'ಗ್ರಾಮೀಣ ಪುನರ್ವಸತಿ ಯೋಜನೆಯಡಿ'ಯಲ್ಲಿ ಖಾಲಿಯಿರುವ ಪುನರ್ವಸತಿ ಕಾರ್ಯಕರ್ತರನ್ನು ಗೌರವಧನ ಆಧಾರದ ಮೇಲೆ ನೇಮಕಾತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
ಬೆಂಗಳೂರು (ಫೆ.04): ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ವತಿಯಿಂದ 'ಗ್ರಾಮೀಣ ಪುನರ್ವಸತಿ ಯೋಜನೆಯಡಿ'ಯಲ್ಲಿ ಜಿಲ್ಲೆಯಾದ್ಯಂತ ಖಾಲಿಯಿರುವ ಪುನರ್ವಸತಿ ಕಾರ್ಯಕರ್ತರನ್ನು ಗೌರವಧನ ಆಧಾರದ ಮೇಲೆ ನೇಮಕಾತಿ ಮಾಡಲು ಅರ್ಹ ವಿಕಲಚೇತನರಿಂದ ಅರ್ಜಿ ಆಹ್ವಾನಿಸಲಾಗಿದೆ.
ಬೆಂಗಳೂರು ದಕ್ಷಿಣ ತಾಲ್ಲೂಕು / ಪಂಚಾಯಿತಿಗಳಾದ ಸೋಮಹಳ್ಳಿ, ಅಜ್ಜನಹಳ್ಳಿ, ಕೆ.ಗೊಲ್ಲಹಳ್ಳಿ ಮತ್ತು ರಾಮೋಹಳ್ಳಿ., ಬೆಂಗಳೂರು ಪೂರ್ವ ತಾಲ್ಲೂಕು/ ಪಂಚಾಯಿತಿ ಕೂಡತಿ ., ಆನೇಕಲ್ ತಾಲ್ಲೂಕು/ ಗ್ರಾಮ ಪಂಚಾಯಿತಿ/ ನಗರ ಸಭೆ - ಹಾರಗದ್ದೆ, ಬನ್ನೇರುಘಟ್ಟ, ಹೆಬ್ಬಗೂಡಿ, ನೆರಿಗಾ ಮತ್ತು ಚಂದಾಪುರ., ಯಲಹಂಕ ತಾಲ್ಲೂಕು ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಾದ ರಾಜನಕುಂಟೆ, ಗಂಟಗಾನಹಳ್ಳಿ, ಚಿಕ್ಕಚಾಲ ಮತ್ತು ಸಾತನೂರು ಗ್ರಾಮಗಳಲ್ಲಿ ಖಾಲಿ ಇರುವ ಪುನರ್ವಸತಿ ಕಾರ್ಯಕರ್ತರನ್ನು ಗೌರವಧನ ಆಧಾರದ ಮೇಲೆ ನೇಮಕಾತಿ ಮಾಡಲು ಅರ್ಹ ವಿಕಲಚೇತನರಿಂದ ಅರ್ಜಿಯನ್ನು ಕರೆಯಲಾಗಿದೆ.
undefined
ಓಲಾ, ಊಬರ್ ಸೇರಿ ಎಲ್ಲ ಟ್ಯಾಕ್ಸಿಗಳಿಗೆ ಏಕರೂಪ ದರ ನಿಗದಿಗೊಳಿಸಿದ ಸರ್ಕಾರ; 4 ಕಿ.ಮೀ.ಗೆ 100 ರೂ. ಚಾರ್ಜ್
ಅಭ್ಯರ್ಥಿಯು ವಿಕಲಚೇತನರಾಗಿದ್ದು, ಎಸ್. ಎಸ್.ಎಲ್.ಸಿ ಉತ್ತೀರ್ಣ/ ಅನುತ್ತೀರ್ಣ ಹೊಂದಿರಬೇಕು. ಅಸಕ್ತ ವಿಕಲಚೇತನರು ಜಿಲ್ಲಾ ಅಂಗವಿಕರ ಕಲ್ಯಾಣಾಧಿಕಾರಿಗಳ ಕಛೇರಿ, ಸುಧಾರಣಾ ಸಂಸ್ಥೆಗಳ ಸಂಕೀರ್ಣ, ಹೊಸೂರು ರಸ್ತೆ, ಬೆಂಗಳೂರು ಇಲ್ಲಿ ಅರ್ಜಿಗಳನ್ನು ಫೆ.12ರೊಳಗೆ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಂಗವಿಕರ ಕಲ್ಯಾಣಾಧಿಕಾರಿಗಳ ಕಛೇರಿ ಅಥವಾ ದೂರವಾಣಿ ಸಂಖ್ಯೆ 080-29752324 ಗೆ ಅಥವಾ ಎಂ.ಆರ್.ಡಬ್ಲ್ಯೂ ಗಳಾದ ಬೆಂಗಳೂರು ಉತ್ತರ ತಾಲ್ಲೂಕು ಅರುಣ ಕುಮಾರ್ ಎಸ್. ಮೊಬೈಲ್ ಸಂಖ್ಯೆ: 7411520526., ಯಲಹಂಕ ತಾಲ್ಲೂಕು ಚಂದ್ರಶೇಖರ್ ಎಸ್. ಮೊಬೈಲ್ ಸಂಖ್ಯೆ: 9590676975., ಬೆಂಗಳೂರು ದಕ್ಷಿಣ ಗೋಪಲ ಕೃಷ್ಣ ಮೊಬೈಲ್ ಸಂಖ್ಯೆ: 881328076 ಮತ್ತು ಅನೇಕಲ್ ತಾಲ್ಲೂಕು ಕುಮಾರ್ ಮೊಬೈಲ್ ಸಂಖ್ಯೆ: 8748903812 ಅನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.