ಭಾರತೀಯ ಕುಸ್ತಿ ಫೆಡರೇಷನ್‌ನ ಅಮಾನತು ಮಾಡಿದ ವಿಶ್ವ ಕುಸ್ತಿ ಸಂಸ್ಥೆ..! ಭಾರತದ ಧ್ವಜದಡಿ ಸ್ಪರ್ಧೆಗಿಲ್ಲ ಅವಕಾಶ

Published : Aug 25, 2023, 10:56 AM IST
ಭಾರತೀಯ ಕುಸ್ತಿ ಫೆಡರೇಷನ್‌ನ ಅಮಾನತು ಮಾಡಿದ ವಿಶ್ವ ಕುಸ್ತಿ ಸಂಸ್ಥೆ..! ಭಾರತದ ಧ್ವಜದಡಿ ಸ್ಪರ್ಧೆಗಿಲ್ಲ ಅವಕಾಶ

ಸಾರಾಂಶ

ಏಪ್ರಿಲ್ 27ರಂದು ಭಾರತೀಯ ಒಲಿಂಪಿಕ್‌ ಸಂಸ್ಥೆ(ಐಒಎ)ಯು ಡಬ್ಲ್ಯುಎಫ್‌ಐಗೆ ತಾತ್ಕಾಲಿಕ ಸಮಿತಿ ನೇಮಿಸಿ 45 ದಿನಗಳಲ್ಲಿ ಚುನಾವಣೆ ನಡೆಸುವಂತೆ ನಿರ್ದೇಶಿಸಿತ್ತು. ಬಳಿಕ ಏ.28ಕ್ಕೆ ವಿಶ್ವ ಕುಸ್ಥಿ ಸಂಸ್ಥೆಯು ನಿಗದಿತ ಸಮಯಕ್ಕೆ ಚುನಾವಣೆ ನಡೆಸದಿದ್ದರೆ ಡಬ್ಲ್ಯುಎಫ್‌ಐಅನ್ನು ನಿಷೇಧಿಸುವುದಾಗಿ ಎಚ್ಚರಿಸಿತ್ತು.

ನವದೆಹಲಿ(ಆ.25): ನಿಗದಿತ ಸಮಯಕ್ಕೆ ಚುನಾವಣೆ ನಡೆಸಲು ವಿಫಲವಾದ ಹಿನ್ನೆಲೆಯಲ್ಲಿ ಭಾರತೀಯ ಕುಸ್ತಿ ಒಕ್ಕೂಟ (ಡಬ್ಲ್ಯುಎಫ್‌ಐ)ವನ್ನು ವಿಶ್ವ ಕುಸ್ಥಿ ಸಂಸ್ಥೆ(ಯುಡಬ್ಲ್ಯುಡಬ್ಲ್ಯು) ಗುರುವಾರ ಅಮಾನತುಗೊಳಿಸಿದೆ.

ಏಪ್ರಿಲ್ 27ರಂದು ಭಾರತೀಯ ಒಲಿಂಪಿಕ್‌ ಸಂಸ್ಥೆ(ಐಒಎ)ಯು ಡಬ್ಲ್ಯುಎಫ್‌ಐಗೆ ತಾತ್ಕಾಲಿಕ ಸಮಿತಿ ನೇಮಿಸಿ 45 ದಿನಗಳಲ್ಲಿ ಚುನಾವಣೆ ನಡೆಸುವಂತೆ ನಿರ್ದೇಶಿಸಿತ್ತು. ಬಳಿಕ ಏ.28ಕ್ಕೆ ವಿಶ್ವ ಕುಸ್ಥಿ ಸಂಸ್ಥೆಯು ನಿಗದಿತ ಸಮಯಕ್ಕೆ ಚುನಾವಣೆ ನಡೆಸದಿದ್ದರೆ ಡಬ್ಲ್ಯುಎಫ್‌ಐಅನ್ನು ನಿಷೇಧಿಸುವುದಾಗಿ ಎಚ್ಚರಿಸಿತ್ತು. ಆದರೂ ಚುನಾವಣೆ ನಡೆಸದ್ದಕ್ಕೆ ಅಮಾನತುಗೊಳಿಸಲಾಗಿದೆ. ಈ ಮೊದಲು ಜುಲೈ 11ಕ್ಕೆ ನಿಗದಿಯಾಗಿದ್ದ ಚುನಾವಣೆಗೆ ಗುವಾಹಟಿ ಹೈಕೋರ್ಟ್‌ ತಡೆ ನೀಡಿದ್ದರೆ, ಆ.12ಕ್ಕೆ ನಡೆಯಬೇಕಿದ್ದ ಚುನಾವಣೆಯನ್ನು ಪಂಜಾಬ್‌ ಮತ್ತು ಹರ್ಯಾಣ ಹೈಕೋರ್ಟ್‌ ಮುಂದೂಡಿತ್ತು.

ಭಾರತದ ಧ್ವಜದಡಿ ಸ್ಪರ್ಧೆಗಿಲ್ಲ ಅವಕಾಶ

ಡಬ್ಲ್ಯುಎಫ್‌ಐ ನಿಷೇಧಕ್ಕೊಳಗಾದ ಹೊರತಾಗಿಯೂ ಭಾರತೀಯರಿಗೆ ಸೆಪ್ಟೆಂಬರ್ 16ರಿಂದ 24ರ ವರೆಗೆ ಸರ್ಬಿಯಾದಲ್ಲಿ ನಡೆಯಲಿರುವ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳಬಹುದು. ಆದರೆ ಅಥ್ಲೀಟ್‌ಗಳು ಭಾರತದ ಹೆಸರು, ಧ್ವಜ ಬಳಸುವಂತಿಲ್ಲ. ತಟಸ್ಥ ಸ್ಪರ್ಧಿಗಳಾಗಿ ಕಣಕ್ಕಿಳಿಯಬಹುದಾಗಿದೆ.

Chess World Cup 2023: ಪ್ರಜ್ಞಾನಂದ ಕೈ ತಪ್ಪಿದ ಚೆಸ್ ವಿಶ್ವಕಪ್ ಕಿರೀಟ..!

ಕ್ವಾರ್ಟರ್‌ಗೇರಿದ ಪ್ರಣಯ್‌, ಸಾತ್ವಿಕ್‌-ಚಿರಾಗ್‌ ಶೆಟ್ಟಿ

ಕೋಪೆನ್‌ಹೇಗನ್‌: ಭಾರತದ ತಾರಾ ಶಟ್ಲರ್‌ ಎಚ್‌.ಎಸ್‌.ಪ್ರಣಯ್‌ ಹಾಗೂ ವಿಶ್ವ ನಂ.2 ಡಬಲ್ಸ್‌ ಜೋಡಿ ಸಾತ್ವಿಕ್‌ ಸಾಯಿರಾಜ್‌ ಹಾಗೂ ಚಿರಾಗ್‌ ಶೆಟ್ಟಿ ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ನ ಪುರುಷರ ಡಬಲ್ಸ್‌ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ.

ಗುರುವಾರ ನಡೆದ ಪ್ರಿ ಕ್ವಾರ್ಟರ್‌ನಲ್ಲಿ ಪ್ರಣಯ್‌, ವಿಶ್ವ ನಂ.7 ಸಿಂಗಾಪುರದ ಲೊ ಕಿಯಾನ್‌ ಯೆವ್‌ ವಿರುದ್ಧ 21-18, 15-21, 21-19 ಗೇಮ್‌ಗಳಲ್ಲಿ ರೋಚಕ ಗೆಲುವು ಸಾಧಿಸಿದರು. ಇನ್ನು ಸಾತ್ವಿಕ್‌-ಚಿರಾಗ್‌ ಇಂಡೋನೇಷ್ಯಾದ ಲಿಯೋ ಕಾರ್ನಾಂಡೊ ಹಾಗೂ ಡೇನಿಯಲ್‌ ಮಾರ್ಥಿನ್‌ ವಿರುದ್ಧ 21-15, 19-21, 21-9 ಗೇಮ್‌ಗಳಲ್ಲಿ ಜಯಿಸಿದರು. ಕ್ವಾರ್ಟರ್‌ನಲ್ಲಿ ಡೆನ್ಮಾರ್ಕ್‌ನ ಕಿಮ್‌ ಆ್ಯಸ್ಟ್ರುಪ್‌ ಹಾಗೂ ಆ್ಯಂಡರ್ಸ್‌ ರಾಸ್ಮುಸೆನ್‌ ವಿರುದ್ಧ ಸೆಣಸಲಿದ್ದು, ಸತತ 2ನೇ ಬಾರಿಗೆ ಪದಕ ಗೆಲ್ಲಲು ಭಾರತೀಯ ಜೋಡಿ ಇನ್ನೊಂದು ಪಂದ್ಯ ಗೆಲ್ಲಬೇಕಿದೆ.

World Athletics Championships: ಇಂದು ನೀರಜ್ ಚೋಪ್ರಾ, ಮನು ಕಣಕ್ಕೆ..!

ಇದೇ ವೇಳೆ ಮಹಿಳಾ ಡಬಲ್ಸ್‌ನ ಪ್ರಿ ಕ್ವಾರ್ಟರ್‌ನಲ್ಲಿ ತ್ರೀಸಾ ಜಾಲಿ ಹಾಗೂ ಗಾಯತ್ರಿ ಗೋಪಿಚಂದ್‌, ಅಗ್ರ ಶ್ರೇಯಾಂಕಿತ ಚೀನಾದ ಚೆನ್‌ ಕಿಂಗ್‌ ಹಾಗೂ ಜಿಯಾ ಫನ್‌ ವಿರುದ್ಧ 14-21, 9-21 ಗೇಮ್‌ಗಳಲ್ಲಿ ಸೋಲುಂಡರು.

ಮೊದಲ ಸಲ ಭಾರತದಲ್ಲಿ ನೇಯ್ಮರ್‌ ಫುಟ್ಬಾಲ್‌ ಆಟ!

ಮುಂಬೈ: ಬ್ರೆಜಿಲ್‌ನ ಫುಟ್ಬಾಲ್‌ ದಿಗ್ಗಜ, ವಿಶ್ವ ವಿಖ್ಯಾತಿ ಪಡೆದಿರುವ ನೇಯ್ಮರ್‌ರ ಕಾಲ್ಚಳಕವನ್ನು ಭಾರತದಲ್ಲಿ ಮೊದಲ ಬಾರಿಗೆ ನೋಡುವ ಅವಕಾಶ ಅಭಿಮಾನಿಗಳಿಗೆ ಸಿಗುವ ನಿರೀಕ್ಷೆ ಇದೆ. ಸೆ.18ರಿಂದ ಆರಂಭಗೊಳ್ಳಲಿರುವ 2023-24ರ ಏಷ್ಯನ್‌ ಚಾಂಪಿಯನ್ಸ್‌ ಲೀಗ್‌ನಲ್ಲಿ ಭಾರತದ ಮುಂಬೈ ಸಿಟಿ ಎಫ್‌ಸಿ ಹಾಗೂ ಸೌದಿ ಅರೇಬಿಯಾದ ಅಲ್‌ ಹಿಲಾಲ್‌ ತಂಡಗಳು ಒಂದೇ ಗುಂಪಿನಲ್ಲಿ ಸ್ಥಾನ ಗಿಟ್ಟಿಸಿಕೊಂಡಿವೆ. ಇತ್ತೀಚೆಗಷ್ಟೇ ಸೌದಿಯ ಅಲ್‌ ಹಿಲಾಲ್‌ ಕ್ಲಬ್‌ ಸೇರಿರುವ ನೇಯ್ಮರ್‌ ಭಾರತಕ್ಕೆ ಆಗಮಿಸುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಮುಂಬೈ ತಂಡ ತನ್ನ ತವರಿನ ಪಂದ್ಯಗಳನ್ನು ಪುಣೆಯ ಬಾಲೆವಾಡಿ ಕ್ರೀಡಾಂಗಣದಲ್ಲಿ ಆಡಲಿದ್ದು, ತಾತ್ಕಾಲಿಕ ವೇಳಾಪಟ್ಟಿ ಪ್ರಕಾರ ಪಂದ್ಯ ನ.7ಕ್ಕೆ ನಿಗದಿಯಾಗಬಹುದು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮದುವೆ ಮುರಿದ ಬಳಿಕ ದೊಡ್ಡ ನಿರ್ಧಾರ ಮಾಡಿದ ಸ್ಮೃತಿ ಮಂಧನಾ, ಇಡೀ ತಂಡ ಬಂದ್ರೂ ಕಾಣಿಸಿಕೊಳ್ಳದ ಸ್ಮೃತಿ..
ಟಿ20 ರ‍್ಯಾಂಕಿಂಗ್: ಐಸಿಸಿ ಟಿ20 ವಿಶ್ವಕಪ್‌ಗೂ ಮುನ್ನ ಸೂರ್ಯಕುಮಾರ್ ಯಾದವ್‌ಗೆ ಶಾಕ್; ಟಾಪ್ 10 ಪಟ್ಟಿಯಿಂದ ಔಟ್!