KFD FG Exam Key Answer: ಫಾರೆಸ್ಟ್‌ ಗಾರ್ಡ್‌ ಹುದ್ದೆ ಲಿಖಿತ ಪರೀಕ್ಷೆಯ ಕೀ ಉತ್ತರ ಬಿಡುಗಡೆ

By Suvarna NewsFirst Published Dec 9, 2021, 5:49 PM IST
Highlights
  • ಫಾರೆಸ್ಟ್‌ ಗಾರ್ಡ್‌ ಹುದ್ದೆ ಲಿಖಿತ ಪರೀಕ್ಷೆಯ ಕೀ ಉತ್ತರ ಬಿಡುಗಡೆ 
  • 339 ಅರಣ್ಯ ರಕ್ಷಕ ಹುದ್ದೆಗೆ ಡಿಸೆಂಬರ್ 5 ರಂದು ನಡೆದಿದ್ದ ಪರೀಕ್ಷೆ
  • ಹಾಸನ ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳ ನೇಮಕಾತಿಗೆ ಅಂತಿಮ ಪಟ್ಟಿ ಪ್ರಕಟ

ಬೆಂಗಳೂರು (ಡಿ.9): ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯು (Karnataka Forest Department) 339 ಅರಣ್ಯ ರಕ್ಷಕ (Forest Guard) ಹುದ್ದೆಗಳ ನೇಮಕಾತಿಗೆ ನಡೆದ ಸರ್ಧಾತ್ಮಕ ಪರೀಕ್ಷೆಗಳ ಸರಿಯುತ್ತರಗಳನ್ನು ಬಿಡುಗಡೆ ಮಾಡಿದೆ. ಪರೀಕ್ಷೆ ಬರೆದ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್ ಸೈಟ್  https://kfdrecruitment.in/ ಅಥವಾ https://aranya.gov.in/ ಗೆ ಭೇಟಿ ನೀಡಿ ಸರಿ ಉತ್ತರವನ್ನು ನೋಡಿಕೊಳ್ಳಲು ಕೋರಲಾಗಿದೆ. ಮಾತ್ರವಲ್ಲ ಯಾವುದಾದರು ಪ್ರಶ್ನೆಗಳಿಗೆ ಆಕ್ಷೇಪ ಇದ್ದಲ್ಲಿ. ಲಿಖಿತ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಮಾತ್ರ ನಿಗದಿತ ನಮೂನೆಯಲ್ಲಿ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ kfdfg2021@gmail.com ಗೆ ಮೇಲ್ ಮಾಡಬಹುದು. ಮೇಲ್ ಮಾಡಲು ಡಿಸೆಂಬರ್ 13, 2021 ಸಂಜೆ 5.30ರವರೆಗೆ ಅವಕಾಶವಿದೆ.

ಅಭ್ಯರ್ಥಿಗಳು ಹೆಸರು, ನೋದಂಣಿ ಸಂಖ್ಯೆ, ಪ್ರಶ್ನೆ ಪತ್ರಿಕೆಯ ವರ್ಷನ್ ಕೋಡ್, ಪ್ರಶ್ನೆಯ ಸಂಖ್ಯೆ, ಪ್ರಶ್ನೆ, ಇಲಾಖೆ ನೀಡಿರುವ ಕೀ ಉತ್ತರ, ಅಭ್ಯರ್ಥಿಗಳು ನೀಡುವ ಉತ್ತರ, ಉತ್ತರಕ್ಕೆ ದಾಖಲೆಗಳನ್ನು ಇಟ್ಟು ಅರ್ಜಿ ಸಲ್ಲಿಸಬಹುದು.

ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯು 339 ಅರಣ್ಯ ರಕ್ಷಕ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಲಿಖಿತ ಪರೀಕ್ಷೆಯನ್ನು  ದಿನಾಂಕ ಡಿಸೆಂಬರ್ 5, 2021 ರಂದು ರಾಜ್ಯಾದ್ಯಂತ 11 ವಲಯಗಳಲ್ಲಿ ನಡೆಸಿತ್ತು. ದೈಹಿಕ ಸಾಮರ್ಥ್ಯ ಪರೀಕ್ಷೆಗೆ ಹಾಜರಾಗಿ ಅರ್ಹತೆ ಪಡೆದ ಅಭ್ಯರ್ಥಿಗಳು ಲಿಖಿತ ಪರೀಕ್ಷೆಗೆ ಹಾಜರಾಗಿದ್ದರು.  

BANK OF BARODA RECRUITMENT 2021: ಬ್ಯಾಂಕ್ ಆಫ್ ಬರೋಡಾದಲ್ಲಿ ಉದ್ಯೋಗ, ತಿಂಗಳಿಗೆ 63,840 ರೂ ಸಂಬಳ

ಹಾಸನ ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳ ನೇಮಕಾತಿಗೆ ಅಂತಿಮ ಪಟ್ಟಿ ಪ್ರಕಟ: ಹಾಸನ (hassan) ಜಿಲ್ಲೆಯ 2020ನೇ ಸಾಲಿನ 34 ಗ್ರಾಮ ಲೆಕ್ಕಿಗರ ನೇರ ನೇಮಕಾತಿಗೆ (village accountant recruitment) ಸಂಬಂಧಿಸಿದಂತೆ ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಗೊಳಿಸಲಾಗಿದೆ. ನೇಮಕ ಪ್ರಾಧಿಕಾರವು ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಗಳಿಗೆ 1:10 ಅನುಪಾತದಲ್ಲಿ ಪರಿಶೀಲನಾ ಪಟ್ಟಿಯನ್ನು ತಯಾರಿಸಿ ಪ್ರಕಟಿಸಲಾಗಿತ್ತು.  ತಾತ್ಕಾಲಿಕ ಆಯ್ಕೆಪಟ್ಟಿಗೆ ಒಟ್ಟು 10 ಅಭ್ಯರ್ಥಿಗಳ 18 ಆಕ್ಷೇಪಣಾ ಅರ್ಜಿಗಳನ್ನು ಸ್ವೀಕರಿಸಲಾಗಿ, ಪರಿಶೀಲಿಸಿದ್ದು, ಅವರೆಲ್ಲರಿಗೂ ಉತ್ತರವನ್ನು ಪ್ರಾಧಿಕಾರ ನೀಡಿದೆ. ಪ್ರಸ್ತುತ ಅಂತಿಮ ಆಯ್ಕೆಪಟ್ಟಿಯನ್ನು ಸಿದ್ಧಪಡಿಸಿ ಬಿಡುಗಡೆ ಮಾಡಲಾಗಿದೆ. ಅಭ್ಯರ್ಥಿಗಳು ಅಂತಿಮ ಆಯ್ಕೆಪಟ್ಟಿ ಚೆಕ್ ಮಾಡಲು ಹಾಸನ ಜಿಲ್ಲೆಯ ಸರಕಾರಿ ಅಧಿಕೃತ ವೆಬ್‌ಸೈಟ್ https://hassan.nic.in/ ಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು.

SBI Recruitment 2021: ಎಸ್‌ಬಿಐನಲ್ಲಿ ತಿಂಗಳಿಗೆ 63,840ರೂ ಸಂಬಳದ ಉದ್ಯೋಗ

ನೇಮಕಾತಿಗಳ ಬಗ್ಗೆ ಮಾಹಿತಿ ನೀಡಿದ ಕೆಎಸ್‌ಆರ್‌ಟಿಸಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬೆಂಗಳೂರಿನ ಕೇಂದ್ರ ಕಚೇರಿ ನೇಮಕಾತಿಗಳ ಬಗ್ಗೆ ಮಾಹಿತಿ ನೀಡಿದೆ. ಕೋವಿಡ್ ಪರಿಸ್ಥಿತಿ ಸಹಜ ಸ್ಥಿತಿಗೆ ಬರುತ್ತಿರುವ ಹಿನ್ನಲೆಯಲ್ಲಿ ನೇಮಕಾತಿ ಪ್ರಕ್ರಿಯೆಗಳಿಗೆ ಚಾಲನೆ ನೀಡಲು 15/9/2021ರಂದು ಸರ್ಕಾರದ ಅನುಮತಿ ಕೇಳಲಾಗಿದೆ ಎಂದಿದೆ. ಈ ಕುರಿತು ಅನುಮತಿ ಬಂದ ಕೂಡಲೇ ನೇಮಕಾತಿ ಪ್ರಕ್ರಿಯೆಗಳಿಗೆ ಚಾಲನೆ ನೀಡಲಾಗುತ್ತದೆ. ನೇಮಕಾತಿ ಕುರಿತು ದಿನಪತ್ರಿಕೆಗಳಲ್ಲಿ, ನಿಗಮದ ಅಧಿಕೃತ ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಲಾಗುತ್ತದೆ ಎಂದು ಕೆಎಸ್ಆರ್‌ಟಿಸಿ ತಿಳಿಸಿದೆ.

Recruitment 2021 : ನಮ್ಮ ಮೆಟ್ರೋ, ಬಾರ್ಡರ್ ರೋಡ್ಸ್‌ ಸಂಸ್ಥೆ ಮತ್ತು BHELನಲ್ಲಿ ಖಾಲಿ

ಈ ಹಿಂದೆ 726 ತಾಂತ್ರಿಕ ಸಹಾಯಕ ಮತ್ತು 200 ಕರಾಸಾ ಪೇದೆ ಹುದ್ದೆಗಳಿಗೆ ಮತ್ತು 3745 ಚಾಲನಾ ಸಿಬ್ಬಂದಿ ನೇರ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ ಕೋವಿಡ್ ಪರಿಸ್ಥಿತಿ ಕಾರಣ ಕರ್ನಾಟಕ ಸರ್ಕಾರದ ಸೂಚನೆ ಹಿನ್ನಲೆಯಲ್ಲಿ ಎಲ್ಲಾ ನೇಮಕಾತಿಗಳನ್ನು ಸ್ಥಗಿತಗೊಳಿಸಲಾಗಿತ್ತು. ಈಗ ಕೋವಿಡ್ ಪರಿಸ್ಥಿತಿ ಸಹಜ ಸ್ಥಿತಿಗೆ ಬರುತ್ತಿರುವ ಹಿನ್ನಲೆಯಲ್ಲಿ  ಮತ್ತೆ ನೇಮಕಾತಿ ಪ್ರಕ್ರಿಯೆ ಆರಂಭಿಸಲು ತೀರ್ಮಾನಿಸಲಾಗಿದೆ.

click me!