SAFF ಫುಟ್ಬಾಲ್ ಚಾಂಪಿಯನ್‌ಶಿಪ್‌: ಭಾರತ-ಬಾಂಗ್ಲಾ ಫೈನಲ್‌ ಫೈಟ್!

Published : Sep 29, 2019, 10:47 AM IST
SAFF ಫುಟ್ಬಾಲ್ ಚಾಂಪಿಯನ್‌ಶಿಪ್‌:  ಭಾರತ-ಬಾಂಗ್ಲಾ ಫೈನಲ್‌ ಫೈಟ್!

ಸಾರಾಂಶ

SAFF ಫುಟ್ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್ ತಲುಪಿರುವ ಭಾರತ  ಕಿರಿಯರು ಬಾಂಗ್ಲಾದೇಶ ವಿರುದ್ಧ ಪ್ರಶಸ್ತಿಗಾಗಿ ಹೋರಾಟ ನಡೆಸಲಿದ್ದಾರೆ. 

ಕಠ್ಮಂಡು(ನೇಪಾಳ)(ಸೆ.29): ಅಂಡರ್‌ 18 ಸ್ಯಾಫ್‌ (ಎಸ್‌ಎಎಫ್‌ಎಫ್‌) ಫುಟ್ಬಾಲ್‌ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಭಾನುವಾರ ಭಾರತ ಹಾಗೂ ಬಾಂಗ್ಲಾದೇಶ ಕಿರಿಯರ ತಂಡಗಳು ಸೆಣಸಲಿವೆ. ಶುಕ್ರವಾರ ನಡೆದಿದ್ದ ಸೆಮಿಫೈನಲ್‌ನಲ್ಲಿ ಮಾಲ್ಡೀವ್ಸ್ ವಿರುದ್ಧ ಭಾರತ ಕಿರಿಯರು 4-0 ಗೋಲುಗಳಿಂದ ಜಯಿಸಿದ್ದರು. 

 

ಇದನ್ನೂ ಓದಿ: ಫಿಫಾ ವಿಶ್ವಕಪ್ ಕ್ವಾಲಿಫೈಯರ್: ಕತಾರ್ ವಿರುದ್ಧ ಡ್ರಾ ಸಾಧಿಸಿದ ಭಾರತ

7ನೇ ನಿಮಿಷದಲ್ಲಿ ನರೇಂದರ್‌ ಗೆಹ್ಲೋಟ್‌, 79ನೇ ನಿಮಿಷದಲ್ಲಿ ಮನ್ವೀರ್‌ ಸಿಂಗ್‌ ಹಾಗೂ 81ನೇ ನಿಮಿಷದಲ್ಲಿ ನಿಂತೋಯಿನ್ಗಾಂಬಾ ಮೀಟೈ ಗೋಲ್‌ ಹೊಡೆದಿದ್ದರು. 45+1 ನಿಮಿಷದಲ್ಲಿ ಮಾಲ್ಡೀವ್ಸ್‌ನ ಅಹ್ನಾಫ್‌ ರಶೀದ್‌ ಸ್ವಂತ ಗೋಲು ಹೊಡೆದು ಭಾರತ ತಂಡಕ್ಕೆ ಉತ್ತಮ ಅಂತರದಲ್ಲಿ ಜಯ ಸಾಧಿಸುವ ಅವಕಾಶವನ್ನು ಮಾಡಿಕೊಟ್ಟರು. ಮಾಲ್ಡೀವ್‌್ಸ ಪರ ಯಾವೊಬ್ಬ ಆಟಗಾರರು ಗೋಲುಗಳಿಸುವಲ್ಲಿ ಸಫಲರಾಗಲಿಲ್ಲ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

WPL 2026: ಸ್ಮೃತಿ ಮಂಧನಾ ನೇತೃತ್ವದ ಆರ್‌ಸಿಬಿ ಮತ್ತೊಮ್ಮೆ ಚಾಂಪಿಯನ್; ಡೆಲ್ಲಿ ಕ್ಯಾಪಿಟಲ್ಸ್‌ಗೆ ನಾಲ್ಕನೇ ಬಾರಿ ಹಾರ್ಟ್‌ ಬ್ರೇಕ್!
U19 World Cup: ಟಾಪ್ 07 ರನ್ ಸರದಾರರಲ್ಲಿ ಭಾರತದ ಏಕೈಕ ಆಟಗಾರ! ಪಟ್ಟಿಯಲ್ಲಿ ಯಾರೆಲ್ಲಾ ಇದ್ದಾರೆ?