ಪ್ರದೀಪ್ ನರ್ವಾಲ್ ಮಿಂಚಿನ ಪ್ರದರ್ಶನದ ಹೊರತಾಗಿಯೂ, ಬೆಂಗಾಲ್ ವಾರಿಯರ್ಸ್ ತಂಡದ ರಕ್ಷಣಾಕೋಟೆ ಎದುರು ಪಾಟ್ನಾ ಪೈರೇಟ್ಸ್ ಶರಣಾಗಿದೆ. 7ನೇ ಆವೃತ್ತಿಯ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಪಾಟ್ನಾ 6ನೇ ಸೋಲು ಕಂಡಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..
ಚೆನ್ನೈ[ಆ.23]: ಪ್ರೊ ಕಬಡ್ಡಿ 7ನೇ ಆವೃತ್ತಿಯಲ್ಲಿ 3 ಬಾರಿ ಚಾಂಪಿಯನ್ ಪಾಟ್ನಾ ಪೈರೇಟ್ಸ್ 6ನೇ ಸೋಲು ಕಂಡಿದೆ. ತಾರಾ ರೈಡರ್ ಪ್ರದೀಪ್ ನರ್ವಾಲ್ ರೈಡಿಂಗ್‌ನಲ್ಲಿ ಮಿಂಚಿದರೆ ಮಾತ್ರ ಪಾಟ್ನಾಗೆ ಜಯ ಎನ್ನುವಂತಹ ಸ್ಥಿತಿ ನಿರ್ಮಾಣವಾಗಿದೆ.
PKL 2019: ಮುಂಬಾ ಗೆಲುವನ್ನು ಕಸಿದ ಸ್ಟೀಲರ್ಸ್..!
ಬೆಂಗಾಲ್ ವಾರಿಯರ್ಸ್ ವಿರುದ್ಧ ಗುರುವಾರದ ಪಂದ್ಯದಲ್ಲಿ ಪಾಟ್ನಾ 26-35ರಲ್ಲಿ ಪರಾಭವಗೊಂಡಿತು. ಪ್ರದೀಪ್ 19 ರೈಡ್‌ಗಳಲ್ಲಿ 12 ಅಂಕಗಳಿಸಿದರು. ಪಾಟ್ನಾಗೆ 2ನೇ ರೈಡರ್ ಕೊರತೆ ಕಾಡಿತು. ಪಂದ್ಯದ ಬಹುತೇಕ ಸಮಯ ಪ್ರದೀಪ್‌ರನ್ನು ಹೊರಗಿಟ್ಟಬೆಂಗಾಲ್ ಅಂಕಗಳಿಕೆಯಲ್ಲಿ ಉತ್ತಮ ಅಂತರ ಸಾಧಿಸಿತು.
ಪ್ರೊ ಕಬಡ್ಡಿ 2019: 7ನೇ ಆವೃತ್ತಿ ವೇಳಾಪಟ್ಟಿ ಪ್ರಕಟ!
ಮೊದಲಾರ್ಧದ ಮುಕ್ತಾಯಕ್ಕೆ 15-14ರಿಂದ ಮುಂದಿದ್ದ ಬೆಂಗಾಲ್, ದ್ವಿತೀಯಾರ್ಧದಲ್ಲೂ ಪ್ರಾಬಲ್ಯ ಮೆರೆಯಿತು. 32ನೇ ನಿಮಿಷದಲ್ಲಿ ಪಾಟ್ನಾವನ್ನು ಆಲೌಟ್ ಮಾಡಿದ ಬೆಂಗಾಲ್ 13 ಅಂಕಗಳ ಮುನ್ನಡೆ ಪಡೆಯಿತು. ಬೆಂಗಾಲ್‌ಗಿದು 5ನೇ ಗೆಲುವಾಗಿದ್ದು, ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ.
ಇಂದಿನ ಪಂದ್ಯಗಳು:
ಗುಜರಾತ್-ಪಾಟ್ನಾ, ಸಂಜೆ 7.30ಕ್ಕೆ,
ತಲೈವಾಸ್-ಯು ಮುಂಬಾ, ರಾತ್ರಿ 8.30ಕ್ಕೆ