Transgenders: ತೃತೀಯ ಲಿಂಗಿಗಳಿಗೂ ಮೀಸಲಾತಿ, ಸರ್ಕಾರ ಮತ್ತು ಪೊಲೀಸ್ ಇಲಾಖೆಯಿಂದ ಮಹತ್ವದ ಹೆಜ್ಜೆ

By Suvarna News  |  First Published Dec 21, 2021, 11:38 PM IST

* ರಾಜ್ಯ ಸರ್ಕಾರ ಮತ್ತು ಪೊಲೀಸ್ ಇಲಾಖೆಯಿಂದ ಮಹತ್ವದ ಹೆಜ್ಜೆ
* ತೃತೀಯ ಲಿಂಗಿಗಳಿಗೂ ಮೀಸಲಾತಿ
* ಕೆಎಸ್‍ಆರ್‌ಪಿ ನೇಮಕಾತಿಯಲ್ಲಿ ಶೇ.1ರಷ್ಟು ರಿಸರ್ವೇಷನ್ 

reservation Gives to transgenders Karnataka State Police recruiting Says ADGP Praveen Sood rbj

ಬೆಳಗಾವಿ, (ಡಿ.21): ಕೆಎಸ್‍ಆರ್‌ಪಿ ನೇಮಕಾತಿಯಲ್ಲಿ ತೃತೀಯ ಲಿಂಗಿಗಳಿಗೂ (Transgenders) ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸೇವೆಗೆ ಬರಲು ನೇಮಕಕ್ಕೆ ಅವಕಾಶ ನೀಡಿ  ಅಧಿಸೂಚನೆ ಹೊರಡಿಸಲಾಗಿದೆ ಎಂದು ಡಿಜಿಪಿ ಪ್ರವೀಣ ಸೂದ್ (Praveen Sood) ಘೋಷಿಸಿದ್ದಾರೆ.

ಬೆಳಗಾವಿ (Belagavi) ಸುವರ್ಣಸೌಧದ ಕಾರಿಡಾರ್‌ನಲ್ಲಿ ಇಮದು (ಮಂಗಳವಾರ) ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿ , ಕರ್ನಾಟಕ ರಾಜ್ಯ ಇದೇ ಮೊದಲು ಇಂತಹ ಕ್ರಾಂತಿಕಾರಿ ಹೆಜ್ಜೆ ಇಟ್ಟಿದೆ ಎನ್ನಬಹುದು. ಮಂಗಳಮುಖಿಯರಿಗೆ ಶೇ.1ರಷ್ಟು ರಿಸರ್ವೇಷನ್ ನೀಡಿ ಇಂದು ಹೊರಡಿಸಲಾದ ಅಧಿಸೂಚನೆಯಲ್ಲಿ ತಿಳಿಸಿದೆ ಎಂದರು.

Tap to resize

Latest Videos

ಖಾಸಗಿ, ಸರ್ಕಾರಿ ಹುದ್ದೆಗಳ ನೇಮಕಾತಿ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಗಳಮುಖಿಯರು ಶೇ.1ರ ರಿಸರ್ವೇಷನ್‍ನಲ್ಲಿ ಪೊಲೀಸ್ ಇಲಾಖೆಯ ನೇಮಕಾತಿಗಳಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.ಕರ್ನಾಟಕದಲ್ಲಿ ಇದು ಒಳ್ಳೆಯ ಬೆಳವಣಿಗೆ ಎನ್ನಬಹುದು. ತೃತೀಯ ಲಿಂಗಿಗಳಿಗೆ ಹೀಗೊಂದು ಅವಕಾಶ ನೀಡುವ ಪದ್ಧತಿ ಬಹು ಹಿಂದೆಯೇ ನಮ್ಮ ಸಮಾಜದಲ್ಲಿ ಬರಬೇಕಿತ್ತು . ಕೆಲವು ದಶಕಗಳ ಹಿಂದೆ ಮಹಿಳೆಯರು ಸರ್ಕಾರಿ ನೌಕರಿ ಹಿಡಿಯುವ ಬಗ್ಗೆ ಮೂಗು ಮುರಿಯುವ ವಾತಾವರಣ ಇತ್ತು. ಆದರೆ, ಇಂದು ಶೇ.30ರಷ್ಟು ಮಹಿಳೆಯರು ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹೆಮ್ಮೆ ವ್ಯಕ್ತಪಡಿಸಿದರು. 

Yes. You read it right! Karnataka State Police is an equal opportunity organisation. We are recruiting men, women and even transgenders. pic.twitter.com/HhM3RtxpQv

— DGP KARNATAKA (@DgpKarnataka)

ಈಗ ರಾಜ್ಯ ಸರ್ಕಾರ ಮತ್ತು ಪೊಲೀಸ್ ಇಲಾಖೆ ಒಂದು ಒಳ್ಳೆಯ ಹೆಜ್ಜೆ ಮುಂದೆ ಇಟ್ಟಿದ್ದು, ಮಂಗಳಮುಖಿಯರಿಗೆ ಶೇ.1ರಷ್ಟು ರಿಸರ್ವೇಷನ್ ನೀಡಿ ಅರ್ಜಿ ಸಲ್ಲಿಸಲು ಇಂದಿನಿಂದಲೇ ಅವಕಾಶ ನೀಡಿದೆ. ಮಂಗಳಮುಖಿರನ್ನು ಇಂದಿನ ಸಮಾಜ ಅಪಾರ ಗೌರವಾದರಗಳಿಂದ ಕಂಡು ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕಿದೆ ಎಂದು ಪ್ರವೀಣ ಸೂದ್ ಕರೆ ನೀಡಿದರು.

ಮಂಗಳಮುಖಿಯರು ಸಮಾಜದಲ್ಲಿ ಘನತೆ, ಗೌರವ ಮತ್ತು ಸ್ವಾಭಿಮಾನದಿಂದ ಬದುಕಬೇಕು ಎಂಬುದು ನಮ್ಮ ಆಶಯ. ನನ್ನ ಕಾಲದಲ್ಲಿ ಜಾರಿ ಬಂದಿದೆ ಎನ್ನುವುದಕ್ಕಿಂತ ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಗೃಹಮಂತ್ರಿ ಆರಗ ಜ್ಞಾನೇಂದ್ರ ಅವರಿಗೂ ಶ್ರೇಯಸ್ಸು ಸಲ್ಲಬೇಕು ಎಂದು ಹೇಳಿದರು.

ಪೊಲೀಸ್ ಇಲಾಖೆಯಲ್ಲಿ ಪ್ರಮಾಣಿತ ನೇಮಕಾತಿ
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಪ್ರಮಾಣಿತ ನೇಮಕಾತಿ ಪ್ರಕ್ರಿಯೆ ಶುರುವಾಗಿದೆ. ನ್ಯಾಯ ವಿಜ್ಞಾನ ಪ್ರಯೋಗಾಲಯ ಮತ್ತು ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯ ಘಟಕಗಳಲ್ಲಿ ಖಾಲಿ ಇರುವ ಅಪರಾಧ ಸ್ಥಳ ಪರಿಶೀಲನಾ ಅಧಿಕಾರಿಯ 206 ಹುದ್ದೆಗಳಿಗೆ ಅರ್ಜಿ ಆಹ್ವಾನ ನೀಡಲಾಗಿದೆ ಎಂದು ರಾಜ್ಯ ಪೋಲಿಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ತಿಳಿಸಿದ್ದಾರೆ.

ಇನ್ನೂ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಕೊನೆಯ ದಿನಾಂಕ ಡಿ.17ರಿಂದ ಜ. 15ರವರೆಗೆ ಅವಕಾಶ ಕಲ್ಪಿಸಲಾಗಿದೆ. ಇನ್ನು ಪೊಲೀಸ್ ಇಲಾಖೆ ನೇಮಕಾತಿಯು ಸಂಪೂರ್ಣ ಪಾರದರ್ಶಕತೆಯಿಂದ ನಡೆಸಲಾಗುತ್ತಿದ್ದು, www. Recruitment. ksp. gov. in ವೆಬ್ಸೈಟ್ನಲ್ಲಿ ಹೆಚ್ಚಿನ ಮಾಹಿತಿ ತಿಳಿಯಬಹುದಾಗಿದೆ.

ಅಂಚೆ ಇಲಾಖೆಯಲ್ಲಿ ನೇಮಕಾತಿ
ಅಂಚೆ ಇಲಾಖೆ, ಮುಖ್ಯ ಪೋಸ್ಟ್‌ಮಾಸ್ಟರ್ ಜನರಲ್ ಕಚೇರಿ, ಬಿಹಾರ ವೃತ್ತದಲ್ಲಿ(Bihar Postal Circle Recruitment 2021) ಖಾಲಿ ಇರುವ ವಿವಿಧ 60 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ.

'ಸ್ಪೋರ್ಟ್ಸ್ ಕೋಟಾ' (Sports Quota)ಅಡಿಯಲ್ಲಿ  ನೇರ ನೇಮಕಾತಿಗಾಗಿ ಖಾಲಿ ಹುದ್ದೆಗಳನ್ನು ಪ್ರಕಟಿಸಲಾಗಿದೆ. ಈ ಬಗ್ಗೆ ಅಂಚೆ ಇಲಾಖೆ, ಮುಖ್ಯ ಪೋಸ್ಟ್‌ಮಾಸ್ಟರ್ ಜನರಲ್ ಕಚೇರಿ, ಬಿಹಾರ ವೃತ್ತ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ತಿಳಿಸಿದೆ.

ಅಂಚೆ ಸಹಾಯಕ(Postal Assistant (PA)) - 31, ವಿಂಗಡಣೆ ಸಹಾಯಕ (Sorting Assistant (SA)) - 11, ಪೋಸ್ಟ್‌ಮ್ಯಾನ್(Postman)-o5,  ಎಂಟಿಎಸ್(ಮಲ್ಟಿ-ಟಾಸ್ಕಿಂಗ್ ಸ್ಟಾಫ್)೯MTS    )-13 ಹುದ್ದೆಗಳ ನೇಮಕಾತಿ ಅರ್ಜಿ ಆಹ್ವಾನಿಸಿದ್ದು 31.12.2021ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.

vuukle one pixel image
click me!
vuukle one pixel image vuukle one pixel image