ಎಂಟು ವರ್ಷ ಕೆಲಸ ಮಾಡಿದರೂ ಖಾಯಂಗೊಳಿಸದ ಅನುದಾನಿತ ಶಾಲೆ; ಆತ್ಮಹತ್ಯೆಗೆ ಯತ್ನಿಸಿದ ಶಿಕ್ಷಕ

By Sathish Kumar KHFirst Published Feb 5, 2024, 7:13 PM IST
Highlights

ಕಳೆದ ಎಂಟು ವರ್ಷಗಳಿಂದ ಕೆಲಸ ಮಾಡಿದರೂ ಸೇವೆ ಖಾಯಂ ಮಾಡದ ಅನುದಾನಿತ ಶಾಲೆಯ ಶಿಕ್ಷಕ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.

ಬಾಗಲಕೋಟೆ (ಫೆ.05): ಸರ್ಕಾರದ ಅನುದಾನಿತ ಶಾಲೆಯಲ್ಲಿ ಕಳೆದ ಎಂಟು ವರ್ಷಗಳಿಂದ ಪುಡಿಗಾಸಿಗಾಗಿ ಹಾಗೂ ಉಚಿತವಾಗಿ ಎಂಟು ವರ್ಷಗಳಿಂದ ಕೆಲಸ ಮಾಡುತ್ತಾ ಬಂದಿದ್ದರೂ, ಸೇವೆ ಖಾಯಂ ಮಾಡಿಕೊಳ್ಳದ ಹಿನ್ನೆಲೆಯಲ್ಲಿ ಶಿಕ್ಷಕ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬಾಗಲಕೋಟೆ ಜಿಲ್ಲೆ ಶಿರೂರು ಗ್ರಾಮದಲ್ಲಿ ನಡೆದಿದೆ. 

ಶಿಕ್ಷಕನ ಹುದ್ದೆ ಖಾಯಂ ಮಾಡದ ಆರೋಪದ ಹಿನ್ನೆಲೆಯಲ್ಲಿ ಮನನೊಂದ ಶಿಕ್ಷಕನಿಂದ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಬಾಗಲಕೋಟೆ ಜಿಲ್ಲೆಯ ಶಿರೂರು ಗ್ರಾಮದಲ್ಲಿ ಘಟನೆ ನಡೆದಿದೆ. ವಿಶ್ವನಾಥ್ (31) ಆತ್ಮಹತ್ಯೆಗೆ ಯತ್ನಿಸಿರುವ ಶಿಕ್ಷಕನಾಗಿದ್ದಾನೆ. ವಿಷ ಸೇವನೆಯ ನಂತರ, ಶಿಕ್ಷಕನನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ವಿಶ್ವನಾಥ್ ಕಳೆದ ಎಂಟು ವರ್ಷಗಳಿಂದ ಶಿರೂರು ಗ್ರಾಮದ ಸಿದ್ದೇಶ್ವರ ಅನುದಾನಿತ ಪ್ರೌಢ ಶಾಲೆಯಲ್ಲಿ ಇಂಗ್ಲಿಷ್ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿದ್ದರು.

ಬಿಜೆಪಿ ಸಂಸದರೆಲ್ಲಾ ಶೋ ಪೀಸ್‌ಗಳು; ಅಲ್ಲಿ ಯಾರೊಬ್ಬರೂ ಗಂಡಸರಿಲ್ಲ: ಹೆಚ್.ಸಿ. ಬಾಲಕೃಷ್ಣ

ಕಳೆದ ಎಂಟು ವರ್ಷಗಳಿಂದಲೂ ನಿಮ್ಮ ಕೆಲಸ ಕಾಯಂ ಮಾಡಿಕೊಳ್ಳುತ್ತೇವೆ ಎಂದು ಹೇಳುತ್ತಾ ಕೆಲಸ ಮಾಡಿಸಿಕೊಂಡಿದ್ದಾರೆ. ಅತ್ಯಲ್ಪ ಗೌರವಧನ ಹಾಗೂ ಕೆಲವು ಬಾರಿ ಉಚಿತವಾಗಿ ಕೆಲಸ ಮಾಡಿದ ನನಗೆ ನಿಮ್ಮ ಕೆಲಸ ಕಾಯಂ ಆಗುತ್ತದೆ ಎಂಬ ಭರವಸೆಯನ್ನು ನೀಡಿ ಅಸಮಾಧಾನವನ್ನು ತಣಿಸುತ್ತಿದ್ದರು. ಆದರೆ, ಈಗ ಏಕಾಏಕಿ ಶಾಲಾ ಆಡಳಿತ ಮಂಡಳಿ ಖಾಯಂ ಕೆಲಸ ಕಾಯಂ ಮಾಡುವುದಿಲ್ಲ ಎಂಬ ಸೂಚನೆಯನ್ನು ರವಾನಿಸಿದೆ ಎಂಬ ಆರೋಪವನ್ನು ಶಿಕ್ಷಕ ವಿಶ್ವನಾಥ್ ಮಾಡಿದ್ದಾರೆ.

ಶಾಲೆಯಲ್ಲಿ ಎಂಟು ವರ್ಷ ಕೆಲಸ ಮಾಡಿದರೂ ತಮ್ಮನ್ನು ಬಿಟ್ಟು ಬೇರೊಬ್ಬರಿಗೆ ಕೆಲಸ ನೀಡಲಾಗುತ್ತಿದೆ ಎಂದು ಶಿಕ್ಷಕ ವಿಶ್ವನಾಥ್ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಇದರಿಂದ ಶಾಲಾ ಆಡಳಿತ ಮಂಡಳಿ ಮತ್ತಷ್ಟು ಕಿರುಕುಳ ನೀಡಲು ಮುಂದಾಗಿದೆ. ಮೊದಲೇ ಆರ್ಥಿಕ ಮೂಲವಿಲ್ಲದೇ ಪುಡಿಗಾಸಿಗೆ ಕೆಲಸ ಮಾಡುತ್ತಾ ಉಜ್ವಲ ಭವಿಷ್ಯದ ಕನಸು ಕಂಡಿದ್ದ ಶಿಕ್ಷಕ ವಿಶ್ವನಾಥನಿಗೆ ಈಗ ನ್ಯಾಯಾಲಯದಲ್ಲಿ ಹೋರಾಡುವಷ್ಟು ಆರ್ಥಿಕ ಸಬಲತೆಯೂ ಇಲ್ಲದಂತಾಗಿದೆ. ಈ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ಮಾಹಿತಿಯನ್ನು ಸ್ಥಳೀಯರು ನೀಡಿದ್ದಾರೆ. 

ಮದುವೆ ಮಾಡಿಸಿಲ್ಲವೆಂದು ಹೆತ್ತ ತಾಯಿಯನ್ನೇ ಕೊಲೆಗೈದ ಮಗ
ಕಲಬುರಗಿ (ಫೆ.05):
ಮನೆಯಲ್ಲಿ ತನಗೆ ತಾಯಿ ಮದುವೆ ಮಾಡಿಸುತ್ತಿಲ್ಲವೆಂದು ಹೆತ್ತು ಸಾಕಿದ ತಾಯಿಯನ್ನೇ ಕೊಂದು (Son Kills Mother) ಹಾಕಿರುವ ದುರ್ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಪೂಚಾವರಂನಲ್ಲಿ ಈ ಭೀಕರ ಘಟನೆ ನಡೆದಿದೆ. ಅನಿಲ್‌ ಎಂಬಾತನೇ ತನ್ನ ತಾಯಿ ಶೋಭಾ (45) ಎಂಬವರನ್ನು ಕೊಲೆ ಮಾಡಿದ ಧೂರ್ತ ಮಗ. ಕುಂಚಾವರಂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಲ್ಲದೆ, ಕೊಲೆ ಮಾಡಿದ ಅನಿಲ್‌ನನ್ನು ವಶಕ್ಕೆ ಪಡೆದಿದ್ದಾರೆ.

ದಕ್ಷಿಣ ಭಾರತದಲ್ಲಿ ಚೆನ್ನಾಗಿ ಫ್ಯಾಮಿಲಿ ಪ್ಲ್ಯಾನಿಂಗ್ ಮಾಡಿದ್ದೇವೆ; ಆದ್ರೂ ಅನುದಾನದಲ್ಲೇಕೆ ತಾರತಮ್ಯ: ಸಿದ್ದರಾಮಯ್ಯ

ಅನಿಲ್‌ ಸುಮಾರು 25 ವರ್ಷದ ಯುವಕನಾಗಿದ್ದು ಕುಡಿತದ ದಾಸನಾಗಿದ್ದನು. ಸರಿಯಾಗಿ ಕೆಲಸ ಮಾಡದೆ ತಾಯಿಯ ಕೈಯಿಂದಲೇ ಹಣವನ್ನು ಕಿತ್ತುಕೊಂಡು ಹೋಗಿ ಸರಾಯಿ ಸುರಿಯುತ್ತಿದ್ದ ಈ ಧೂರ್ತ ಅದರ ನಡುವೆ ತಾಯಿ ತನಗೆ ಮದುವೆ ಮಾಡಿಸುತ್ತಿಲ್ಲ ಎಂದು ಹಂಗಿಸುತ್ತಿದ್ದನು. ಭಾನುವಾರ ರಾತ್ರಿ ಇದೇ ವಿಚಾರದಲ್ಲಿ ತಾಯಿ ಮತ್ತು ಮಗನ ನಡುವೆ ಜಗಳವಾಗಿದೆ. ಈ ಹಂತದಲ್ಲಿ ಸಿಟ್ಟಿನ ಭರದಲ್ಲಿ ಮಗ ಕುಡಿದ ನಶೆಯಲ್ಲಿ ತಾಯಿಗೆ ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ಬಳಿಕ ಆತನ ನಶೆ ಇಳಿದಿದೆ. ಕೊನೆಗೆ ಪೊಲೀಸರು ಆತನನ್ನು ಬಂಧಿಸಿದ್ದಾರೆ.

click me!