ವಿಶ್ವಕಪ್ 2019: ಆಟಗಾರರಿಗೆ ಗಾಯ -ಫೀಲ್ಡಿಂಗ್‌ಗಿಳಿದ ಕೋಚ್‌!

Published : May 26, 2019, 09:02 AM IST
ವಿಶ್ವಕಪ್ 2019: ಆಟಗಾರರಿಗೆ ಗಾಯ -ಫೀಲ್ಡಿಂಗ್‌ಗಿಳಿದ ಕೋಚ್‌!

ಸಾರಾಂಶ

ವಿಶ್ವಕಪ್ ಅಭ್ಯಾಸದಲ್ಲಿ ಇಂಗ್ಲೆಂಡ್ ತಂಡಕ್ಕೆ ತೀವ್ರ ಹಿನ್ನಡೆಯಾಗಿದೆ. ಒಂದೆಡೆ ಸೋಲಿನ ಆಘಾತ, ಮತ್ತೊಂದೆಡೆ ತಂಡದ ಪ್ರಮುಖ ಆಟಗಾರರ ಇಂಜುರಿ. ಗಾಯದ ಸಮಸ್ಯೆಯಿಂದ ಆಟಗಾರರ ಹೊರನಡೆದಾಗ ಸ್ವತಃ ಕೋಚ್ ಮೈದಾನಕ್ಕಿಳಿದು ಫೀಲ್ಡಿಂಗ್ ಮಾಡಿದ್ದಾರೆ.

ಸೌಥಾಂಪ್ಟನ್‌(ಮೇ.26): ಆಸ್ಪ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಇಂಗ್ಲೆಂಡ್‌ ವೇಗಿಗಳಾದ ಮಾರ್ಕ್ ವುಡ್‌ ಹಾಗೂ ಜೋಫ್ರಾ ಆರ್ಚರ್‌ ಗಾಯಗೊಂಡು ಮೈದಾನ ತೊರೆದ ಕಾರಣ, ಮಾಜಿ ನಾಯಕ ಹಾಗೂ ಹಾಲಿ ಸಹಾಯಕ ಕೋಚ್‌ ಪಾಲ್‌ ಕಾಲಿಂಗ್‌ವುಡ್‌ ಫೀಲ್ಡಿಂಗ್‌ ಮಾಡಲು ಮೈದಾನಕ್ಕಿಳಿದ ಪ್ರಸಂಗ ನಡೆಯಿತು. ವುಡ್‌ರ ಜೆರ್ಸಿ ತೊಟ್ಟು ಫೀಲ್ಡಿಂಗ್‌ ಮಾಡಿದ 42 ವರ್ಷದ ಕಾಲಿಂಗ್‌ವುಡ್‌, ಆಕರ್ಷಕ ಕ್ಷೇತ್ರರಕ್ಷಣೆ ಮೂಲಕ ಪ್ರೇಕ್ಷಕರ ಗಮನ ಸೆಳೆದರು.

ಇದನ್ನೂ ಓದಿ: ಗೌತಮ್ ಗಂಭೀರ್ ಮೂರ್ಖ-ನೂತನ ಸಂಸದನ ತಿವಿದ ಶಾಹಿದ್ ಆಫ್ರಿದಿ!

ಕಾಲಿಂಗ್‌ವುಡ್ ಅದ್ಬುತ ಫೀಲ್ಡಿಂಗ್ ಮೂಲಕ ಆಸಿಸ್ ನಾಯಕ ಆ್ಯರೋನ್ ಫಿಂಚ್ ಬಲಿ ಪಡೆದರು. ಮಾರ್ಕ್ ವುಡ್ ಕಾಲಿಗೆ ಗಾಯವಾಗಿರೋದರಿಂದ ವಿಶ್ರಾಂತಿಗೆ ಜಾರಿದ್ದಾರೆ. ಇನ್ನು ನಾಯಕ ಇಯಾನ್ ಮಾರ್ಗನ್ ಎಡೈಗ ಬೆರಳಿಗೆ ಗಾಯವಾಗಿದೆ. 
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

‘ವಿಡಿಯೋ ಗೇಮ್‌ನಲ್ಲೂ ಹೀಗೆ ಆಡಲು ಸಾಧ್ಯವಿಲ್ಲ’: ವೈಭವ್ ಸೂರ್ಯವಂಶಿ ಆಟಕ್ಕೆ RCB ಕೋಚ್ ದಿನೇಶ್ ಕಾರ್ತಿಕ್ ಫಿದಾ
IPL 2027 ಮಿನಿ ಹರಾಜಿಗೆ ಹೆಸರು ರಿಜಿಸ್ಟರ್ ಮಾಡಿದ 1,220 ಅಟಗಾರರು; ಗರಿಷ್ಠ ಮೂಲ ಬೆಲೆ ಹೊಂದಿದ ಆಟಗಾರರಲ್ಲಿ ಭಾರತದ ಇಬ್ಬರಿಗಷ್ಟೇ ಸ್ಥಾನ..!