ಕೊರೋನಾ ಆತಂಕದ ಮಧ್ಯೆ ಬಿಎಂಟಿಸಿಯಲ್ಲಿ ಸಾಮಾಜಿಕ ಅಂತರಕ್ಕೆ ಬೆಲೆಯೇ ಇಲ್ಲ!

By Kannadaprabha NewsFirst Published May 23, 2020, 9:28 AM IST
Highlights

ಬಸ್‌ಗಳಲ್ಲಿ ಸೀಟುಗಳಲ್ಲಿ ಅಂಟಿಕೊಂಡು ಕುಳಿತು ಪ್ರಯಾಣ| ನೋಡಿಯೂ ನೋಡದಂತೆ ವರ್ತಿಸಿದ ನಿಲ್ದಾಣದ ಅಧಿಕಾರಿಗಳು| ಪ್ರಯಾಣಿಕರಿಗೆ ಥರ್ಮಲ್‌ಸ್ಕ್ರೀನಿಂಗ್‌ ಸಹ ಮಾಡಿಲ್ಲ| ಅತ್ಯಂತ ವಿರಳ ಸಂಖ್ಯೆಯಲ್ಲಿ ಜನ ಇದ್ದರೂ, ಅಧಿಕಾರಿಗಳ ನಿರ್ಲಕ್ಷ್ಯ|

ಬೆಂಗಳೂರು(ಮೇ.23): ಲಾಕ್‌ಡೌನ್‌ ಸಡಿಲಗೊಂಡು ಸಾರ್ವಜನಿಕ ಸಾರಿಗೆ ಸಂಚಾರ ಆರಂಭವಾದ ನಾಲ್ಕನೇ ದಿನವಾದ ಶುಕ್ರವಾರ ಬಿಎಂಟಿಸಿ ಬಸ್‌ಗಳಲ್ಲಿ ಸಾಮಾಜಿಕ ಅಂತರ ಮಾಯವಾಗಿತ್ತು.

ಬೆಳಗ್ಗೆ ಮೆಜೆಸ್ಟಿಕ್‌ನ ಬಿಎಂಟಿಸಿ ಕೆಂಪೇಗೌಡ ಬಸ್‌ ನಿಲ್ದಾಣ ಹಾಗೂ ನಿಲ್ದಾಣದಿಂದ ತೆರಳಿದ ಕೆಲ ಬಸ್‌ಗಳಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಜನ ಸಂಚರಿಸಿದರು. ಜೊತೆಗೆ, ಪ್ರಯಾಣಿಕರು ಬಸ್‌ ಹತ್ತುವಾಗ ಮತ್ತು ಇಳಿಯುವಾಗ ಗುಂಪು ಗೂಡಿದ್ದರು.

ಬಣಗುಡುತ್ತಿದೆ BMTC ಬಸ್ ನಿಲ್ದಾಣ, ಆದ್ರೆ KSRTC ಫುಲ್ ರಶ್..!

ಬಸ್‌ಗಳಲ್ಲಿ ಸೀಟುಗಳಲ್ಲಿ ಅಂಟಿಕೊಂಡು ಕುಳಿತು ಪ್ರಯಾಣಿಸಿದರು. ನಿಲ್ದಾಣದ ಅಧಿಕಾರಿಗಳು ನೋಡಿಯೂ ನೋಡದಂತೆ ವರ್ತಿಸಿದರು. ಪ್ರಯಾಣಿಕರಿಗೆ ಥರ್ಮಲ್‌ಸ್ಕ್ರೀನಿಂಗ್‌ ಸಹ ಮಾಡುತ್ತಿರಲಿಲ್ಲ. ಶುಕ್ರವಾದ ಅತ್ಯಂತ ವಿರಳ ಸಂಖ್ಯೆಯಲ್ಲಿ ಜನ ಇದ್ದರೂ, ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತಿತ್ತು.

ಬಿಎಂಟಿಸಿ ನಿಗಮವು ಗುರುವಾರ 1,350 ಬಸ್‌ ಕಾರ್ಯಾಚರಣೆ ಮಾಡಿದ್ದು, 67,400 ಪಾಸ್‌ ಮಾರಾಟ ಮಾಡಿದೆ. ಇದರಿಂದ 77 ಲಕ್ಷ ಆದಾಯ ಬಂದಿದೆ.
 

click me!