Teachers Jobs:ಶಿಕ್ಷಕ ಹುದ್ದೆ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ, ನೇಮಕಾತಿಯಲ್ಲಿ ಬದಲಾವಣೆ

Published : Dec 24, 2021, 06:48 PM IST
Teachers Jobs:ಶಿಕ್ಷಕ ಹುದ್ದೆ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ,  ನೇಮಕಾತಿಯಲ್ಲಿ ಬದಲಾವಣೆ

ಸಾರಾಂಶ

*ಶಿಕ್ಷಕ ಹುದ್ದೆ ನಿರೀಕ್ಷೆಯಲ್ಲಿರುವವರಿಗೆ ಸಿಹಿ ಸುದ್ದಿ * ಶಿಕ್ಷಕರ ನೇಮಕಾತಿ ಪ್ರತಿಕ್ರಿಯೆಯಲ್ಲಿ ಮಹತ್ವದ ಬದಲಾವಣೆ * ನಿಯಮಾವಳಿ ತಿದ್ದುಪಡಿ ಮಾಡಿದ  ಶಿಕ್ಷಣ ಇಲಾಖೆ 

ಬೆಂಗಳೂರು, (ಡಿ.24): ಶಿಕ್ಷಕರ ಹುದ್ದೆ ನೇಮಕಾತಿ (Teachers Recruitment) ನಿಯಮಗಳಲ್ಲಿ ರಾಜ್ಯ ಸರ್ಕಾರ ಮಹತ್ವದ ಬದಲಾವಣೆ ಮಾಡಿದೆ. ಇದರಿಂದ ಶಿಕ್ಷಕರ ಹುದ್ದೆ ನಿರೀಕ್ಷೆಯಲ್ಲಿದ್ದವರಿಗೆ ನಿಟ್ಟುಸಿರು ಬಿಟ್ಟಿದ್ದಾರೆ.

ಯಾವುದೇ ಪದವಿಯಲ್ಲಿ(Degree) ಯಾವುದೇ ವಿಷಯ ಓದಿದ್ದರೂ, ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸುವ ಕುರಿತಂತೆ ಶಿಕ್ಷಣ ಇಲಾಖೆ (Education Department) ನಿಯಮಾವಳಿಗೆ ತಿದ್ದುಪಡಿ ತಂದಿದೆ. 

ಅನೇಕ ವಿಷಯಗಳಲ್ಲಿ ಪದವಿ ಪಡೆದು, ಬಿಎಡ್, ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ.

Upcoming Government Exams 2022: ಉದ್ಯೋಗ ನಿರೀಕ್ಷೆಯಲ್ಲಿರುವವರಿಗೆ 2022ರಲ್ಲಿ ಭರ್ಜರಿ ಅವಕಾಶ

ಈ ಮೊದಲು ಆರರಿಂದ ಎಂಟನೇ ತರಗತಿ ಶಿಕ್ಷಕರ ನೇಮಕಾತಿ ಸಂದರ್ಭದಲ್ಲಿ ಬಿಎಸ್ಸಿಯಲ್ಲಿ ಪಿಸಿಎಂ ಮತ್ತು ಬಿಎ ನಲ್ಲಿ ಇಂಗ್ಲಿಷ್ ಐಚ್ಛಿಕವಾಗಿ ಓದಿದವರಿಗೆ ಮಾತ್ರ ನೇಮಕಾತಿಯಲ್ಲಿ ಅವಕಾಶ ನೀಡುತ್ತಿದ್ದ ಕಾರಣ ಬೇರೆ ಪದವಿ ಪಡೆದವರಿಗೆ ಶಿಕ್ಷಕರ ಹುದ್ದೆ ಅವಕಾಶ ಇರಲಿಲ್ಲ. 

ಈಗ ಬಿಎಡ್ 2 ವರ್ಷದ ಕೋರ್ಸ್ ಆದ ನಂತರ ಯಾವುದೇ ಪದವಿಯಲ್ಲಿ ಓದಿದವರಿಗೂ ಬಿಎಡ್ ಮಾಡಲು ಅವಕಾಶ ನೀಡಿದ್ದು, ನೇಮಕಾತಿ ನಿಯಮದಲ್ಲಿ ಎಲ್ಲಾ ಪದವೀಧರರಿಗೆ ಅವಕಾಶ ನೀಡಲಾಗಿದೆ.

ರಾಜ್ಯದಲ್ಲಿ ಆರರಿಂದ ಎಂಟನೇ ತರಗತಿಯ ಶಿಕ್ಷಕರ ಸುಮಾರು 52,630 ಹುದ್ದೆಗಳು ಖಾಲಿ ಇದ್ದು, ಶೀಘ್ರವೇ 15 ಸಾವಿರ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗುತ್ತದೆ. ನೇಮಕಾತಿಯಿಂದ ವಂಚಿತರಾಗಿದ್ದ ಪದವೀಧರರಿಗೆ ಅವಕಾಶ ನೀಡಲಾಗುವುದು. ಈ ಪದವೀಧರರು ಬಿಎಡ್ ಮತ್ತು ಟಿಇಟಿ ಪಾಸ್ ಮಾಡುವುದು ಕಡ್ಡಾಯವಾಗಿರುತ್ತದೆ.

ಉದ್ಯೋಗ ನಿರೀಕ್ಷೆಯಲ್ಲಿರುವವರಿಗೆ 2022ರಲ್ಲಿ ಭರ್ಜರಿ ಅವಕಾಶ
2022ನೇ ವರ್ಷಕ್ಕೆ ಕಾಲಿಡಲು ಇನ್ನೇನು ಕೆಲವೇ ದಿನಗಳು ಬಾಕಿ ಇದೆ. ಹೊಸ ವರ್ಷದಲ್ಲಿ(New Year 2022) ಉದ್ಯೋಗ (Jobs) ನಿರೀಕ್ಷೆಯಲ್ಲಿರುವವರಿಗೆ ಸಾಕಷ್ಟು ಅವಕಾಶ ಸಿಗಲಿದೆ. 2022 ನೇ ಇಸವಿಯು ನೇಮಕಾತಿ ಪರೀಕ್ಷೆಗಳ (Jobs Exams) ವರ್ಷವಾಗಲಿದೆ ಎಂದರೆ ತಪ್ಪಲ್ಲ. ಏಕೆಂದರೆ ಹಲವು ವರ್ಷಗಳಿಂದ ಬಾಕಿ ಉಳಿದಿರುವ ಹಲವು ನೇಮಕಾತಿ ಪರೀಕ್ಷೆಗಳು 2022ರಲ್ಲಿ ನಡೆಯುವುದು ಪಕ್ಕಾ ಆಗಿದೆ. ಮುಂದಿನ ವರ್ಷ UPSC(UNION PUBLIC SERVICE COMMISSION), SSC, RRB ಸೇರಿದಂತೆ ಅನೇಕ ದೊಡ್ಡ ನೇಮಕಾತಿ ನಡೆಯಲಿದೆ.

ಯುಪಿಎಸ್‌ಸಿ, ಸಿವಿಲ್ ಸರ್ವೀಸಸ್ ಪೆಲಿಮ್ಸ್ 2022 (Civil Services Prelims) ಮತ್ತು ಭಾರತೀಯ ಅರಣ್ಯ ಸೇವೆ (Indian Forest Service -IFS) ಪ್ರಿಲಿಮ್ಸ್  ಪರೀಕ್ಷೆಗೆ ಫೆಬ್ರವರಿ 2ರಂದು ಅಧಿಸೂಚನೆ ಹೊರಡಿಸಲಾಗುತ್ತದೆ. ಎರಡೂ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆಬ್ರವರಿ 22, 2022 ಆಗಿದೆ. ಬಳಿಕ  ಪೂರ್ವಭಾವಿ ಪರೀಕ್ಷೆಗಳು ಜೂನ್ 5 ರಂದು ನಡೆಯಲಿದೆ. ನಾಗರಿಕ ಸೇವೆಗಳ ಮುಖ್ಯ ಪರೀಕ್ಷೆಯನ್ನು ಸೆಪ್ಟೆಂಬರ್ 16, 2022 ರಂದು ನಡೆಯಲಿದೆ. ಇದೇ ಸಮಯದಲ್ಲಿ, ಭಾರತೀಯ ಅರಣ್ಯ ಸೇವೆ ಇಲಾಖೆಯ ಮುಖ್ಯ ಪರೀಕ್ಷೆಯನ್ನು ನವೆಂಬರ್ 20, 2022 ರಂದು ನಡೆಸಲು ತೀರ್ಮಾನಿಸಲಾಗಿದೆ.

ಯುಪಿಎಸ್‌ಸಿ,  NDA 1 ಮತ್ತು ಯುಪಿಎಸ್‌ಸಿ CDS 1 ನ ಮೊದಲ ಪರೀಕ್ಷೆಗಳಿಗೆ ಅರ್ಜಿ ಪ್ರಕ್ರಿಯೆ ಡಿಸೆಂಬರ್ 22, 2021 ರಿಂದ ಪ್ರಾರಂಭವಾಗಿದ್ದು, ಜನವರಿ 11, 2022 ಅರ್ಜಿ ಸಲ್ಲಿಸಲು ಕೊನೆ ದಿನವಾಗಿದೆ. ಇದಕ್ಕೆ ಏಪ್ರಿಲ್ 10, 2022 ರಂದು ಪರೀಕ್ಷೆ ನಡೆಯಲಿದೆ. ಯುಪಿಎಸ್‌ಸಿ NDA 2 ಮತ್ತು ಯುಪಿಎಸ್‌ಸಿ CDS 2 ಪರೀಕ್ಷೆಗೆ ಅರ್ಜಿ ಪ್ರಕ್ರಿಯೆ ಮೇ 18 ರಿಂದ ಜೂನ್ 14 ,2022 ರವರೆಗೆ ನಡೆಯಲಿದೆ. ಪರೀಕ್ಷೆಯು 2022ರ ಸೆಪ್ಟೆಂಬರ್ 4ರಂದು ನಡೆಯಲಿದೆ.

PREV
Read more Articles on
click me!

Recommended Stories

ಮಂಗಳೂರು: 'ಡಿಕೆಶಿ ಮುಂದಿನ ಸಿಎಂ’ ಘೋಷಣೆ ಕೂಗಿದ ಐವನ್, ಮಿಥುನ್‌ಗೆ ನೋಟಿಸ್?
ಸೋಶಿಯಲ್ ಮೀಡಿಯಾದಿಂದ ದೂರವಿದ್ದು 10 ಸರ್ಕಾರಿ ನೌಕರಿ ಪಡೆದು ಸ್ಫೂರ್ತಿಯಾದ ಸಾಧಕ!