ಕಳೆದ ವರ್ಷ ಅಮೆರಿಕದಲ್ಲಿ ನಡೆದಿದ್ದ ಕೂಟದಲ್ಲಿ ನೀರಜ್ ಬೆಳ್ಳಿ ಪದಕ ಗೆದ್ದಿದ್ದರು. ಈ ಬಾರಿ ಸುಧಾರಿತ ಪ್ರದರ್ಶನದೊಂದಿಗೆ ಚಿನ್ನ ಗೆಲ್ಲುವ ತವಕದಲ್ಲಿದ್ದಾರೆ. ಕಿಶೋರ್ ಜೆನಾ ಹಾಗೂ ಕರ್ನಾಟಕದ ಡಿ.ಪಿ. ಮನು ಕೂಡಾ ಜಾವೆಲಿನ್‌ನ ಅರ್ಹತಾ ಸುತ್ತಿನಲ್ಲಿ ಸ್ಪರ್ಧಿಸಲಿದ್ದು, ಫೈನಲ್‌ಗೇರುವ ನಿರೀಕ್ಷೆಯಲ್ಲಿದ್ದಾರೆ.
ಬುಡಾಪೆಸ್ಟ್(ಹಂಗೇರಿ): ಈ ಬಾರಿ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಪದಕ ತಂದುಕೊಡುವ ನೆಚ್ಚಿನ ಅಥ್ಲೀಟ್ ಎನಿಸಿಕೊಂಡಿರುವ ನೀರಜ್ ಚೋಪ್ರಾ ಶುಕ್ರವಾರ ಬಹುನಿರೀಕ್ಷಿತ ಜಾವೆಲಿನ್ ಎಸೆತದಲ್ಲಿ ಅರ್ಹತಾ ಸುತ್ತಿನಲ್ಲಿ ಕಣಕ್ಕಿಳಿಯಲಿದ್ದಾರೆ. ಕಳೆದ ವರ್ಷ ಅಮೆರಿಕದಲ್ಲಿ ನಡೆದಿದ್ದ ಕೂಟದಲ್ಲಿ ನೀರಜ್ ಬೆಳ್ಳಿ ಪದಕ ಗೆದ್ದಿದ್ದರು. ಈ ಬಾರಿ ಸುಧಾರಿತ ಪ್ರದರ್ಶನದೊಂದಿಗೆ ಚಿನ್ನ ಗೆಲ್ಲುವ ತವಕದಲ್ಲಿದ್ದಾರೆ. ಕಿಶೋರ್ ಜೆನಾ ಹಾಗೂ ಕರ್ನಾಟಕದ ಡಿ.ಪಿ. ಮನು ಕೂಡಾ ಜಾವೆಲಿನ್‌ನ ಅರ್ಹತಾ ಸುತ್ತಿನಲ್ಲಿ ಸ್ಪರ್ಧಿಸಲಿದ್ದು, ಫೈನಲ್‌ಗೇರುವ ನಿರೀಕ್ಷೆಯಲ್ಲಿದ್ದಾರೆ.
ಪದಕ ಗೆಲ್ಲದ ಜೆಸ್ವಿನ್, ಬಾಬು
ಗುರುವಾರ ರಾತ್ರಿ ಪುರುಷರ ಲಾಂಗ್‌ಜಂಪ್ ಫೈನಲ್‌ನಲ್ಲಿ ಭಾರತದ ಜೆಸ್ವಿನ್ ಆಲ್ಡ್ರಿನ್ ಪದಕ ಗೆಲ್ಲಲು ವಿಫಲರಾದರು. ಮೊದಲೆರಡು ಪ್ರಯತ್ನ ಫೌಲ್ ಆಯಿತು. 3ನೇ ಪ್ರಯತ್ನದಲ್ಲಿ 7.77 ಮೀಟರ್ ದೂರಕ್ಕೆ ಜಿಗಿದರಾದರೂ ಇದು ಪದಕ ಗೆಲ್ಲಲು ಸಾಕಾಗಲಿಲ್ಲ. ಇನ್ನು ಇದೇ ವೇಳೆ ಪುರುಷರ 35 ಕಿ.ಮೀ. ವೇಗದ ನಡಿಗೆ ಸ್ಪರ್ಧೆಯ ಫೈನಲ್‌ನಲ್ಲಿ ರಾಮ್ ಬಾಬು 27ನೇ ಸ್ಥಾನಕ್ಕೆ ತೃಪ್ತಿಪಟ್ಟರು.
Chess World Cup 2023: ಪ್ರಜ್ಞಾನಂದ ಕೈ ತಪ್ಪಿದ ಚೆಸ್ ವಿಶ್ವಕಪ್ ಕಿರೀಟ..!
ಪಾರುಲ್ ಫೈನಲ್‌ಗೆ
ಬುಧವಾರ ರಾತ್ರಿ ನಡೆದ ಮಹಿಳೆಯರ 3000 ಮೀ. ಸ್ಟೀಪಲ್‌ಚೇಸ್‌ನಲ್ಲಿ ಪಾರುಲ್ ಚೌಧರಿ ಫೈನಲ್ ಪ್ರವೇಶಿಸಿದರು. ಅವರು 9 ನಿಮಿಷ 24.29 ಸೆಕೆಂಡ್‌ಗಳಲ್ಲಿ ಕ್ರಮಿಸಿ ಹೀಟ್ಸ್‌ನಲ್ಲಿ 5ನೇ ಸ್ಥಾನಿಯಾಗಿ ಫೈನಲ್ ತಲುಪಿದರು.
ಶೂಟರ್ ರಾಜೇಶ್ವರಿಗೆ ಒಲಿಂಪಿಕ್ಸ್ ಅರ್ಹತೆ
ಬಾಕು: ಭಾರತದ ರಾಜೇಶ್ವರಿ ಕುಮಾರಿ ಶೂಟಿಂಗ್ ವಿಶ್ವ ಚಾಂಪಿಯನ್‌ಶಿಪ್‌ನ ಮಹಿಳೆಯರ ಟ್ರ್ಯಾಪ್ ವಿಭಾಗದ ಫೈನಲ್‌ನಲ್ಲಿ 5ನೇ ಸ್ಥಾನ ಪಡೆಯುವ ಮೂಲಕ 2024ರ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ. ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಭಾರತದ 2ನೇ ಶಾಟ್‌ಗನ್ ಹಾಗೂ ಒಟ್ಟಾರೆ 7ನೇ ಶೂಟರ್ ಎನಿಸಿದ್ದಾರೆ. ಇನ್ನು ಗುರುವಾರ ನಡೆದ ಪುರುಷರ 25 ಮೀ. ಸೆಂಟರ್ ಫೈಯರ್ ಪಿಸ್ತೂಲ್ ತಂಡ ವಿಭಾಗದಲ್ಲಿ ಭಾರತಕ್ಕೆ ಕಂಚು ದೊರೆಯಿತು. 5 ಚಿನ್ನ, 5 ಕಂಚಿನೊಂದಿಗೆ ಭಾರತ ಪದಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ.
Chess World Cup: ಒಂದು ವೇಳೆ ಪ್ರಜ್ಞಾನಂದ ಫೈನಲ್ ಗೆದ್ದರೇ ಸಿಗುವ ನಗದು ಬಹುಮಾನ ಎಷ್ಟು ಗೊತ್ತಾ?
ಹಾಕಿ ಫೈವ್ಸ್: ಭಾರತಕ್ಕೆ ಇಂದು ಮಲೇಷ್ಯಾ ಸವಾಲು
ಸಲಾಲ(ಒಮಾನ್): ಮಹಿಳೆಯರ ಏಷ್ಯನ್ ಹಾಕಿ ಫೈವ್ಸ್ ವಿಶ್ವಕಪ್ ಅರ್ಹತಾ ಟೂರ್ನಿ ಶುಕ್ರವಾರ ಆರಂಭಗೊಳ್ಳಲಿದ್ದು, ಭಾರತ ಮೊದಲ ಪಂದ್ಯದಲ್ಲಿ ಮಲೇಷ್ಯಾ ವಿರುದ್ಧ ಸೆಣಸಾಡಲಿದೆ. ಭಾರತ ಎಲೈಟ್ ಗುಂಪಿನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದು, ಜಪಾನ್, ಥಾಯ್ಲೆಂಡ್ ಕೂಡಾ ಇದೇ ಗುಂಪಿನಲ್ಲಿವೆ. ಭಾರತ ಶನಿವಾರ ಜಪಾನ್ ಹಾಗೂ ಭಾನುವಾರ ಥಾಯ್ಲೆಂಡ್ ವಿರುದ್ಧ ಸೆಣಸಾಡಲಿದೆ. ಅರ್ಹತಾ ಟೂರ್ನಿಯಲ್ಲಿ 10 ತಂಡಗಳು ಪಾಲ್ಗೊಳ್ಳಲಿದ್ದು, ವಿಶ್ವಕಪ್‌ಗೆ ಅರ್ಹತೆ ಪಡೆಯಬೇಕಿದ್ದರೆ ಭಾರತ ಅಗ್ರ-3ರಲ್ಲಿ ಸ್ಥಾನ ಪಡೆಯಬೇಕಿದೆ.