IPL 2019: ಡೆಲ್ಲಿ ವಿರುದ್ಧ ಅಜಿಂಕ್ಯ ರಹಾನೆ ಸೆಂಚುರಿ!

By Web DeskFirst Published 22, Apr 2019, 9:22 PM IST
Highlights

ಐಪಿಎಲ್ ಟೂರ್ನಿಯಲ್ಲಿ ಅಜಿಂಕ್ಯ ರಹಾನೆ ಶತಕ ಸಿಡಿಸಿ ಮಿಂಚಿದ್ದಾರೆ. ಡೆಲ್ಲಿ ವಿರುದ್ಧ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದದ ರಹಾನೆ ಶತಕದ ದಾಖಲೆ ಬರೆದಿದ್ದಾರೆ.

ಜೈಪುರ(ಏ.22): ರಾಜಸ್ಥಾನ ರಾಯಲ್ಸ್ ತಂಡದ ನಾಯಕತ್ವದಿಂದ ಕೆಳಗಿಳಿದ ಮೇಲೆ ಅಜಿಂಕ್ಯ ರಹಾನೆ ಅದೃಷ್ಠ ಬದಲಾಗಿದೆ. ಸ್ಫೋಟಕ ಬ್ಯಾಟಿಂಗ್ ಮೂಲಕ ರಹಾನೆ ಮಿಂಚಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ನಡೆದ ಪಂದ್ಯದಲ್ಲಿ ರಾಹನೆ ಆಕರ್ಷಕ ಶತಕ ಸಿಡಿಸಿದ್ದಾರೆ. ಈ ಮೂಲಕ ಐಪಿಎಲ್ ಟೂರ್ನಿಯಲ್ಲಿ ರಹಾನೆ 2ನೇ ಶತಕ ದಾಖಲಿಸಿದ್ದಾರೆ.

ಇದನ್ನೂ ಓದಿ: IPL 2019: ಫೈನಲ್ ಪಂದ್ಯ ಚೆನ್ನೈನಿಂದ ಶಿಫ್ಟ್!

ಡೆಲ್ಲಿ ವಿರುದ್ದ ಆರಂಭದಲ್ಲೇ ವಿಕೆಟ್ ಕಳೆದುಕೊಂಡರೂ, ರಹಾನೆ ಮಾತ್ರ ಹೋರಾಟ ಮುಂದುವರಿಸಿದರು. ನಾಯಕ ಸ್ಟೀವ್ ಸ್ಮಿತ್ ಜೊತೆ ಸೇರಿ ಅಬ್ಬರಿಸಿದ ರಹಾನೆ 58 ಎಸೆತದಲ್ಲಿ ಶತಕ ಪೂರೈಸಿದ್ದಾರೆ. ರಹಾನೆ ಶತಕದಲ್ಲಿ 11 ಬೌಂಡರಿ ಹಾಗೂ 3 ಸಿಕ್ಸರ್ ಒಳಗೊಂಡಿತ್ತು. 

ಇದನ್ನೂ ಓದಿ: 12ನೇ ಆವೃತ್ತಿಯ ಐಪಿಎಲ್‌ಗೆ ಸ್ಟಾರ್ ಕ್ರಿಕೆಟಿಗ ಗುಡ್ ಬೈ..!

19ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ಒಟ್ಟು 6 ಶತಕ ದಾಖಲಾಗಿದೆ. ಸಂಜು ಸಾಮ್ಸನ್, ಕೆ.ಎಲ್.ರಾಹುಲ್, ಡೇವಿಡ್ ವಾರ್ನರ್, ಜಾನಿ ಬೈರ್‌ಸ್ಟೋ, ವಿರಾಟ್ ಕೊಹ್ಲಿ ಹಾಗೂ ಇದೀಗ ಅಜಿಂಕ್ಯ ರಹಾನೆ ಕೂಡ ಸೆಂಚುರಿ ಸಿಡಿಸಿದ್ದಾರೆ. 

Last Updated 22, Apr 2019, 9:37 PM IST