ಬ್ಯಾಡ್ಮಿಂಟನ್‌ ವಿಶ್ವ ಚಾಂಪಿಯನ್‌ಶಿಪ್‌: ಕ್ವಾರ್ಟರ್‌ಫೈನಲ್‌ಗೆ ಪ್ರಣೀತ್‌

Published : Aug 23, 2019, 10:58 AM IST
ಬ್ಯಾಡ್ಮಿಂಟನ್‌ ವಿಶ್ವ ಚಾಂಪಿಯನ್‌ಶಿಪ್‌: ಕ್ವಾರ್ಟರ್‌ಫೈನಲ್‌ಗೆ ಪ್ರಣೀತ್‌

ಸಾರಾಂಶ

ಬ್ಯಾಡ್ಮಿಂಟನ್ ವಿಶ್ವಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಮಿಶ್ರಫಲಿತಾಂಶ ಎದುರಾಗಿದೆ. ಸಾಯಿ ಪ್ರಣೀತ್ ಕ್ವಾರ್ಟರ್‌ ಫೈನಲ್ ಪ್ರವೇಶಿಸಿದರೆ, ಪ್ರಣಯ್ ಹೋರಾಟ ಅಂತ್ಯಗೊಂಡಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

ಬಾಸೆಲ್‌(ಆ.23): ಬ್ಯಾಡ್ಮಿಂಟನ್‌ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಮಿಶ್ರಫಲ ದೊರೆತಿದ್ದು, ಭಾರತದ ಶಟ್ಲರ್‌ ಬಿ.ಸಾಯಿ ಪ್ರಣೀತ್‌, ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರೆ, ಎಚ್.ಎಸ್ ಪ್ರಣಯ್ ಹೋರಾಟ ಅಂತ್ಯವಾಗಿದೆ.

ವಿಶ್ವ ಚಾಂಪಿಯನ್‌ಶಿಪ್: ಪ್ರಿ ಕ್ವಾರ್ಟರ್‌ಗೆ ಸೈನಾ, ಸಿಂಧು!

ಗುರುವಾರ ನಡೆದ ಪುರುಷರ ಸಿಂಗಲ್ಸ್‌ನ ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ಪ್ರಣೀತ್‌, ಇಂಡೋನೇಷ್ಯಾದ ಆ್ಯಂಥೋಣಿ ಸಿನಿಸುಕ ಗಿಂಟಿಂಗ್‌ ವಿರುದ್ಧ 21-19, 21-13 ಗೇಮ್‌ಗಳಲ್ಲಿ ಗೆಲುವು ಸಾಧಿಸಿದರು. ಮೊದಲ ಗೇಮ್‌ನಲ್ಲಿ ಎದುರಾಳಿ ಶಟ್ಲರ್‌ರಿಂದ ಪ್ರಬಲ ಪೈಪೋಟಿ ಎದುರಿಸಿದ ಪ್ರಣೀತ್‌, 2ನೇ ಗೇಮ್‌ನಲ್ಲಿ ಸುಲಭ ಮುನ್ನಡೆ ಕಾಯ್ದುಕೊಂಡು ಪಂದ್ಯ ಗೆದ್ದರು. 

ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌: ಲಿನ್ ಡಾನ್‌ಗೆ ಆಘಾತ ನೀಡಿದ ಪ್ರಣಯ್‌!

ಕ್ವಾರ್ಟರ್‌ನಲ್ಲಿ ಪ್ರಣೀತ್‌, ಇಂಡೋನೇಷ್ಯಾದ ಕ್ರಿಸ್ಟಿಜೆ. ಅಥವಾ ಡೆನ್ಮಾರ್ಕ್ನ ಜೊರ್ಗೆನ್ಸನ್‌ರನ್ನು ಎದುರಿಸಲಿದ್ದಾರೆ. ಮತ್ತೊಂದು ಪ್ರಿ ಕ್ವಾರ್ಟರ್‌ ಪಂದ್ಯದಲ್ಲಿ ಎಚ್‌.ಎಸ್‌.ಪ್ರಣಯ್‌, ವಿಶ್ವ ನಂ.1 ಶಟ್ಲರ್‌ ಜಪಾನ್‌ನ ಕೆಂಟೊ ಮೊಮೊಟಾ ವಿರುದ್ಧ 19-21, 12-21 ಗೇಮ್‌ಗಳಲ್ಲಿ ಸೋಲುಂಡು ಹೊರಬಿದ್ದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಆರ್‌ಸಿಬಿ ಫ್ಯಾನ್ಸ್‌ಗೆ ಗುಡ್ ನ್ಯೂಸ್, ಚಿನ್ನಸ್ವಾಮಿಯಲ್ಲಿ ಐಪಿಎಲ್ ಪಂದ್ಯ ನಡೆಸಲು ಸರ್ಕಾರ ಅನುಮತಿ
ಬಿಗ್‌ ಬ್ಯಾಷ್ ಲೀಗ್‌ನಲ್ಲಿ ಬಾಬರ್ ಅಜಂಗೆ ಮುಖಭಂಗ: ಮೈದಾನದಲ್ಲಿ ನಡೆದದ್ದೇನು? ವಿಡಿಯೋ ವೈರಲ್