ಸರ್ಕಾರದ ಎಲ್ಲ ಹೊರಗುತ್ತಿಗೆ ನೌಕರಿಯಲ್ಲೂ ಮೀಸಲಾತಿ: ಸಿಎಂ ಸಿದ್ದರಾಮಯ್ಯ

By Sathish Kumar KHFirst Published Jul 8, 2023, 3:58 PM IST
Highlights

ಕರ್ನಾಟಕದ ಎಲ್ಲ ಸರ್ಕಾರಿ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ನೇಮಕಾತಿಯಲ್ಲಿಯೂ ಮೀಸಲಾತಿಯನ್ನು ಜಾರಿಗೊಳಿಸಲಾಗುತ್ತದೆ.

ಬೆಂಗಳೂರು (ಜು.08): ರಾಜ್ಯದಲ್ಲಿ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ಸೇವೆಯಲ್ಲಿ ಸಾಮಾಜಿಕ ನ್ಯಾಯ ಲಭ್ಯವಾಗುತ್ತಿಲ್ಲ. ಆದ್ದರಿಂದ ಹೊರಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳುವ ವೇಳೆ ಮೀಸಲಾತಿ ಜಾರಿಗೊಳಿಸಲು ಚಿಂತನೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಹಿತಿ ನೀಡಿದರು.

ಪ್ರಬುದ್ಧ ಕರ್ನಾಟಕ ಜನಮನ ಸಮಾವೇಶದಲ್ಲಿ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ರಾಜ್ಯಾದ್ಯಂತ ಸುಮಾರು 7 ಲಕ್ಷ ಸರ್ಕಾರಿ ಹುದ್ದೆಗಳಿವೆ. ಅದರಲ್ಲಿ 5 ಲಕ್ಷ ಹುದ್ದೆಗಳು ಭರ್ತಿಯಾಗಿವೆ. ಬಾಕಿ 2 ಲಕ್ಷ ಹುದ್ದೆಗಳು ಖಾಲಿಯಿದ್ದು, ಹೊರಗುತ್ತಿಗೆ ಆಧಾರದಲ್ಲಿ ನೌಕರರನ್ನು ಭರ್ತಿ ಮಾಡಲಾಗಿದೆ. ಆದರೆ, ಹೊರಗುತ್ತಿಗೆ ನೌಕರರನ್ನು ಭರ್ತಿ ಮಾಡುವಾಗ ಯಾವುದೇ ಮೀಸಲಾತಿ ಅನ್ವಯ ಮಾಡದಿರುವ ಹಿನ್ನೆಲೆಯಲ್ಲಿ ಸಾಮಾಜಿಕ ನ್ಯಾಯ ಲಭ್ಯವಾಗುತ್ತಿಲ್ಲ. ಆದ್ದರಿಂದ, ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರನ್ನು ತೆಗೆದುಕೊಳ್ಳುವಾಗಲೂ ಮೀಸಲಾತಿಯನ್ನು ಜಾರಗೊಳಿಸಲು ಚಿಂತನೆ ಮಾಡಲಾಗುತ್ತಿದೆ ಎಂದು ತಿಳಿಸಿದರು. 

ಗೃಹಜ್ಯೋತಿ ಅರ್ಜಿ ಸ್ಥಿತಿ ತಿಳಿಯಲು ಪ್ರತ್ಯೇಕ ಲಿಂಕ್‌ ಬಿಡುಗಡೆ: ಮೊಬೈಲ್‌ನಲ್ಲೇ ಪರಿಶೀಲನೆ ಮಾಡಿ

ಶೀಘ್ರ ರಾಜ್ಯದಲ್ಲಿ 2 ಲಕ್ಷ ಉದ್ಯೋಗಗಳ ಭರ್ತಿ: ಹೊರಗುತ್ತಿಗೆ ಉದ್ಯೋಗಗಳಿಗೆ ಕಡಿವಾಣ ಹಾಕಬೇಕಿದರೆ, ಖಾಲಿ ಇರೋ ಹುದ್ದೆ ತುಂಬೋದು ಮುಖ್ಯವಾಗಿದೆ. ಕಾಂಟ್ರಾಕ್ಟ್ ಬೇಸಿಸ್ ತುಂಬುವಾಗ ರಿಸರ್ವೇಷನ್ ಇಲ್ಲ. ರಿಸರ್ವೇಷನ್ ಇಲ್ಲದಿದ್ರೆ, ಸಾಮಾಜಿಕ ನ್ಯಾಯ ಇರುವುದಿಲ್ಲ. ನಮ್ಮ ಪ್ರಣಾಳಿಕೆಯಲ್ಲಿ ಕೂಡ ಖಾಲಿ ಹುದ್ದೆ ಭರ್ತಿ ಮಾಡೋದಾಗಿ ಹೇಳಿದ್ದೇವೆ. ಹೆಚ್ಚಾಗಿ ಶಿಕ್ಷಕರು, ಪೊಲೀಸ್, ಆರೋಗ್ಯ ಇಲಾಖೆಯಲ್ಲಿ ಖಾಲಿ ಇವೆ‌. ಅದನ್ನ ಹಂತ ಹಂತವಾಗಿ ತುಂಬುತ್ತೇವೆ. ಸರ್ಕಾರಿ ನೇಮಕಾತಿ ಆಗುವವರೆಗೂ ಹೊರಗುತ್ತಿಗೆಗೂ ಮೀಸಲಾತಿ ತರುವ ಚಿಂತನೆ ಇದೆ ಎಂದು ಹೇಳಿದರು.

ಎಲ್ಲಾ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಬಗ್ಗೆ (RTE) ನಿಮ್ಮ ಅಭಿಪ್ರಾಯವೇನು? 
ಸಿಎಂ ಸಿದ್ದರಾಮಯ್ಯ:  ನಾವು ಅಧಿಕಾರಕ್ಕೆ ಬರುವ ಮೊದಲು ಪಠ್ಯ ತಿರುಚಿದ್ರು. ಅದನ್ನ ತಾತ್ಕಾಲಿಕವಾಗಿ ಭೋದನೆ ಮಾಡದಿರಲು ಸೂಚಿಸಿದ್ದೇನೆ. ಒಂದು ಕಮಿಟಿ ಮಾಡಿದ್ದೇನೆ, ಅದನ್ನ ವಿದ್ಯಾರ್ಥಿಗಳು ಹೆಚ್ಚು ಜಾತಿವಾದಿಗಳು ಆಗ್ತಿದ್ದಾರೆ. ಮೌಡ್ಯಾಚರಣೆಗೆ ಒಳಗಾಗ್ತಿದ್ದಾರೆ. ಶಿಕ್ಷೆ ಮೂಲಕ ಎಲ್ಲವನ್ನೂ ಸರಿಪಡಿಸಲು ಸಾದ್ಯವಿಲ್ಲ. ಜಾತ್ಯಾತೀತ ರಾಷ್ಟ್ರ ಮಾಡಬೇಕಿದೆ. ಜಾತಿ ಸೋಂಕು ತಗುಲಿದ್ರೆ, ಜಾತ್ಯಾತೀತ ರಾಷ್ಟ್ರ ಮಾಡಲು ಸಾಧ್ಯವಿಲ್ಲ. ಬೋಧಕರು ಜಾತ್ಯಾತೀತರಾಗಿರ್ತಾರೆ ಅಂತ ಹೇಳಲು ಸಾಧ್ಯವಿಲ್ಲ. ಬೋಧಕರೇ ಜಾತ್ಯಾತೀತ ಅಲ್ಲದಿದ್ರೆ ಮಕ್ಕಳಿಗೆ ಹೇಗೆ ಶಿಕ್ಷಣ ನೀಡಲು ಸಾಧ್ಯ. ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಂಡ್ರೆ, ಜಾತ್ಯಾತೀತ ಸಾಧ್ಯವಿಲ್ಲ. ಪಠ್ಯಪುಸ್ತಕ ಹಾಗೂ ಪಠ್ಯೇತರ ಚಟುವಟಿಕೆಗಳ ಮೂಲಕ ಸಾಮಾಜಿಕ ಜವಾಬ್ದಾರಿಯುತ ಮಕ್ಕಳ ತಯಾರಿ ಮಾಡಲು ಸಾಧ್ಯ ಎಂದರು.

ಬೆಳಗಾವಿ ಜೈನಮುನಿಗೆ ಕರೆಂಟ್‌ ಶಾಕ್‌ ಕೊಟ್ಟು ಕೊಲೆ: ದೇಹ ತುಂಡರಿಸಿ ಗದ್ದೆಗೆ ಬೀಸಾಡಿದರು

ದಲಿತರ ಮೇಲಿನ ದೌರ್ಜನ್ಯದಿಂದ ಸರ್ವ ಜನಾಂಗದ ಶಾಂತಿಯ ತೋಟಕ್ಕೆ ಧಕ್ಕೆ ಹೆಚ್ಚಾಗುತ್ತಿದೆ? 
ಸಿಎಂ ಸಿದ್ದರಾಮಯ್ಯ:  ಶಾಂತಿಯ ತೋಟವಾಗಬೇಕು ಅಂದರೆ ಸಮಾನ ಸಮಾಜ ಸೃಷ್ಟಿಯಾಗ ಬೇಕು. ಕಾನೂನು ಕೈಗೆತ್ತಿಕೊಳ್ಳಬಾರದು. ಹಿಂದಿನ ಸರ್ಕಾರದ ಅವಧಿಯಲ್ಲಿ ಮಾರಲ್ ಪೋಲಿಸಿಂಗ್ ನಡೆದಿತ್ತು. ಅದು ಮಾರಲ್ ಪೋಲಿಸಿಂಗ್ ಅಲ್ಲ ಇಮ್ಮಾರಲ್ ಪೋಲಿಸಿಂಗ್ ಆಗಿದೆ. ನಾನು ಈಗಾಗಲೇ ಈ ವಿಚಾರದಲ್ಲಿ ಅದನ್ನು ಸ್ಪಷ್ಟ ಪಡಿಸಿದ್ದೇನೆ. ನೈತಿಕ ಪೋಲಿಸ್‌ಗಿರಿಗೆ ಕಠಿಣ ಕ್ರಮ ಕೈಗೊಳ್ಳುತ್ತೇವೆ. ರಾಷ್ಟ್ರಕವಿ ಕುವೆಂಪು ಹೇಳಿದ ಸರ್ವ ಜನಾಂಗದ ಶಾಂತಿಯ ತೋಟ ಸೃಷ್ಟಿಸಲು ಪ್ರಯತ್ನಿಸುತ್ತೇವೆ ಎಂದರು. 

click me!