Government Teacher Post: ಅಂಗವಿಕಲ ಶಿಕ್ಷಕರಿಗೆ ಅಗ್ನಿ ಪರೀಕ್ಷೆ..!

By Kannadaprabha News  |  First Published Mar 4, 2022, 12:14 PM IST

*  ವೈದ್ಯಕೀಯ ದಾಖಲಾತಿಗಳ ಮೇಲೆ ಅನುಮಾನ
*  ಮತ್ತೊಮ್ಮೆ ತಪಾಸಣೆಗೊಳಗಾದ ಶಿಕ್ಷಕರು
*  ಅಂಗವಿಕಲತೆಯ ವೈದ್ಯಕೀಯ ಪ್ರಮಾಣಪತ್ರಗಳು ಖೊಟ್ಟಿಯಾಗಿರುವ ಸಾಧ್ಯತೆ 


ಹಗರಿಬೊಮ್ಮನಹಳ್ಳಿ(ಮಾ.04): ಅಂಗವಿಕಲ ಕೋಟಾ ಅಡಿಯಲ್ಲಿ ಸರ್ಕಾರಿ ಶಿಕ್ಷಕ ಹುದ್ದೆಗೆ ಭರ್ತಿಯಾದ ಕೆಲವು ಶಿಕ್ಷಕರಿಗೆ ಇದೀಗ ಅಗ್ನಿ ಪರೀಕ್ಷೆ ಎದುರಾಗಿದೆ!. ಸರ್ಕಾರಿ ಶಿಕ್ಷಕ ಹುದ್ದೆಗೆ ನೇಮಕವಾದ ಹಲವರು ಸಲ್ಲಿಸಿರುವ ಅಂಗವಿಕಲತೆಯ ವೈದ್ಯಕೀಯ ಪ್ರಮಾಣಪತ್ರಗಳು ಖೊಟ್ಟಿಯಾಗಿರುವ ಸಾಧ್ಯತೆ ಇದೆ ಎನ್ನುವ ಅನುಮಾನದ ಹಿನ್ನಲೆಯಲ್ಲಿ ಸರ್ಕಾರ ಮತ್ತೊಮ್ಮೆ ವೈದ್ಯಕೀಯ ಪರೀಕ್ಷೆ ನಡೆಸುತ್ತಿದೆ.

ರಾಜ್ಯ ಲೋಕಾಯುಕ್ತರಿಗೆ ಅಂಗವಿಕಲ ಶಿಕ್ಷಕರು ಸರ್ಕಾರಿ ನೌಕರಿಗೆ ನೇಮಕವಾಗುವಾಗ ನೀಡಿದ ವೈದ್ಯಕೀಯ ಪ್ರಮಾಣಪತ್ರಗಳು ಖೊಟ್ಟಿಯಾಗಿವೆ. ಅವುಗಳನ್ನು ಮರುಪರೀಶೀಲಿಸುವಂತೆ ಸಾರ್ವಜನಿಕ ದೂರು ಸಲ್ಲಿಕೆಯಾದ ಹಿನ್ನಲೆಯಲ್ಲಿ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.

Latest Videos

undefined

Open University: ಮುಕ್ತ ವಿವಿ ಪದವೀಧರರಿಗೆ ನೇಮಕಾತಿಯಲ್ಲಿ ತಾರತಮ್ಯ ಆಗದಂತೆ ಕ್ರಮ: ಅಶ್ವತ್ಥ್‌

ಇದರಂತೆ ಹಗರಿಬೊಮ್ಮನಹಳ್ಳಿ ತಾಲೂಕಿನಾದ್ಯಾಂತ 29 ಅಂಗವಿಕಲ ನೌಕರರು ಫೆ. 28ರಂದು ಸೋಮವಾರ ಬಳ್ಳಾರಿಯ ಜಿಲ್ಲಾಸ್ಪತ್ರೆಯಲ್ಲಿ ದಾಖಲಾತಿಗಳೊಂದಿಗೆ ಮತ್ತೊಮ್ಮೆ ವೈದ್ಯಕೀಯ ಪರೀಕ್ಷೆಗೊಳಗಾಗಿದ್ದಾರೆ. ಈಗ ನಡೆದಿರುವ ವೈದ್ಯಕೀಯ ಪರೀಕ್ಷೆ ಪ್ರಮಾಣಪತ್ರಗಳು ಪರೀಕ್ಷೆಗೊಳಗಾದ ಶಿಕ್ಷಕರ ಕೈಸೇರಿಲ್ಲ. ಬದಲಾಗಿ ನೇರವಾಗಿ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ತಲುಪಿವೆ.

ಪರೀಕ್ಷೆಗೊಳಗಾದ ಶಿಕ್ಷಕರು ಫಲಿತಾಂಶದ ಪ್ರಮಾಣಪತ್ರಗಳ ಬಗ್ಗೆ ಆತಂಕದಲ್ಲಿದ್ದಾರೆ. ಇದರೊಂದಿಗೆ ಪ್ರಾಮಾಣಿಕ ಶಿಕ್ಷಕರು ಪರೀಕ್ಷೆಗೊಳಗಾದ ವೇಳೆ ಅತ್ಯಂತ ಮುಜುಗರಕ್ಕೊಳಗಾದ ಪ್ರಸಂಗ ಅನುಭವಿಸಿದ್ದಾರೆ ಎನ್ನಲಾಗುತ್ತಿದೆ.
ಶಿಕ್ಷಣ ಇಲಾಖೆಯ ಮೇಲಾಧಿಕಾರಿಗಳ ನಿರ್ದೇಶನದಂತೆ ನಮ್ಮ ತಾಲೂಕಿನ ಅಂಗವಿಕಲ ಶಿಕ್ಷಕ, ಸರ್ಕಾರಿ ನೌಕರರನ್ನು ವೈದ್ಯಕೀಯ ಮರು ಪರೀಕ್ಷೆಗೆ ಒಳಪಡಿಸಿ, ಪ್ರಮಾಣ ಪತ್ರಗಳನ್ನು ಪರಿಶೀಲಿಸಲಾಗಿದೆ. ಶೀಘ್ರದಲ್ಲಿ ಫಲಿತಾಂಶ ಇಲಾಖೆಗೆ ಬರಲಿದೆ ಅಂತ ಹಗರಿಬೊಮ್ಮನಹಳ್ಳಿ ಬಿಇಒ ಎ.ಸಿ. ಆನಂದ ತಿಳಿಸಿದ್ದಾರೆ. 

ಶಿಕ್ಷಕರ ವೃತ್ತಿ ಅತ್ಯಂತ ಪವಿತ್ರವಾದುದ್ದು, ನಮಗೆ ಅಂಗವಿಕಲರ ಮೀಸಲಾತಿಯಡಿ ಈ ನೌಕರಿ ಸಿಕ್ಕಿರುವುದು ಅಸಹಾಕರಾದ ನಮಗೆ ಮರು ಜೀವನವೇ ಸರಿ. ಪ್ರಾಮಾಣಿಕವಾಗಿರುವ ನಮಗೆ ಈ ಮರು ವೈದ್ಯಕೀಯ ಪರೀಕ್ಷೆಯಿಂದ ಮುಜುಗರ ಉಂಟುಮಾಡಿತು. ಆದರೂ, ಪರೀಕ್ಷೆಯ ನಂತರ ಫಲಿತಾಂಶದ ಬಗ್ಗೆ ಆತಂಕದಲ್ಲಿದ್ದೇವೆ ಅಂತ ಹ.ಬೊ. ಹಳ್ಳಿ ತಾಲೂಕಿನ ಹೆಸರು ಹೇಳಲಿಚ್ಚಿಸದ ಶಿಕ್ಷಕರೊಬ್ಬರು ಹೇಳಿದ್ದಾರೆ. 

ರಾಜ್ಯದಲ್ಲಿ 15 ಸಾವಿರ ಶಿಕ್ಷಕರ ನೇಮಕಕ್ಕೆ ಅಧಿಸೂಚನೆ, ಮೊದಲ ಬಾರಿಗೆ ತೃತೀಯ ಲಿಂಗಿಗಳಿಗೂ ಮೀಸಲಾತಿ!

ಬೆಂಗಳೂರು: ರಾಜ್ಯದ ಪ್ರಾಥಮಿಕ ಶಾಲೆಗಳಲ್ಲಿ(6ರಿಂದ 8ನೇ ತರಗತಿ) ಬೋಧನೆಗೆ 15 ಸಾವಿರ ಪದವೀಧರ ಶಿಕ್ಷಕರ(ಜಿಪಿಟಿ) ನೇಮಕಾತಿ ಮಾಡಿಕೊಳ್ಳುವ ಸಂಬಂಧ ರಾಜ್ಯ ಸರ್ಕಾರವು(Government of Karnataka) ಅಧಿಸೂಚನೆ ಹೊರಡಿಸಿದೆ. ಇದೇ ಮೊದಲ ಬಾರಿಗೆ ನೇಮಕಾತಿಯಲ್ಲಿ ತೃತೀಯ ಲಿಂಗಿಗಳಿಗೂ ಶೇ.1ರಷ್ಟು ಮೀಸಲಾತಿ ಕಲ್ಪಿಸಿದೆ.

ಕರ್ನಾಟಕ ಶಿಕ್ಷಣ ಇಲಾಖೆ ಸೇವೆಗಳು (Department of Public Education) (Recruitment) (ವಿಶೇಷ) ನಿಯಮಗಳು-2022 ಅನ್ನು ಪ್ರಕಟಿಸಿದ್ದ ಕರಡು ಅಧಿಸೂಚನೆಗಳಿಗೆ(Notification) ಸಲ್ಲಿಕೆಯಾಗಿದ್ದ ಆಕ್ಷೇಪಣೆಗಳನ್ನು ಪರಿಗಣಿಸಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿ ಎಚ್.ಎಸ್ ಶಿವಕುಮಾರ್ ಅಧಿಕೃತ ಅಧಿಸೂಚನೆ ಹೊರಡಿಸಿದ್ದಾಾರೆ.

Karnataka Admin Reforms Panel: ನಾನ್‌ ಗೆಜೆಟೆಡ್‌ ಹುದ್ದೆಗಳಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿ ನೀಡುವಂತೆ ಶಿಫಾರಸು

ಪರಿಶಿಷ್ಟ ಜಾತಿ, ಪಂಗಡ, ಪ್ರವರ್ಗ-1 ಮತ್ತು ಇತರೆ ಹಿಂದುಳಿದ ವರ್ಗದ ಅಂಗವಿಕಲ ಅಭ್ಯರ್ಥಿಗಳಿಗೆ 47 ವರ್ಷದವರಿಗೆ, ಹಿಂದುಳಿದ ವರ್ಗದ ಪ್ರವರ್ಗ-2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳಿಗೆ 45 ವರ್ಷ ಮತ್ತು ಸಾಮಾನ್ಯ ಅಭ್ಯರ್ಥಿಗಳಿಗೆ 42 ವರ್ಷದವರೆಗೂ ಅವಕಾಶ ನೀಡಿದೆ. ಪ್ರತಿ ಪ್ರವರ್ಗದಲ್ಲಿ ಶೇ.1ರಷ್ಟು ಹುದ್ದೆಗಳನ್ನು ತೃತೀಯ ಲಿಂಗಿಗಳಿಂದ ಭರ್ತಿಗೆ ಅವಕಾಶ ನೀಡಿದೆ.

ಮಾನದಂಡಗಳು: 

ಶಿಕ್ಷಕರ ಆಯ್ಕೆ ವಿಚಾರದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ(ಸಿಇಟಿ)ಯಲ್ಲಿ ಶೇ.50ರಷ್ಟು ಅಂಕ, ಟಿಇಟಿ ಯಲ್ಲಿ ಶೇ.20, ಪದವಿಯಲ್ಲಿ ಶೇ.20ರಷ್ಟು ಅಂಕ ಮತ್ತು ಬಿ.ಇಡಿ ಯಲ್ಲಿ ಶೇ.10ರಷ್ಟು ಅಂಕಗಳನ್ನು ಪರಿಗಣಿಸಲಾಗುತ್ತದೆ. ನಾಲ್ಕು ವರ್ಷಗಳ ಬಿ.ಇಡಿ ಪಡೆದಿದ್ದರೆ, ಸ್ಪರ್ಧಾತ್ಮಕ ಪರೀಕ್ಷೆ (ಸಿಇಟಿ) ಯಲ್ಲಿ ಶೇ.50ರಷ್ಟು ಅಂಕ, ಟಿಇಟಿ ಯಲ್ಲಿ ಶೇ.20 ಮತ್ತು ಬಿ.ಇಡಿ ಯಲ್ಲಿ ಶೇ.30ರಷ್ಟು ಅಂಕಗಳನ್ನು ಪರಿಗಣಿಸಲಾಗುತ್ತದೆ. ಅಂಕಗಳ ಪರಿಗಣನೆ ವೇಳೆ ಇಬ್ಬರಿಗಿಂತ ಹೆಚ್ಚಿನ ವ್ಯಕ್ತಿಗಳ ಒಂದೇ ಪ್ರಮಾಣದ ಅಂಕಗಳನ್ನು ಪಡೆದರೆ ಅಭ್ಯರ್ಥಿಗಳ ವಯಸ್ಸಿನ ಆಧಾರದ ಮೇಲೆ, ಅಂದರೆ ಹಿರಿಯ ವಯಸ್ಸಿನವರನ್ನು ಆಯ್ಕೆ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ.
 

click me!