CESCOM 2019 Selection Result: ಜೂನಿಯರ್ ಪವರ್‌ಮ್ಯಾನ್‌ ಹುದ್ದೆಗಳಿಗೆ ಆಯ್ಕೆಯಾದವರ ಪಟ್ಟಿ ಬಿಡುಗಡೆ

By Suvarna News  |  First Published Jan 8, 2022, 1:57 PM IST

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ 426 ಕಿರಿಯ ಪವರ್‌ಮ್ಯಾನ್‌ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ, ಅಂತಿಮ ಆಯ್ಕೆಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. 


ಮೈಸೂರು (ಜ.8): ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ 426 ಜೂನಿಯರ್ ಪವರ್‌ಮ್ಯಾನ್‌ (Junior Powerman) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ, ಅಂತಿಮ ಆಯ್ಕೆಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ, ನೇಮಕ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಅಭ್ಯರ್ಥಿಗಳು ಅಂತಿಮ ಆಯ್ಕೆಪಟ್ಟಿಯನ್ನು https://cescmysore.karnataka.gov.in/ ಗೆ ಭೇಟಿ ನೀಡಿ ಚೆಕ್‌ ಮಾಡಬಹುದು. 426 ಜೂನಿಯರ್ ಪವರ್‌ಮ್ಯಾನ್‌ ಹುದ್ದೆಗಳಿಗೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತವು (Chamundeshwari Electricity Supply Corporation mysore -CESCOM) 2019 ರ ಫೆಬ್ರವರಿಯಲ್ಲಿ ಅಧಿಸೂಚನೆ ಪ್ರಕಟಿಸಿತ್ತು. 2019ರ ಅಕ್ಟೋಬರ್ 21 ರಿಂದ 25  ಮತ್ತು ಜೂನ್ 30 , 2020ರಲ್ಲಿ  ಸದರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಪರೀಕ್ಷೆ ನಡೆಲಾಗಿತ್ತು. ಈಗ ಫಲಿತಾಂಶ ಪ್ರಕಟಗೊಂಡಿದೆ.

ಅಂತಿಮ ಆಯ್ಕೆಪಟ್ಟಿಯಲ್ಲಿ ಅಭ್ಯರ್ಥಿಗಳ ಅರ್ಜಿ ಸಂಖ್ಯೆ, ಹೆಸರು, ತಂದೆಯ ಹೆಸರು, ಆಯ್ಕೆಯಾದ ಪ್ರವರ್ಗ, ನೇಮಕ ಪರೀಕ್ಷೆಗಳಲ್ಲಿ ಗಳಿಸಿದ ಅಂಕ, ಶೇಕಡವಾರು ಅಂಕಗಳನ್ನು ಅಂತಿಮ ಆಯ್ಕೆಪಟ್ಟಿಯಲ್ಲಿ ನೀಡಲಾಗಿದೆ. ಪರಿಶೀಲಿಸಲು ಅಭ್ಯರ್ಥಿಗಳು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ ಅಧಿಕೃತ ವೆಬ್‌ಸೈಟ್ https://cescmysore.karnataka.gov.in ಗೆ ಭೇಟಿ ನೀಡಿ. 

Tap to resize

Latest Videos

undefined

KSCA Recruitment 2022: ರಾಜ್ಯ ಕ್ರಿಕೆಟ್ ಸಂಸ್ಥೆಯಲ್ಲಿನ ವಿವಿಧ ಹುದ್ದೆಗಳಿಗೆ ಇಂದೇ ಅರ್ಜಿ ಸಲ್ಲಿಸಿ

ಬೆಂಗಳೂರಿನಲ್ಲಿ ಪ್ರಿನ್ಸಿಪಾಲ್ ಹುದ್ದೆಗೆ ಅರ್ಜಿ ಆಹ್ವಾನಿಸಿದ HAL: ಬೆಂಗಳೂರಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಹಿಂದೂಸ್ತಾನ್ ಏರೋನಾಟಿಕ್ಸ್ ಲಿ. (Hindustan Aeronautics Limited-HAL) ಕಂಪನಿಯು ಖಾಲಿ ಇರುವ ಎರಡು ಪ್ರಿನ್ಸಿಪಾಲ್  ಹುದ್ದೆಗಳನ್ನು ಭರ್ತಿ ಮಾಡಲು ಆಫ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಜನವರಿ 29, 2022ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ. ನೇಮಕಾತಿ ಬಗೆಗಿನ ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್ https://hal-india.co.in/ ಗೆ ಭೇಟಿ ನೀಡಬಹುದು. ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಶೈಕ್ಷಣಿಕ ವಿದ್ಯಾರ್ಹತೆ: ಹಿಂದೂಸ್ತಾನ್ ಏರೋನಾಟಿಕ್ಸ್​​ ಲಿಮಿಟೆಡ್​ನಲ್ಲಿ ಖಾಲಿ ಇರುವ ಪ್ರಿನ್ಸಿಪಾಲ್​ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕಡ್ಡಾಯವಾಗಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು.

ಅನುಭವ: ಅಭ್ಯರ್ಥಿಗಳು ಕನಿಷ್ಠ 15 ವರ್ಷಗಳ ಬೋಧನಾ ಅನುಭವವನ್ನು ಹೊಂದಿರಬೇಕು. ಅದರಲ್ಲಿ 5 ವರ್ಷಗಳ PGT ಯಾಗಿ ಬೋಧನಾ ಅನುಭವ ಮತ್ತು 3 ವರ್ಷಗಳ ಆಡಳಿತಾತ್ಮಕ ಅನುಭವ ಇರಬೇಕು. ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ಉಪ-ಪ್ರಾಂಶುಪಾಲರು / ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿರಬೇಕು.

ಆಯ್ಕೆ ಪ್ರಕ್ರಿಯೆ: ಹಿಂದೂಸ್ತಾನ್ ಏರೋನಾಟಿಕ್ಸ್​​ ಲಿಮಿಟೆಡ್​ನಲ್ಲಿ ಖಾಲಿ ಇರುವ ಪ್ರಿನ್ಸಿಪಾಲ್​ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. 

KFD FG Exam Result Announced: ಫಾರೆಸ್ಟ್‌ ಗಾರ್ಡ್‌ ಹುದ್ದೆ ಲಿಖಿತ ಪರೀಕ್ಷೆಯ ಫಲಿತಾಂಶ ಬಿಡುಗಡೆ

ವೇತನ ಮತ್ತು ಉದ್ಯೋಗದ ಸ್ಥಳ: ಹಿಂದೂಸ್ತಾನ್ ಏರೋನಾಟಿಕ್ಸ್​​ ಲಿಮಿಟೆಡ್​ನಲ್ಲಿ ಖಾಲಿ ಇರುವ ಪ್ರಿನ್ಸಿಪಾಲ್​ ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿಗೆ ಮಾಸಿಕ 78,800 ರೂ ವೇತನ ನೀಡಲಾಗುತ್ತದೆ. ಮತ್ತು ಪ್ರಿನ್ಸಿಪಾಲ್​ ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿಗೆ ಬೆಂಗಳೂರಿನಲ್ಲಿ ಉದ್ಯೋಗ ನೀಡಲಾಗುತ್ತದೆ.

ವಯೋಮಿತಿ ಮತ್ತು ಅರ್ಜಿ ಶುಲ್ಕ: ಪ್ರಿನ್ಸಿಪಾಲ್​ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು 40-50 ವರ್ಷದೊಳಗಿರಬೇಕು. ಪ್ರಿನ್ಸಿಪಾಲ್​ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 200 ರೂ. ಅರ್ಜಿ ಶುಲ್ಕ ಪಾವತಿಸಬೇಕು. ಡಿಮ್ಯಾಂಡ್​ ಡ್ರಾಫ್ಟ್​ ಮೂಲಕ ಪಾವತಿಸಬೇಕು.

ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕಾದ ವಿಳಾಸ:
ಕಾರ್ಯದರ್ಶಿ
HAL ಶಿಕ್ಷಣ ಸಮಿತಿ
C o. HAL ಸೌಲಭ್ಯಗಳ ನಿರ್ವಹಣಾ ವಿಭಾಗ
ವಿಮಾನಪುರ ಅಂಚೆ
ಬೆಂಗಳೂರು - 560017

click me!