ಆಗಸ್ಟ್ 8ಕ್ಕೆ CAPF ಅಸಿಸ್ಟಂಟ್ ಕಮಾಂಡೆಂಟ್ಸ್ ಎಕ್ಸಾಂ: ಅಡ್ಮಿಟ್ ಕಾರ್ಡ್ ಡೌನ್‌ಲೋಡ್ ಮಾಡಿಕೊಳ್ಳಿ

By Suvarna NewsFirst Published Jul 17, 2021, 12:28 PM IST
Highlights

ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯಲ್ಲಿ ಸಹಾಯಕ ಕಮಾಂಡೆಂಟ್ಸ್ ನೇಮಕಾತಿಗೆ ಸಂಬಧಿಸಿದಂತೆ ಕೇಂದ್ರ ಲೋಕಸೇವಾ ಆಯೋಗವು ಆಗಸ್ಟ್ 8ರಂದು ಪರೀಕ್ಷೆ ನಡೆಸಲಿದೆ. ಈ ಪರೀಕ್ಷೆಗೆ ಹಾಜರಲಾಗಲಿರುವ ಅಭ್ಯರ್ಥಿಗಳು ಯುಪಿಎಸ್‌ಸಿ ಜಾಲತಾಣದಿಂದ ಅಡ್ಮಿಟ್‌ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಆಗಸ್ಟ್ 8 ರಂದು ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (ಸಿಎಪಿಎಫ್) ಸಹಾಯಕ ಕಮಾಂಡೆಂಟ್ಸ್ (ಎಸಿ)ನೇಮಕಾತಿಗೆ  ಪರೀಕ್ಷೆಗಳನ್ನು ನಡೆಸಲಿದೆ. ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಅನುಕೂಲಕ್ಕಾಗಿ ಯುಪಿಎಸ್ಸಿ, ಇ-ಅಡ್ಮಿಟ್ ಕಾರ್ಡ್ ಅನ್ನು ಬಿಡುಗಡೆ ಮಾಡಿದೆ. ಅಧಿಕೃತ ವೆಬ್‌ಸೈಟ್‌ upsc.gov.in ನಲ್ಲಿ ಇ-ಅಡ್ಮಿಟ್ ಕಾರ್ಡ್ ಗಳನ್ನು ಅಪ್‌ಲೋಡ್ ಮಾಡಿದೆ. ಪರೀಕ್ಷೆ ಬರೆಯಲು ಸಜ್ಜಾಗಿರುವ ಅಭ್ಯರ್ಥಿಗಳು, ವೆಬ್‌ಸೈಟ್‌ಗೆ ಭೇಟಿ ನೀಡಿ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿ ಪ್ರಿಂಟ್ ತೆಗೆದಿಟ್ಟುಕೊಳ್ಳಬೇಕು.

ಇ-ಅಡ್ಮಿಟ್ ಕಾರ್ಡ್‌ನಲ್ಲಿ ಯಾವುದೇ ಸಮಸ್ಯೆಗಳಿದ್ದಲ್ಲಿ ಈ ವಿಷಯದಲ್ಲಿ ನಿರ್ಧಾರ ತೆಗೆದುಕೊಳ್ಳಲು ತಕ್ಷಣವೇ ಆಯೋಗಕ್ಕೆ ಇಮೇಲ್ ಮೂಲಕ (ಇಮೇಲ್ ಐಡಿ soe23-upsc@gov.in ನಲ್ಲಿ) ತಿಳಿಸಬಹುದು.

7035 ಹುದ್ದೆಗಳಿಗೆ ಎಸ್ಎಸ್‌ಸಿ ಸಿಜಿಎಲ್ ನೇಮಕಾತಿ: ಆಗಸ್ಟ್ 13ರಿಂದ 24ರವರೆಗೆ ಪರೀಕ್ಷೆ

ಅಭ್ಯರ್ಥಿಗಳು, ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (ಸಹಾಯಕ ಕಮಾಂಡೆಂಟ್ಸ್) ಪರೀಕ್ಷೆಯ ಅಂತಿಮ ಫಲಿತಾಂಶ ಘೋಷಿಸುವವರೆಗೆ ಇ-ಅಡ್ಮಿಟ್ ಕಾರ್ಡ್ ಅನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು. ಪರೀಕ್ಷೆಗೆ ಯಾವುದೇ ಪೇಪರ್ ಅಡ್ಮಿಟ್ ಕಾರ್ಡ್ ನೀಡಲಾಗುವುದಿಲ್ಲ.

ಪರೀಕ್ಷೆಯ ನಿಗದಿತ ಪ್ರಾರಂಭಕ್ಕೆ 10 ನಿಮಿಷಗಳ ಮೊದಲು ಅಭ್ಯರ್ಥಿಗಳು ಪರೀಕ್ಷಾ ಕೇಂದ್ರ ಪ್ರವೇಶಿಸಬೇಕು. ಬೆಳಗಿನ ಸೆಷನ್ ಪರೀಕ್ಷೆಗೆ 9.50 ರೊಳಗೆ ಅಭ್ಯರ್ಥಿಗಳು ಹಾಜರಿರಬೇಕು. ಎರಡನೇ ಸೆಷನ್ ಪರೀಕ್ಷೆ ಗೆ ಹಾಜರಾಗಲು ಮಧ್ಯಾಹ್ನ 1:50 ರೊಳಗೆ ಪರೀಕ್ಷಾ ಕೇಂದ್ರವನ್ನು ತಲುಪಬೇಕು. ತಡವಾಗಿ ಪರೀಕ್ಷಾ ಸ್ಥಳಕ್ಕೆ ಪ್ರವೇಶಿಸಲು ಯಾವುದೇ ಅಭ್ಯರ್ಥಿಯನ್ನು ಅನುಮತಿಸಲಾಗುವುದಿಲ್ಲ. 

ಇ ಅಡ್ಮಿಟ್ ಕಾರ್ಡ್‌ನಲ್ಲಿ ಉಲ್ಲೇಖಿಸಲಾದ ಪರೀಕ್ಷಾ ಸ್ಥಳವನ್ನು ಹೊರತುಪಡಿಸಿ ಬೇರೆ ಯಾವುದೇ ಪರೀಕ್ಷಾ ಸ್ಥಳದಲ್ಲಿ ಹಾಜರಾಗಲು ಅಭ್ಯರ್ಥಿಗಳು ಅನುಮತಿಸುವುದಿಲ್ಲ ಎಂಬುದನ್ನು ಸಹ ಅಭ್ಯರ್ಥಿಗಳು ಗಮನಿಸಬೇಕು.

ಅಭ್ಯರ್ಥಿಗಳು ಬ್ಲ್ಯಾಕ್ ಬಾಲ್ ಪಾಯಿಂಟ್ ಪೆನ್ ಅನ್ನು ತರಲು ಸೂಚಿಸಲಾಗಿದೆ. ಏಕೆಂದರೆ ಅಭ್ಯರ್ಥಿಗಳು ಒಎಂಆರ್ ಉತ್ತರ ಪತ್ರಿಕೆಗಳು ಮತ್ತು ಹಾಜರಾತಿ ಪಟ್ಟಿಯನ್ನು ಬ್ಲ್ಯಾಕ್ ಬಾಲ್ ಪಾಯಿಂಟ್ ಪೆನ್ನೊಂದಿಗೆ ಮಾತ್ರ ಭರ್ತಿ ಮಾಡಬೇಕಾಗುತ್ತದೆ. ಅಭ್ಯರ್ಥಿಗಳು ತಮ್ಮ ಇ-ಅಡ್ಮಿಟ್ ಕಾರ್ಡ್‌ನ ಮುದ್ರಣ ಪ್ರತಿಯನ್ನು ಪರೀಕ್ಷಾ ಕೇಂದ್ರದಲ್ಲಿ ತೋರಿಸಬೇಕು. ಅಭ್ಯರ್ಥಿಗಳು ಇ-ಅಡ್ಮಿಟ್ ಕಾರ್ಡ್ ಜೊತೆಗೆ  ಫೋಟೋ ಐಡಿ ಕಾರ್ಡ್‌ ನಮೂದಿಸಬೇಕಾಗುತ್ತದೆ.

ಸಂಶೋಧನಾ ಸಹಾಯಕರು, ವಿಜ್ಞಾನಿಗಳ ನೇಮಕಾತಿ: 1,77,500 ರೂ.ವೇತನ!

ಸಿಎಪಿಎಫ್‌ಗಾಗಿ ಯುಪಿಎಸ್‌ಸಿ ನಡೆಸುವ  ಪರೀಕ್ಷೆಯು ಲಿಖಿತ ರೂಪದಲ್ಲಿದ್ದು ಎರಡು ಪತ್ರಿಕೆಗಳನ್ನು ಒಳಗೊಂಡಿರಲಿದೆ. ಪೇಪರ್- 1 ಬಹು ಆಯ್ಕೆ ಪ್ರಶ್ನೆಗಳ (ಎಂಸಿಕ್ಯೂ) ಆಧಾರದ ಮೇಲೆ ಅಭ್ಯರ್ಥಿಗಳ ಸಾಮಾನ್ಯ ಸಾಮರ್ಥ್ಯ ಮತ್ತು ಬುದ್ಧಿವಂತಿಕೆಯನ್ನು ಪರೀಕ್ಷಿಸಲಾಗುತ್ತದೆ. ಪೇಪರ್- 2 ವಿವರಣಾತ್ಮಕ ಪ್ರಶ್ನೆ ಹೊಂದಿದ್ದು, ಅಭ್ಯರ್ಥಿಯ ಭಾಷಾ ಪ್ರಾವೀಣ್ಯತೆಯನ್ನು ಪರೀಕ್ಷಿಸುತ್ತದೆ.

ಪೇಪರ್- 1ರಲ್ಲಿ 250 ಅಂಕಗಳನ್ನು ಹೊಂದಿರುವ 200 ಪ್ರಶ್ನೆಗಳನ್ನು ಪೂರ್ಣಗೊಳಿಸಲು ಅಭ್ಯರ್ಥಿಗಳಿಗೆ ಒಟ್ಟು 2 ಗಂಟೆ ಅವಧಿ ಕಾಲಾವಕಾಶ ಇರುತ್ತದೆ. ಹಾಗೇ 200 ಅಂಕಗಳನ್ನು ಹೊಂದಿರುವ ಪೇಪರ್- 2 ರಲ್ಲಿ 6 ವಿವರಣಾತ್ಮಕ ಪ್ರಕಾರದ ಪ್ರಶ್ನೆಗಳನ್ನು ಪೂರ್ಣಗೊಳಿಸಲು 3 ಗಂಟೆ ಸಮಯ ಇರುತ್ತದೆ.

ಸಾಂವಿಧಾನಿಕ ಮಂಡಳಿಯಾದ ಲೋಕಸೇವಾ ಆಯೋಗವು (ಯುಪಿಎಸ್‌ಸಿ), ಗಡಿ ಭದ್ರತಾ ಪಡೆ (ಬಿಎಸ್‌ಎಫ್), ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್), ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ), ಕೇಂದ್ರ ಮೀಸಲು ಪೊಲೀಸ್ ಸಹಾಯಕ ಕಮಾಂಡೆಂಟ್‌ಗಳ (ಗ್ರೂಪ್ ಎ), ಫೋರ್ಸ್ (ಸಿಆರ್ಪಿಎಫ್), ಮತ್ತು ಸಶಸ್ತ್ರ ಸೀಮಾ ಪಡೆ (ಎಸ್‌ಎಸ್‌ಬಿ) ಅಧಿಕಾರಿಗಳ ಅರ್ಹತೆ ಆಧಾರಿತ ಆಯ್ಕೆಗಾಗಿ ಸಿಎಪಿಎಫ್ ಪರೀಕ್ಷೆಯನ್ನು ನಡೆಸುತ್ತದೆ. 

458 ಹುದ್ದೆ ನೇಮಕಾತಿ ಪ್ರಕ್ರಿಯೆ ಆರಂಭಿಸಿದ ರಕ್ಷಣಾ ಸಚಿವಾಲಯ, ಅರ್ಜಿ ಹಾಕಿ

ಈ ನೇಮಕಾತಿ ಡ್ರೈವ್‌ನಲ್ಲಿ ಬಿಎಸ್‌ಎಫ್‌ಗೆ 35, ಸಿಆರ್‌ಪಿಎಫ್‌ಗೆ 36, ಸಿಐಎಸ್‌ಎಫ್‌ಗೆ 67, ಐಟಿಬಿಪಿಗೆ 20 ಮತ್ತು ಎಸ್‌ಎಸ್‌ಬಿಗೆ 1 ಸೇರಿದಂತೆ ಒಟ್ಟು 159 ಹುದ್ದೆಗಳನ್ನು ನೇಮಕ ಮಾಡಿ ಕೊಳ್ಳಲಾಗುತ್ತಿದೆ.

click me!