KIMS Hubballi Recruitment 2022: ಕಿಮ್ಸ್ ನಲ್ಲಿ ಖಾಲಿ ಇರುವ 37 ಬೋಧಕರ ಹುದ್ದೆಗೆ ಅರ್ಜಿ ಆಹ್ವಾನ

By Suvarna NewsFirst Published Dec 18, 2021, 2:04 PM IST
Highlights
  • ಖಾಲಿ ಇರುವ ಹುದ್ದೆ ಭರ್ತಿಗೆ ಮುಂದಾದ ಕಿಮ್ಸ್ ಹುಬ್ಬಳ್ಳಿ
  • ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಡಿಸೆಂಬರ್ 31 ಕೊನೆ ದಿನ
  • ಕಿಮ್ಸ್ ನಲ್ಲಿ ಒಟ್ಟು 37 ಬೋಧಕರ ಹುದ್ದೆ ಖಾಲಿ

ಬೆಂಗಳೂರು(ಡಿ.18): ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ (Karnataka Institute of Medical Sciences ) ಹುಬ್ಬಳ್ಳಿಯಲ್ಲಿ (Hubballi ) ಖಾಲಿ ಇರುವ ಬೋಧಕರ ಹುದ್ದೆಯನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲಾಗಿದೆ. ಪ್ರೊಫೆಸರ್ (Professor), ಅಸೋಸಿಯೇಟ್ ಪ್ರೊಫೆಸರ್ (Associate Professor) ಮತ್ತು ಅಸಿಸ್ಟೆಂಟ್ ಪ್ರೊಫೆಸರ್ (Assistant Professor) ಒಟ್ಟು  37 ಬೋಧಕ ಹುದ್ದೆಗಳು ಖಾಲಿ ಇದ್ದು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಅಲ್ಲಿಸಲು ಕೋರಲಾಗಿದೆ. ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗಿದ್ದು,  ಅರ್ಜಿ ಸಲ್ಲಿಸಲು ಡಿಸೆಂಬರ್ 31 ಕೊನೆಯ ದಿನವಾಗಿದೆ, ಹೆಚ್ಚಿನ ಮಾಹಿತಿಗೆ https://hubballikims.karnataka.gov.in/ ಗೆ ಭೇಟಿ ನೀಡಲು ಕೋರಲಾಗಿದೆ. ಅಥವಾ http://kimshubballi.org/ ಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು.

ಪ್ರೊಫೆಸರ್ -2, ಅಸೋಸಿಯೇಟ್ ಪ್ರೊಫೆಸರ್-4 ಮತ್ತು ಮತ್ತು ಅಸಿಸ್ಟೆಂಟ್ ಪ್ರೊಫೆಸರ್ 31 ಹೀಗೆ ಒಟ್ಟು 37 ಹುದ್ದೆಗಳು ಖಾಲಿ ಇದೆ. KIMS ಹುಬ್ಬಳ್ಳಿಯ ಅಧಿಕೃತ ಅಧಿಸೂಚನೆಯ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು  ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಿಂದ ಸ್ನಾತಕೋತ್ತರ ಪದವಿ, M.D, MS ಅನ್ನು ಪೂರ್ಣಗೊಳಿಸಿರಬೇಕು.

ಅನುಭವ: ಪ್ರೊಫೆಸರ್ ಹುದ್ದೆಗೆ ಅರ್ಜಿ ಸಲ್ಲಿಸುವವರು 3 ವರ್ಷಗಳ ಕಾಲ ಕೆಲಸ ಮಾಡಿದ ಅನುಭವದೊಂದಿಗೆ 4 ಸಂಶೋಧನಾ ಲೇಖನ ಪ್ರಕಟಗೊಂಡಿರಬೇಕು. ಅಸೋಸಿಯೇಟ್ ಪ್ರೊಫೆಸರ್ ಹುದ್ದೆಗೆ ಅರ್ಜಿ ಸಲ್ಲಿಸಲು 4 ವರ್ಷಗಳ ಅನುಭವ ಹೊಂದಿರಬೇಕು. 2 ಸಂಶೋಧನಾ ಲೇಖನ ಪ್ರಕಟಗೊಂಡಿರಬೇಕು. ಅಸಿಸ್ಟೆಂಟ್ ಪ್ರೊಫೆಸರ್  ಹುದ್ದೆಗೆ ಮೂರು ವರ್ಷಗಳ ಅನುಭವವಿರಬೇಕು. ಈ ಎಲ್ಲಾ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗೆ ಕನಿಷ್ಠ 45 ವರ್ಷಗಳು ಮತ್ತು ಗರಿಷ್ಠ 50 ವರ್ಷಗಳು ಆಗಿರಬೇಕು.

Indian Coast Guard Recruitment 2022: ಕರಾವಳಿ ಭದ್ರತಾಪಡೆಯಲ್ಲಿನ 322 ಹುದ್ದೆಗಳ ಭರ್ತಿಗೆ ಅಧಿಸೂಚ

ಅರ್ಜಿ ಶುಲ್ಕ ಮತ್ತು ವೇತನ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 2500/- ರೂ ಅರ್ಜಿ ಶುಲ್ಕವನ್ನು ವಿಧಿಸಲಾಗಿದೆ. ಮಿಕ್ಕಂತೆ ಪ್ರೊಫೆಸರ್ ಹುದ್ದೆಗೆ  ತಿಂಗಳಿಗೆ 1,44,200 ರೂ ನಿಂದ 2,18,200/-ರೂ , ಅಸೋಸಿಯೇಟ್ ಪ್ರೊಫೆಸರ್ ಹುದ್ದೆಗೆ  1,31,400- ರೂ ನಿಂದ 2,17,100/- ರೂ ಮತ್ತು ಅಸಿಸ್ಟೆಂಟ್ ಪ್ರೊಫೆಸರ್  ಹುದ್ದೆಗೆ 79,800 ರೂ ನಿಂದ 211500/ ರೂ ವರೆಗೂ ವೇತನ ಸಿಗಲಿದೆ.

East Coast Railway Recruitment 2022: ನರ್ಸಿಂಗ್​ ಸೂಪರಿಂಟೆಂಡೆಂಟ್​ ಸೇರಿ 14 ಹುದ್ದೆಗಳು ಖಾಲಿ

ಅಭ್ಯರ್ಥಿಗಳು  ಸಂಸ್ಥೆಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಅರ್ಜಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ಬಳಿಕ  ಸೂಕ್ತ ದಾಖಲೆಗಳೊಂದಿಗೆ ಭರ್ತಿ ಮಾಡಿದ ಅರ್ಜಿಯನ್ನುನಿರ್ದೇಶಕರು, ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ, ಹುಬ್ಬಳ್ಳಿ - 580021 ವಿಳಾಸಕ್ಕೆ ಕಳುಹಿಸಿಕೊಡುವಂತೆ ಸೂಚಿಸಲಾಗಿದೆ.

ಡಿ.23ರಂದು ಬೆಳಗಾವಿಯಲ್ಲಿ ಉದ್ಯೋಗ ಮೇಳ: ರಾಜ್ಯ ಕೌಶಲ್ಯಾಭಿವೃದ್ಧಿ ನಿಗಮದ ವತಿಯಿಂದ ಇದೇ ಡಿ.23ರಂದು ಬೆಳಗಾವಿಯಲ್ಲಿ ಉದ್ಯೋಗ ಮೇಳ(Jobs fair) ನಡೆಯಲಿದೆ. ಬೆಳಗಾವಿಯ(Belagavi) ಉದ್ಯಮ್ ಬಾಗ್‍ನಲ್ಲಿ ಇರುವ ಗೋಗಟೆ ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ರಾಜ್ಯ ಕೌಶಲ್ಯಾಭಿವೃದ್ಧಿ ನಿಗಮದ ವತಿಯಿಂದ ನಡೆಯಲಿದೆ. ಎಂಜಿನಿಯರಿಂಗ್, ಡಿಪ್ಲೊಮಾ ಮತ್ತು ಐಟಿಐ ಪದವೀಧರರಿಗೆ ಡಿ.23ರಂದು ಉದ್ಯೋಗ ಮೇಳ ನಡೆಯಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವಥ್ ನಾರಾಯಣ (Dr CN Ashwath Narayan) ತಿಳಿಸಿದ್ದಾರೆ.

ಜಿಲ್ಲೆಯ ಸಚಿವರು ಮತ್ತು ಜನಪ್ರತಿನಿಧಿಗಳ ಜತೆ ಶುಕ್ರವಾರ ಇಲ್ಲಿನ ಸುವರ್ಣ ಸೌಧದಲ್ಲಿ ಸಭೆ ನಡೆಸಿದ ಅವರು, ಓಲಾ, ಎಚ್‍ಪಿ ಸೇರಿದಂತೆ 34 ಕಂಪನಿಗಳು ಈಗಾಗಲೇ ಮೇಳದಲ್ಲಿ ಪಾಲ್ಗೊಳ್ಳಲು ಒಪ್ಪಿಗೆ ಸೂಚಿಸಿದ್ದು, ಇನ್ನೂ 70 ಕಂಪನಿಗಳು ಉತ್ಸುಕವಾಗಿವೆ. ಮೇಳವು ಸಂಪೂರ್ಣ ವಾಗಿ ಹೈಬ್ರಿಡ್ ಮಾದರಿಯಲ್ಲಿ ನಡೆಯಲಿದ್ದು, ಅರ್ಹ ಅಭ್ಯರ್ಥಿಗಳು ‘ಸ್ಕಿಲ್ ಕನೆಕ್ಟ್  ಪೋರ್ಟಲ್‌ನಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಮಾಹಿತಿ ಹಂಚಿಕೊಂಡರು.

click me!