
ಬೆಂಗಳೂರು(ಮೇ 23): ಕಾರ್ಮಿಕ ಕಾನೂನು ತಿದ್ದುಪಡಿಗೆ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ನಡುವೆಯೇ ರಾಜ್ಯ ಸರ್ಕಾರವು ಮೂರು ತಿಂಗಳಿಗೆ ಅನ್ವಯವಾಗುವಂತೆ ಎಲ್ಲಾ ಕಾರ್ಖಾನೆಗಳ ಕಾರ್ಮಿಕರ ಕೆಲಸದ ಅವಧಿ ಮಿತಿಯನ್ನು 10 ಗಂಟೆಗೆ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.
1948ರ ಕೈಗಾರಿಕೆಗಳ ಕಾಯಿದೆಯ ಅಡಿ ನೋಂದಣಿ ಆಗಿರುವ ಕೈಗಾರಿಕೆಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಕಾಯಿದೆಯ 51ನೇ ವಿಧಿ ಹಾಗೂ 54ನೇ ವಿಧಿಯಿಂದ ವಿನಾಯಿತಿ ನೀಡಲಾಗಿದೆ.
ಶೇ.15 ದರ ಹೆಚ್ಚಿಸಿ ಖಾಸಗಿ ಬಸ್ ಸಂಚಾರಕ್ಕೆ ಅನುಮತಿ: ಸವದಿ
ಮೇ 22 ರಿಂದ ಆಗಸ್ಟ್ 21ರವರೆಗೆ ಮೂರು ತಿಂಗಳಿಗೆ ಅನ್ವಯವಾಗುವಂತೆ ದಿನದ ಕೆಲಸದ ಅವಧಿಯನ್ನು 8 ಗಂಟೆಗಳ ಬದಲಿಗೆ 10 ಗಂಟೆ ಹಾಗೂ ವಾರದ ಒಟ್ಟು ಕೆಲಸದ ಅವಧಿಯನ್ನು 48 ಗಂಟೆಯಿಂದ 60 ಗಂಟೆಗಳಿಗೆ ಹೆಚ್ಚಳ ಮಾಡಲಾಗಿದೆ. ನಿಯಮ 59ರ ಪ್ರಕಾರ ಸೂಚಿಸಿದ ಅವಧಿಗಿಂತ ಹೆಚ್ಚು ಸಮಯ ಕೆಲಸ ಮಾಡಿದವರಿಗೆ ಓ.ಟಿ. ಭತ್ಯೆ ನೀಡುವ ನಿಯಮ ಮುಂದುವರೆಸಲಾಗಿದೆ ಎಂದು ಕಾರ್ಮಿಕ ಇಲಾಖೆ ಅಧೀನ ಕಾರ್ಯದರ್ಶಿ ಕೆ. ಶಿವಲಿಂಗಯ್ಯ ಶುಕ್ರವಾರ ಆದೇಶ ಹೊರಡಿಸಿದ್ದಾರೆ.
2000 ಇಸವಿಯಲ್ಲೇ ಕನಿಷ್ಠಕ್ಕೆ ಇಳಿದ ರೆಪೋ ದರ: ಗೃಹ, ವಾಹನ ಸೇರಿ ಹಲವು ಸಾಲಗಳ ಬಡ್ಡಿ ದರ ಇಳಿಕೆ
ಪರೀಕ್ಷಾರ್ಥ ಹುನ್ನಾರ: ಕಾರ್ಮಿಕ ಇಲಾಖೆಯ ಆದೇಶಕ್ಕೆ ಕಾರ್ಮಿಕ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕಾರ್ಮಿಕರ ಧ್ವನಿಯನ್ನು ಪರೀಕ್ಷಿಸುವ ಸಲುವಾಗಿ ಮೂರು ತಿಂಗಳ ಅವಧಿಗೆ ಪರೀಕ್ಷಾರ್ಥ ಹುನ್ನಾರದ ಆದೇಶ ಮಾಡಿದ್ದಾರೆ. ಕಾರ್ಮಿಕರ ಧ್ವನಿಯನ್ನು ವ್ಯವಸ್ಥಿತವಾಗಿ ಅಡಗಿಸಲು ಕೊರೋನಾ ಲಾಕ್‌ಡೌನ್ ಅವಧಿಯನ್ನು ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ. ನಾವು ಹೋರಾಟ ಮಾಡದಿದ್ದರೆ ನಿಯಮವನ್ನು ಮುಂದುವರೆಸುವ ಹಾಗೂ ಈ ನಿಯಮ ತಿದ್ದುಪಡಿ ಜೊತೆಗೆ ಕನಿಷ್ಠ ವೇತನ, ಸೂಚನೆ ನೀಡದೆ ಕೆಲಸದಿಂದ ತೆಗೆಯುವಂತಹ ಅಪಾಯಕಾರಿ ಕಾನೂನು ತಿದ್ದುಪಡಿಗಳಿಗೆ ಸಿದ್ಧತೆ ನಡೆಸುತ್ತಿದೆ. ಹೀಗಾಗಿ ಶನಿವಾರದಿಂದಲೇ ಸರ್ಕಾರದ ವಿರುದ್ಧ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಎಚ್ಚರಿಕೆ ನೀಡಿವೆ.
ಲಾಕ್‌ಡೌನ್: 70 ಲಕ್ಷ ಕೇಸ್, 2.1 ಲಕ್ಷ ಸಾವಿನಿಂದ ಭಾರತ ಬಚಾವ್..!
ಶುಕ್ರವಾರ ಸಭೆ: ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ ಅಧ್ಯಕ್ಷೆ (ಸಿಐಟಿಯು) ಎಸ್. ವರಲಕ್ಷ್ಮೇ, ಸರ್ಕಾರದ ಆದೇಶದಲ್ಲೇ 10 ಗಂಟೆ ಕೆಲಸ ಮಾಡಿಸಿಕೊಳ್ಳಬಹುದು ಎಂದಿರುವುದರಿಂದ ಕಾರ್ಮಿಕರು ಹೆಚ್ಚುವರಿ ಕೆಲಸದ ಭತ್ಯೆ ಕಳೆದುಕೊಳ್ಳಲಿದ್ದಾರೆ. ಅಲ್ಲದೆ, 8 ಗಂಟೆಗಳ ಕೆಲಸದ ಅವಧಿಯ 124 ವರ್ಷಗಳ ಐತಿಹಾಸಿಕ ನಿಯಮಕ್ಕೆ ಸರ್ಕಾರ ಬಂಡವಾಳಶಾಹಿಗಳ ಹಿತಕ್ಕಾಗಿ ಇತಿಶ್ರೀ ಹಾಡಿದಂತಾಗಿದೆ. ಹೀಗಾಗಿ ಶುಕ್ರವಾರ ಎಲ್ಲಾ ಕಾರ್ಮಿಕ ಸಂಘಟನೆಗಳು ಸಭೆ ನಡೆಸು ಹೋರಾಟದ ರೂಪರೇಷೆ ಚರ್ಚಿಸಲಾಗುವುದು ಎಂದರು.
ಬಂಡವಾಳ ಆಕರ್ಷಿಸಲು ಕಾರ್ಮಿಕರ ಹೊಟ್ಟೆಹೊಡೆಯುವ ತೀರ್ಮಾನವನ್ನು ಸರ್ಕಾರ ತೆಗೆದುಕೊಂಡಿದೆ. ನಿತ್ಯ 10 ಗಂಟೆ ಕೆಲಸ ಮಾಡಿದರೆ ಕಾರ್ಮಿಕರಲ್ಲಿ ಶ್ರಮ ಶಕ್ತಿ ಕಡಿಮೆಯಾಗುತ್ತದೆ. ಸಾಮಾಜಿಕವಾಗಿಯೂ ಪರಿಣಾಮ ಬೀರಲಿದ್ದು ಕುಟುಂಬಗಳೇ ಹಾಳಾಗುತ್ತವೆ. ಜತೆಗೆ ಮಾಲಿಕರ ಜೇಬು ತುಂಬಿಸಲು ಹೋಗಿ ನಿರುದ್ಯೋಗ ಸೃಷ್ಟಿಯಾಗಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ