Kendriya Vidyalaya Recruitment 2022: ಬೆಂಗಳೂರಿನಲ್ಲಿ ಖಾಲಿ ಇರುವ ಶಿಕ್ಷಕ ಹುದ್ದೆಗೆ ಮಾ.7 ಮತ್ತು 8ಕ್ಕೆ ನೇರ ಸಂದರ್ಶನ

By Suvarna NewsFirst Published Mar 2, 2022, 10:39 PM IST
Highlights

ಬೆಂಗಳೂರು ಕೇಂದ್ರೀಯ ವಿದ್ಯಾಲಯ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಮಾರ್ಚ್ 7 ಮತ್ತು 8 ರಂದು  ವಿದ್ಯಾಲಯದ ಆವರಣದಲ್ಲಿ ನೇರ ಸಂದರ್ಶನ ನಡೆಯಲಿದೆ. 
 

ಬೆಂಗಳೂರು(ಮಾ.2): ಬೆಂಗಳೂರು ಕೇಂದ್ರೀಯ ವಿದ್ಯಾಲಯ (kendriya vidyalaya bangalore) ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. 2022-23ನೇ ಸಾಲಿನ ಒಪ್ಪಂದದ ಆಧಾರದ ಮೇಲೆ ಬೋಧಕ ಮತ್ತು ಬೋಧಕೇತರ ಶಿಕ್ಷಕರ ನೇಮಕಾತಿಗಾಗಿ ಪ್ರಕಟಣೆ ಹೊರಡಿಸಿದ್ದು, ಮಾರ್ಚ್ 7 ಮತ್ತು 8 ರಂದು  ವಿದ್ಯಾಲಯದ ಆವರಣದಲ್ಲಿ ನೇರ ಸಂದರ್ಶನ ನಡೆಯಲಿದೆ.  ಹೆಚ್ಚಿನ ಮಾಹಿತಿ ಆಸಕ್ತರು ಅಧಿಕೃತ ವೆಬ್‌ಸೈಟ್ https://megcentre.kvs.ac.in/ ಗೆ ಭೇಟಿ ನೀಡಬಹುದು. 

ಭೋದಕ ಹುದ್ದೆಯಲ್ಲಿ PRT, TGT, PGT,ಯೋಗ ಶಿಕ್ಷಕ, ಕ್ರೀಡಾ ಶಿಕ್ಷಕ, ನೃತ್ಯ/ಸಂಗೀತ ಶಿಕ್ಷಕ, ವಿಶೇಷ ಶಿಕ್ಷಕ ಮತ್ತು ಬೋಧಕೇತರ ವಿಭಾಗದಲ್ಲಿ ಕಂಪ್ಯೂಟರ್ ಬೋಧಕ, ಸಲಹೆಗಾರರು, ನರ್ಸ್, ವೈದ್ಯರು, DEO,ಕ್ಲರ್ಕ್ ಹುದ್ದೆಗಳು ಖಾಲಿ ಇದೆ.

ಶೈಕ್ಷಣಿಕ ವಿದ್ಯಾರ್ಹತೆ: ಬೆಂಗಳೂರು ಕೇಂದ್ರೀಯ ವಿದ್ಯಾಲಯದಲ್ಲಿ ಖಾಲಿ ಇರುವ ಹುದ್ದೆಗಳಿಗೆ  ನಡೆಯುವ ಸಂದರ್ಶನಕ್ಕೆ ಹಾಜರಾಗಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಬಿ.ಎಡ್‌  ಮಾಡಿರಬೇಕು. ಜೊತೆಗೆ ಸಂಬಂಧಿಸಿದ ಹುದ್ದೆಗೆ ತಕ್ಕಂತೆ ಆಯಾಯ ವಿಷಯದಲ್ಲಿ ಬಿಎ, ಬಿಎಸ್‌ಸಿ ಮಾಡಿರಬೇಕು. ಬೋಧಕೇತರ ಹುದ್ದೆಗೆ  ಬಿಇ, ಬಿಟೆಕ್, ಬಿಸಿಎ,ಬಿಎಸ್‌ಸಿ ಮಾಡಿರಬೇಕು. ಫಿಸಿಕಲ್ ಎಜುಕೇಶನ್ , ಮತ್ತು ಯೋಗ ಶಿಕ್ಷಣ ಪಡೆದಿರಬೇಕು.

ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ಶೈಕ್ಷಣಿಕ ಪ್ರಮಾಣ ಪತ್ರದ ಪ್ರತಿಯೊಂದಿಗೆ, 02 ಭಾವಚಿತ್ರಗಳನ್ನು ತರಬೇಕು. ಆಧಾರ್ ಕಾರ್ಡ್‌, ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ಬಿಎಡ್, ಪದವಿ ಅಂಕಪಟ್ಟಿ, ಸ್ನಾತಕೋತ್ತರ ಅಂಕಪಟ್ಟಿ ತರಬೇಕು.

BEL RECRUITMENT 2022: ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ರಾಜ್ಯದಲ್ಲಿ 15 ಸಾವಿರ ಶಿಕ್ಷಕರ ನೇಮಕಕ್ಕೆ ಅಧಿಸೂಚನೆ, ಮೊದಲ ಬಾರಿಗೆ ತೃತೀಯ ಲಿಂಗಿಗಳಿಗೂ ಮೀಸಲಾತಿ!: ರಾಜ್ಯದ ಪ್ರಾಥಮಿಕ ಶಾಲೆಗಳಲ್ಲಿ(6ರಿಂದ 8ನೇ ತರಗತಿ) ಬೋಧನೆಗೆ 15 ಸಾವಿರ ಪದವೀಧರ ಶಿಕ್ಷಕರ(ಜಿಪಿಟಿ) ನೇಮಕಾತಿ ಮಾಡಿಕೊಳ್ಳುವ ಸಂಬಂಧ ರಾಜ್ಯ ಸರ್ಕಾರವು ಅಧಿಸೂಚನೆ ಹೊರಡಿಸಿದೆ. ಇದೇ ಮೊದಲ ಬಾರಿಗೆ ನೇಮಕಾತಿಯಲ್ಲಿ ತೃತೀಯ ಲಿಂಗಿಗಳಿಗೂ ಶೇ.1ರಷ್ಟು ಮೀಸಲಾತಿ ಕಲ್ಪಿಸಿದೆ.

ಕರ್ನಾಟಕ ಶಿಕ್ಷಣ ಇಲಾಖೆ ಸೇವೆಗಳು (ಸಾರ್ವಜನಿಕ ಶಿಕ್ಷಣ ಇಲಾಖೆ) (ನೇಮಕಾತಿ) (ವಿಶೇಷ) ನಿಯಮಗಳು-2022 ಅನ್ನು ಪ್ರಕಟಿಸಿದ್ದ ಕರಡು ಅಧಿಸೂಚನೆಗಳಿಗೆ ಸಲ್ಲಿಕೆಯಾಗಿದ್ದ ಆಕ್ಷೇಪಣೆಗಳನ್ನು ಪರಿಗಣಿಸಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿ ಎಚ್.ಎಸ್ ಶಿವಕುಮಾರ್ ಅಧಿಕೃತ ಅಧಿಸೂಚನೆ ಹೊರಡಿಸಿದ್ದಾಾರೆ.

ಪರಿಶಿಷ್ಟ ಜಾತಿ, ಪಂಗಡ, ಪ್ರವರ್ಗ-1 ಮತ್ತು ಇತರೆ ಹಿಂದುಳಿದ ವರ್ಗದ ಅಂಗವಿಕಲ ಅಭ್ಯರ್ಥಿಗಳಿಗೆ 47 ವರ್ಷದವರಿಗೆ, ಹಿಂದುಳಿದ ವರ್ಗದ ಪ್ರವರ್ಗ-2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳಿಗೆ 45 ವರ್ಷ ಮತ್ತು ಸಾಮಾನ್ಯ ಅಭ್ಯರ್ಥಿಗಳಿಗೆ 42 ವರ್ಷದವರೆಗೂ ಅವಕಾಶ ನೀಡಿದೆ. ಪ್ರತಿ ಪ್ರವರ್ಗದಲ್ಲಿ ಶೇ.1ರಷ್ಟು ಹುದ್ದೆಗಳನ್ನು ತೃತೀಯ ಲಿಂಗಿಗಳಿಂದ ಭರ್ತಿಗೆ ಅವಕಾಶ ನೀಡಿದೆ.

DRDO Recruitment 2022: ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ಮಾರ್ಚ್ 14 ಕೊನೆ ದಿನ

ಮಾನದಂಡಗಳು: ಶಿಕ್ಷಕರ ಆಯ್ಕೆ ವಿಚಾರದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ(ಸಿಇಟಿ)ಯಲ್ಲಿ ಶೇ.50ರಷ್ಟು ಅಂಕ, ಟಿಇಟಿ ಯಲ್ಲಿ ಶೇ.20, ಪದವಿಯಲ್ಲಿ ಶೇ.20ರಷ್ಟು ಅಂಕ ಮತ್ತು ಬಿ.ಇಡಿ ಯಲ್ಲಿ ಶೇ.10ರಷ್ಟು ಅಂಕಗಳನ್ನು ಪರಿಗಣಿಸಲಾಗುತ್ತದೆ. ನಾಲ್ಕು ವರ್ಷಗಳ ಬಿ.ಇಡಿ ಪಡೆದಿದ್ದರೆ, ಸ್ಪರ್ಧಾತ್ಮಕ ಪರೀಕ್ಷೆ (ಸಿಇಟಿ) ಯಲ್ಲಿ ಶೇ.50ರಷ್ಟು ಅಂಕ, ಟಿಇಟಿ ಯಲ್ಲಿ ಶೇ.20 ಮತ್ತು ಬಿ.ಇಡಿ ಯಲ್ಲಿ ಶೇ.30ರಷ್ಟು ಅಂಕಗಳನ್ನು ಪರಿಗಣಿಸಲಾಗುತ್ತದೆ. ಅಂಕಗಳ ಪರಿಗಣನೆ ವೇಳೆ ಇಬ್ಬರಿಗಿಂತ ಹೆಚ್ಚಿನ ವ್ಯಕ್ತಿಗಳ ಒಂದೇ ಪ್ರಮಾಣದ ಅಂಕಗಳನ್ನು ಪಡೆದರೆ ಅಭ್ಯರ್ಥಿಗಳ ವಯಸ್ಸಿನ ಆಧಾರದ ಮೇಲೆ, ಅಂದರೆ ಹಿರಿಯ ವಯಸ್ಸಿನವರನ್ನು ಆಯ್ಕೆ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ.

ಐಚ್ಛಿಕ ವಿಷಯಗಳ ವ್ಯಾಸಂಗ ಕಡ್ಡಾಯ: ಭಾಷಾ ವಿಷಯಗಳಲ್ಲಿ ಹುದ್ದೆ ಬಯಸುವ ಅಭ್ಯರ್ಥಿಗಳು, ಪದವಿ ವೇಳೆ ಭಾಷಾ ವಿಷಯಗಳ ಜತೆಗೆ ಮೂರು ವರ್ಷದ ಐಚ್ಛಿಕ ವಿಷಯವನ್ನು ಕಡ್ಡಾಯವಾಗಿ ಅಭ್ಯಾಸ ಮಾಡಿರಬೇಕು. ಕನ್ನಡ, ಇಂಗ್ಲಿಷ್, ಹಿಂದಿ, ಮರಾಠಿ, ಉರ್ದು, ತೆಲುಗು, ತಮಿಳು, ಮಲಯಾಳಂ, ಕೊಂಕಣಿ, ಸಂಸ್ಕೃತ ಸೇರಿದಂತೆ ಇತರೆ ಭಾಷೆ ವಿಷಯಗಳನ್ನು ಐಚ್ಛಿಕ ವಿಷಯಗಳನ್ನು ಅಭ್ಯಾಸ ಮಾಡಿರಬೇಕು ಮತ್ತು ಈ ಐಚ್ಛಿಕ ವಿಷಯಗಳಲ್ಲಿ ಕನಿಷ್ಠ ಶೇ.50ರಷ್ಟು ಅಂಕ ಪಡೆದಿರಬೇಕು.

click me!