ಬಿಬಿಎಂಪಿಯಲ್ಲಿ ಹವಾಮಾನ ಕ್ರಿಯಾಯೋಜನೆ ಫೆಲೋಶಿಪ್‌ ನೇಮಕಾತಿ; ಮಾಸಿಕ 60 ಸಾವಿರ ರೂ. ಸಂಬಳ

Published : Jul 10, 2024, 12:47 PM IST
ಬಿಬಿಎಂಪಿಯಲ್ಲಿ ಹವಾಮಾನ ಕ್ರಿಯಾಯೋಜನೆ ಫೆಲೋಶಿಪ್‌ ನೇಮಕಾತಿ; ಮಾಸಿಕ 60 ಸಾವಿರ ರೂ. ಸಂಬಳ

ಸಾರಾಂಶ

ಬಿಬಿಎಂಪಿ ವತಿಯಿಂದ ಬೆಂಗಳೂರು ಹವಾಮಾನ ಕ್ರಿಯಾಯೋಜನೆ ಫೆಲೋಶಿಪ್‌ ಕಾರ್ಯಕ್ರಮಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಮಾಸಿಕ 60,000 ರೂ.ವರೆಗೆ ವೇತನವಿದ್ದು, ಆಗಸ್ಟ್ 6 ಅರ್ಜಿ ಸಲ್ಲಿಕೆಗೆ ಕೊನೆ ದಿನವಾಗಿದೆ.

ಬೆಂಗಳೂರು (ಜು.10): ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವತಿಯಿಂದ ಬೆಂಗಳೂರು ಹವಾಮಾನ ಕ್ರಿಯಾಯೋಜನೆ ಫೆಲೋಶಿಪ್‌ ಕಾರ್ಯಕ್ರಮಕ್ಕೆ ಅರ್ಹ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲು ಮುಂದಾಗಿದೆ. ಅರ್ಹ ಅಭ್ಯರ್ಥಿಗಳು ಆ.6ರೊಳಗೆ ಅರ್ಜಿ ಸಲ್ಲಿಕೆ ಮಾಡಬೇಕು.

ಬಿಬಿಎಂಪಿಯ ಹವಾಮಾನ ಕ್ರಿಯಾಕೋಶ (Climate Action Cell)ವು ಹವಾಮಾನ ಬದಲಾವಣೆ ಹಾಗೂ ನಾಗರಿಕರ ಸಮಸ್ಯೆಗಳನ್ನು ಪರಿಹರಿಸಲು ಹೊಸ ಆಲೋಚನೆ, ಕೌಶಲ್ಯ ಹಾಗೂ ನಾವೀನ್ಯತೆಗಳಿಂದ ಬೆಂಗಳೂರು ನಗರದ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಬಿಬಿಎಂಪಿಯ ಹವಾಮಾನ ಕ್ರಿಯಾಕೋಶಕ್ಕೆ ಸಹಾಯ ಮಾಡಲು ಮತ್ತು ಹವಾಮಾನ ಕೋಶದ ಕಾರ್ಯನಿರ್ವಹಣೆಯನ್ನು ಸಬಲಗೊಳಿಸಲಾಗುತ್ತಿದೆ. ಬೆಂಗಳೂರು ಹವಾಮಾನ ಕ್ರಿಯಾ ಯೋಜನೆಯನ್ನು ಜಾರಿಗೊಳಿಸುವ ಉದ್ದೇಶದಿಂದ ಆಸಕ್ತಿಯುಳ್ಳ ಯುವ ವೃತ್ತಿಪರರಿಂದ ಬೆಂಗಳೂರು ಹವಾಮಾನ ಕ್ರಿಯಾಯೋಜನೆ ಫೇಲೋಶಿಪ್ ಕಾರ್ಯಕ್ರಮಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ರಾಜ್ಯದ 384 ಕೆಎಎಸ್ ಹುದ್ದೆಗಳ ಪರೀಕ್ಷೆಗೆ ವೇಳಾಪಟ್ಟಿ ಪ್ರಕಟ

ಬಿಬಿಎಂಪಿ ಹವಾಮಾನ ಕ್ರಿಯಾಕೋಶವು ತನ್ನ ಕಾರ್ಯನಿರ್ವಹಣೆಗೆ ಸಹಾಯ ಮಾಡಲು ಫೆಲೋಶಿಪ್‌ ಕಾರ್ಯಕ್ರಮಕ್ಕೆ ಅರ್ಹ 8 ಅಭ್ಯರ್ಥಿಗಳನ್ನು ಗುತ್ತಿಗೆ ಆಧಾರದಲ್ಲಿ ಒಂದು ವರ್ಷದ ಅವಧಿಗೆ (12 ತಿಂಗಳು) ನೇಮಕಾತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 40,000 ರೂ.ಗಳಿಂದ 60,000 ರೂ.ವರೆಗೆ ವೇತನ ನೀಡಲಾಗುತ್ತದೆ. ಒಟ್ಟು 8 ಫೆಲೋಗಳ ಪೈಕಿ ಜೂನಿಯರ್ ಫೆಲೋ -2 ಹುದ್ದೆ, ಫೆಲೋ -5 ಹುದ್ದೆ, ಸೀನಿಯರ್ ಫೆಲೋ -1 ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಬೆಂಗಳೂರು ನಗರದಲ್ಲಿಯೇ ಕೆಲಸ ಮಾಡಬೇಕು. ಇನ್ನು ಆಯ್ಕೆಯಾದ ಫೆಲೋಗಳು ಹವಾಮಾನ ಕ್ರಿಯಾಕೋಶದ ಚಟುವಟಿಕೆಗಳಿಗೆ ಸಂಬಂಧಿಸಿದ ನಿರ್ದಿಷ್ಟ ಜವಾಬ್ದಾರಿಗಳನ್ನು ನಿರ್ವಹಿಸಬೇಕು.

ಅರ್ಜಿ ಸಲ್ಲಿಸಲು ವಿದ್ಯಾರ್ಹತೆ:
ಸಂವಹನ / ಪತ್ರಿಕೋದ್ಯಮ / ಪಬ್ಲಿಕ್ ರಿಲೇಷನ್‌ /ನಗರ ಯೋಜನೆ / ಆಡಳಿತ ಅಥವಾ ನಿರ್ವಹಣೆ / ಇತರೆ ಹಲವು ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು. ಜೊತೆಗೆ,  ಬಿಬಿಎಂಪಿ ನಿಗದಿತ ಕಾರ್ಯಾನುಭವಗಳನ್ನು ಹೊಂದಿರಬೇಕು. ಆಸಕ್ತ ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮುಖಾಂತರ ವೆಬ್‌ ಪೋರ್ಟಲ್ https:// apps.bbmpgov.in/bcap/ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ವಿದ್ಯಾರ್ಹತೆ ಹಾಗೂ ಇತರೆ ಮಾರ್ಗಸೂಚಿಗಳ ಮಾಹಿತಿಗೆ ಇಲ್ಲಿ ತಿಳಿಸಿದ ವೆಬ್ ಪೋರ್ಟಲ್‌ಗೆ ಭೇಟಿ ನೀಡಬಹುದಾಗಿದೆ. 06-08-2024ರ ಒಳಗಾಗಿ ಫೆಲೋಷಿಪ್‌ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಬೇಕು. ಈ ಹುದ್ದೆಗಳಿಗೆ ಯಾವುದೇ ಹೆಚ್ಚಿನ ಸ್ಪಷ್ಟೀಕರಣ ಮಾಹಿತಿ ಅವಶ್ಯವಿದ್ದಲ್ಲಿ - specialcommissionerfeccbbmp@gmail.com ವಿಳಾಸಕ್ಕೆ ಇ-ಮೇಲ್‌ ಮಾಡಬಹುದು.

ರೈಲ್ವೆ ನಿಲ್ದಾಣದಲ್ಲಿ ಬ್ಲೂಫಿಲಂ ನೋಡೋರ ಮಧ್ಯೆ ಫ್ರೀ ವೈಫೈ ಬಳಸಿ UPSC ಪಾಸಾದ ಕೂಲಿ ಕಾರ್ಮಿಕ

ನೇಮಕಾತಿ ಸಂಸ್ಥೆ: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ
ಹುದ್ದೆ ಹೆಸರು: ಸೀನಿಯರ್ ಮತ್ತ ಜೂನಿಯ್ ಫೆಲೋಶಿಪ್‌ ಹುದ್ದೆ
ಒಟ್ಟು ಹುದ್ದೆಗಳ ಸಂಖ್ಯೆ : 8
ಹುದ್ದೆಯ ವಿಧ ಮತ್ತು ಅವಧಿ: ಗುತ್ತಿಗೆ ಆಧಾರ, 12 ತಿಂಗಳು
ಮಾಸಿಕ ವೇತನ : 40,000 ರೂ. ಗಳಿಂದ 60,000 ರೂ.

PREV
Read more Articles on
click me!

Recommended Stories

2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!
ರಾಜ್ಯದಲ್ಲಿ 2.84 ಲಕ್ಷ ಸರ್ಕಾರಿ ಹುದ್ದೆ ಖಾಲಿ: 24,300 ಹುದ್ದೆ ಭರ್ತಿಗೆ ಅಂಕಿತ! ಇಲಾಖಾವಾರು ಮಾಹಿತಿ ಇಲ್ಲಿದೆ!