ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಗೆ ಇಡೀ ದೇಶವೇ ಕಂಬನಿ ಮಿಡಯುತ್ತಿದೆ. ನಮ್ಮ ದೇಶ ಭೀಕರ ಉಗ್ರರ ದಾಳಿಯಲ್ಲಿ 44 ಯೋಧರು ಹುತಾತ್ಮರಾಗಿದ್ದು, ಅನೇಕ ಕೈಗಳು ಈ ನಿಟ್ಟಿನಲ್ಲಿ ಯೋಧರ ಕುಟುಂಬಕ್ಕೆ ನೆರವಿನ ಹಸ್ತ ಚಾಚುತ್ತಿವೆ. ಪುಟ್ಟ ಪೋರಿಯೊಬ್ಬಳು ತನ್ನ ಬಳಿ ಇದ್ದ ಹಣವನ್ನು ನೀಡಿ ಸುದ್ದಿಯಾಗಿದ್ದಾಳೆ.
ಬಳ್ಳಾರಿ : ಪುಲ್ವಾಮದಲ್ಲಿ ಭಾರತೀಯ ಯೋಧರ ಮೇಲೆ ನಡೆದ ಭೀಕರ ಉಗ್ರರ ದಾಳಿಗೆ ಇಡೀ ದೇಶವೇ ಕಂಬನಿ ಮಿಡಿಯುತ್ತಿದೆ. ಒಟ್ಟು 44 ಯೋಧರು ಹುತಾತ್ಮರಾಗಿದ್ದು ಎಲ್ಲರ ಮನಮಿಡಿಯುವಂತೆ ಮಾಡುತ್ತಿದೆ. ಇದಕ್ಕೆ ಪುಟ್ಟ ಮಕ್ಕಳೂ ಕೂಡ ಹೊರತಾಗಿಲ್ಲ.
ಇಂತಹ ಸಂಧರ್ಭ ದಲ್ಲಿ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುವುದು ಬೇಡವೆಂದು, ಹುಟ್ಟು ಹಬ್ಬದ ಖರ್ಚಿನ ಹಣ ಮತ್ತು ತನ್ನ ಉಳಿತಾಯದ ಹಣವನ್ನು ಮೃತ ಯೋಧರ ಕುಟುಂಬಕ್ಕೆ ನೀಡುವ ಮೂಲಕ ಬಳ್ಳಾರಿಯ ನಾಲ್ಕನೆ ತರಗತಿ ಪೋರಿಯೊಬ್ಬಳು ಮಾದರಿಯಾಗಿದ್ದಾಳೆ.
ಯಾವುದೇ ದಾಖಲೆ ಕೇಳದೆ ಹುತಾತ್ಮ ಯೋಧನ ಹಣ ನೀಡಿದ LIC
ಹೀಗೆ ಪೋಷಕರ ಜೊತೆ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಬಾಲಕಿ ತನು ಶ್ರೀ ಹುಟ್ಟು ಹಬ್ಬದ ದಿನದಂದು ತನ್ನ ಉಳಿತಾಯದ ಎರಡೂವರೆ ಸಾವಿರ ಹಣವನ್ನು ಜಿಲ್ಲಾಧಿಕಾರಿಗೆ ನೀಡಲು ತನುಶ್ರೀ ಮುಂದಾಗಿದ್ದಳು.
ನೇರವಾಗಿ ಹಣ ಪಡೆಯದ ಜಿಲ್ಲಾಧಿಕಾರಿಗಳು ಡಿಡಿ ಮೂಲಕ ಯೋಧರ ಖಾತೆಗೆ ಜಮಾ ಮಾಡುಂತೆ ಸೂಚಿಸಿದರು.
’ಅರ್ಧಗಂಟೆ ಮೊದಲು ಸ್ಫೋಟಗೊಂಡ ಬಸ್‌ನಿಂದ ಇಳಿದಿದ್ದೆ’
ನಮ್ಮ ಕೈಲಾದ ಸಹಾಯ ಮಾಡಬಹುದಾಗಿದೆ ಎನ್ನುವುದಕ್ಕೆ ಇಲ್ಲಿನ ಘಟನೆಯು ಸಾಕ್ಷಿಯಾಗಿದೆ.