ಸಿದ್ದರಾಮಯ್ಯ ಅವರೇ ನನಗೆ ಸಿಎಂ : ಸ್ಪೀಕರ್ ರಮೇಶ್ ಕುಮಾರ್

Published : Feb 16, 2019, 10:58 AM IST
ಸಿದ್ದರಾಮಯ್ಯ ಅವರೇ ನನಗೆ ಸಿಎಂ : ಸ್ಪೀಕರ್ ರಮೇಶ್ ಕುಮಾರ್

ಸಾರಾಂಶ

ಸಿದ್ದರಾಮಯ್ಯನವರೇ ನನಗೆ ನಾಯಕ. ಮಾಜಿ ಮುಖ್ಯಮಂತ್ರಿಗಳಾದರೂ ನನಗೆ ಅವರೇ ಮುಖ್ಯಮಂತ್ರಿಗಳು. ಅವರೇ ನಮ್ಮ ಮುಖಂಡರು ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿದರು. 

ಕೋಲಾರ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕದ ಬೊಬ್ಬುಲಿ ಪುಲಿ ಎಂದು ಸ್ಪೀಕರ್‌ ರಮೇಶ್‌ ಕುಮಾರ್‌ ಬಣ್ಣಿಸಿದರು.

ಜಿಲ್ಲೆಯ ಶ್ರೀನಿವಾಸಪುರದಲ್ಲಿ ಕನಕ ಭವನ ಉದ್ಘಾಟನೆ ವೇಳೆ ಮಾತನಾಡಿದ ಅವರು, ನನ್ನ ಹುಲಿ ಅವತಾರ ಮುಗಿದು ಬಹಳ ಕಾಲವಾಗಿದೆ. ಆದರೆ, ಸಿದ್ದರಾಮಯ್ಯ ಅವರ ಖದರ್‌ ಇಂದಿಗೂ ಅದೇ ರೀತಿ ಇದೆ ಎಂದರು.

ಸಿದ್ದರಾಮಯ್ಯರ ಮಾತು ಒರಟಾದ್ರೂ ಅವರ ಮನಸು ಬಹಳ ಮೃದು. ಸಿದ್ದರಾಮಯ್ಯ ಹಾಗೂ ದೇವರಾಜು ಅರಸು ಅವರ ನಡುವೆ ಸಾಮ್ಯತೆಗಳಿವೆ. ದೇವರಾಜು ಅರಸು ನನ್ನ ರಾಜಕೀಯ ಗುರುಗಳು. ಅವರಲ್ಲಿದ್ದ ಜಾತ್ಯತೀತ ಮನೋಭಾವ ಸಿದ್ದರಾಮಯ್ಯನವರಲ್ಲಿ ಕಂಡಿದ್ದೇನೆ. ಸಿದ್ದರಾಮಯ್ಯನವರೇ ನನಗೆ ನಾಯಕ. ಮಾಜಿ ಮುಖ್ಯಮಂತ್ರಿಗಳಾದರೂ ನನಗೆ ಅವರೇ ಮುಖ್ಯಮಂತ್ರಿಗಳು. ಅವರೇ ನಮ್ಮ ಮುಖಂಡರು ಎಂದು ಹೇಳಿದರು. ನಾನು ನನ್ನ ಕ್ಷೇತ್ರಕ್ಕೆ ಮಾಡಿರುವ ಅಭಿವೃದ್ಧಿ ಕೆಲಸಗಳ ಹಿಂದೆ ಸಿದ್ದರಾಮಯ್ಯನವರ ಶ್ರಮವಿದೆ ಎಂದರು.

ಕೆ.ಸಿ. ವ್ಯಾಲಿ ನೀರಿಗೆ ರಸ್ತೆಗಳಲ್ಲಿ ಸ್ಪೀಡ್‌ ಕಟ್ಟುಗಳು ನಿರ್ಮಿಸಿದಂತೆ ಅಡೆತಡೆಗಳನ್ನು ತರುತ್ತಿದ್ದಾರೆ. ನಿಧಾನವಾಗಿ ಮುನ್ನುಗುವ ಕೆಲಸ ಮಾಡಲಾಗುತ್ತಿದೆ. ಎತ್ತಿನಹೊಳೆ ಯೋಜನೆಯ ಭೂ ಸ್ವಾಧೀನಕ್ಕೆ ತಿದ್ದುಪಡಿ ಅಂಗೀಕಾರಗೊಂಡು ರಾಜ್ಯಪಾಲರ ಅಂಗಳಕ್ಕೆ ಹೋಗಿದೆ. ಅಲ್ಲಿ ಅಂಗಿಕಾರ ಸಿಕ್ಕಿದ ನಂತರ ಎರಡು ವರ್ಷಗಳಲ್ಲಿ ನೀರು ಬರಲಿದೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಅಕ್ಕಿ ಅಕ್ರಮದಲ್ಲಿ ಬಿಜೆಪಿಯವರೇ ಶಾಮೀಲು: ಸಚಿವ ಪ್ರಿಯಾಂಕ್ ಖರ್ಗೆ
ಬಂಡವಾಳ ಆಕರ್ಷಣೆಗೆ ರಾಜ್ಯಗಳ ನಡುವೆ ಸ್ಪರ್ಧೆ ಹೆಚ್ಚಾಗಿದೆ: ಸಚಿವ ಎಂ.ಬಿ.ಪಾಟೀಲ್‌