CSG Karnataka Recruitment 2022: ಖಾಲಿ ಇರುವ 81 ಹುದ್ದೆಗಳ ಭರ್ತಿಗೆ ಅರ್ಹರಿಂದ ಅರ್ಜಿ ಆಹ್ವಾನ

By Suvarna NewsFirst Published Dec 12, 2021, 4:38 PM IST
Highlights
  • ಕರ್ನಾಟಕ ಸರ್ಕಾರ ಅಧೀನದ ಸೆಂಟರ್‌ ಫಾರ್ ಸ್ಮಾರ್ಟ್‌ ಗವರ್ನೆನ್ಸ್ ನಲ್ಲಿ ಕೆಲಸ ಖಾಲಿ ಇದೆ
  • ಮ್ಯಾನೇಜರ್ ಸೇರಿ ಒಟ್ಟು 81 ವಿವಿಧ ಹುದ್ದೆಗಳು ಖಾಲಿ
  • ಅರ್ಜಿ ಸಲ್ಲಿಸಲು ಕೊನೆಯ ದಿನ ಜನವರಿ 31, 2022. 

ಬೆಂಗಳೂರು (ಡಿ.12): ಕರ್ನಾಟಕ ಸರ್ಕಾರ ಅಧೀನದ ಸೆಂಟರ್‌ ಫಾರ್ ಸ್ಮಾರ್ಟ್‌ ಗವರ್ನೆನ್ಸ್ ನಲ್ಲಿ (Centre for Smart Governance) ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.  ಒಟ್ಟು 81 ವಿವಿಧ ಹುದ್ದೆಗಳು ಖಾಲಿ ಇದ್ದು,  ಅರ್ಹ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.  ಮಾಹಿತಿ ತಂತ್ರಜ್ಞಾನ (Information Technology) (ಐಟಿ/ಐಸಿಟಿ) ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸೆಂಟರ್ ಫಾರ್ ಸ್ಮಾರ್ಟ್ ಗವರ್ನೆನ್ಸ್ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ  ಡಿಸೆಂಬರ್ 9ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು,  ಕೊನೆಯ ದಿನಾಂಕ ಜನವರಿ 31, 2022.  ಅಭ್ಯರ್ಥಿಗಳು ಆನ್​ಲೈನ್ (Online)​ ಮೂಲಕ ಅರ್ಜಿ ಸಲ್ಲಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್ ಸೈಟ್  https://csg.karnataka.gov.in/  ಗೆ ಭೇಟಿ ನೀಡಲು ಕೋರಲಾಗಿದೆ. 

ಹುದ್ದೆಗಳ ವಿವರ ಇಂತಿದೆ: ಪ್ರಾಜೆಕ್ಟ್ ಮ್ಯಾನೇಜರ್ - 3 ಹುದ್ದೆಗಳು, ಪ್ರಾಜೆಕ್ಟ್ ಲೀಡ್ - 2 ಹುದ್ದೆಗಳು, ಬಿಸಿನೆಸ್ ಅನಲಿಸ್ಟ್ - 4 ಹುದ್ದೆಗಳು, ಸೊಲ್ಯೂಷನ್ ಆರ್ಕಿಟೆಕ್ಟ್ - 2 ಹುದ್ದೆಗಳು, ಸೀನಿಯರ್ ಸಾಫ್ಟ್‌ವೇರ್ ಇಂಜಿನಿಯರ್ - 6 ಹುದ್ದೆಗಳು,ಸಾಫ್ಟ್‌ವೇರ್ ಇಂಜಿನಿಯರ್ - 42 ಹುದ್ದೆಗಳು, ಡೇಟಾಬೇಸ್ ಡಿಸೈನರ್ - 5 ಹುದ್ದೆಗಳು, ಡೇಟಾಬೇಸ್ ಅಡ್ಮಿನಿಸ್ಟ್ರೇಟರ್ - 4 ಹುದ್ದೆಗಳು, ಸಿಸ್ಟಮ್ ಅಡ್ಮಿನಿಸ್ಟ್ರೇಟರ್ - 2 ಹುದ್ದೆಗಳು, ಟೆಸ್ಟ್ ಲೀಡ್ - 2 ಹುದ್ದೆಗಳು, ಟೆಸ್ಟ್ ಇಂಜಿನಿಯರ್ - 5 ಹುದ್ದೆಗಳು, ಆಪರೇಷನ್ಸ್ ಮ್ಯಾನೇಜರ್ - 4 ಹುದ್ದೆಗಳು ಹೀಗೆ ಒಟ್ಟು 81 ಹುದ್ದೆಗಳು ಖಾಲಿ ಇವೆ.

ವಿದ್ಯಾರ್ಹತೆ ಮತ್ತು ವಯೋಮಿತಿ: ಸೆಂಟರ್ ಫಾರ್ ಸ್ಮಾರ್ಟ್ ಗವರ್ನೆನ್ಸ್ ಸಂಸ್ಥೆ ನೇಮಕಾತಿಯ ವಿವಿಧ ಹುದ್ದೆಗಳಿಗೆ  ಮಾನ್ಯತೆ ಪಡೆದ ಬೋರ್ಡ್‌/ಸಂಸ್ಥೆ/ ವಿಶ್ವವಿದ್ಯಾಲಯದಿಂದ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ISEC Recruitment: ಬೆಂಗಳೂರಿನ ISEC ಸಂಸ್ಥೆಯಲ್ಲಿ ಸರಕಾರಿ ಉದ್ಯೋಗಕ್ಕೆ ಅರ್ಹರಿಂದ ಅರ್ಜಿ ಆಹ್ವಾನ

ವಿವಿಧ ಹುದ್ದೆಗಳಿಗೆ ನೇಮಕಾತಿ ನಿಯಮಾನುಸಾರ ವಯೋಮಿತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 5 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

ANGANWADI RECRUITMENT 2022: ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ

ಉದ್ಯೋಗದ ಸ್ಥಳ ಮತ್ತು ವೇತನ: ಸೆಂಟರ್ ಫಾರ್ ಸ್ಮಾರ್ಟ್ ಗವರ್ನೆನ್ಸ್ ಸಂಸ್ಥೆ ನೇಮಕಾತಿಯ ವಿವಿಧ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಉದ್ಯೋಗ ನೀಡಲಾಗುತ್ತದೆ. ನೇಮಕಾತಿ ನಿಯಮಾನುಸಾರ ಮತ್ತು ಹುದ್ದೆಗಳಿಗನುಸಾರ ವೇತನ  ಕೂಡ ನೀಡಲಾತ್ತದೆ.

Indian Navy Recruitment 2021: ಪಿಯುಸಿ ಪಾಸಾದವರಿಗೆ ಭಾರತೀಯ ನೌಕಾಸೇನೆಯಲ್ಲಿ ಉದ್ಯೋಗ

ಆಯ್ಕೆ ಪ್ರಕ್ರಿಯೆ ಮತ್ತು ಅರ್ಜಿ ಸಲ್ಲಿಸುವುದು ಹೇಗೆ?: ಅಭ್ಯರ್ಥಿಗಳನ್ನು ನೇರ ಸಂದರ್ಶನ, ಲಿಖಿತ ಪರೀಕ್ಷೆ ಮತ್ತು ದಾಖಲೆ ಪರಿಶೀಲನೆ ಮೂಲಕ ಆಯ್ಕೆ ಮಾಡಲಾಗುತ್ತದೆ.
ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅಧಿಕೃತ ವೆಬ್‌ಸೈಟ್‌ https://csg.karnataka.gov.in/ ಗೆ ಭೇಟಿ ನೀಡಿ. ಅಭ್ಯರ್ಥಿಗಳು ನೇಮಕಾತಿ ಅಧಿಸೂಚನೆಯನ್ನು ಓದಿಕೊಳ್ಳಿ. ನಂತರ ತಮ್ಮ ಸಿವಿ ಗಳನ್ನು careerscsg@karnataka.gov.in ವಿಳಾಸಕ್ಕೆ  ಜನವರಿ 31,2022ರೊಳಗೆ ಮೇಲ್ ಮಾಡುವ ಮೂಲಕ ಅರ್ಜಿ ಸಲ್ಲಿಸಬಹುದು.

NABARD Recruitment 2021: ವಿವಿಧ ಹುದ್ದೆಗಳ ನೇಮಕಾತಿಗೆ ನಬಾರ್ಡ್ ಅರ್ಜಿ ಆಹ್ವಾನ

Railway Recruitment: ದಕ್ಷಿಣ ಮಧ್ಯ ರೈಲ್ವೆ ಮತ್ತು ಸೆಂಟ್ರಲ್ ರೈಲ್ವೆಯಲ್ಲಿ ಖಾಲಿ ಇರುವ ಹುದ್ದೆಗೆ ಇಂದೇ ಅರ್ಜಿ ಸಲ್ಲಿಸಿ

click me!