ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಕೋಚ್ ರವಿ ಶಾಸ್ತ್ರಿಗೆ ಯುವರಾಜ್ ಸಿಂಗ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ತಂಡದ ಆಯ್ಕೆ ಕುರಿತು ಗರಂ ಆಗಿರುವ ಯುವಿ, ಈ ರೀತಿ ನಿರ್ಧಾರ ತೆಗೆದುಕೊಂಡರೆ 2020ರ ಟಿ20 ಟ್ರೋಫಿ ಗೆಲುವು ಕಷ್ಟ ಎಂದಿದ್ದಾರೆ.
ನವದೆಹಲಿ(ಸೆ.29): ಟಿ20 ವಿಶ್ವಕಪ್ ಟೂರ್ನಿ ಸಿದ್ಧತೆಗಾಗಿ ಟೀಂ ಇಂಡಿಯಾದಲ್ಲಿ ಕೆಲ ಬದಲಾವಣೆ ಮಾಡಲಾಗಿದೆ. ಬದಲಾವಣೆಯೊಂದಿಗೆ ಸೌತ್ ಆಫ್ರಿಕಾ ವಿರುದ್ಧದ ಟಿ20 ಸರಣಿ ಆಡಿದ ಭಾರತಕ್ಕೆ ನಿರಾಸೆಯಾಗಿದೆ. ಇದೀಗ 2007ರ ಟಿ20 ಹಾಗೂ 2011ರ ವಿಶ್ವಕಪ್ ಗೆಲುವಿನ ಪ್ರಮುಖ ರೂವಾರಿ ಯುವರಾಜ್ ಸಿಂಗ್, ಟೀಂ ಇಂಡಿಯಾಗೆ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: T20 ವಿಶ್ವಕಪ್‌ಗೂ ಮುನ್ನ ನಾಯಕನನ್ನೇ ಬದಲಿಸಲು ಸೂಚಿಸಿದ ಯುವಿ!
undefined
ನಾಯಕ ವಿರಾಟ್ ಕೊಹ್ಲಿ ಹಾಗೂ ಕೋಚ್ ರವಿ ಶಾಸ್ತ್ರಿ ತಂಡದ ಆಯ್ಕೆಯಲ್ಲಿ ತೆಗೆದುಕೊಂಡ ನಿರ್ಧಾರಕ್ಕೆ ಯುವಿ ಗರಂ ಆಗಿದ್ದಾರೆ. ಟಿ20 ವಿಶ್ವಕಪ್ ಟೂರ್ನಿಗೆ ಬೌಲಿಂಗ್ ಹಾಗೂ ಬ್ಯಾಟಿಂಗ್ ಮಾಡಬಲ್ಲ ಪ್ರತಿಭೆಗಳನ್ನು ಹುಡುಕುತ್ತಿದ್ದೇವೆ ಎಂದು, ಭಾರತದ ಪ್ರಮುಖ ಸ್ಪಿನ್ನರ್‌ಗಳಾಗಿ ಗುರುತಿಸಿಕೊಂಡಿದ್ದ ಕುಲ್ದೀಪ್ ಯಾದವ್ ಹಾಗೂ ಯಜುವೇಂದ್ರ ಚಹಾಲ್‌ಗೆ ಕೊಕ್ ನೀಡಿದ್ದು ಸರಿಯಲ್ಲ ಎಂದು ಯುವಿ ಹೇಳಿದ್ದಾರೆ.
ಇದನ್ನೂ ಓದಿ: ಯೋ-ಯೋ ಟೆಸ್ಟ್ ಪಾಸಾದ್ರೂ ಆಯ್ಕೆ ಮಾಡಲಿಲ್ಲ; ವಿದಾಯದ ರಹಸ್ಯ ಬಿಚ್ಚಿಟ್ಟ ಯುವಿ!
2017ರಿಂದ ಯಜುವೇಂದ್ರ ಚಹಾಲ್ ಹಾಗೂ ಕುಲ್ದೀಪ್ ಯಾದವ್ ಜೋಡಿ ಯಶಸ್ವಿಯಾಗಿದೆ. ಇದೀಗ ಬ್ಯಾಟಿಂಗ್ ಕಾರಣ ನೀಡಿ ಈ ಜೋಡಿಯನ್ನು ನಿರ್ಲಕ್ಷಿಸಿರುವುದು ತಪ್ಪು. ಕೇವಲ ಬ್ಯಾಟಿಂಗ್ ಕಾರಣ ನೀಡಿ ಸ್ಪಿನ್ನರ್‌ಗಳ ಅವಕಾಶ ತಪ್ಪಿಸಿರುವುದು ಸರಿಯಲ್ಲ. ಟಾಪ್ ಆರ್ಡರ್ ಬ್ಯಾಟ್ಸ್‌ಮನ್ ಹಾಗೂ ಮಧ್ಯಮ ಕ್ರಮಾಂಕ ಸರಿಯಾಗಿ ಪ್ರದರ್ಶನ ನೀಡಿದರೆ ಬೌಲರ್‌ಗಳು ಬ್ಯಾಟಿಂಗ್‌ನಲ್ಲಿ ಕೊಡುಗೆ ನೀಡಬೇಕಾದ ಅವಶ್ಯತೆ ಇಲ್ಲ ಎಂದು ಯುವಿ ಹೇಳಿದ್ದಾರೆ.
ಇದನ್ನೂ ಓದಿ: ಟೀಂ ಇಂಡಿಯಾ ಮ್ಯಾನೇಜ್ಮೆಂಟ್‌ಗೆ ಯುವರಾಜ್ ಸಿಂಗ್ ವಿಶೇಷ ಮನವಿ!
ಟಿ20 ವಿಶ್ವಕಪ್ ಹಾಗೂ ಮುಂದಿನ ಟೂರ್ನಿಗೆ ಭಾರತ ಪ್ರಮುಖ ಬೌಲರ್‌ಗಳತ್ತ ಗಮನ ನೀಡಬೇಕಿದೆ. ಅವರ ಬ್ಯಾಟಿಂಗ್ ಪ್ರದರ್ಶನವಲ್ಲ. ಫ್ಲ್ಯಾಟ್ ಪಿಚ್‌ನಲ್ಲಿ ಆಡುವಾಗ ಬೌಲರ್‌ಗಳ ಕೊಡುಗೆ ಮುಖ್ಯ. ಕಳೆದ ನಾಲ್ಕೈದು ಐಪಿಎಲ್ ಆವೃತ್ತಿಯಲ್ಲಿ ಬೌಲರ್‌ಗಳಿಗೆ ಹೆಚ್ಚಿನ ಹಣ ನೀಡಿ ಹರಾಜಿನಲ್ಲಿ ಖರೀದಿಸಲಾಗಿದೆ. ಚುಟುಕು ಮಾದರಿಯಲ್ಲಿ ಬೌಲರ್ ಸಂಪೂರ್ಣ ಯಶಸ್ಸು ಸಾಧಿಸಿದರೆ ಫಲಿತಾಂಶ ನಿರೀಕ್ಷಿತ ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ.
ಸೆ.29ರ ಭಾನುವಾರ ಕಿಕ್ ಏರಿಸಿದ ಟಾಪ್ 10 ಸುದ್ದಿ ಇಲ್ಲಿವೆ!