ವಿಶ್ವಕಪ್ ಅಭ್ಯಾಸ ಪಂದ್ಯ: ವಿಕೆಟ್ ಕೀಪಿಂಗ್ ಬದಲು ಫೀಲ್ಡಿಂಗ್ ಮಾಡಿದ ಧೋನಿ!

By Web DeskFirst Published May 26, 2019, 9:28 AM IST
Highlights

ನ್ಯೂಜಿಲೆಂಡ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಎಂ.ಎಸ್.ಧೋನಿ ವಿಕೆಟ್ ಕೀಪಿಂಗ್ ಬದಲು ಫೀಲ್ಡಿಂಗ್ ಮಾಡಿ ಗಮನಸೆಳೆದರು. ಧೋನಿ ಫೀಲ್ಡಿಂಗ್ ವೀಡಿಯೋ ವೈರಲ್ ಆಗಿದೆ.

ಓವಲ್(ಮೇ.26): ನ್ಯೂಜಿಲೆಂಡ್ ವಿರುದ್ದ ನಡೆದ ವಿಶ್ವಕಪ್ ಅಭ್ಯಾಸ ಪಂದ್ಯದಲ್ಲಿ ಟೀಂ  ಇಂಡಿಯಾ ಮುಗ್ಗರಿಸಿದೆ. ಆದರೆ ಈ ಪಂದ್ಯದಲ್ಲಿ ಕುತೂಹಲ ಘಟನೆ ನಡೆದಿದೆ. ನಿಗದಿತ ಓವರ್ ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾದ ವಿಕೆಟ್ ಕೀಪರ್ ಎಂ.ಎಸ್.ಧೋನಿ ಕೀಪಿಂಗ್ ಬದಲು ಫೀಲ್ಡಿಂಗ್ ಮಾಡಿ ಗಮನಸೆಳೆದರು.

ಇದನ್ನೂ ಓದಿ: ವಿಶ್ವಕಪ್ 2019: ಆಟಗಾರರಿಗೆ ಗಾಯ -ಫೀಲ್ಡಿಂಗ್‌ಗಿಳಿದ ಕೋಚ್‌!

ನ್ಯೂಜಿಲೆಂಡ್ ಬ್ಯಾಟಿಂಗ್ ವೇಳೆ ಧೋನಿ, ಕೀಪ್ಂಗ್ ಗ್ಲೌಸ್ ಕಳಚಿಟ್ಟರು. ದಿನೇಶ್ ಕಾರ್ತಿಕ್ ಕೀಪಿಂಗ್ ಜವಾಬ್ದಾರಿ ನಿರ್ವಹಿಸಿದರೆ ಧೋನಿ ಫೀಲ್ಡಿಂಗ್‌ ಮಾಡಿದರು. ಸಾಮಾಜಿಕ ಜಾಲತಾಣದಲ್ಲಿ ಧೋನಿ ಪೀಲ್ಡಿಂಗ್ ವಿಡೀಯೋ ವೈರಲ್ ಆಗಿದೆ.

 

Thala fielding at the boundary and Dhoni chants at the warmup game.
Thanks for this special one !!. pic.twitter.com/AvZnMKUIHW

— Prabhu (@Cricprabhu)

 

ಇದನ್ನೂ ಓದಿ: ವಿಶ್ವಕಪ್ ಅಭ್ಯಾಸ ಪಂದ್ಯ: ನ್ಯೂಜಿಲೆಂಡ್‌ಗೆ ಶರಣಾದ ಕೊಹ್ಲಿ ಬಾಯ್ಸ್!

28ರಂದು ಕಾರ್ಡಿಫ್‌ನಲ್ಲಿ ನಡೆಯಲಿರುವ ಅಭ್ಯಾಸ ಪಂದ್ಯದಲ್ಲಿ ಭಾರತ,  ಬಾಂಗ್ಲಾದೇಶವನ್ನು ಎದುರಿಸಲಿದೆ. 2 ಅಭ್ಯಾಸ ಪಂದ್ಯದ ಬಳಿಕ ಭಾರತ ಅಸಲಿ ಹೋರಾಟಕ್ಕೆ ರೆಡಿಯಾಗಲಿದೆ. ಮೇ.30 ರಿಂದ ವಿಶ್ವಕಪ್ ಟೂರ್ನಿ ಆರಂಭವಾಗಲಿದೆ. ಭಾರತದ ಹೋರಾಟ ಜೂನ್ 5 ರಿಂದ ಆರಂಭವಾಗಲಿದೆ.
 

click me!