ಸೀಮಿತ ಓವರ್ ಗಳ ಕ್ರಿಕೆಟ್ ನಲ್ಲಿ ಟೀಂ ಇಂಡಿಯಾದ ಸಾರ್ವಕಾಲಿಕ ಶ್ರೇಷ್ಠ ಆಲ್ರೌಂಡರ್ ಗಳಲ್ಲಿ ಯುವರಾಜ್ ಸಿಂಗ್ ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ. ಟೀಂ ಇಂಡಿಯಾ ಟಿ20 ಹಾಗೂ ಏಕದಿನ ವಿಶ್ವಕಪ್ ಗೆಲುವಿನ ರೂವಾರಿ ಎನಿಸಿದ್ದ ಯುವಿ ವಿವಾದಗಳಿಂದಲೂ ಸುದ್ದಿಯಾಗಿದ್ದರು. ಯುವಿ ಕ್ರಿಕೆಟ್ ವೃತ್ತಿಜೀವನದಲ್ಲಿ ಎದುರಿಸಿದ ಪ್ರಮುಖ ವಿವಾದಗಳನ್ನು ಸುವರ್ಣನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ.
ಮದುವೆ ತಿರಸ್ಕರಿಸಿದ ಯುವಿ:
ಬಾಲಿವುಡ್ ನಟಿ ಕಿಮ್ ಶರ್ಮಾರನ್ನು ಮದುವೆ ಯಾಗುವುದಾಗಿ ನಿರ್ಧರಿಸಿದ್ದ ಯುವರಾಜ್ ಸಿಂಗ್, ಅವರ ಅಮ್ಮ ಬೇಡ ಎಂದಿದ್ದಕ್ಕೆ ಮದುವೆಯನ್ನು ತಿರಸ್ಕರಿಸಿದ್ದರು. ಯುವಿ ಅವರ ಈ ನಿರ್ಧಾರ ವಿವಾದಕ್ಕೆ ಎಡೆಮಾಡಿಕೊಟ್ಟಿತು.
undefined
ಯೋ-ಯೋ ಟೆಸ್ಟ್ ವಿರೋಧಿಸಿದ್ದ ಯುವಿ:
ಎಡಗೈ ವೇಗಿ ಆಶೀಶ್ ನೆಹ್ರಾ ಅವರಂತೆ ಯುವರಾಜ್ ಸಿಂಗ್ ಕೂಡ ಭಾರತ ತಂಡದಲ್ಲಿ ನಿವೃತ್ತಿ ಪಂದ್ಯವನ್ನು ಆಡುವ ಮನಸ್ಸನ್ನು ಹೊಂದಿದ್ದರು. ಆದರೆ ಯೋ-ಯೋ ಟೆಸ್ಟ್ ಪಾಸಾಗದ ಹೊರತು ಯುವರಾಜ್ ಸಿಂಗ್ ಭಾರತ ತಂಡದಲ್ಲಿ ಅವಕಾಶ ಸಿಗುತ್ತಿರಲಿಲ್ಲ. ಹೀಗಾಗಿ ಯುವಿ ಯೋ-ಯೋ ಟೆಸ್ಟ್‌ನ ವಿರೋಧಿಯಾಗಿದ್ದರು.
ಟೆಸ್ಟ್ ಕ್ರಿಕೆಟ್‌ನಲ್ಲಿ ಯುವಿ ಕಡೆಗಣನೆ:
ಟೆಸ್ಟ್ ಕ್ರಿಕೆಟ್‌ನಲ್ಲಿ ಯುವರಾಜ್ ಸಿಂಗ್‌ರನ್ನು ಹೆಚ್ಚಾಗಿ ಆಡಿಸಲಿಲ್ಲ. ಬಿಸಿಸಿಐ ಯುವರಾಜ್‌ರನ್ನು ಏಕದಿನಕ್ಕೆ ಮಾತ್ರ ಸೀಮಿತಗೊಳಿಸಲಾಯಿತು. ಹೀಗಾಗಿ ಯುವರಾಜ್ ಕೇವಲ 50 ಟೆಸ್ಟ್ ಪಂದ್ಯಗಳಲ್ಲಿ ಮಾತ್ರ ಆಡಿದ್ದಾರೆ.
ಫಿಟ್ನೆಸ್‌ಗಾಗಿ ಯುವಿ ಶತ ಪ್ರಯತ್ನ:
ಕ್ಯಾನ್ಸರ್ ಬಳಿಕ ಕಮ್‌ಬ್ಯಾಕ್‌ಗಾಗಿ ಹಲವು ವರ್ಷಗಳನ್ನು ತೆಗೆದುಕೊಂಡಿದ್ದ ಯುವಿಗೆ ಫಿಟ್ನೆಸ್ ಕಾಯ್ದುಕೊಳ್ಳುವುದು ಅಸಾಧ್ಯದ ಮಾತಾಗಿತ್ತು. ಫಿಟ್ನೆಸ್ ಕಾಯ್ದುಕೊಳ್ಳದೇ ಇರುವುದರಿಂದ ಭಾರತ ತಂಡದಲ್ಲಿಯೂ ಯುವಿ ಅವಕಾಶ ವಂಚಿತರಾದರು. ಯುವಿ 2017ರ ಬಳಿಕ ಏಕದಿನ ತಂಡದಲ್ಲಿ ಆಡಿಲ್ಲ. ವೆಸ್ಟ್ ಇಂಡೀಸ್ ವಿರುದ್ಧವೇ ಯುವರಾಜ್ ಕೊನೆಯ ಪಂದ್ಯವನ್ನಾಡಿದ್ದಾರೆ.
ಯುವರಾಜ್ ವೃತ್ತಿಜೀವನದ 5 ಸಾಧನೆಗಳು!
ಕ್ಯಾನ್ಸರ್‌ನಿಂದ ಆಚೆ ಬಂದ ಬಳಿಕ
ಕಮ್‌ಬ್ಯಾಕ್‌ಗೆ 3 ವರ್ಷ ಕಾದ ಯುವಿ:
ಕ್ಯಾನ್ಸರ್‌ನಿಂದ ಗುಣಮುಖರಾದ ಬಳಿಕ ಭಾರತ ಕ್ರಿಕೆಟ್ ತಂಡಕ್ಕೆ ಕಮ್ ಬ್ಯಾಕ್ ಮಾಡಲು ಯುವರಾಜ್ ಸಿಂಗ್ ಸುಮಾರು 3 ವರ್ಷ ಕಾಯಬೇಕಾಯಿತು. ಬಿಸಿಸಿಐನ ಧೋರಣೆಯಿಂದಾಗಿ ವಿಶ್ವ ಶ್ರೇಷ್ಠ ಆಲ್ರೌಂಡರ್ ಯುವರಾಜ್, ಭಾರತ ತಂಡಕ್ಕೆ ಮರಳಲು ವರ್ಷಗಳೇ ಕಾಯುವಂತಾಯಿತು.
* ಒಟ್ಟಾರೆ ಭಾರತದ ಪರ 404 ಪಂದ್ಯಗಳನ್ನಾಡಿರುವ ಯುವರಾಜ್ ಸಿಂಗ್ 11,788 ರನ್ ಗಳಿಸಿದ್ದಾರೆ.
* 2011ರ ವಿಶ್ವಕಪ್‌ನಲ್ಲಿ ಯುವರಾಜ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. 1 ಶತಕ, 4 ಅರ್ಧಶತಕದೊಂದಿಗೆ 362 ರನ್, 15 ವಿಕೆಟ್ ಪಡೆದಿದ್ದರು.
* 2011ರ ವಿಶ್ವಕಪ್‌ನಲ್ಲಿ ಬ್ಯಾಟ್ಸ್‌ಮನ್ ವೊಬ್ಬರು 50 ರನ್ ಹಾಗೂ 5 ವಿಕೆಟ್ ಪಡೆದ ಮೊದಲ ಆಟಗಾರ ಎಂಬ ಕೀರ್ತಿಗೆ ಯುವಿ ಪಾತ್ರರಾಗಿದ್ದರು.
* 2011ರ ವಿಶ್ವಕಪ್‌ನಲ್ಲಿ 300ಕ್ಕೂ ಹೆಚ್ಚು ರನ್ ಹಾಗೂ 15 ವಿಕೆಟ್ ಪಡೆದ ಮೊದಲ ಆಲ್ರೌಂಡರ್ ಎಂಬ ಹೆಗ್ಗಳಿಕೆಗೆ ಯುವಿ ಪಾತ್ರ.
* 2007ರ ಚೊಚ್ಚಲ ಟಿ20 ವಿಶ್ವಕಪ್‌ನಲ್ಲಿ ಉಪನಾಯಕನಾಗಿದ್ದ ಯುವರಾಜ್, 12 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಸಾಧನೆ ಮಾಡಿದ್ದರು. ಟಿ20ಯಲ್ಲಿ 6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸಿದ ಮೊದಲ ಬ್ಯಾಟ್ಸ್‌ಮನ್ ಎನಿಸಿದ್ದಾರೆ.
ಯುವರಾಜ್ ಸಿಂಗ್ ನಿವೃತ್ತಿ- ವಿಶ್ವಕಪ್ ಹೀರೋಗೆ ಶುಭಕೋರಿದ ಲೆಜೆಂಡ್ಸ್!
* 2012ರಲ್ಲಿ ಅರ್ಜುನ ಪ್ರಶಸ್ತಿ, 2014ರಲ್ಲಿ ಪದ್ಮಶ್ರೀ ಪುರಸ್ಕೃತರಾಗಿದ್ದರು.
ಧೋನಿ ಜೊತೆ 3105 ರನ್ ಜೊತೆಯಾಟ:
ಏಕದಿನ ಕ್ರಿಕೆಟ್‌ನಲ್ಲಿ ಯುವರಾಜ್ ಸಿಂಗ್, ಎಂ.ಎಸ್. ಧೋನಿ ಅವರೊಂದಿಗೆ 3105 ರನ್ ಜೊತೆಯಾಟ ನಿರ್ವಹಿಸಿದ್ದಾರೆ. ಇದರಲ್ಲಿ 10 ಬಾರಿ ಶತಕದ ಜೊತೆಯಾಟದಲ್ಲಿ ಯುವಿ-ಧೋನಿ ಪಾಲ್ಗೊಂಡಿದ್ದಾರೆ. ರಾಹುಲ್ ದ್ರಾವಿಡ್ ಅವರೊಂದಿಗೆ 5 ಬಾರಿ ಶತಕದ ಜೊತೆಯಾಟ, ಸಚಿನ್ ತೆಂಡುಲ್ಕರ್ ಹಾಗೂ ಮೊಹಮದ್ ಕೈಫ್ ರೊಂದಿಗೆ ತಲಾ 3 ಶತಕದ ಜೊತೆಯಾಟ, ವಿರಾಟ್ ಕೊಹ್ಲಿ ಹಾಗೂ ಸುರೇಶ್ ರೈನಾ ರೊಂದಿಗೆ ತಲಾ 2 ಶತಕದ ಜೊತೆಯಾಟದಲ್ಲಿ ಯುವಿ ಪಾಲ್ಗೊಂಡಿದ್ದಾರೆ.
150 ರನ್ ವೈಯಕ್ತಿಕ ಗರಿಷ್ಠ:
ಏಕದಿನ ಕ್ರಿಕೆಟ್‌ನಲ್ಲಿ ಯುವರಾಜ್ ಸಿಂಗ್ ಅವರ ವೈಯಕ್ತಿಕ ಗರಿಷ್ಠ 150 ರನ್ ಆಗಿದೆ. 2017ರಲ್ಲಿ ಇಂಗ್ಲೆಂಡ್ ವಿರುದ್ಧ ಯುವರಾಜ್ 150 ರನ್ ಗಳಿಸಿದ್ದರು.