ಕೋವಿಡ್‌ ಮೃತರ ಕುಟುಂಬಕ್ಕೆ 1.5ಲಕ್ಷ ರು. ಪರಿಹಾರ

By Kannadaprabha NewsFirst Published Sep 29, 2021, 7:30 AM IST
Highlights

*  ಬಿಪಿಎಲ್‌ ಕುಟುಂಬಕ್ಕೆ 1 ಲಕ್ಷದ ಬದಲು 1.5 ಲಕ್ಷ ರು.
*  ಬಿಪಿಎಲ್‌ಯೇತರ ಕುಟುಂಬಕ್ಕೆ 50 ಸಾವಿರ ರು.
*  ಅರ್ಜಿದಾರರು ತಮ್ಮ ವಾಸಸ್ಥಳದ ವ್ಯಾಪ್ತಿಯಲ್ಲಿಯೇ ಅರ್ಜಿ ಸಲ್ಲಿಸಬೇಕು
 

ಮೈಸೂರು(ಸೆ. 29):  ಕೋವಿಡ್‌ನಿಂದ(Covid19) ಮೃತಪಟ್ಟ ಬಿಪಿಎಲ್‌ ಮತ್ತು ಬಿಪಿಎಲ್‌ಯೇತರ ಕುಟುಂಬಗಳಿಗೆ ರಾಜ್ಯ ಸರ್ಕಾರವು ನೀಡುವ ಪರಿಹಾರ ಮೊತ್ತದಲ್ಲಿ ಬದಲಾವಣೆ ಮಾಡಿದ್ದು, ಬಿಪಿಎಲ್‌ ಕುಟುಂಬದ ವ್ಯಕ್ತಿಗೆ ನೀಡುವ ಪರಿಹಾವನ್ನು ಒಂದು ಲಕ್ಷ ರು.ನಿಂದ 1.50 ಲಕ್ಷ ರು.ಗೆ ಹೆಚ್ಚಳ ಮಾಡಲಾಗಿದೆ. ಇದೇ ವೇಳೆ ಬಿಪಿಎಲ್‌ಯೇತರ ಕುಟುಂಬಕ್ಕೆ 50 ಸಾವಿರ ರು. ಪರಿಹಾರವನ್ನು ಹೊಸದಾಗಿ ಘೋಷಿಸಿ ಆದೇಶ ಹೊರಡಿಸಿದೆ.

ಬಿಪಿಎಲ್‌(BPL) ಕುಟುಂಬದವರಿಗೆ ರಾಜ್ಯ ಸರ್ಕಾರದ ಸಂಧ್ಯಾ ಸುರಕ್ಷಾ ಯೋಜನೆಯಡಿ ಒಂದು ಲಕ್ಷ ರು. ಮತ್ತು ಎಸ್‌ಡಿಆರ್‌ಎಫ್‌ನಿಂದ 50 ಸಾವಿರ ರು. ಸೇರಿ 1.50 ಲಕ್ಷ ರು. ನೀಡಲಾಗುತ್ತದೆ. ಬಿಪಿಎಲ್‌ ಕುಟುಂಬದ ಒಂದಕ್ಕಿಂತ ಹೆಚ್ಚು ಮಂದಿ ಕೋವಿಡ್‌ನಿಂದ ಮೃತಪಟ್ಟಿದ್ದರೆ ಆಗ ಮೊದಲ ವ್ಯಕ್ತಿಗೆ 1.50 ಲಕ್ಷ ರು. ಹಾಗೂ ಉಳಿದವರಿಗೆ ತಲಾ 50 ಸಾವಿರ ರು. ಪರಿಹಾರ ದೊರೆಯುತ್ತದೆ. ಇನ್ನು, ಬಿಪಿಎಲ್‌ಯೇತರ ಕುಟುಂಬದಲ್ಲಿ ಕೋವಿಡ್‌ನಿಂದ ಸಾವನ್ನಪ್ಪಿದ್ದರೆ ತಲಾ 50 ಸಾವಿರ ರು. ಪರಿಹಾರ(Compensation) ನೀಡಲಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಕೊರೋನಾ ಬಗ್ಗೆ ಮತ್ತಷ್ಟು ನಿಗಾವಹಿಸಲು ಸೂಚನೆ: ಕೇಂದ್ರದಿಂದ ಬಂತು ಎಚ್ಚರಿಕೆ ಸಂದೇಶ

ಕೋವಿಡ್‌ನಿಂದ ಮೃತರಾದ ಬಿಪಿಎಲ್‌ ಕುಟುಂಬದವರಿಗೆ ಒಂದು ಲಕ್ಷ ರು. ನೀಡುವ ಆದೇಶವನ್ನು ಹಿಂಪಡೆದು ಕೆಲವೇ ಗಂಟೆಯಲ್ಲಿ ಪರಿಷ್ಕೃತ ಆದೇಶ ಹೊರಡಿಸಲಾಗಿದೆ. ಬಿಪಿಎಲ್‌ಯೇತರ ಕುಟುಂಬದಲ್ಲಿ ಒಂದು ಅಥವಾ ಒಂದಕ್ಕಿಂತ ಹೆಚ್ಚು ವ್ಯಕ್ತಿಗಳು ಮೃತಪಟ್ಟಿದ್ದರೆ ಎಸ್‌ಡಿಆರ್‌ಎಫ್‌ ಅಡಿ ಮೃತ ಸಂಖ್ಯೆಗನುಗುಣವಾಗಿ ತಲಾ 50 ಸಾವಿರ ರು. ಪಾವತಿಸಲಾಗುತ್ತದೆ ಎಂದು ಆದೇಶದಲ್ಲಿ ಹೇಳಲಾಗಿದೆ.

ಎಲ್ಲಾ ತಾಲೂಕು ಕಚೇರಿ, ನಾಡ ಕಚೇರಿ ಮತ್ತು ಬಿಬಿಎಂಪಿ ವ್ಯಾಪ್ತಿಯ ವಾರ್ಡ್‌ ಕಚೇರಿಗಳಲ್ಲಿ ಅರ್ಜಿ ಸಲ್ಲಿಸಬಹುದು. ವ್ಯಕ್ತಿಯು ರಾಜ್ಯದ ಯಾವುದೇ ಭಾಗದಲ್ಲಿ ಮೃತಪಟ್ಟಿದ್ದರೂ ಸಹ ಅರ್ಜಿದಾರರು ತಮ್ಮ ವಾಸಸ್ಥಳದ ವ್ಯಾಪ್ತಿಯಲ್ಲಿಯೇ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಲಾಗಿದೆ.
 

click me!