'ಈ ಕೋರ್ಸ್‌ ಪಾಸಾದವರಿಗೆ ಉದ್ಯೋಗಾವಕಾಶ'

By Kannadaprabha News  |  First Published Feb 20, 2021, 3:42 PM IST

ಪ್ರತಿ 2 ಗ್ರಾಪಂಗೆ ಒಬ್ಬರಂತೆ ಕೃಷಿ ಡಿಪ್ಲೊಮಾ ಪದವಿ ಪಡೆದವರನ್ನು 10 ತಿಂಗಳ ಕಾಲಾವಧಿಗೆ ಹೊರಗುತ್ತಿಗೆ ಆಧಾರದಲ್ಲಿ ನೇಮಕಾತಿ| 10 ತಿಂಗಳ ನೇಮಕಾತಿ ಅವಧಿಯಲ್ಲಿ 3 ತಿಂಗಳು ಪ್ರಧಾನ ಮಂತ್ರಿ ಫಸಲ್‌ಬಿಮಾ ಯೋಜನೆಯಲ್ಲಿ ಬೆಳೆ ಸಮೀಕ್ಷೆ ಕೆಲಸ| ಉಳಿದ 7 ತಿಂಗಳು ಕೃಷಿ ಇಲಾಖೆಯಲ್ಲಿ ಕೆಲಸ| 


ಬೀದರ್‌(ಫೆ.20): ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕಾಗಿ ರಾಜ್ಯದ ಗ್ರಾಮ ಪಂಚಾಯಿತಿಗಳಿಗೆ ಕೃಷಿ ಡಿಪ್ಲೊಮಾ ಪದವೀಧರರನ್ನು ನೇಮಕಾತಿ ಮಾಡಿಕೊಳ್ಳುವ ಕುರಿತಂತೆ 3 ಸಾವಿರ ಹುದ್ದೆಗಳ ಸೃಷ್ಟಿಗೆ ಪರವಾನಗಿ ಕೋರಿ ಮುಖ್ಯಮಂತ್ರಿಗಳಿಗೆ ವರದಿ ಸಲ್ಲಿಸಿದ್ದೇವೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್‌ ತಿಳಿಸಿದ್ದಾರೆ. 

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿ 2 ಗ್ರಾಪಂಗೆ ಒಬ್ಬರಂತೆ ಕೃಷಿ ಡಿಪ್ಲೊಮಾ ಪದವಿ ಪಡೆದವರನ್ನು 10 ತಿಂಗಳ ಕಾಲಾವಧಿಗೆ ಹೊರಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳುವ ಕೃಷಿ ಸಚಿವಾಲಯ ನಿರ್ಧರಿಸಿದೆ. ಮುಖ್ಯಮಂತ್ರಿಗಳ ಪರವಾನಗಿಗಾಗಿ ಕಾಯಲಾಗುತ್ತಿದೆ ಎಂದರು.

Latest Videos

undefined

ಶಿಕ್ಷಕರ ನೇಮಕದ ಬಗ್ಗೆ ಸಚಿವ ಸುರೇಶ್‌ಕುಮಾರ್‌ ಪ್ರತಿಕ್ರಿಯೆ

10 ತಿಂಗಳ ನೇಮಕಾತಿ ಅವಧಿಯಲ್ಲಿ 3 ತಿಂಗಳು ಪ್ರಧಾನ ಮಂತ್ರಿ ಫಸಲ್‌ಬಿಮಾ ಯೋಜನೆಯಲ್ಲಿ ಬೆಳೆ ಸಮೀಕ್ಷೆ ಕೆಲಸ ಮಾಡುವರು, ನಂತರ ಉಳಿದ 7 ತಿಂಗಳು ಕೃಷಿ ಇಲಾಖೆಯಲ್ಲಿ ಕೆಲಸ ನಿರ್ವಹಿಸುವರು. ಇವರಿಗೆ ತಂತ್ರಜ್ಞಾನದ ಮಾಹಿತಿ ಇರುವುದರಿಂದ ಕೃಷಿ ಇಲಾಖೆಯಲ್ಲಿರುವ ಆ್ಯಪ್‌ ಬಳಸಲು ಅನುಕೂಲವಾಗಲಿದೆ ಎಂದು ತಿಳಿಸಿದರು. 
 

click me!