ISEC Recruitment: ಬೆಂಗಳೂರಿನ ISEC ಸಂಸ್ಥೆಯಲ್ಲಿ ಸರಕಾರಿ ಉದ್ಯೋಗಕ್ಕೆ ಅರ್ಹರಿಂದ ಅರ್ಜಿ ಆಹ್ವಾನ

By Suvarna News  |  First Published Dec 11, 2021, 7:39 PM IST
  • ಬೆಂಗಳೂರಿನ  ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ
  • ಒಟ್ಟು 12 ಫೀಲ್ಡ್​​​ ಇನ್ವೆಸ್ಟಿಗೇಟರ್ ಹುದ್ದೆಗಳು ಖಾಲಿ
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್ 14

ಬೆಂಗಳೂರು(ಡಿ.11): ಬೆಂಗಳೂರಿನ  ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆಯಲ್ಲಿ (Institute of Social and Economic Change) ಖಾಲಿ ಇರುವ ಒಟ್ಟು 12 ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 12 ಫೀಲ್ಡ್​​​ ಇನ್ವೆಸ್ಟಿಗೇಟರ್ (Field Investigator) ಹುದ್ದೆಗಳು ಭರ್ತಿಯಾಗಬೇಕಿದ್ದು,  ಎಂಎಸ್ಸಿ ಅಗ್ರಿಕಲ್ಚರ್ (M.Sc. Agricultural) ಮತ್ತು ಬಿಎಸ್ಸಿ ಅಗ್ರಿಕಲ್ಚರ್ (B.Sc. Agriculture)ಪದವಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.  ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆಫ್​ಲೈನ್ (Offline)​ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್ 14. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು isec.ac.in ಗೆ ಭೇಟಿ ನೀಡಬಹುದು.

ಫೀಲ್ಡ್​​​ ಇನ್ವೆಸ್ಟಿಗೇಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ  ಎಂಎಸ್ಸಿ ಅಗ್ರಿಕಲ್ಚರ್  ಅಥವಾ ಬಿಎಸ್ಸಿ ಅಗ್ರಿಕಲ್ಚರ್ ಪದವಿ ಪೂರ್ಣಗೊಳಿಸಿರಬೇಕು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಉದ್ಯೋಗ ನೀಡಲಾಗುತ್ತದೆ. ದಾಖಲಾತಿ ಪರಿಶೀಲನೆ ಮತ್ತು ವೈಯಕ್ತಿಕ ಸಂದರ್ಶನದ ಮೂಲಕ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ 16,000 ನಿಂದ 30,000 ರೂ ವೇತನ ನೀಡಲಾಗುತ್ತದೆ.

Latest Videos

undefined

ಏನಿದು ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆ: ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯ ಸಂಸ್ಥೆಯು ಭಾರತದ ಬೆಂಗಳೂರಿನಲ್ಲಿರುವ ಸಾಮಾಜಿಕ ವಿಜ್ಞಾನ ಸಂಶೋಧನಾ ಸಂಸ್ಥೆಯಾಗಿದೆ.  ಈ ಸಂಸ್ಥೆಯನ್ನು 1972ರಲ್ಲಿ ಪ್ರೊ ವಿ ಕೆ ಆರ್‌ ವಿ ರಾವ್ (ವಿಜಯೇಂದ್ರ ಕಸ್ತೂರಿ ರಂಗ ವರದರಾಜ ರಾವ್) ಅವರು  ಇಂಡಿಯನ್ ಕೌನ್ಸಿಲ್ ಆಫ್ ಸೋಶಿಯಲ್ ಸೈನ್ಸ್ ರಿಸರ್ಚ್ (ICSSR) ಮತ್ತು ಕರ್ನಾಟಕ ಸರ್ಕಾರ ಧನಸಹಾಯದೊಂದಿಗೆ ಸ್ಥಾಪಿಸಿದ ಬಹುಶಿಸ್ತಿನ ಸಮಾಜ ವಿಜ್ಞಾನ ಸಂಶೋಧನಾ ಸಂಸ್ಥೆ.

RAILWAY RECRUITMENT: ದಕ್ಷಿಣ ಮಧ್ಯ ರೈಲ್ವೆ ಮತ್ತು ಸೆಂಟ್ರಲ್ ರೈಲ್ವೆಯಲ್ಲಿ ಖಾಲಿ ಇರುವ ಹುದ್ದೆಗೆ ಇಂದೇ ಅರ್ಜಿ ಸಲ್ಲಿಸಿ

ಇದು ಇಂಡಿಯನ್ ಕೌನ್ಸಿಲ್ ಆಫ್ ಸೋಶಿಯಲ್ ಸೈನ್ಸ್ ರಿಸರ್ಚ್ ಬೆಂಬಲಿಸುವ 27 ಸಂಸ್ಥೆಗಳಲ್ಲಿ ದೊಡ್ಡದಾಗಿದೆ. ಪ್ರೊ.ವಿ.ಕೆ.ಆರ್.ವಿ ಸ್ಥಾಪಿಸಿದ ಮೂರು ಪ್ರಮುಖ ಸಂಸ್ಥೆಗಳಲ್ಲಿ ISEC ಕೂಡ ಒಂದು.ಸಾಮಾಜಿಕ ಮತ್ತು ಆರ್ಥಿಕ ಕಲ್ಯಾಣಕ್ಕಾಗಿ ಈ ಸಂಸ್ಥೆಯು ಕಾಳಜಿ ವಹಿಸುತ್ತದೆ . ಬಡತನ ಮತ್ತು ಮಾನವ ಅಭಿವೃದ್ಧಿಯ ವಿವಿಧ ಆಯಾಮಗಳನ್ನು ಅರ್ಥಮಾಡಿಕೊಳ್ಳಲು ಇದು ಕೈಗೊಂಡಿರುವ ಹೆಚ್ಚಿನ ಸಂಖ್ಯೆಯ ಅಧ್ಯಯನಗಳಲ್ಲಿ ಬಲವಾಗಿ ಇದು ಎದ್ದು ಕಾಣುತ್ತದೆ.

Karnataka High Court Recruitment: ಕರ್ನಾಟಕ ಹೈ ಕೋರ್ಟ್ ನಲ್ಲಿ ಖಾಲಿ ಇರುವ 21 ಹುದ್ದೆಗಳಿಗೆ ಅರ್ಜಿ

ವಿಶ್ಲೇಷಣಾತ್ಮಕ ಸಂಶೋಧನಾ ಅಧ್ಯಯನಗಳು ವಿಶೇಷವಾಗಿ ನೀತಿ-ಸಂಬಂಧಿತ ಪ್ರದೇಶಗಳಲ್ಲಿ ISEC ಯ ಆದ್ಯತೆಯ ಕ್ಷೇತ್ರಗಳಾಗಿವೆ. ಕೇಂದ್ರ, ರಾಜ್ಯ ಮತ್ತು ಸ್ಥಳೀಯ ಮಟ್ಟದ ಸರ್ಕಾರಗಳು ವಿವಿಧ ನೀತಿಗಳು ಮತ್ತು ಕಾರ್ಯಕ್ರಮಗಳ ಮೌಲ್ಯಮಾಪನಕ್ಕಾಗಿ ಈ ಸಂಸ್ಥೆಯನ್ನು ಅವಲಂಬಿಸಿವೆ. ಈ ಸಂಸ್ಥೆಯು ಸಂಶೋಧನೆ ಮತ್ತು ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸುತ್ತದೆ.

Bank of Baroda Recruitment 2021: ಬ್ಯಾಂಕ್ ಆಫ್ ಬರೋಡಾದಲ್ಲಿ ಉದ್ಯೋಗ, ತಿಂಗಳಿಗೆ 63,840 ರೂ

ಅರ್ಥಶಾಸ್ತ್ರ, ಪರಿಸರ ಅರ್ಥಶಾಸ್ತ್ರ, ಕೃಷಿ ಅರ್ಥಶಾಸ್ತ್ರ, ಜನಸಂಖ್ಯಾ ಸಂಶೋಧನೆ, ಸಮಾಜಶಾಸ್ತ್ರ, ಆರೋಗ್ಯ, ಶಿಕ್ಷಣ, ರಾಜಕೀಯ ವಿಜ್ಞಾನ, ಸಾರ್ವಜನಿಕ ಆಡಳಿತ, ವಿಕೇಂದ್ರೀಕರಣ ಮತ್ತು ಗ್ರಾಮೀಣಾಭಿವೃದ್ಧಿಯಿಂದ ಹಿಡಿದು ಎಂಟು ಕೇಂದ್ರಗಳ ಅಡಿಯಲ್ಲಿ ರಚನೆಯಾಗಿದೆ. ಈ ಕೇಂದ್ರಗಳ ಅಡಿಯಲ್ಲಿ ಸಂಶೋಧನೆಯನ್ನು ಒಟ್ಟಾಗಿ ಚರ್ಚಿಸಿ ಶಾಸನಬದ್ಧ ಸಂಸ್ಥೆಗಳ ಮೂಲಕ ಮೇಲ್ವಿಚಾರಣೆ ಮಾಡಲಾಗುತ್ತದೆ.

SBI Recruitment 2021: ಎಸ್‌ಬಿಐನಲ್ಲಿ ತಿಂಗಳಿಗೆ 63,840ರೂ ಸಂಬಳದ ಉದ್ಯೋಗ

click me!