* ಕೆಎಸ್ಆರ್ಟಿಸಿ ಕರಾರಸಾ ನಿಗಮದಲ್ಲಿನ ನೇಮಕಾತಿ ಪ್ರಕ್ರಿಯೆಗಳ ಬಗ್ಗೆ ಮಾಹಿತಿ
* ತಡೆಹಿಡಿಯಲಾಗಿದ್ದ ನೇಮಕಾತಿ ಪ್ರಕ್ರಿಯೆ ಆರಂಭಿಸುವಂತೆ ಮನವಿ
* ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ KSRTC
ಬೆಂಗಳೂರು, (ಡಿ.09): ಕೋವಿಡ್ ಕಾರಣದಿಂದ ತಡೆಹಿಡಿಯಲಾಗಿದ್ದ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸುವಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ (Karnataka State Road Transport Corporation) ಸರ್ಕಾರಕ್ಕೆ ಮನವಿ ಮಾಡಿದೆ.ಈ ಹಿನ್ನೆಲ್ಲೆ ಉದ್ಯೋಗ ನಿರೀಕ್ಷೆಯಲ್ಲಿದ್ದ ಆಕಾಂಕ್ಷಿಗಳ ಆಸೆ ಚಿಗುರೊಡೆದಿದೆ.
ಕೋವಿಡ್ ಕಾರಣ ನೀಡಿ ಅಧಿಸೂಚನೆ ಹೊರಡಿಸಿದ್ದ ವಿವಿಧ ನೇಮಕಾತಿಗಳನ್ನು ಸರ್ಕಾರ ತಡೆಹಿಡಿದಿತ್ತು. ಈಗ ಕೋವಿಡ್ ಪರಿಸ್ಥಿತಿ ಸಹಜ ಸ್ಥಿತಿಗೆ ಬರುತ್ತಿರುವ ಹಿನ್ನಲೆಯಲ್ಲಿ ನೇಮಕಾತಿ ಪ್ರಕ್ರಿಯೆಗಳಿಗೆ ಚಾಲನೆ ನೀಡಲು ಕೆಎಸ್‌ಆರ್‌ಟಿಸಿ ಸರ್ಕಾರದ ಅನುಮತಿ ಕೇಳಿದೆ.
Naukri JobSpeak Index : ನೇಮಕಾತಿ ವಿಷಯದಲ್ಲಿ ಬೆಂಗಳೂರು ನಗರವೇ ಟಾಪ್
ಜಾಹೀರಾತು ಸಂಖ್ಯೆ 1/2018 & 2/2018ರ ಅನ್ವಯ 726 ತಾಂತ್ರಿಕ ಸಹಾಯಕ ಮತ್ತು 200 ಕರಾಸಾ ಪೇದೆ ಹುದ್ದೆಗಳಿಗೆ ಹಾಗೂ ಜಾಹೀರಾತು ಸಂ. 1/2020ರ ಅನ್ವಯ 3745 ಚಾಲನಾ ಸಿಬ್ಬಂದಿ ನೇರ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿತ್ತು.
ಆದರೆ ಕೋವಿಡ್ ಪರಿಸ್ಥಿತಿ ಕಾರಣ ಕರ್ನಾಟಕ ಸರ್ಕಾರದ ಸೂಚನೆ ಹಿನ್ನಲೆಯಲ್ಲಿ ಎಲ್ಲಾ ನೇಮಕಾತಿಗಳನ್ನು ಸ್ಥಗಿತಗೊಳಿಸಲಾಗಿತ್ತು. ಈಗ ಕೋವಿಡ್ ಪರಿಸ್ಥಿತಿ ಸಹಜ ಸ್ಥಿತಿಗೆ ಬರುತ್ತಿರುವ ಹಿನ್ನಲೆಯಲ್ಲಿ ಪುನಃ ನೇಮಕಾತಿ ಪ್ರಕ್ರಿಯೆ ಆರಂಭಿಸುವಂತೆ ಹೇಳಿದೆ.
ಕೋವಿಡ್ ಭಯ: ಶೇ.90 ಜನರಿಗೆ ಇಷ್ಟವಿಲ್ಲದ ಉದ್ಯೋಗದಲ್ಲಿರಲು ಸಿದ್ಧರಿಲ್ಲ!
ವೇತನ ಬಾಕಿ ಪಾವತಿ
ನಿಗಮದ ಸಿಬ್ಬಂದಿಗಳ ಸೆಪ್ಟೆಂಬರ್ ಹಾಗೂ ಅಕ್ಟೋಬರ್ ಮಾಹೆಯ ವೇತನ ಬಾಕಿ 50% ಮೊತ್ತವನ್ನ ದಿನಾಂಕ 8 ನೇ ಡಿಸೆಂಬರ್ ಅಂದು ಪಾವತಿಸಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಪ್ರಕಟಣೆ ಹೊರಿಡಿಸಿದೆ.
ನವೆಂಬರ್ ಮಾಹೆಯ ಉಳಿದ 50% ವೇತನ ಬಾಕಿಯನ್ನು ದಿನಾಂಕ 10 ನೇ ಡಿಸೆಂಬರ್ ರಂದು ಪಾವತಿಸಲು ಕ್ರಮಕೈಗೊಳ್ಳಲಾಗಿದ್ದು, ಇದರಿಂದ ಸಿಬ್ಬಂದಿಗಳ ಯಾವುದೇ ಮಾಹೆಯ ವೇತನ ಪಾವತಿಯ ಬಾಕಿ ಇರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ನೇಮಕಾತಿ ವಿಷಯದಲ್ಲಿ ಬೆಂಗಳೂರು ಟಾಪ್
ಕೊವಿಡ್ 19 ಸಾಂಕ್ರಾಮಿಕದ ನಡುವೆ ಭಾರತದಲ್ಲಿ ಉದ್ಯೋಗ ನೇಮಕಾತಿ ಪ್ರಗತಿ (Employment Recruitment Progress) ಸಾಧಿಸುತ್ತಿದೆ. ಚಿಲ್ಲರೆ ವ್ಯಾಪಾರ ವಲಯ, ಹಬ್ಬದ ಹಿನ್ನೆಲೆ, ಶಿಕ್ಷಣ ಸಂಸ್ಥೆಗಳ ಪ್ರಾರಂಭದ ಹಿನ್ನೆಲೆಯಲ್ಲಿ ಈ ಏರಿಕೆ ಕಂಡಿದ್ದು 2021ರ ನವೆಂಬರ್ ನಲ್ಲಿ ಒಟ್ಟು 26% ರಷ್ಟು ಬೆಳವಣಿಗೆ ಕಂಡಿದೆ. ನೇಮಕಾತಿ ವಿಷಯದಲ್ಲಿ ಇತರೆ ನಗರಗಳಿಗೆ ಹೋಲಿಸಿದರೆ ಬೆಂಗಳೂರು (bengaluru) ನಗರವೇ ಮುಂದಿದೆ ಎಂದು ನೌಕ್ರಿ ಜಾಬ್ ಸ್ಪೀಕ್ ಸಮೀಕ್ಷೆ ಹೇಳಿದೆ. ಸಗಟು ವ್ಯಾಪಾರ ವಲಯದಲ್ಲಿ (retail sector ) ಭಾರತದ ಔದ್ಯೋಗಿಕ ಮಾರುಕಟ್ಟೆ ಸಾಕಷ್ಟು ಪ್ರಗತಿ ಕಂಡುಬಂದಿದ್ದು, 2021 ನವೆಂಬರ್ ತಿಂಗಳಿನಲ್ಲಿ ಶೇ 47 ರಷ್ಟು ಪ್ರಗತಿ ಸಾಧಿಸಿದೆ ಎಂದಿದೆ.
ಉದ್ಯೋಗದಲ್ಲಿರಲು ಸಿದ್ಧರಿಲ್ಲ!
ಉದ್ಯೋಗಗಳನ್ನ ತ್ಯಜಿಸುವವರ ಸಂಖ್ಯೆ ಹೆಚ್ಚಾಗ್ತಿದೆ. ಮೊದಲನೆ ಅಲೆಯ ಸಂದರ್ಭದಲ್ಲಿ ಕೋವಿಡ್ ವೈರಸ್ ಭಯದಿಂದ ಸಾಕಷ್ಟು ಮಂದಿ ಕಾರ್ಮಿಕರು ಕೆಲಸದಿಂದ ವಿಮುಖರಾದರು. ಸಾಂಕ್ರಾಮಿಕ ರೋಗದ ಆರಂಭದಲ್ಲಿ ಸಹಸ್ರಾರು ಮಂದಿ ತಮ್ಮ ಉದ್ಯೋಗಗಳನ್ನು ಕಳೆದುಕೊಂಡರು. ಶಿಶುಪಾಲನಾ ಸಮಸ್ಯೆಗಳು ಅಥವಾ ಅನಾರೋಗ್ಯಕ್ಕೆ ಒಳಗಾಗುವ ಭಯದಂತಹ ವಿಭಿನ್ನ ಕಾರಣಗಳಿಗಾಗಿ ಕೆಲವರು ಉದ್ಯೋಗಳನ್ನು ಸಂಪೂರ್ಣವಾಗಿ ತೊರೆದರು. ಸಾಂಕ್ರಾಮಿಕ ವೈರಸ್ನ ಭೀತಿಯಿಂದ ಉದ್ಯೋಗ(Jobs)ಗಳನ್ನು ತ್ಯಜಿಸುವುದು ಮತ್ತು ವೃತ್ತಿಜೀವನವನ್ನು ಬದಲಾಯಿಸುವುದು ಸರ್ವೆ ಸಾಮಾನ್ಯವಾಗಿಬಿಟ್ಟಿದೆ.
ಕೆಲವರು 6 ತಿಂಗಳ ಕಾಲ ಉದ್ಯೋಗವನ್ನು ತ್ಯಜಿಸಿ ಮತ್ತೆ ಮರಳಿದ್ದಾರೆ. ಹೆಚ್ಚಿನ ವೇತನ, ಪ್ರಯೋಜನಗಳು, ಸುರಕ್ಷತಾ ಕ್ರಮಗಳು ಅಥವಾ ಪೂರೈಸುವಿಕೆಯ ಅನ್ವೇಷಣೆಯಲ್ಲಿರುವಂತೆ ತೋರುವ ಕಾರ್ಮಿಕರನ್ನು ಮರಳಿ ಪಡೆಯಲು ಉದ್ಯೋಗದಾತರು ಹರಸಾಹಸ ಪಡುತ್ತಿದ್ದಾರೆ ಎಂದು ಅಮೆರಿಕಾದ ಹೊಸ ಇಂಡೀಡ್ ಸರ್ವೆ (Indeed survey) ಯೊಂದು ಹೇಳಿದೆ.