯ ತೋರಿದೆ. 4 ವರ್ಷಗಳಿಂದ ಕಳಪೆ ಮೊಬೈಲ್‌ಗಳಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ದೂರಿದರು.
ಇರುವ ಮೊಬೆಲ್ನಲ್ಲಿ ಇತರೆ ಇಲಾಖೆ ಸರ್ವೆ ಕಾರ್ಯ ನಡೆಸಲು ಸಹ ಇಲಾಖೆಯವರು ಹೇಳುತ್ತಿದ್ದಾರೆ. ಅಂಗನವಾಡಿ ಪ್ರತಿಯೊಂದು ಕೆಲಸವನ್ನು ಕಳಪೆ ಮೊಬೈಲ್‌ನಲ್ಲೇ ಮಾಡಬೇಕು. ಇದು ನಮ್ಮಿಂದ ಸಾಧ್ಯವಾಗುತ್ತಿಲ್ಲ ಎಂದು ಅಕ್ರೋಶ ವ್ಯಕ್ತಪಡಿಸಿದರು.
ಬ್ಯಾಟರಿ ಬಾಳಿಕೆ ಬರೊಲ್ಲ; ನೆಟ್ವರ್ಕು ಸಿಗೊಲ್ಲ; ಕಳಪೆ ಮೊಬೈಲ್ ಮರಳಿಸಲು ಮುಂದಾದ ಅಂಗನವಾಡಿ ಸಿಬ್ಬಂದಿ
ಚುನಾವಣೆಪೂರ್ವ ಗ್ಯಾರಂಟಿ ಯೋಜನೆಯಲ್ಲಿ ಅಂಗನವಾಡಿ ಕಾರ್ಯಕರ್ತರಿಗೆ .11,500 ರಿಂದ .15,000 ಸರ್ಕಾರ ಬಂದ ತಕ್ಷಣ ನೀಡುತ್ತೇವೆ ಎಂದಿದ್ದರು. ಈಗ ಕಾಂಗ್ರೆಸ್ ಸರ್ಕಾರ ಅಧಿಕಾರ ಅಧಿಕಾರಕ್ಕೆ ಬಂದಿದೆ. ಬಜೆಟ್‌ನಲ್ಲಿ ಘೋಷಣೆ ಮಾಡುತ್ತೇವೆ ಎಂದು ಇಲಾಖೆ ಸಚಿವರು ಭರವಸೆ ನೀಡಿದ್ದರು. ಈಗ ಬಜೆಟ್‌ನಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡದೇ ಇರುವುದು ಅಂಗನವಾಡಿ ಕಾರ್ಯಕರ್ತೆಯರಿಗೆ ನಿರಾಸೆ ಮೂಡಿಸಿದೆ. ಈ ಭರವಸೆ ಕೂಡಲೇ ಈಡೇರಿಸಬೇಕು. ಇಲ್ಲವಾದಲ್ಲಿ ಸರ್ಕಾರ ವಿರುದ್ಧ ಪ್ರತಿಭಟನೆ ಮೂಲಕ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.