89 ನಾನಾ ಹುದ್ದೆಗೆ UPSC ನೇಮಕಾತಿ, ಅರ್ಜಿ ಸಲ್ಲಿಸಲು ಮಾ.18 ಕೊನೆ ದಿನ

By Suvarna NewsFirst Published Feb 28, 2021, 11:13 AM IST
Highlights

ಪಬ್ಲಿಕ್ ಪ್ರಾಸಿಕೂಟರ್ಸ್, ಅಸಿಸ್ಟೆಂಟ್ ಪಬ್ಲಿಕ್ ಪ್ರಾಸಿಕ್ಯೂಟರ್ಸ್ ಸೇರಿದಂತೆ ನಾನಾ 89 ಹುದ್ದೆಗಳಿಗೆ ಲೋಕಸೇವಾ ಆಯೋಗ(ಯುಪಿಎಸ್‌ಸಿ) ನೇಮಕಾತಿ ಮಾಡಿಕೊಳ್ಳುತ್ತಿದೆ. ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಮಾರ್ಚ್ 18 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

ಕೇಂದ್ರ ಲೋಕಸೇವಾ ಆಯೋಗ ವಿವಿಧ ಹುದ್ದೆಗಳಿಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಸಹಾಯಕ ಸಾರ್ವಜನಿಕ ಅಭಿಯೋಜಕ ಮತ್ತು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಸಿವಿಲ್), ಪಬ್ಲಿಕ್ ಪ್ರಾಸಿಕ್ಯೂಟರ್ ಸೇರಿದಂತೆ 89 ಹುದ್ದೆಗಳಿಗೆ  ಯುಪಿಎಸ್‌ಸಿ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತರು ಮಾರ್ಚ್ 18ರೊಳಗೆ ಅರ್ಜಿ ಸಲ್ಲಿಸಬಹುದು.

ಎಸ್ಸೆಸ್ಸೆಲ್ಸಿ ಓದಿದ್ದೀರಾ? ಆರ್‌ಬಿಐನಲ್ಲಿ ಖಾಲಿ ಇರುವ 841 ಆಫೀಸ್ ಅಟೆಂಡೆಂಟ್ ಹುದ್ದೆಗೆ ಅರ್ಜಿ ಹಾಕಿ

ಪಬ್ಲಿಕ್ ಪ್ರಾಸಿಕ್ಯೂಟರ್ಸ್ – 43, ಅಸಿಸ್ಟೆಂಟ್ ಪಬ್ಲಿಕ್ ಪ್ರಾಸಿಕ್ಯೂಟರ್ಸ್- 26, ಅಸಿಸ್ಟೆಂಸ್ ಎಕ್ಸಿಕ್ಯೂಟಿವ್ ಇಂಜಿನಿಯರ್ಸ್(ಸಿವಿಲ್) – 10, ಎಕನಾಮಿಕ್ ಆಫೀಸರ್- 1,  ಸೀನಿಯರ್ ಸೈಂಟಿಫಿಕ್ ಆಫೀಸರ್(ಬಾಲಿಸ್ಟಿಕ್ಸ್)- 1, ಪ್ರೊಗ್ರಾಮರ್ ಜಿಆರ್ ಎ – 1,  ಸೀನಿಯರ್ ಸೈಂಟಿಫಿಕ್ ಆಫೀಸರ್ (ಬಯೋಲಾಜಿ)- 2, ಸೈಂಟಿಫಿಕ್ ಆಫೀಸರ್ (ಕೆಮಿಸ್ಟ್ರಿ) – 2, ಸೈಂಟಿಫಿಕ್ ಆಫೀಸರ್ (ಡಾಕ್ಯುಮೆಂಟ್ಸ್) – 2, ಸೈಂಟಿಫಿಕ್ ಆಫೀಸರ್ (ಸುಳ್ಳು ಪತ್ತೆ) - 1 ಹುದ್ದಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ.

ಪಬ್ಲಿಕ್ ಪ್ರಾಸಿಕ್ಯೂಟರ್ -  ಮಾನ್ಯತೆ ಪಡೆದ ವಿಶ್ವವಿದ್ಯಾಲಯದ ಕಾನೂನು ಪದವಿ ಪಡೆದಿರಬೇಕು. ಜೊತೆಗೆ ಬಾರ್ ನಡೆಸುವ ಕ್ರಿಮಿನಲ್ ಪ್ರಕರಣಗಳಲ್ಲಿ ಏಳು ವರ್ಷ ಪ್ರಾಕ್ಟೀಸ್ ಮಾಡಿರಬೇಕು. ಇನ್ನು ಅಸಿಸ್ಟೆಂಟ್ ಪಬ್ಲಿಕ್ ಪ್ರಾಸಿಕ್ಯೂಟ್ರರ್ಸ್‌ ಹುದ್ದೆಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದ ಕಾನೂನು ಪದವಿ ಪಡೆದಿರಬೇಕು.

ಅಸಿಸ್ಟೆಂಸ್ ಎಕ್ಸಿಕ್ಯೂಟಿವ್ ಇಂಜಿನಿಯರ್ಸ್(ಸಿವಿಲ್) - ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಬಿ.ಇ. / ಬಿ.ಟೆಕ್ ಪಡೆದಿದ್ದು, ಜೊತೆಗೆ ಮೂರು ವರ್ಷಗಳ ಅನುಭವ ಹೊಂದಿರಬೇಕು, ಎಕನಾಮಿಕ್ ಆಫೀಸರ್ ಹುದ್ದೆಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯ / ಸಂಸ್ಥೆಯಿಂದ ಅರ್ಥಶಾಸ್ತ್ರ ಅಥವಾ ಅನ್ವಯಿಕ ಅರ್ಥಶಾಸ್ತ್ರ ಅಥವಾ ವ್ಯವಹಾರ ಅರ್ಥಶಾಸ್ತ್ರ ಅಥವಾ ಇಕೋನೊಮೆಟ್ರಿಕ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು.

ಪ್ರೊಗ್ರಾಮರ್ ಜಿಆರ್ ಎ - ಸ್ಟ್ಯಾಟಿಸ್ಟಿಕ್ಸ್ / ಗಣಿತ / ಸಂಶೋಧನಾ ಕಾರ್ಯಾಚರಣೆ / ಭೌತಶಾಸ್ತ್ರ ಅಥವಾ ಅರ್ಥಶಾಸ್ತ್ರ / ವಾಣಿಜ್ಯ ವಿಷಯ (ಸ್ಟ್ಯಾಟಿಸ್ಟಿಕ್ಸ್‌ನೊಂದಿಗೆ) ಅಥವಾ  ಮಾನ್ಯತೆ ಪಡೆದ ವಿಶ್ವವಿದ್ಯಾಲಯದ ಎಂಜಿನಿಯರಿಂಗ್ / ಕಂಪ್ಯೂಟರ್ ವಿಜ್ಞಾನದಲ್ಲಿ ಪದವಿ ಪಡೆದಿರಬೇಕು ಅಥವಾ ಮೂರು ವರ್ಷಗಳ ಅನುಭವ ಇರಬೇಕು. ಅದೇ ರೀತಿ, ಸೀನಿಯರ್ ಬಾಲಿಸ್ಟಿಕ್ಸ್ ಸೈಂಟಿಫಿಕ್ ಆಫೀಸರ್ ಹುದ್ದೆಗೆ ಭೌತಶಾಸ್ತ್ರ ಅಥವಾ ಗಣಿತದಲ್ಲಿ ಸ್ನಾತಕೋತ್ತರ ಪದವಿ ಅಥವಾ ಮಾನ್ಯತೆ ಪಡೆದ ವಿವಿಯಿಂದ ಬಿಎಸ್‌ಸಿಯಲ್ಲಿ  ಫೊರೆನ್ಸಿಕ್ ಸೈನ್ಸ್ ಜೊತೆ ಫಿಸಿಕ್ಸ್ ಅಥವಾ ಮ್ಯಾಥ್ ಮೆಟಿಕ್ಸ್ ಅಥವಾ ಫೊರೆನ್ಸಿಕ್ ಸೈನ್ಸ್ ಅನ್ನು ಒಂದು ವಿಷಯವಾಗಿ ಓದಿರಬೇಕು. ಅಥವಾ ಮೂರು ವರ್ಷಗಳ ಅನುಭವ ಹೊಂದಿರಬೇಕು.

HALನಲ್ಲಿ ಅಪ್ರೆಂಟಿಸ್ ಟ್ರೈನಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ಸೀನಿಯರ್ ಸೈಂಟಿಫಿಕ್ ಆಫೀಸರ್ (ಬಯೋಲಾಜಿ)- ಪ್ರಾಣಿಶಾಸ್ತ್ರ ಅಥವಾ ಸಸ್ಯಶಾಸ್ತ್ರ ಅಥವಾ ಮಾನವಶಾಸ್ತ್ರ ಅಥವಾ ಮಾನವ ಜೀವಶಾಸ್ತ್ರ ಅಥವಾ ಜೀವ ರಸಾಯನಶಾಸ್ತ್ರ ಅಥವಾ ಸೂಕ್ಷ್ಮ ಜೀವವಿಜ್ಞಾನ ಅಥವಾ ಜೆನೆಟಿಕ್ಸ್ ಅಥವಾ ಜೈವಿಕ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು. ಅಥವಾ ಮಾನ್ಯತೆ ಪಡೆದ ವಿವಿಯಿಂದ ಬಿಎಸ್‌ಸಿಯಲ್ಲಿ ಪ್ರಾಣಿಶಾಸ್ತ್ರ ಅಥವಾ ಸಸ್ಯಶಾಸ್ತ್ರ ಅಥವಾ ವಿಧಿವಿಜ್ಞಾನ ವಿಜ್ಞಾನವನ್ನು ಒಂದು ವಿಷಯವಾಗಿ ಅಭ್ಯಾಸ ಮಾಡಿರಬೇಕು. ಅಥವಾ ಮೂರು ವರ್ಷಗಳ ಅನುಭವ ಹೊಂದಿರಬೇಕು.

ಸೈಂಟಿಫಿಕ್ ಆಫೀಸರ್ (ಕೆಮಿಸ್ಟ್ರಿ) - ರಸಾಯನಶಾಸ್ತ್ರ ಅಥವಾ ವಿಷಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು. ಅಥವಾ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿಎಸ್‌ಸಿಯಲ್ಲಿ ಫೋರೆನ್ಸಿಕ್ ಸೈನ್ಸ್ ವಿತ್ ಕೆಮಿಸ್ಟ್ರಿಯನ್ನು ಒಂದು ವಿಷಯವಾಗಿ ಓದಿರಬೇಕು. ಅಥವಾ ೫ ವರ್ಷಗಳ ಅನುಭವ ಹೊಂದಿರಬೇಕು. ಸೀನಿಯರ್ ಡಾಕ್ಯುಮೆಂಟ್ಸ್ ಸೈಂಟಿಫಿಕ್ ಆಫೀಸರ್ ಹುದ್ದೆಗೆ ಭೌತಶಾಸ್ತ್ರ ಅಥವಾ ರಸಾಯನಶಾಸ್ತ್ರ ಅಥವಾ ಕಂಪ್ಯೂಟರ್ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಇರಬೇಕು. ಅಥವಾ ಬಿಎಸ್‌ಸಿಯಲ್ಲಿ ಭೌತಶಾಸ್ತ್ರ ಅಥವಾ ರಸಾಯನಶಾಸ್ತ್ರ ಅಥವಾ ವಿಧಿವಿಜ್ಞಾನ ವಿಜ್ಞಾನ ಅಥವಾ ಕಂಪ್ಯೂಟರ್ ವಿಜ್ಞಾನದೊಂದಿಗೆ ಫೊರೆನ್ಸಿಕ್ ಸೈನ್ಸ್ -ಇದರಲ್ಲಿ ಯಾವುದಾರೂ ಒಂದು ವಿಷಯವನ್ನು ಓದಿರಬೇಕು. ಅಥವಾ ಮೂರು ವರ್ಷದ ಅನುಭವ ಹೊಂದಿರಬೇಕು.

ಸೈಂಟಿಫಿಕ್ ಆಫೀಸರ್ (ಸುಳ್ಳು ಪತ್ತೆ) - ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸೈಕಾಲಜಿ ಅಥವಾ ಕ್ರಿಮಿನಾಲಜಿಯಲ್ಲಿ ಸ್ನಾತಕೋತ್ತರ ಪದವಿ ಅಥವಾ ಮೂರು ವರ್ಷಗಳ ಅನುಭವ ಇರಬೇಕು.  

ಅಭ್ಯರ್ಥಿಗಳು ಅರ್ಹತಾ ಮಾನದಂಡ, ತಾವು ಅರ್ಜಿ ಸಲ್ಲಿಸುತ್ತಿರುವ ಹುದ್ದೆಯ ಇತರೆ ವಿವರಗಳು ಮತ್ತು ಹೆಚ್ಚಿನದನ್ನು ಪರಿಶೀಲಿಸಲು ನೇಮಕಾತಿ ಅಧಿಸೂಚನೆಯನ್ನು ಓದಬೇಕು. ಅಭ್ಯರ್ಥಿಗಳು ಎಸ್‌ಬಿಐನ ಯಾವುದೇ ಶಾಖೆಯಲ್ಲಿರುವ ಹಣವನ್ನು ನಗದು ಮೂಲಕ ಅಥವಾ ಎಸ್‌ಬಿಐನ ನೆಟ್ ಬ್ಯಾಂಕಿಂಗ್ ಸೌಲಭ್ಯವನ್ನು ಬಳಸಿಕೊಂಡು ಅಥವಾ ವೀಸಾ / ಮಾಸ್ಟರ್ ಕ್ರೆಡಿಟ್ / ಡೆಬಿಟ್ ಕಾರ್ಡ್ ಬಳಸಿ 25 ರೂಪಾಯಿ ಶುಲ್ಕವನ್ನು ಮಾತ್ರ ಪಾವತಿಸಬೇಕಾಗುತ್ತದೆ. ಎಸ್‌ಸಿ / ಎಸ್‌ಟಿ / ಪಿಡಬ್ಲ್ಯೂಬಿಡಿ /ಸಮುದಾಯದ ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ. ಜನರಲ್‌/ ಒಬಿಸಿ / ಇಡಬ್ಲ್ಯೂಎಸ್ ಪುರುಷ ಅಭ್ಯರ್ಥಿಗಳಿಗೆ ಯಾವುದೇ "ಶುಲ್ಕ ವಿನಾಯಿತಿ" ಇರುವುದಿಲ್ಲ. ಅವರು ಪೂರ್ಣ ನಿಗದಿತ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

https://www.upsconline.nic.in ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಬೇರೆ ಯಾವುದೇ ಮೋಡ್ ಮೂಲಕ ಸಲ್ಲಿಸಿದ ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ. ಹೆಚ್ಚಿನ ಮಾಹಿತಿಗೆ ಅಭ್ಯರ್ಥಿಗಳು https://upsc.gov.in ಜಾಲತಾಣಕ್ಕೆ ಭೇಟಿ ನೀಡಬಹುದು.

RBIನಲ್ಲಿ ಕೆಲ್ಸಾ ಇದೆ: 72208 ರೂಪಾಯಿ ವೇತನ!

click me!