ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್: ಮೊದಲ ಸುತ್ತಲ್ಲಿ ಮೇರಿಗೆ ಬೈ

By Kannadaprabha News  |  First Published Oct 4, 2019, 2:17 PM IST

ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ 6 ಬಾರಿಯ ವಿಶ್ವ ಚಾಂಪಿಯನ್ ಮೇರಿ ಕೋಮ್ ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...


ರಷ್ಯಾ(ಅ.04): 2019ನೇ ಸಾಲಿನ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಗುರುವಾರ ಇಲ್ಲಿ ಆರಂಭವಾಗಿದೆ. 6 ಬಾರಿಯ ವಿಶ್ವ ಚಾಂಪಿಯನ್ ಮೇರಿ ಕೋಮ್ (51 ಕೆ.ಜಿ), ಸಹಿತ ಐವರು ಭಾರತೀಯ ಬಾಕ್ಸರ್‌ಗಳು ಮೊದಲ ಸುತ್ತಿನ ಬೈ ಪಡೆದಿದ್ದಾರೆ. ಈ ಬಾಕ್ಸಿಂಗ್ ಟೂರ್ನಿಯಲ್ಲಿ ಮತ್ತೊಂದು ಚಿನ್ನದ ಮೇಲೆ ಕಣ್ಣಿಟ್ಟಿರುವ ಮೇರಿ, ತಮ್ಮ ಚಿನ್ನದ ದಾಖಲೆಯನ್ನು 7ಕ್ಕೇರಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ. 

ಪದ್ಮವಿಭೂಷಣ ಪ್ರಶಸ್ತಿಗೆ ಬಾಕ್ಸರ್ ಮೇರಿ ಕೋಮ್ ಹೆಸರು ಶಿಫಾರಸು

Tap to resize

Latest Videos

ಕಳೆದೊಂದು ವರ್ಷ ಗಾಯದಿಂದ ಬಳಲುತ್ತಿದ್ದ ಭಾರತದ ಬಾಕ್ಸರ್ ಮಂಜು ಬಂಬೋರಿಯಾ ಇದೇ ಮೊದಲ ಬಾರಿಗೆ ವಿಶ್ವ ಬಾಕ್ಸಿಂಗ್‌ನಲ್ಲಿ ಸೆಣಸಲಿದ್ದಾರೆ. 64 ಕೆ.ಜಿ ವಿಭಾಗದಲ್ಲಿ ಮಂಜು ವಿಶ್ವ ಬಾಕ್ಸಿಂಗ್ ಪಾದಾರ್ಪಣೆ ಮಾಡಲಿದ್ದು, ಹೆಚ್ಚಿನ ನಿರೀಕ್ಷೆಯಿದೆ. ನೀರಜ್ (57 ಕೆ.ಜಿ), ಸರಿತಾ ದೇವಿ (60 ಕೆ.ಜಿ), ಲೊವ್ಲಿನಾ (69 ಕೆ.ಜಿ) ಬೈ ಪಡೆದರು.

ಬೆಲ್ಜಿಯಂ ಬಗ್ಗುಬಡಿದ ಹಾಕಿ ಟೀಂ ಇಂಡಿಯಾ

ಜಮುನಾ (54 ಕೆ.ಜಿ), ಸವೀಟಿ (75 ಕೆ.ಜಿ), ನಂದಿನಿ (81 ಕೆ.ಜಿ), ಕವಿತಾ (81+ಕೆ.ಜಿ) ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ.
 

click me!