ಬ್ರಿಜ್‌ಭೂಷಣ್ ಸಿಂಗ್ ವಿರುದ್ಧ ಸಾಕಷ್ಟು ಸಾಕ್ಷ್ಯವಿದೆ: ಕೋರ್ಟ್‌ಗೆ ಡೆಲ್ಲಿ ಪೊಲೀಸ್‌ ಮಾಹಿತಿ

By Naveen Kodase  |  First Published Aug 12, 2023, 11:05 AM IST

ಬ್ರಿಜ್‌ಭೂಷಣ್ ಲೈಂಗಿಕ ಕಿರುಕುಳ ನೀಡಿದ್ದಕ್ಕೆ ಸಾಕಷ್ಟು ಸಾಕ್ಷ್ಯಾಧಾರಗಳಿವೆ
ಬ್ರಿಜ್‌ಭೂಷಣ್‌ಗೆ ಉರುಳಾಗುತ್ತಾ ಡೆಲ್ಲಿ ಪೊಲೀಸರ ಹೇಳಿಕೆ?
ಬ್ರಿಜ್‌ ಅವರನ್ನು ವಿಚಾರಣೆಗೊಳಪಡಿಸಬೇಕು ಎಂದು ಮನವಿ ಮಾಡಿಕೊಂಡ ಪೊಲೀಸರು


ನವದೆಹಲಿ(ಆ.12): ಭಾರತೀಯ ಕುಸ್ತಿ ಒಕ್ಕೂಟ(ಡಬ್ಲ್ಯುಎಫ್‌ಐ)ದ ನಿರ್ಗಮಿತ ಅಧ್ಯಕ್ಷ ಬ್ರಿಜ್‌ಭೂಷಣ್‌ ಸಿಂಗ್‌ ವಿರುದ್ಧದ ಲೈಂಗಿಕ ಕಿರುಕುಳ ಆರೋಪಗಳನ್ನು ಸಾಬೀತುಪಡಿಸಲು ಸಾಕಷ್ಟು ಸಾಕ್ಷ್ಯಾಧಾರಗಳಿದ್ದು, ಅವರನ್ನು ವಿಚಾರಣೆ ನಡೆಸಬೇಕು ಎಂದು ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಮುಂದಿನ ವಿಚಾರಣೆ ಆಗಸ್ಟ್19ರಂದು ನಡೆಯಲಿದೆ.

ಕಳೆದ ಏಪ್ರಿಲ್‌ನಲ್ಲಿ ಅಪ್ರಾಪ್ತೆ ಸೇರಿ​ದಂತೆ 7 ಮಂದಿ ನೀಡಿದ್ದ ದೂರಿಗೆ ಸಂಬಂಧಿ​ಸಿ​ದಂತೆ ದೆಹಲಿ ಪೊಲೀ​ಸರು ಬ್ರಿಜ್‌​ಭೂ​ಷಣ್‌ ವಿರುದ್ಧ ಪೋಕ್ಸೋ ಸೇರಿ 2 ಎಫ್‌​ಐ​ಆರ್‌ ದಾಖ​ಲಿ​ಸಿ​ದ್ದರು. ಈ ಬಗ್ಗೆ 5 ದೇಶ​ಗಳಲ್ಲಿ ನಡೆದಿದ್ದ ಕುಸ್ತಿ ಕೂಟಗಳ ವೇಳೆ ದಾಖಲಾಗಿದ್ದ ಸಿಸಿಟೀವಿ ದೃಶ್ಯಗಳ ಪರಿ​ಶೀ​ಲ​ನೆ, ಕುಸ್ತಿ​ಪ​ಟು​ಗ​ಳು, ರೆಫ್ರಿ ಹಾಗೂ ಕೋಚ್‌​ಗಳು ಸೇರಿ​ದಂತೆ 180ಕ್ಕೂ ಹೆಚ್ಚು ಮಂದಿಯ ಹೇಳಿಕೆ ದಾಖ​ಲಿಸಿಕೊಂಡಿದ್ದ ಪೊಲೀ​ಸರು ತನಿಖೆ ಪೂರ್ಣಗೊಳಿಸಿ ದೆಹಲಿ ಮ್ಯಾಜಿಸ್ಪ್ರೇಟ್‌ ಕೋರ್ಚ್‌ಗೆ 1500 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

Latest Videos

undefined

Wrestlers sexual harassment case: ಬ್ರಿಜ್‌ಭೂಷಣ್‌ಗೆ ತಾತ್ಕಾಲಿಕ ರಿಲೀಫ್..! ಮಧ್ಯಂತರ ಜಾಮೀನು ಮಂಜೂರು

ಬ್ರಿಜ್‌ಭೂಷಣ್ ಶರಣ್‌ ಸಿಂಗ್‌ಗೆ ಡೆಲ್ಲಿ ರೂಸೋ ಅವಿನ್ಯೂ ಕೋರ್ಟ್‌ ಸದ್ಯ ಮಧ್ಯಂತರ ಜಾಮೀನು ನೀಡಿದೆ. ಇದೀಗ ಇದೇ ಕೋರ್ಟ್‌ನಲ್ಲಿ ಬಿಜೆಪಿ ಸಂಸದ ಹಾಗೂ ಭಾರತೀಯ ಕುಸ್ತಿ ಒಕ್ಕೂಟ(ಡಬ್ಲ್ಯುಎಫ್‌ಐ)ದ ನಿರ್ಗಮಿತ ಅಧ್ಯಕ್ಷ ಬ್ರಿಜ್‌ಭೂಷಣ್‌ ಸಿಂಗ್‌ ವಿರುದ್ದ ವಿಚಾರಣೆ ನಡೆಯಿತು. ಈ ಕುರಿತಂತೆ ವಿಚಾರಣೆಯಲ್ಲಿ ಪಾಲ್ಗೊಂಡ ಡೆಲ್ಲಿ ಪೊಲೀಸರು, ಬ್ರಿಜ್‌ಭೂಷಣ್ ಸಿಂಗ್ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಸಾಬೀತುಪಡಿಸಲು ನಮ್ಮ ಬಳಿ ಸಾಕಷ್ಟು ಸಾಕ್ಷ್ಯಾಧಾರಗಳು ಲಭ್ಯವಿವೆ ಎಂದು ಕೋರ್ಟ್‌ಗೆ ತಿಳಿಸಿದ್ದಾರೆ. ಇದು ಬ್ರಿಜ್‌ಭೂಷಣ್‌ಗೆ ಉರುಳಾಗುವ ಸಾಧ್ಯತೆಯಿದೆ.

ವಿವಿಧ ಸೆಕ್ಷ​ನ್‌​ಗ​ಳಡಿ ಚಾರ್ಜ್‌ಶೀ​ಟ್‌

ಬ್ರಿಜ್‌ ವಿರುದ್ಧ ಪೋಕ್ಸೋ ಕೇಸ್‌ ರದ್ದು​ಗೊ​ಳಿ​ಸಲು ಶಿಫಾ​ರಸು ಮಾಡ​ಲಾ​ಗಿ​ದ್ದರೂ ಇತರರ ದೂರು​ಗ​ಳಿಗೆ ಸಂಬಂಧಿ​ಸಿ​ದಂತೆ ವಿವಿಧ ಸೆಕ್ಷ​ನ್‌​ಗ​ಳಡಿ ಚಾರ್ಜ್‌​ಶೀಟ್‌ ಸಲ್ಲಿ​ಕೆ​ಯಾ​ಗಿದೆ. ಐಪಿಸಿ 354(ಮಹಿಳೆಯರ ಮೇಲೆ ಹಲ್ಲೆ), 354ಎ(ಲೈಂಗಿಕ ಕಿರುಕುಳ), 354ಡಿ(ಹಿಂಬಾಲಿಸುವಿಕೆ) ಹಾಗೂ 506(ಬೆದರಿಕೆ) ಸೆಕ್ಷನ್‌ಗಳ ಅಡಿಯಲ್ಲಿ ದೋಷಾರೋಪ ಪಟ್ಟಿಸಲ್ಲಿ​ಸ​ಲಾ​ಗಿದೆ. ಇದರ ಜೊತೆಗೆ ಈಗಾ​ಗಲೇ ಅಮ​ನ​ತು​ಗೊಂಡಿ​ರುವ ಡಬ್ಲ್ಯು​ಎ​ಫ್‌​ಐನ ಹೆಚ್ಚು​ವರಿ ಕಾರ‍್ಯ​ದ​ರ್ಶಿ ವಿನೋದ್‌ ತೋಮರ್‌ ವಿರು​ದ್ಧ ಐಪಿಸಿ 109, 354, 354ಎ ಹಾಗೂ 506 ಸೆಕ್ಷ​ನ್‌​ಗ​ಳಡಿ ಚಾರ್ಜ್‌​ಶೀಟ್‌ ಸಲ್ಲಿ​ಕೆ​ಯಾ​ಗಿದೆ.

Asian Champions Trophy 2023: ಜಪಾನ್ ಮಣಿಸಿ ಫೈನಲ್‌ಗೆ ಲಗ್ಗೆಯಿಟ್ಟ ಭಾರತ ಹಾಕಿ ತಂಡ..!

ಕುಸ್ತಿ ಒಕ್ಕೂಟದ ಚುನಾವಣೆ ಮತ್ತೊಮ್ಮೆ ಮುಂದೂಡಿಕೆ!

ಚಂಡೀಗಢ: ಹಲವು ಬಾರಿ ಮುಂದೂಡಿಕೆಯಾಗಿದ್ದ ಭಾರತೀಯ ಕುಸ್ತಿ ಒಕ್ಕೂಟ(ಡಬ್ಲ್ಯುಎಫ್‌ಐ)ದ ಬಹುನಿರೀಕ್ಷಿತ ಚುನಾವಣೆಗೆ ಮತ್ತೊಮ್ಮೆ ತಡೆ ಬಿದ್ದಿದೆ. ಶನಿವಾರ ಡಬ್ಲ್ಯುಎಫ್‌ಐನ 15 ಸ್ಥಾನಗಳಿಗೆ ಚುನಾವಣೆ ನಡೆಯಬೇಕಿತ್ತು. ಆದರೆ ಶುಕ್ರವಾರ ಪಂಜಾಬ್‌ ಮತ್ತು ಹರ್ಯಾಣ ಹೈಕೋರ್ಟ್‌ ಚುನಾವಣೆಯನ್ನು ಮುಂದೂಡಿ ಆದೇಶಿಸಿತು.

ಹರ್ಯಾಣ ಅಮೆಚೂರ್ ಕುಸ್ತಿ ಸಂಸ್ಥೆಗೆ ಡಬ್ಲ್ಯುಎಫ್‌ಐ ಚುನಾವಣೆಯಲ್ಲಿ ಮತ ಚಲಾಯಿಸಲು ಅವಕಾಶ ನೀಡಿದ್ದನ್ನು ಪ್ರಶ್ನಿಸಿ, ಸಂಸದ ದೀಪಿಂದರ್‌ ಹೂಡಾ ಮುಖ್ಯಸ್ಥರಾಗಿರುವ ಹರ್ಯಾಣ ಕುಸ್ತಿ ಸಂಸ್ಥೆ ನ್ಯಾಯಾಲಯದ ಮೊರೆ ಹೋಗಿತ್ತು. ಹರ್ಯಾಣ ಅಮೆಚೂರ್ ಕುಸ್ತಿ ಸಂಸ್ಥೆಯು ಡಬ್ಲ್ಯುಎಫ್‌ಐನ ಮಾನ್ಯತೆ ಪಡೆದಿದ್ದರೂ, ಹರ್ಯಾಣ ಒಲಿಂಪಿಕ್ಸ್‌ ಸಂಸ್ಥೆಯ ಮಾನ್ಯತೆ ಪಡೆದಿಲ್ಲ. ಹೀಗಾಗಿ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಬಾರದು ಎಂದು ವಾದಿಸಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾ.ವಿನೋದ್‌ ಭಾರದ್ವಾಜ್‌ ಮುಂದಿನ ಆದೇಶದವರೆಗೆ ಚುನಾವಣೆಯನ್ನು ಮುಂದೂಡಿದರು.

click me!