7035 ಹುದ್ದೆಗಳಿಗೆ ಎಸ್ಎಸ್‌ಸಿ ಸಿಜಿಎಲ್ ನೇಮಕಾತಿ: ಆಗಸ್ಟ್ 13ರಿಂದ 24ರವರೆಗೆ ಪರೀಕ್ಷೆ

By Suvarna News  |  First Published Jul 16, 2021, 4:24 PM IST

ಕೇಂದ್ರ ಸಿಬ್ಬಂದಿ ನೇಮಕ ಆಯೋಗವು ಕಂಬೈನ್ಡ್ ಗ್ರಾಜ್ಯುಯೇಟ್ ಲೆವಲ್ ಎಕ್ಸಾಮ್ ಮೂಲಕ ಕೇಂದ್ರ ಸರ್ಕಾರದ ನಾನಾ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿಯನ್ನು ಮಾಡಿಕೊಳ್ಳುತ್ತಿದೆ. ಈ ಸಂಬಂಧ ಕಳೆದ ವರ್ಷವೇ ಅಧಿಸೂಚನೆ ಹೊರಡಿಸಲಾಗಿತ್ತು. ಇದೀಗ ಅದಕ್ಕೆ ಸಂಬಂಧಿಸಿದ ಸಿಜಿಎಲ್ ಎಕ್ಸಾಂ ಪರೀಕ್ಷೆಯ ದಿನಾಂಕವನ್ನು ನಿಗದಿಪಡಿಸಲಾಗಿದೆ.


ಸಿಬ್ಬಂದಿ ನೇಮಕ ಆಯೋಗವು (ಎಸ್ ಎಸ್ ಸಿ), ಕೇಂದ್ರ ಸರ್ಕಾರದ ನಾನಾ ಸಚಿವಾಲಯಗಳು, ಇಲಾಖೆಗಳು, ಸಂಸ್ಥೆಗಳಲ್ಲಿ  ಖಾಲಿಯಿರುವ ಬಿ ಮತ್ತು ಸಿ ಗ್ರೂಪ್ ಹುದ್ದೆಗಳನ್ನು ಭರ್ತಿ ಮಾಡಲು ಮುಂದಾಗಿದೆ. ಎಸ್‌ಎಸ್‌ಸಿ ಸಿಜಿಎಲ್ 2020-21 ನೇಮಕಾತಿಯಡಿ ಒಟ್ಟು 7035 ಹುದ್ದೆಗಳಿಗೆ ಈ ನೇಮಕಾತಿಯನ್ನು ಮಾಡಿಕೊಳ್ಳುವುದಾಗಿ ಆಯೋಗವು ಪ್ರಕಟಿಸಿದೆ. ಸಂಬಂಧಿಸಿದ ಪರೀಕ್ಷೆಗಳನ್ನು ಆಗಸ್ಟ್ 13ರಿಂದ 24ರ ನಡುವೆ ನಡೆಸಲು ಆಯೋಗ ನಿರ್ಧರಿಸಿದೆ.

ಸಂಶೋಧನಾ ಸಹಾಯಕರು, ವಿಜ್ಞಾನಿಗಳ ನೇಮಕಾತಿ: 1,77,500 ರೂ.ವೇತನ!

Tap to resize

Latest Videos

undefined

ಕಂಬೈನ್ಡ್ ಗ್ರಾಜ್ಯುಯೇಟ್ ಲೆವೆಲ್ ಎಕ್ಸಾಂ ಎಸ್‌ಎಸ್‌ಸಿ ಸಿಜಿಎಲ್ ನೇಮಕಾತಿ 2020ರ  ಮೂಲಕ ಈ ನೇಮಕಾತಿ ಡ್ರೈವ್  ನಡೆಯಲಿದೆ. ಕೇಂದ್ರ ಸರ್ಕಾರ ಮತ್ತು ಇತರ ಸರ್ಕಾರಿ ಇಲಾಖೆಗಳ ವಿವಿಧ ಸಚಿವಾಲಯಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ

2019 ಡಿಸೆಂಬರ್‌ನಲ್ಲಿ ಎಸ್ಎಸ್‌ಸಿ ಸಿಜಿಎಲ್ 2020 ಅಧಿಸೂಚನೆಯನ್ನು ಬಿಡುಗಡೆ ಮಾಡಿ, ಖಾಲಿ ಇರುವ 60 ಸಾವಿರ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಹೇಳಿಕೊಂಡಿತ್ತು. 2021ರ ಜುಲೈನಲ್ಲಿ ಮತ್ತೆ ಆಯೋಗವು ಖಾಲಿ ಇರುವ ಹುದ್ದೆಗಳ ಅಪ್‌ಡೇಟ್ ಲಿಸ್ಟ್ ಬಿಡುಗಡೆ ಮಾಡಿ, 7035 ಹುದ್ದೆಗಳಿಗೆ ಭರ್ಟಿ ಮಾಡಿಕೊಳ್ಳುವುದಾಗಿ ತಿಳಿಸಿತ್ತು. ಈ ಹಿನ್ನೆಲೆಯಲ್ಲೇ ಇದೀಗ ಆಯೋಗ ಪರೀಕ್ಷೆಗೆ ದಿನಾಂಕವನ್ನು ನಿಗದಿ ಪಡಿಸಿದೆ. 

ಎಸ್‌ಎಸ್‌ಸಿ ಸಿಜಿಎಲ್ 2020-21 ನೇಮಕಾತಿಗೆ ನಾಲ್ಕು ಹಂತದ ಪರೀಕ್ಷೆಗಳಿವೆ. ಎಲ್ಲ ಹಂತದಲ್ಲಿ ಉತ್ತಮ ಸಾಮರ್ಥ್ಯ ತೋರಿಸಿದವರಿಗೆ ಮಾತ್ರ ಈ ಹುದ್ದೆಗಳ ಭಾಗ್ಯ ಸಿಗಲಿದೆ. ಮೊದಲ ಹಂತದ  ಪರೀಕ್ಷೆಯಲ್ಲಿ ಶಾರ್ಟ್‌ಲಿಸ್ಟ್ ಆದ ಅಭ್ಯರ್ಥಿಗಳು ಹಂತ -2 ಪರೀಕ್ಷೆಗೆ ಹಾಜರಾಗಬಹುದು. ಇದರಲ್ಲಿ ನಾಲ್ಕು ಪತ್ರಿಕೆಗಳಿದ್ದು, ಅದರಲ್ಲಿ ಪೇಪರ್ 1 ಮತ್ತು 2 ಕಡ್ಡಾಯವಾಗಿದೆ. ಎಸ್‌ಎಸ್‌ಸಿ ಸಿಜಿಎಲ್ ಶ್ರೇಣಿ -2 ಪರೀಕ್ಷೆಯು ಆನ್‌ಲೈನ್ ಮೋಡ್ ಮೂಲಕ ನಡೆಯಲಿದ್ದು, ವಸ್ತುನಿಷ್ಠ ಮಾದರಿಯ ಪರೀಕ್ಷೆಯಾಗಿರುತ್ತದೆ. 

458 ಹುದ್ದೆ ನೇಮಕಾತಿ ಪ್ರಕ್ರಿಯೆ ಆರಂಭಿಸಿದ ರಕ್ಷಣಾ ಸಚಿವಾಲಯ, ಅರ್ಜಿ ಹಾಕಿ

ಶ್ರೇಣಿ -3 ಪರೀಕ್ಷೆಯು ಪೆನ್-ಅಂಡ್-ಪೇಪರ್ ಮೋಡ್‌ನಲ್ಲಿ ಇರಲಿದ್ದು, ವಿವರಣಾತ್ಮಕವಾಗಿ ಬರೆಯಬೇಕಾಗುತ್ತದೆ. ಈ ಪರೀಕ್ಷೆಯಲ್ಲಿ ಅಭ್ಯರ್ಥಿಗಳ ಭಾಷಾ ಪ್ರಾವೀಣ್ಯತೆ, ವ್ಯಾಕರಣ ಜ್ಞಾನ, ಶಬ್ದಕೋಶ ಬಳಕೆ ಮತ್ತು ಬರವಣಿಗೆಯ ಕೌಶಲ್ಯವನ್ನು ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಪರೀಕ್ಷಿಸಲಾಗುತ್ತದೆ. ಹಾಗೇ ಶ್ರೇಣಿ -4 ಪರೀಕ್ಷೆಯು ಕೆಲವು ಸರ್ಕಾರಿ ಹುದ್ದೆಗಳು ಮತ್ತು ಡಾಕ್ಯುಮೆಂಟ್ ಪರಿಶೀಲನಾ ಕಾರ್ಯವಿಧಾನಕ್ಕೆ ಅಗತ್ಯವಾದ ಕೌಶಲ್ಯ ಪರೀಕ್ಷೆಗಳನ್ನು ಒಳಗೊಂಡಿರುತ್ತದೆ. DEST (ಡೇಟಾ ಎಂಟ್ರಿ ಸ್ಪೀಡ್ ಟೆಸ್ಟ್), ಸಿಪಿಟಿ (ಕಂಪ್ಯೂಟರ್ ಪ್ರಾವೀಣ್ಯತೆ ಪರೀಕ್ಷೆ) ಮತ್ತು ಡಾಕ್ಯುಮೆಂಟ್ ಪರಿಶೀಲನೆ ನಡೆಸಲಾಗುತ್ತದೆ.

ಸಿಎಜಿ ಇಲಾಖೆಯಲ್ಲಿ  ಅಸಿಸ್ಟೆಂಟ್ ಆಡಿಟ್ ಆಫೀಸರ್, ಅಸಿಸ್ಟೆಂಟ್ ಅಕೌಂಟ್ ಆಫೀಸರ್  ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಪೇ ಲೆವೆಲ್-8ರಡಿ ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ  47,600 ರಿಂದ 1,51,000 ರೂ.ವರೆಗೆ ವೇತನ ಸಿಗಲಿದೆ. ಅದೇ ರೀತಿ ರೇಲ್ವೆ ಇಲಾಖೆ, ವಿದೇಶಾಂಗ ಇಲಾಖೆ ಸೇರಿದಂತೆ ವಿವಿಧ ಸಚಿವಾಲಯಗಳಲ್ಲಿ ಖಾಲಿ ಇರುವ ಅಸಿಸ್ಟೆಂಟ್ ಸೆಕ್ಷನ್ ಆಫೀಸರ್, ಅಸಿಸ್ಟೆಂಟ್ ಹುದ್ದೆಗಳಿಗೆ ಮಾಸಿಕ  42,400 ರೂ  ರಿಂದ 1,32,400 ರೂ.ವರೆಗೂ ವೇತನ ದೊರೆಯಲಿದೆ. 

ಸೆಂಟ್ರಲ್ ಸೆಕ್ರೆಟರಿಯಟ್ ಸರ್ವೀಸ್, ಇಂಟಲಿಜೆನ್ಸ್ ಬ್ಯೂರೋ ಸೇರಿದಂತೆ ಹಲವು ಇಲಾಖೆಗಳಲ್ಲಿ ಅಸಿಸ್ಟೆಂಟ್, ಸೂಪರಿಂಟೆಂಡೆಂಟ್ , ಡಿವಿಜನಲ್ ಅಕೌಂಟೆಂಟ್ ಸೇರಿದಂತೆ ಹಲವು  ಹುದ್ದೆಗಳಿಗೆ ಮಾಸಿಕ 35,400 ರಿಂದ 1,12,400 ರೂ ವರೆಗೂ ವೇತನ ದೊರೆಯಲಿದೆ. ಆಡಿಟರ್, ಅಕೌಂಟೆಂಟ್ ಹುದ್ದೆಗಳಿಗೆ ಪೇ ಲೆವೆಲ್-5 ರಡಿ 29,200 ರೂ. ರಿಂದ  93,300 ರೂ.ವರೆಗೂ ಸಂಬಳ ಸಿಗಲಿದೆ. ಇನ್ನು ಸೀನಿಯರ್ ಸೆಕ್ರೆಟ್ರಿಯಟ್ ಅಸಿಸ್ಟೆಂಟ್, ಟ್ಯಾಕ್ಸ್ ಅಸಿಸ್ಟೆಂಟ್ ಹುದ್ದೆಗಳಿಗೆ ಮಾಸಿಕ 25,500 ರೂರಿಂದ 81,400 ರೂವರೆಗೂ ವೇತನ ಪಡೆಯಬಹುದು.

DRDO ನೇಮಕಾತಿ: 68 ಎಂಜಿನಿಯರ್ ಹುದ್ದೆಗಳಿಗೆ 70,000 ರೂ. ಮಾಸಿಕ ಸ್ಟೈಫಂಡ್

ಒಟ್ಟಾರೆಯಾಗಿ ಸಿಬ್ಬಂದಿ ನೇಮಕ ಆಯೋಗವು ಬೃಹತ್ ಮಟ್ಟದ ಅಂದ್ರೆ ಬರೋಬ್ಬರೀ ೭೦೩೫ ಹುದ್ದೆಗಳನ್ನ ಭರ್ತಿ ಮಾಡಿಕೊಳ್ಳುತ್ತಿದೆ. ಅದರಲ್ಲಿ ಸಾಮಾನ್ಯ ವರ್ಗಕ್ಕೆ 2891,  ಎಸ್ಸಿ 1046, ಎಸ್ಟಿ 510, ಓಬಿಸಿ  1854 ಹಾಗೂ ಇಡಬ್ಲ್ಯೂಎಸ್  ವರ್ಗಕ್ಕೆ 730 ಹುದ್ದೆಗಳನ್ನ ಮೀಸರಿಸಲಾಗಿದೆ.

click me!