ಆಫ್ರಿಕಾ ಎದುರು ಟಿ20 ಸರಣಿ ಕೈವಶ ಮಾಡಿಕೊಂಡ ಮಹಿಳಾ ಟೀಂ ಇಂಡಿಯಾ

Published : Oct 04, 2019, 12:29 PM IST
ಆಫ್ರಿಕಾ ಎದುರು ಟಿ20 ಸರಣಿ ಕೈವಶ ಮಾಡಿಕೊಂಡ ಮಹಿಳಾ ಟೀಂ ಇಂಡಿಯಾ

ಸಾರಾಂಶ

ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಮಹಿಳಾ ತಂಡ ಮತ್ತೊಮ್ಮೆ ಸುಲಭ ಜಯ ದಾಖಲಿಸಿದೆ. ಭಾರತೀಯ ಸ್ಪಿನ್ನರ್‌ಗಳ ದಾಳಿಗೆ ತತ್ತರಿಸಿದ ಹರಿಣಗಳ ಪಡೆ ಅಲ್ಪ ಮೊತ್ತ ಗಳಿಸಿತ್ತು. ಆ ಬಳಿಕ ಬ್ಯಾಟಿಂಗ್‌ನಲ್ಲೂ ಪ್ರಾಬಲ್ಯ ಮೆರೆಯುವಲ್ಲಿ ಹರ್ಮನ್‌ಪ್ರೀತ್ ಪಡೆ ಯಶಸ್ವಿಯಾಗಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ... 

ಸೂರತ್[ಅ.04]: ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ವನಿತೆಯರು 3-0ಯಿಂದ ಟಿ20 ಅಂತಾರಾಷ್ಟ್ರೀಯ ಸರಣಿ ವಶಪಡಿಸಿದೆ. ಗುರುವಾರ ಇಲ್ಲಿ ನಡೆದ 5ನೇ ಟಿ20ನಲ್ಲಿ ಭಾರತ 5 ವಿಕೆಟ್‌ಗಳಿಂದ ಜಯಿಸಿತು. 

ಮೊದಲು ಬ್ಯಾಟ್ ಮಾಡಿದ ಆಫ್ರಿಕಾ ರಾಧಾ ಯಾದವ್ ಸ್ಪಿನ್ ದಾಳಿಗೆ ಕುಸಿದು 20 ಓವರಲ್ಲಿ 8 ವಿಕೆಟ್ ನಷ್ಟಕ್ಕೆ 98 ರನ್ ಪೇರಿಸಿತು. ರಾಧಾ 3 ವಿಕೆಟ್ ಕಿತ್ತರು. ಇನ್ನು ದೀಪ್ತಿ ಶರ್ಮಾ 19 ರನ್ ನೀಡಿ 2 ವಿಕೆಟ್ ಪಡೆದರೆ, ಪೂನಂ ಯಾಧವ್ ಕೇವಲ 15 ರನ್ ನೀಡಿ 1 ವಿಕೆಟ್ ಪಡೆದರು. 

ಆಫ್ರಿಕಾ ವಿರುದ್ಧ ಟಿ20 ಸರಣಿ ಗೆದ್ದು ಬೀಗಿದ ಮಹಿಳಾ ಟೀಂ ಇಂಡಿಯಾ

99 ರನ್ ಸುಲಭ ಗುರಿ ಬೆನ್ನತ್ತಿದ ಭಾರತ 17.1 ಓವರಲ್ಲೇ 5 ವಿಕೆಟ್ ನಷ್ಟಕ್ಕೆ ಗುರಿ ಮುಟ್ಟಿತು. ನಾಯಕಿ ಹರ್ಮನ್ ಅಜೇಯ 34 ರನ್ ಗಳಿಸಿದರು. ಮಳೆಯಿಂದ 2ನೇ, 3ನೇ ಟಿ20 ಪಂದ್ಯಗಳು ರದ್ದಾಗಿದ್ದವು. ಇದರಿಂದ 5 ಪಂದ್ಯಗಳ ಟಿ20 ಸರಣಿಗೆ ಇನ್ನೊಂದು ಟಿ20 ಪಂದ್ಯವನ್ನು ಸೇರಿಸಿಕೊಳ್ಳಲಾಯಿತು. ಸರಣಿಯ 6ನೇ ಟಿ20 ಪಂದ್ಯ ಶುಕ್ರವಾರ ನಡೆಯಲಿದೆ.

ಪಾಕ್ ಪ್ರಧಾನಿ ಇಮ್ರಾನ್ ಖಾನ್ ಕಾಲೆಳೆದ ಸೆಹ್ವಾಗ್!

ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದು ಮಾತನಾಡಿದ ನಾಯಕಿ ಹರ್ಮನ್ ಪ್ರೀತ್ ಕೌರ್, ತಂಡದ ಪ್ರದರ್ಶನ ನನಗೆ ತೃಪ್ತಿ ತಂದಿದೆ. ಅದರಲ್ಲೂ ಸ್ಪಿನ್ನರ್ ಗಳು ಪಿಚ್ ಮರ್ಮ ಅರಿತು ಬೌಲಿಂಗ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ನಾನು ಬ್ಯಾಟಿಂಗ್‌ನಲ್ಲಿ ತಂಡಕ್ಕೆ ನೆರವಾಗಿದ್ದು ತೃಪ್ತಿ ತಂದಿದೆ ಎಂದು ಹೇಳಿದ್ದಾರೆ. 
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?