ವಿಶ್ವಕಪ್ 2019: ಟೀಂ ಇಂಡಿಯಾಗೆ ಎಚ್ಚರಿಕೆ ನೀಡಿದ ಪಾಕ್!

By Web Desk  |  First Published Apr 22, 2019, 10:51 PM IST

ವಿಶ್ವಕಪ್ ಟೂರ್ನಿಗೆ ತಂಡ ಪ್ರಕಟಿಸಿ ಆರಂಭಿಕ ತಯಾರಿ ಆರಂಭಿಸಿರುವ ಟೀಂ ಇಂಡಿಯಾಗೆ ಇದೀಗ ಪಾಕಿಸ್ತಾನ ತಂಡದ ನಾಯಕ ಸರ್ಫರಾಜ್ ಅಹಮ್ಮದ್ ಎಚ್ಚರಿಕೆ ನೀಡಿದ್ದಾರೆ. 
 


ಇಸ್ಲಾಮಾಬಾದ್(ಏ.22): ವಿಶ್ವಕಪ್ ಟೂರ್ನಿಗೆ ತಯಾರಿ ಆರಂಭಗೊಂಡಿದೆ. ಪ್ರತಿಷ್ಠಿತ ಸರಣಿ ಮೇ.30 ರಿಂದ ಆರಂಭಗೊಳ್ಳಲಿದೆ. ಆದರೆ ಎಲ್ಲರ ಚಿತ್ತ ಜೂನ್ 16ರ ಭಾರತ ಹಾಗೂ ಪಾಕಿಸ್ತಾನ ಪಂದ್ಯದ ನಡುವೆ ನೆಟ್ಟಿದೆ. ಇದೀಗ ವಿಶ್ವಕಪ್ ಸರಣಿಗೆ ಕೌಂಟ್‌ಡೌನ್ ಆರಂಭವಾಗುತ್ತಿದ್ದಂತೆ, ಪಾಕಿಸ್ತಾನ ನಾಯಕ ಸರ್ಫಾರಾಜ್ ಅಹಮ್ಮದ್, ಟೀಂ ಇಂಡಿಯಾಗೆ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಗೆ ಆಫ್ಘಾನಿಸ್ತಾನ ತಂಡ ಪ್ರಕಟ

Latest Videos

undefined

ಭಾರತ ಆಗಿರಲಿ, ಆಫ್ಘಾನಿಸ್ತಾನವೇ ಆಗರಲಿ, ಎಲ್ಲಾ ಎದುರಾಳಿಗಳು ನಮಗೆ ಒಂದೆ. ಭಾರತ ವಿರುದ್ದ ಗೆಲ್ಲಲೇಬೇಕು. ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾವನ್ನು 180 ರನ್‌ಗಳಿಂದ ಮಣಿಸಿದ್ದೇವೆ. ಇದೀಗ ಮತ್ತೊಮ್ಮೆ ಐಸಿಸಿ ಟೂರ್ನಿಯಲ್ಲಿ ಮಣಿಸಲು ಸಿದ್ದರಾಗಿದ್ದೇವೆ ಎಂದು ಸರ್ಫರಾಜ್ ಹೇಳಿದ್ದಾರೆ.

ಇದನ್ನೂ ಓದಿ: ವಿಶ್ವಕಪ್ ಟೂರ್ನಿಗೂ ಮುನ್ನ ಪಾಕ್’ಗೆ ’ಸಣ್ಣ ಶಾಕ್’.!

ವಿಶ್ವಕಪ್ ಹೋರಾಟದಲ್ಲಿ ಭಾರತ ವಿರುದ್ದ ಗೆದ್ದಿಲ್ಲ ಅನ್ನೋದು ಇತಿಹಾಸ. ಈ ಬಾರಿ ಹೊಸ ಇತಿಹಾಸ ರಚಿಸಲಿದ್ದೇವೆ ಎಂದಿದ್ದಾರೆ. ಇಂಡೋ-ಪಾಕ್ ಹೋರಾಟ ಉಭಯ ತಂಡಗಳಿಗೆ ಪ್ರತಿಷ್ಠೆಯ ಪ್ರಶ್ನೆ. ಇಲ್ಲಿ ಯಾರೂ ಕೂಡ ಸೋಲನ್ನ ಸಹಿಸಿಲ್ಲ. ಅದರಲ್ಲೂ ಪುಲ್ವಾಮಾ ದಾಳಿ ಬಳಿಕ ಪಾಕ್ ವಿರುದ್ದ ಪಂದ್ಯ ಬಹಿಷ್ಕರಿಸೋ ಮಾತು ಕೇಳಿಬಂದಿತ್ತು. ಹೀಗಾಗಿ ಪಾಕಿಸ್ತಾನ ವಿರುದ್ಧದ ಪಂದ್ಯ ಅತೀ ದೊಡ್ಡ ಕ್ರಿಕೆಟ್ ಹೋರಾಟವಾಗಿ ಮಾರ್ಪಡಲಿದೆ.

click me!