ಕಾವೇರಿಗಾಗಿ ಮೋದಿಗೆ 1 ಲಕ್ಷ ರಕ್ತ ಪತ್ರ; ಅ.10ಕ್ಕೆ ದೆಹಲಿ ಚಲೋ: ನಾರಾಯಣಗೌಡ

Published : Oct 02, 2023, 04:51 AM IST
ಕಾವೇರಿಗಾಗಿ ಮೋದಿಗೆ 1 ಲಕ್ಷ ರಕ್ತ ಪತ್ರ; ಅ.10ಕ್ಕೆ ದೆಹಲಿ ಚಲೋ: ನಾರಾಯಣಗೌಡ

ಸಾರಾಂಶ

ಕಾವೇರಿ ನದಿ ನೀರು ಹಂಚಿಕೆಯಲ್ಲಿನ ಸಮಸ್ಯೆ ಇತ್ಯರ್ಥ ಸಂಬಂಧ ಕೇಂದ್ರ ಸರ್ಕಾರದ ಗಮನ ಸೆಳೆಯಲು ಕರ್ನಾಟಕ ರಕ್ಷಣಾ ವೇದಿಕೆಯ (ನಾರಾಯಣ ಗೌಡ ಬಣ) ಒಂದು ಲಕ್ಷ ಕಾರ್ಯಕರ್ತರು ಭಾನುವಾರ (ಅ.1) ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಕ್ತದಲ್ಲಿ ಪತ್ರ ಬರೆದು ರವಾನಿಸಲು ಹಾಗೂ ಅಕ್ಟೋಬರ್‌ 10ರಂದು ದೆಹಲಿ ಚಲೋ ನಡೆಸಲು ನಿರ್ಧರಿಸಿದ್ದಾರೆ.

ಬೆಂಗಳೂರು (ಅ.2) :  ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ಮಧ್ಯಪ್ರವೇಶಿಸಿಬೇಕು ಎಂದು ಒತ್ತಾಯಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಕ್ತದಲ್ಲಿ ಒಂದು ಲಕ್ಷ ಪತ್ರ ಬರೆಯುವ ಆಂದೋಲನಕ್ಕೆ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಟಿ.ಎ.ನಾರಾಯಣಗೌಡ ಚಾಲನೆ ನೀಡಿದ್ದಾರೆ. 

ಭಾನುವಾರ ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ನಾರಾಯಣಗೌಡ ಅವರು ಸ್ವತಃ ರಕ್ತದಲ್ಲಿ 'ಕಾವೇರಿ ಜಲ ವಿವಾದ ಕನ್ನಡಿಗರ ಮನೆ ಮನೆಗೆ ಬೆಂಕಿ ಹಚ್ಚಿದೆ. ಅದನ್ನು ಆರಿಸದಿದರೆ ನಾಳೆ ಅದು ರಾಷ್ಟ್ರವನ್ನು ಸುಟ್ಟಿತು' ಎಂದು ಬರೆಯುವ ಮೂಲಕ ಆಂದೋಲನಕ್ಕೆ ಚಾಲನೆ ನೀಡಿದರು

Blood letter: ಸದಾಶಿವ ವರದಿ ಜಾರಿಗೆ ಆಗ್ರಹಿಸಿ ಸಿಎಂಗೆ ರಕ್ತದಲ್ಲಿ ಪತ್ರ ಬರೆದ ಬಸವರಾಜ ಪೂಜಾರಿ!

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಾರಾಯಣಗೌಡ, 'ರಾಜ್ಯದಲ್ಲಿ ಮಳೆಯಿಲ್ಲದೇ ರೈತರು ಸಂಕಷ್ಟದಲ್ಲಿದ್ದಾರೆ. ಹೀಗಿರುವಾಗ ತಮಿಳುನಾಡಿಗೆ ನೀರು ಹರಿಸುವುದು ಅಸಾಧ್ಯವಾಗಿದೆ. ಆದ್ದರಿಂದ ಪ್ರಧಾನಿ ಮಧ್ಯಪ್ರವೇಶಿಸಬೇಕು ಎಂದು ರಾಜ್ಯದ ಎಲ್ಲ ಜಿಲ್ಲೆಯ ಕಾರ್ಯಕರ್ತರು ರಕ್ತದಲ್ಲಿ ಒಂದು ಲಕ್ಷಕ್ಕೂ ಅಧಿಕ ಪತ್ರ ಬರೆದು ಒತ್ತಾಯಿಸಲಿದ್ದಾರೆ ಎಂದು ತಿಳಿಸಿದರು.

ನೀರು ಹರಿಸಲು ಸಾಧ್ಯವಿಲ್ಲ: 'ರಕ್ತ ಬೇಕಾದರೂ ಕೊಡುತ್ತೇವೆ. ಆದರೆ ಕಾವೇರಿ ನೀರು ನೀಡುವುದಿಲ್ಲ ಎಂಬುದು ರಕ್ತದಲ್ಲಿ ಪತ್ರ ಬರೆಯುತ್ತಿರುವುದರ ಹಿಂದಿನ ಉದ್ದೇಶವಾಗಿದೆ. ತಮಿಳುನಾಡಿಗೆ 3 ಸಾವಿರ ಕ್ಯೂಸೆಕ್‌ ನೀರು ಬಿಡಬೇಕು ಎಂಬ ಆದೇಶವನ್ನು ಪಾಲಿಸಲು ಸಾಧ್ಯವಿಲ್ಲ, ಆದ್ದರಿಂದ ಪ್ರಧಾನಿ ಮಧ್ಯಪ್ರವೇಶಿಸಿ ಸಮಸ್ಯೆ ಪರಿಹರಿಸಬೇಕು' ಎಂದು ಮನವಿ ಮಾಡಿದರು.

ಕರ್ನಾಟಕದಿಂದ ಭಾರತವೇ ಹೊರತು ಭಾರತದಿಂದ ಕರ್ನಾಟಕವಲ್ಲ. ಇದರ ಸತ್ಯ ತಿಳಿಸಲು ಪತ್ರ ಬರೆಯುತ್ತಿದ್ದೇವೆ. ಎರಡು ರಾಜ್ಯಗಳ ನಡುವೆ ಬೆಂಕಿ ಹೊತ್ತಿ ಉರಿಯುತ್ತಿದೆ. ಈಗಲಾದರೂ ನೀವು ಎರಡೂ ರಾಜ್ಯಗಳ ನಡುವೆ ಮಧ್ಯಸ್ಥಿಕೆ ವಹಿಸಿ ಕಾವೇರಿ ಉಳಿಸುವ ಕೆಲಸವನ್ನು ಮಾಡಬೇಕು. ಒಕ್ಕೂಟ ವ್ಯವಸ್ಥೆಯ ಹಿತ ಕಾಯಬೇಕು' ಎಂದು ಹೇಳಿದರು.

ಕಾವೇರಿ ಹೋರಾಟದಲ್ಲಿ ಭಾಗಿಯಾಗದ್ದಕ್ಕೆ ಕನ್ನಡಿಗರ ಕ್ಷಮೆ ಕೋರಿದ ನಟ ಜಗ್ಗೇಶ; ಹೇಳಿದ್ದೇನು?

'ರಾಜಕೀಯಕ್ಕಾಗಿ ಒಂದು ರಾಜ್ಯವನ್ನು ಮತ್ತೊಂದು ರಾಜ್ಯದ ಮೇಲೆ ಎತ್ತಿಕಟ್ಟುವ ಕೆಲಸವನ್ನು ಬಿಟ್ಟು ಪ್ರಧಾನಿಗಳು ಮಧ್ಯಸ್ಥಿಕೆ ವಹಿಸಬೇಕು. ಭವ್ಯ ಭಾರತದಲ್ಲಿ ಮತ್ತೊಂದು ರಾಷ್ಟ್ರವನ್ನು ಕಟ್ಟುವಶಕ್ತಿ ಕರ್ನಾಟಕಕ್ಕಿದೆ. ಏಕೆಂದರೆ ನಮ್ಮ ನಾಡು ಏಕೆಂದರೆ ನಮ್ಮ ನಾಡು ಬೇರೆಲ್ಲಾ ರಾಜ್ಯಗಳಿಗಿಂತ ಸಂಪದ್ಭರಿತವಾಗಿದ್ದು ಅಧಿಕ ತೆರಿಗೆ ಪಾವತಿಸಲಾಗುತ್ತಿದೆ. ಮಲತಾಯಿ ಧೋರಣೆ ಮಾಡಿದರೆ ಒಕ್ಕೂಟದಿಂದ ಹೊರ ಹೋಗಬೇಕಾಗುತ್ತದೆ' ಎಚ್ಚರಿಸಿದರು.'ಆ.9 ರಂದು ವೇದಿಕೆಯ 10 ಸಾವಿರ ಕಾರ್ಯಕರ್ತರು ದೆಹಲಿಗೆ ತೆರಳಿ ಆ.10 ರಂದು ಜ೦ತ‌ಮಂತರ್‌ನಲ್ಲಿ ಪ್ರತಿಭಟನೆ ನಡೆಸಲಿದ್ದೇವೆ. ಇನ್ನಾದರೂ ಕೇಂದ ಸರ್ಕಾರ ಎಚ್ಚೆತ್ತು ರಾಜ್ಯಕ್ಕಾಗಿರುವ ಅನ್ಯಾಯ ಸರಿಪಡಿಸಬೇಕು ಎಂದು ಒತ್ತಾಯಿಸಿದರು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇನ್ಮುಂದೆ ನೂರು ಗ್ಯಾರಂಟಿ ಘೋಷಣೆ ಮಾಡಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಛಲವಾದಿ ನಾರಾಯಣಸ್ವಾಮಿ
Breaking ಮಂಡ್ಯ ಬಸ್ ಅಪಘಾತದಲ್ಲಿ 23 ಪ್ರಯಾಣಿಕರಿಗೆ ಗಾಯ, ಇಬ್ಬರು ಗಂಭೀರ