ಜೂರಿಚ್‌ ಡೈಮಂಡ್ ಲೀಗ್: ಎರಡನೇ ಸ್ಥಾನ ಪಡೆದ ಫೈನಲ್‌ಗೆ ಅರ್ಹತೆ ಪಡೆದ ನೀರಜ್ ಚೋಪ್ರಾ

By Naveen Kodase  |  First Published Sep 1, 2023, 12:18 PM IST

ನೀರಜ್ ಚೋಪ್ರಾ, ಈ ಹಿಂದೆ ಸ್ವಿಟ್ಜರ್‌ಲೆಂಡ್ ಹಾಗೂ ಹಂಗೇರಿಯಲ್ಲಿ ತೋರಿದಂತಹ ಪ್ರದರ್ಶನವನ್ನು ಜೂರಿಚ್ ಡೈಮಂಡ್ ಲೀಗ್‌ನಲ್ಲಿ ಪ್ರದರ್ಶಿಸಲು ಸಾಧ್ಯವಾಗಲಿಲ್ಲ. ನೀರಜ್ ಚೋಪ್ರಾ ಸ್ವಿಟ್ಜರ್‌ಲೆಂಡ್‌ನಲ್ಲಿ 88.77 ಮೀಟರ್ ಹಾಗೂ ಹಂಗೇರಿಯಲ್ಲಿ 88.17 ಮೀಟರ್ ದೂರ ಜಾವೆಲಿನ್ ಎಸೆದಿದ್ದರು. ಆದರೆ ಜೂರಿಚ್‌ ಡೈಮಂಡ್ ಲೀಗ್‌ನಲ್ಲಿ 25 ವರ್ಷದ ನೀರಜ್ ಚೋಪ್ರಾ 86 ಮೀಟರ್ ದೂರ ಗಡಿ ದಾಟಲೂ ಸಾಧ್ಯವಾಗಲಿಲ್ಲ.


ಜೂರಿಚ್‌(ಸೆ.01): ಇತ್ತೀಚೆಗಷ್ಟೇ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಪುರುಷರ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ನೀರಜ್ ಚೋಪ್ರಾ, ಇದೀಗ ಜೂರಿಚ್‌ ಡೈಮಂಡ್ ಲೀಗ್ ಸ್ಪರ್ಧೆಯಲ್ಲಿ 85.71 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಈ ಮೂಲಕ ಮುಂಬರುವ ಸೆಪ್ಟೆಂಬರ್ 17ರಂದು ಯುಜಿನ್‌ನಲ್ಲಿ ನಡೆಯಲಿರುವ ಡೈಮಂಡ್ ಫೈನಲ್‌ಗೆ ಅರ್ಹತೆಗಿಟ್ಟಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ.

ಗುರುವಾರ ತಡರಾತ್ರಿ ನಡೆದ ಜೂರಿಚ್‌ ಡೈಮಂಡ್‌ ಲೀಗ್‌ನಲ್ಲಿ 25 ವರ್ಷದ ನೀರಜ್‌ ಚೋಪ್ರಾ, 6 ಪ್ರಯತ್ನಗಳ ಪೈಕಿ 3 ಲೀಗ್ ಥ್ರೋ ಮಾಡಿದರೆ, ಇನ್ನು ಮೂರು ಪೌಲ್‌ ಮಾಡಿದರು. ನೀರಜ್ ಚೋಪ್ರಾ ಲೀಗ್ ಥ್ರೋಗಳ ಪೈಕಿ ಕ್ರಮವಾಗಿ 80.79 ಮೀಟರ್, 85.22 ಮೀಟರ್ ಹಾಗೂ 85.71 ಮೀಟರ್ ದೂರ ಜಾವೆಲಿನ್ ಎಸೆದರು.

Tap to resize

Latest Videos

US Open 2023: ಜೋಕೋ, ಇಗಾ 3ನೇ ಸುತ್ತಿಗೆ ಲಗ್ಗೆ

Incredible effort from our World Champion at !

2nd place finish with a huge throw of 85.71m and a spot in his 2nd consecutive Final💪

The nation rallies behind you and supports you, Champ. You have given 🇮🇳 countless moments to rejoice,… pic.twitter.com/jqdWbcYewG

— Anurag Thakur (@ianuragthakur)

ಇನ್ನುಳಿದಂತೆ ಇತ್ತೀಚೆಗಷ್ಟೇ ಮುಕ್ತಾಯವಾದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದ ಜೆಕ್ ಗಣರಾಜ್ಯದ ಜೇಕಬ್‌ ವೆಡ್ಲ್‌ಜೆಕ್ 85.86 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ಮೊದಲ ಸ್ಥಾನ ಪಡೆಯುವಲ್ಲಿ ಯಶಸ್ವಿಯಾದರು. ಇನ್ನು ಜರ್ಮನಿಯ ಜೂಲಿಯನ್ ವೇಬರ್ 85.04 ಮೀಟರ್ ದೂರ ಎಸೆಯುವ ಮೂಲಕ ಜೂರಿಚ್ ಡೈಮಂಡ್ ಲೀಗ್‌ನಲ್ಲಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. 

ದೇಶಕ್ಕೆ ಹಿರಿಮೆ ತಂದ ಪ್ರಜ್ಞಾನಂದನ ಕುಟುಂಬವನ್ನು ಭೇಟಿ ಮಾಡಿದ ಪ್ರಧಾನಿ ನರೇಂದ್ರ ಮೋದಿ!

ನೀರಜ್ ಚೋಪ್ರಾ, ಈ ಹಿಂದೆ ಸ್ವಿಟ್ಜರ್‌ಲೆಂಡ್ ಹಾಗೂ ಹಂಗೇರಿಯಲ್ಲಿ ತೋರಿದಂತಹ ಪ್ರದರ್ಶನವನ್ನು ಜೂರಿಚ್ ಡೈಮಂಡ್ ಲೀಗ್‌ನಲ್ಲಿ ಪ್ರದರ್ಶಿಸಲು ಸಾಧ್ಯವಾಗಲಿಲ್ಲ. ನೀರಜ್ ಚೋಪ್ರಾ ಸ್ವಿಟ್ಜರ್‌ಲೆಂಡ್‌ನಲ್ಲಿ 88.77 ಮೀಟರ್ ಹಾಗೂ ಹಂಗೇರಿಯಲ್ಲಿ 88.17 ಮೀಟರ್ ದೂರ ಜಾವೆಲಿನ್ ಎಸೆದಿದ್ದರು. ಆದರೆ ಜೂರಿಚ್‌ ಡೈಮಂಡ್ ಲೀಗ್‌ನಲ್ಲಿ 25 ವರ್ಷದ ನೀರಜ್ ಚೋಪ್ರಾ 86 ಮೀಟರ್ ದೂರ ಗಡಿ ದಾಟಲೂ ಸಾಧ್ಯವಾಗಲಿಲ್ಲ.

ಇನ್ನು 2023ರ ಡೈಮಂಡ್ ಲೀಗ್ ಬಗ್ಗೆ ಹೇಳುವುದಾದರೇ, ನೀರಜ್ ಚೋಪ್ರಾ ಮೇ.05ರಂದು ನಡೆದ ದೋಹಾ ಡೈಮಂಡ್ ಲೀಗ್‌ ಹಾಗೂ ಜೂನ್ 30ರಂದು ನಡೆದ ಲಾಸನ್ನೆ ಡೈಮಂಡ್ ಲೀಗ್‌ನಲ್ಲಿ ಮೊದಲ ಸ್ಥಾನ ಪಡೆಯುವ ಮೂಲಕ 16 ಅಂಕಗಳನ್ನು ತಮ್ಮ ಖಾತೆಗೆ ಹಾಕಿಕೊಂಡಿದ್ದರು. ಇದೀಗ ಜೂರಿಚ್ ಡೈಮಂಡ್ ಲೀಗ್‌ನಲ್ಲಿ ನೀರಜ್‌ ಎರಡನೇ ಸ್ಥಾನ ಪಡೆಯುವ ಮೂಲಕ ಮತ್ತೆ 7 ಅಂಕಗಳನ್ನು ತಮ್ಮ ಖಾತೆಗೆ ಸೇರಿಸಿಕೊಂಡಿದ್ದಾರೆ. ಸದ್ಯ ನೀರಜ್ ಚೋಪ್ರಾ ಖಾತೆಯಲ್ಲಿ 23 ಅಂಕಗಳು ಇವೆ. ಸೆಪ್ಟೆಂಬರ್ 17ರಂದು ಅಮೆರಿಕದ ಯುಜಿನ್‌ನಲ್ಲಿ ನಡೆಯಲಿರುವ ಡೈಮಂಡ್ ಫೈನಲ್‌ನಲ್ಲಿ ಮತ್ತಷ್ಟು ಉತ್ತಮ ಪ್ರದರ್ಶನ ತೋರುವ ವಿಶ್ವಾಸದಲ್ಲಿದ್ದಾರೆ.

click me!