Lecturers Transfer: ಪಿಯು ಉಪನ್ಯಾಸಕರಿಗೆ ಸಂತಸದ ಸುದ್ದಿ ನೀಡಿದ ಸರ್ಕಾರ

By Kannadaprabha News  |  First Published Dec 17, 2021, 6:43 AM IST

*   ಉಪನ್ಯಾಸಕರ ವರ್ಗಾವಣೆ 3 ವರ್ಷ ಬಳಿಕ ಅವಕಾಶ
*   ಶೇ.10 ಮಿತಿ ನಿಗದಿ
*   ವಿಧಾನಸಭೆಯಲ್ಲಿ ತಿದ್ದುಪಡಿ ಮಸೂದೆ ಮಂಡನೆ
 


ಬೆಳಗಾವಿ(ಡಿ.17):  ಕಳೆದ ಮೂರು ವರ್ಷಗಳಿಂದ ವರ್ಗಾವಣೆ(Transfer) ಅವಕಾಶ ವಂಚಿತ ಪದವಿಪೂರ್ವ ಕಾಲೇಜು ಉಪನ್ಯಾಸಕರ(PU Lecturers) ವರ್ಗಾವಣೆಗೆ ಅವಕಾಶ ಕಲ್ಪಿಸಲು ಸಿದ್ಧಪಡಿಸಿರುವ ‘ಕರ್ನಾಟಕ ರಾಜ್ಯ ಸಿವಿಲ್‌ ಸೇವೆಗಳು (Teacher Transfer Control) ತಿದ್ದುಪಡಿ ವಿಧೇಯಕ 2021’ ಅನ್ನು ಸರ್ಕಾರ ವಿಧಾನ ಸಭೆಯಲ್ಲಿ ಮಂಡಿಸಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌(BC Nagesh) ಅವರು ಸದನದಲ್ಲಿ ಗುರುವಾರ ತಿದ್ದುಪಡಿ ವಿಧೇಯಕ ಮಂಡಿಸಿದರು.

ವಿಧೇಯಕದಲ್ಲಿ ಪ್ರಮುಖವಾಗಿ ಪ್ರತಿ ವರ್ಷ ಶೇ.10ರಷ್ಟು ಪ್ರಮಾಣ ಮೀರದಂತೆ ಪಿಯು ಉಪನ್ಯಾಸಕರ ವರ್ಗಾವಣೆ ನಡೆಸಬೇಕು. ಆರಂಭಿಕ ನೇಮಕಾತಿ(Recruitment) ಅಥವಾ ಬಡ್ತಿಯನ್ನು(Promotion) ‘ಸಿ’ ವಲಯದ (ಗ್ರಾಮೀಣ ಭಾಗ) ಕಾಲೇಜುಗಳಿಗೆ ಮಾಡಬೇಕು. ಶಿಕ್ಷಕರ ವರ್ಗಾವಣೆ ಮಾದರಿಯಲ್ಲೇ ಅರ್ಜಿ ಆಹ್ವಾನಿಸಿ ಕೌನ್ಸೆಲಿಂಗ್‌(Counseling) ಮೂಲಕ ವರ್ಗಾವಣೆ ನಡೆಸಬೇಕು. ಸಿ ವಲಯದಲ್ಲಿ ಕನಿಷ್ಠ 10 ವರ್ಷ ಸೇವೆ ಸಲ್ಲಿಸದ ಮತ್ತು ವಲಯ ಎ ನಲ್ಲಿ ನಿರಂತರ ಹತ್ತು ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿರುವ ಪ್ರತಿಯೊಬ್ಬ ಶಿಕ್ಷಕನನ್ನು ರಾಜ್ಯ ಸರ್ಕಾರದ ಷರತ್ತುಗಳಿಗೆ ಒಳಪಟ್ಟು ವಲಯ ಸಿ ಅಥವಾ ಬಿಗೆ ವರ್ಗಾವಣೆ ಮಾಡಬೇಕು ಎಂದು ವಿಧೇಯಕದಲ್ಲಿ ತಿಳಿಸಲಾಗಿದೆ.

Tap to resize

Latest Videos

undefined

ಪಿಯು ಶಿಕ್ಷಕರಿಗೆ 3 ವರ್ಷದಿಂದ ವರ್ಗಾವಣೆ ಭಾಗ್ಯ ಇಲ್ಲ

ಪ್ರಾರಂಭಿಕ ನೇಮಕಾತಿ ಅಥವಾ ಬಡ್ತಿ ಮೇಲೆ ವಲಯ​ ಸಿಗೆ ಶಿಕ್ಷಕನ(Teacher) ಸ್ಥಳ ನಿಯುಕ್ತಿಯು ಸಿ ವಲಯದ ಅಡಿಯಲ್ಲಿ ಯಾವುದೇ ಪ್ರದೇಶವನ್ನು ಒಳಗೊಳ್ಳದ ಜ್ಯೇಷ್ಠತೆಯ ಘಟಕಕ್ಕೆ ನೇಮಕವಾದ ಶಿಕ್ಷಕನಿಗೆ ಅನ್ವಯಿಸುವುದಿಲ್ಲ ಎಂಬುದು ಸೇರಿದಂತೆ ನಿರ್ದಿಷ್ಟ ಹುದ್ದೆಗಳಿಗೆ ಶಿಕ್ಷಕರ ವರ್ಗಾವಣೆ, ವರ್ಗಾವಣೆ ಸಮಯಲ್ಲಿ ಕುಂದುಕೊರತೆ ನಿವಾರಣೆ, ವಲಯವಾರು ವರ್ಗಾವಣೆಯಿಂದ ವಿನಾಯಿತಿ ಮತ್ತು ಕೋರಿಕೆ ವರ್ಗಾವಣೆಗಳಿಗೆ ಆದ್ಯತೆ ನೀಡುವ ಸಂಬಂಧ ಹಲವು ಅಂಶಗಳನ್ನು ಸೇರಿಸಲಾಗಿದೆ.

12 ಸಾವಿರ ಉಪನ್ಯಾಸಕರಿಗೆ ಲಾಭ:

ವಿಧೇಯಕಕ್ಕೆ ಉಭಯ ಸದನಗಳು ಅನುಮೋದನೆ ನೀಡಿದ ನಂತರ ಅಧಿಕೃತವಾಗಿ ಜಾರಿಯಾಗಲಿದೆ. ಇದರಿಂದ ರಾಜ್ಯದ(Karnataka) 1200ಕ್ಕೂ ಹೆಚ್ಚು ಸರ್ಕಾರಿ ಪಿಯು ಕಾಲೇಜುಗಳ 12 ಸಾವಿರಕ್ಕೂ ಹೆಚ್ಚು ಉಪನ್ಯಾಸಕರಿಗೆ ಪಿಯು ಇಲಾಖಾ ವರ್ಗಾವಣೆ ಪ್ರಕ್ರಿಯೆ ಆರಂಭಿಸಲು ಸಾಧ್ಯವಾಗಲಿದೆ.

ಈ ಮೊದಲು ಶಿಕ್ಷಕರ ವರ್ಗಾವಣೆ ಮತ್ತು ಪಿಯು ಉಪನ್ಯಾಸಕರ ವರ್ಗಾವಣೆ ಒಂದೇ ಕಾಯ್ದೆಯಡಿ ನಡೆಯುತ್ತಿತ್ತು. ಆದರೆ, ನಂತರ ಸರ್ಕಾರ 2020ರಲ್ಲಿ ಶಿಕ್ಷಕರ ವರ್ಗಾವಣೆಗೆ ಪ್ರತ್ಯೇಕ ಕಾಯ್ದೆ ಜಾರಿಗೆ ತಂದಿತ್ತು. ಪಿಯು ಉಪನ್ಯಾಸಕರ ವರ್ಗಾವಣೆಗೂ ಪ್ರತ್ಯೇಕ ಕಾಯ್ದೆ ತರುವ ಚಿಂತನೆ ನಡೆಸಿತ್ತಾದರೂ ಸಾಧ್ಯವಾಗದೆ ಕೊನೆಗೆ ಮತ್ತೆ ಶಿಕ್ಷಕರ ವರ್ಗಾವಣೆ ಕಾಯ್ದೆಗೆ ತಿದ್ದುಪಡಿ ಮೂಲಕ ಉಪನ್ಯಾಸಕರ ವರ್ಗಾವಣೆಗೂ ಅವಕಾಶ ಕಲ್ಪಿಸಲು ಸರ್ಕಾರ ಮುಂದಾಗಿದೆ.

ಶಿಕ್ಷಕರ ವರ್ಗಾವಣೆ ವಿಳಂಬಕ್ಕೆ ದರಿದ್ರ ಅಧಿಕಾರಿಗಳೇ ಕಾರಣ: ಬಸವರಾಜ ಹೊರಟ್ಟಿ

ಶಿಕ್ಷಣ ಇಲಾಖೆಯ ದರಿದ್ರ ಅಧಿಕಾರಿಗಳಿಂದ ಶಿಕ್ಷಕರ ವರ್ಗಾವಣೆ ಮುಂದೆ ಹೋಗುತ್ತಲೇ ಇದೆ ಎಂದು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ(Basavaraj Horatti) ಕಿಡಿಕಾರಿದ್ದರು. 

ಉಪನ್ಯಾಸಕರ ವರ್ಗಾವಣೆಗೆ ಹೊಸ ಮಾರ್ಗಸೂಚಿ ಪ್ರಕಟ: ಅಶ್ವತ್ಥನಾರಾಯಣ ಮಾಹಿತಿ

ಕಳೆದ 4 ವರ್ಷಗಳಿಂದಲೂ ಶಿಕ್ಷಣ ಇಲಾಖೆಯಲ್ಲಿ ಯಾವುದೇ ವ್ಯವಸ್ಥೆಗಳು ಸರಿಯಿಲ್ಲ. ಹೊಸದಾಗಿ ಬರುವ ಮಂತ್ರಿಗಳಿಗೆ ಅಧಿಕಾರಿಗಳು(Officers) ಸರಿಯಾದ ಮಾಹಿತಿ ನೀಡುವುದಿಲ್ಲ. ಸುಗ್ರೀವಾಜ್ಞೆ ತರುವ ಮೂಲಕ ಶಿಕ್ಷಕರ ವರ್ಗಾವಣೆ ಮಾಡಬೇಕಾಗಿತ್ತು. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ವರ್ಗಾವಣೆ ವಿಳಂಬವಾಗಿದೆ ಎಂದರು.

3 ತಿಂಗಳು ಬೇಕಂತಲೇ ದಾಟಿಸಿ ಆಮೇಲೆ ವರ್ಗಾವಣೆ(Transfer) ಪ್ರಕ್ರಿಯೆ ನಡೆಸುತ್ತಿದ್ದಾರೆ. ಅ. 4ರಂದು ವರ್ಗಾವಣೆಗೆ ಸಂಬಂಧಿಸಿದಂತೆ ಕೋರ್ಟ್‌ಲ್ಲಿ ವಿಚಾರಣೆ ಇದೆ. ಇದರ ನಂತರ ವರ್ಗಾವಣೆ ಪ್ರಕ್ರಿಯೆ ನಡೆಯುವ ಸಾಧ್ಯತೆ ಇದೆ. ರಾಜ್ಯದಲ್ಲಿ ಕಡ್ಡಾಯ ವರ್ಗಾವಣೆ ಕಾನೂನಿಲ್ಲ. ಹೀಗಾಗಿ ಹಿಂದೆ ಕಡ್ಡಾಯ ವರ್ಗಾವಣೆಯಾದವರನ್ನು ವಾಪಸ್‌ ತರಲಿ. ಇದಾದ ನಂತರ ಉಳಿದವರ ವರ್ಗಾವಣೆ ಮಾಡಲಿ. ಶಿಕ್ಷಕರ ವರ್ಗಾವಣೆ ವಿಚಾರದಲ್ಲಿ ಸರ್ಕಾರದ ಪಾತ್ರವಿಲ್ಲ. ಅಧಿಕಾರಿಗಳೇ ಇದೆಲ್ಲಕ್ಕೂ ಮುಖ್ಯ ಕಾರಣ ಎಂದರು.
 

click me!