ಪುಟಿದೇಳುವ ವಿಶ್ವಾಸದಲ್ಲಿ ಬಾಂಗ್ಲಾ!

Published : Jun 11, 2019, 12:02 PM IST
ಪುಟಿದೇಳುವ ವಿಶ್ವಾಸದಲ್ಲಿ ಬಾಂಗ್ಲಾ!

ಸಾರಾಂಶ

ಇಂದು ಲಂಕಾ ವಿರುದ್ಧ ಪಂದ್ಯ | ಜಯದ ವಿಶ್ವಾಸದಲ್ಲಿ ದಿಮುತ್ ಪಡೆ

ಬ್ರಿಸ್ಟಲ್[ಜೂ.11]: 2019ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಕಳೆದ 2 ಪಂದ್ಯಗಳಲ್ಲಿ ಸತತ ಸೋಲು ಕಂಡಿರುವ ಬಾಂಗ್ಲಾದೇಶ, ಕಳಪೆ ಲಯದಲ್ಲಿರುವ ಶ್ರೀಲಂಕಾ ವಿರುದ್ಧ ಗೆದ್ದು ಮತ್ತೆ ಜಯದ ಹಳಿಗೆ ಮರಳುವ ವಿಶ್ವಾಸದಲ್ಲಿದೆ.

ಇಲ್ಲಿನ ಕೌಂಟಿ ಮೈದಾನದಲ್ಲಿ ಮಂಗಳವಾರ ಬಾಂಗ್ಲಾದೇಶ, ಶ್ರೀಲಂಕಾ ವಿರುದ್ಧ ಸೆಣಸಲು ಸಜ್ಜಾಗಿದೆ. ವಿಶ್ವಕಪ್ ಕ್ರಿಕೆಟ್‌ನಲ್ಲಿ ಲಂಕಾ ವಿರುದ್ಧ ಬಾಂಗ್ಲಾದ ಈ ಹಿಂದಿನ ಸಾಧನೆ ನಗಣ್ಯ. ಈ ಹಿಂದೆ ಲಂಕಾ ಎದುರು ಆಡಿರುವ ೩ ಪಂದ್ಯಗಳಲ್ಲಿ ಬಾಂಗ್ಲಾದೇಶ ಸೋಲು ಕಂಡಿದೆ. ಇದೀಗ ಈ ವಿಶ್ವಕಪನ್‌ನಲ್ಲಿ ಬಾಂಗ್ಲಾ ಜಯದ ಖಾತೆ ತೆರೆಯುವ ಉತ್ಸಾಹದಲ್ಲಿ ಕಣಕ್ಕಿಳಿಯುತ್ತಿದೆ.

ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 21 ರನ್ ಗಳ ಜಯದೊಂದಿಗೆ ಉತ್ತಮ ಆರಂಭ ಪಡೆದಿದ್ದ ಬಾಂಗ್ಲಾದೇಶ, ನಂತರ ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ಧ ಸೋಲುಂಡಿತ್ತು.

ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ: ಶ್ರೀಲಂಕಾ ಪಂದ್ಯ: 03 | ಬಾಂಗ್ಲಾದೇಶ: 00 |ಶ್ರೀಲಂಕಾ: 03

ಬಾಂಗ್ಲಾದೇಶ: ತಮೀಮ್, ಸರ್ಕಾರ್, ಶಕೀಬ್, ಮುಷ್ಫೀಕುರ್, ಮಿಥುನ್, ಮಹಮದುಲ್ಲಾ, ಮೊಸದೆಕ್, ಸೈಫುದ್ದೀನ್, ಮೆಹಿದಿ, ಮೊರ್ತಜಾ, ಮುಸ್ತಾಫಿಜುರ್.

ಶ್ರೀಲಂಕಾ: ದಿಮುತ್, ಕುಸಾಲ್ ಪೆರೇರಾ, ತಿರಿಮನ್ನೆ, ಕುಸಾಲ್ ಮೆಂಡೀಸ್, ಮ್ಯಾಥ್ಯೂಸ್, ಧನಂಜಯ, ತಿಸಾರ, ಉಡಾನ, ಲಕ್ಮಲ್, ಮಲಿಂಗಾ, ಪ್ರದೀಪ್.

ಪಿಚ್ ರಿಪೋರ್ಟ್: ಬ್ರಿಸ್ಟಲ್ ಪಿಚ್ ಬ್ಯಾಟಿಂಗ್ ಸ್ನೇಹಿಯಾಗಿದ್ದು ದೊಡ್ಡ ಮೊತ್ತ ನಿರೀಕ್ಷಿಸಬಹುದಾಗಿದೆ. ಈ ಪಿಚ್‌ನಲ್ಲಿ ನಡೆದ ಈ ಹಿಂದಿನ ೧೭ ಏಕದಿನ ಪಂದ್ಯಗಳಲ್ಲಿ ೭ರಲ್ಲಿ ಮೊದಲು ಬ್ಯಾಟ್ ಮಾಡಿದ ತಂಡ ಗೆದ್ದಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
One8 ಸ್ಪೋರ್ಟ್ಸ್ ಬ್ರ್ಯಾಂಡ್ ಮಾರಾಟಕ್ಕೆ ಮುಂದಾದ ಕೊಹ್ಲಿ, 40 ಕೋಟಿ ಹೂಡಿಕೆ ಪ್ಲಾನ್