RRI Recruitment 2022: ಬೆಂಗಳೂರಿನ ರಾಮನ್​ ಸಂಶೋಧನಾ ಸಂಸ್ಥೆಯಲ್ಲಿ ಟೆಕ್ನಿಕಲ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ

By Suvarna News  |  First Published Dec 22, 2021, 5:33 PM IST
  • ಖಾಲಿ ಇರುವ ಹುದ್ದೆ ಭರ್ತಿಗೆ ಮುಂದಾದ ಬೆಂಗಳೂರಿನ ರಾಮನ್​ ಸಂಶೋಧನಾ ಸಂಸ್ಥೆ
  • ಬಿಇ, ಬಿ.ಟೆಕ್, ಬಿಎಸ್ಸಿ, ಬಿಸಿಎ, ಡಿಪ್ಲೋಮಾ ಪದವಿ ಪೂರ್ಣಗೊಳಿಸಿರುವರಿಗೆ ಅವಕಾಶ
  • ಜನವರಿ 15, 2022 ಅರ್ಜಿ ಸಲ್ಲಿಸಲು ಕೊನೆಯ ದಿನ

ಬೆಂಗಳೂರು(ಡಿ.22): ರಾಮನ್​ ಸಂಶೋಧನಾ ಸಂಸ್ಥೆ (Raman Research Institute) ಬೆಂಗಳೂರಿನಲ್ಲಿ ಖಾಲಿ ಇರುವ ಒಂದು ಟೆಕ್ನಿಕಲ್ ಅಸಿಸ್ಟೆಂಟ್(Technical Assistant) ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದ್ದು, ಬಿಇ, ಬಿ.ಟೆಕ್, ಬಿಎಸ್ಸಿ, ಬಿಸಿಎ, ಡಿಪ್ಲೋಮಾ ಪದವಿ ಪೂರ್ಣಗೊಳಿಸಿರುವ ಒಂದು ವರ್ಷಗಳ ಅನುಭವ ಹೊಂದಿರುವ  ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಕೋರಲಾಗಿದೆ. ಆನ್‌ಲೈನ್ ಮೂಲಕ ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು ಜನವರಿ 15 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಸಂರ್ಸತೆಯ ಅಧಿಕೃತ ವೆಬ್​​ಸೈಟ್ www.rri.res.in ಗೆ ಭೇಟಿ ನೀಡಿ.

ರಾಮನ್​ ಸಂಶೋಧನಾ ಸಂಸ್ಥೆ ನೇಮಕಾತಿಯ ಟೆಕ್ನಿಕಲ್ ಅಸಿಸ್ಟೆಂಟ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಉದ್ಯೋಗ ನೀಡಲಾಗುತ್ತದೆ. ಮತ್ತು ಮಾಸಿಕ ವೇತನ 23,500 ರೂ ಇರಲಿದೆ. ದಾಖಲಾತಿ ಪರಿಶೀಲನೆ ಮಗತ್ತು ವೈಯಕ್ತಿಕ ಸಂದರ್ಶನದ ಮೂಲಕ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುತ್ತದೆ.

Latest Videos

undefined

ಶಿವಮೊಗ್ಗ GTTCಯಲ್ಲಿ ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ: ಶಿವಮೊಗ್ಗ (Shivamogga) ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (Govt. Tool Room and Training Centre -GTTC ) ಶಿವಮೊಗ್ಗ ಇಲ್ಲಿ ಅತಿಥಿ ಉಪನ್ಯಾಸಕರ (Guest Lecturer) ಹುದ್ದೆಗೆ ಆಸಕ್ತ ನತ್ತು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಡಿಸೆಂಬರ್ 31 ಕಡೆಯ ದಿನವಾಗಿದೆ.

RUDSETI SELF EMPLOYMENT TRAINING: ಸ್ವ ಉದ್ಯೋಗ ಉಚಿತ ತರಬೇತಿಗೆ ರುಡ್‌ಸೆಟ್‌ ಅರ್ಜಿ ಆಹ್ವಾನ

ಡಿಟಿಡಿಎಂ/ಡಿಪಿಎಂ, ಬಿ.ಇ & ಎಂ.ಟೆಕ್(ಮೆಕ್ಯಾನಿಕಲ್), ಬಿ.ಇ/ಎಂ.ಟೆಕ್(ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್) ಕೈಗಾರಿಕಾ ಕ್ಷೇತ್ರದಲ್ಲಿ ಎರಡು ವರ್ಷಗಳ ಅನುಭವ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಹೆಚ್ಚಿನ ಮಾಹಿತಿಗಾಗಿ, ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ, ಪ್ಲಾಟ್ ನಂ.ಸಿಎ 38, ನಿದಿಗೆ ಇಂಡಸ್ಟ್ರಿಯಲ್ ಏರಿಯಾ, ಮಾಚೇನಹಳ್ಳಿ, ಶಿವಮೊಗ್ಗ 577 222 ಇಲ್ಲಿ ಸಂಪರ್ಕಿಸಬಹುದು ಎಂದು ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ ಪ್ರಾಂಶುಪಾಲರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್ ಸೈಟ್ https://gttc.co.in/shivamogga/ ಗೆ ಭೇಟಿ ನೀಡಿ.

KSP Recruitment 2022: ಪೊಲೀಸ್ ನೇಮಕಾತಿಯಲ್ಲಿ ತೃತೀಯ ಲಿಂಗಿಗಳಿಗೂ ಅವಕಾಶ

ದಾವಣಗೆರೆ ಜಿಲ್ಲೆಯಲ್ಲಿರುವ ಅಂಗನವಾಡಿಗಳಲ್ಲಿ ಖಾಲಿ ಇರುವ  ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ :ದಾವಣಗೆರೆ ಜಿಲ್ಲೆ (Davangere District)ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಡಿ (Women and Children Welfare Department) ಕಾರ್ಯ ನಿರ್ವಹಿಸುತ್ತಿರುವ 5 ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ ಕೇಂದ್ರ (Anganwadi Centers)ಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಒಟ್ಟು 120 ಅಂಗನವಾಡಿ ಕಾರ್ಯಕರ್ತೆ (Anganwadi Workers) ಮತ್ತು ಅಂಗನವಾಡಿ ಸಹಾಯಕಿ (Anganwadi Helpers) ಹುದ್ದೆಗಳು ಖಾಲಿ ಇದ್ದು, 10ನೇ ತರಗತಿ, 4ನೇ ತರಗತಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್​ಲೈನ್ (Online) ಮೂಲಕ ಮಾತ್ರವೇ ಜನವರಿ 18 ರವರೆಗೆ ಅರ್ಜಿ ಹಾಕಬಹುದು. ಹೆಚ್ಚಿನ ಮಾಹಿತಿಗಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕೃತ ವೆಬ್​ಸೈಟ್ anganwadirecruit.kar.nic.in ಗೆ ಭೇಟಿ ನೀಡಿ.
ವಯೋಮಿತಿ ಮತ್ತು ಆಯ್ಕೆ ವಿಧಾನ: ಅಭ್ಯರ್ಥಿಗಳು ಕನಿಷ್ಠ 18 ರಿಂದ ಗರಿಷ್ಠ 35 ವರ್ಷದೊಳಗಿನವರಾಗಿರಬೇಕು. ವಿಕಲಚೇತನ ಅಭ್ಯರ್ಥಿಗಳಿಗೆ ಮಾತ್ರ 10 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗಿದೆ. ಲಿಖಿತ ಪರೀಕ್ಷೆ, ದಾಖಲಾತಿ ಪರಿಶೀಲನೆ, ವೈಯಕ್ತಿಕ ಸಂದರ್ಶನದ ಮೂಲಕ ಅಭ್ಯರ್ಥಿಯ ಆಯ್ಕೆ ನಡೆಯಲಿದೆ.

click me!